ಹುಡುಕಿ

ಜಗದ್ಗುರು XIVನೇ ಲಿಯೋರವರು ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಪಾಂಟಿಫಿಕಲ್ ಆಯೋಗದ ಸದಸ್ಯರನ್ನು ಭೇಟಿ ಮಾಡುತ್ತಾರೆ ಜಗದ್ಗುರು XIVನೇ ಲಿಯೋರವರು ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಪಾಂಟಿಫಿಕಲ್ ಆಯೋಗದ ಸದಸ್ಯರನ್ನು ಭೇಟಿ ಮಾಡುತ್ತಾರೆ  (AFP or licensors)

ಜಗದ್ಗುರು XIVನೇ ಲಿಯೋರವರು: ಅಪ್ರಾಪ್ತರ ರಕ್ಷಣೆಯು ಧರ್ಮ ಸಭೆಯ ಜೀವನಕ್ಕೆ ಅತ್ಯಂತ ಅಗತ್ಯ

ಜಗದ್ಗುರುಗಳು ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಪಾಂಟಿಫಿಕಲ್ ಆಯೋಗ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, ಧರ್ಮ ಸಭೆಯಲ್ಲಿ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ತಡೆಯುವ ಅವರ ಕಾರ್ಯವನ್ನು ಪ್ರೋತ್ಸಾಹಿಸಿದರು

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ನಡೆದ ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಪಾಂಟಿಫಿಕಲ್ ಆಯೋಗ ಸಮಿತಿಯ ಪೂರ್ಣಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ, ಧರ್ಮ ಸಭೆಯಲ್ಲಿ ಮಕ್ಕಳ ಮತ್ತು ಅಸುರಕ್ಷಿತ ಸ್ಥಿತಿಯಲ್ಲಿರುವ ವ್ಯಕ್ತಿಗಳ ರಕ್ಷಣೆಯು ಅತ್ಯಂತ ಪ್ರಮುಖವಾದ ಜವಾಬ್ದಾರಿ ಎಂದು ಒತ್ತಿ ಹೇಳಿದರು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವುದು ಕೇವಲ ನಿಯಮಗಳು ಅಥವಾ ಕ್ರಮಗಳ ವಿಷಯವಲ್ಲ ಅದು ಧರ್ಮ ಸಭೆಗಳಲ್ಲೆಲ್ಲಾ ಕಾಳಜಿಯ ಸಂಸ್ಕೃತಿ ಬೆಳೆಸುವ ಪ್ರಯತ್ನವಾಗಬೇಕು ಎಂದು ಅವರು ಹೇಳಿದರು.

ಜಗದ್ಗರುಗಳು ಈ ಸಮಿತಿಯ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿ, ಅವರ ಸೇವೆ ಕೆಲವೊಮ್ಮೆ ಮೌನವಾಗಿಯೂ ಕಷ್ಟಕರವಾಗಿಯೂ ಇದ್ದರೂ ಅದು ಧರ್ಮ ಸಭೆಯ ಜೀವನಕ್ಕೆ ಅತ್ಯಂತ ಅಗತ್ಯವೆಂದು ಹೇಳಿದರು. ಮಕ್ಕಳು, ಕಿಶೋರರ ಮತ್ತು ಅಸುರಕ್ಷಿತ ಸ್ಥಿತಿಯಲ್ಲಿರುವವರನ್ನು ರಕ್ಷಿಸುವುದು ಧರ್ಮ ಸಭೆಯ ಗುರಿಯ ಅವಿಭಾಜ್ಯ ಭಾಗವಾಗಿದೆ ಎಂದು ಅವರು ಒತ್ತಿ ಹೇಳಿದರು.

ಜಗದ್ಗುರು XIVನೇ ಲಿಯೋರವರು ನೆನಪಿಸಿದಂತೆ, ಜಗದ್ಗುರು ಫ್ರಾನ್ಸಿಸ್ ರವರು ಈ ಸಮಿತಿಯನ್ನು ಶಾಶ್ವತವಾಗಿ ರೋಮಿನ ಪ್ರಾಂತ್ಯದೊಳಗೆ ಸೇರಿಸಿದರು, ಇದರಿಂದ ದೌರ್ಜನ್ಯ ತಡೆಯುವ ಕಾರ್ಯವು ಧರ್ಮ ಸಭೆಗೆ ಆಯ್ಕೆಯ ವಿಷಯವಲ್ಲ, ಆದರೆ ಅದರ ಗುರಿ ಮೂಲಭೂತ ಅಂಶವೆಂದು ಎಲ್ಲರಿಗೂ ನೆನಪಾಗುತ್ತದೆ. ಈ ಕಾರ್ಯದಲ್ಲಿ ಬಾಧಿತರು ಮತ್ತು ಬದುಕುಳಿದವರ ಅನುಭವಗಳನ್ನು ಗಮನದಿಂದ ಕೇಳುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಬಾಧಿತರ ನೋವು ಮತ್ತು ಅನುಭವಗಳನ್ನು ಕೇಳುವುದು ಕೆಲವೊಮ್ಮೆ ಕಠಿಣವಾಗಬಹುದು, ಆದರೆ ಅದರಿಂದ ಸತ್ಯ ಬೆಳಕಿಗೆ ಬರುತ್ತದೆ ಮತ್ತು ನಮಗೆ ವಿನಮ್ರತೆಯನ್ನು ಕಲಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು. ನಡೆದ ನೋವನ್ನು ಅರಿತುಕೊಳ್ಳುವ ಮೂಲಕವೇ ಭವಿಷ್ಯದಲ್ಲಿ ಭರವಸೆ ಮತ್ತು ನವೀಕರಣದ ದಾರಿ ತೆರೆದಿಡಬಹುದು ಎಂದು ಅವರು ಹೇಳಿದರು.

ಜಗದ್ಗರುಗಳ ಸಮಿತಿಯ ವಾರ್ಷಿಕ ವರದಿಯ ಮಹತ್ವವನ್ನೂ ಒತ್ತಿ ಹೇಳಿದರು. ಅದು ಸತ್ಯ, ಜವಾಬ್ದಾರಿ ಮತ್ತು ಭರವಸೆಯ  ಪ್ರತಿಬಿಂಬವಾಗಿದ್ದು, ಧರ್ಮ ಸಭೆಯ ಒಳಿತಿಗಾಗಿ ಅಗತ್ಯವಾದ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು. ಜೊತೆಗೆ, ಸ್ಥಳೀಯ ಧರ್ಮ ಸಭೆಗಳಿಗೆ ಬೆಂಬಲ ನೀಡಿ, ಯಾವುದೇ ಸಮುದಾಯವೂ ಈ ಕಾರ್ಯದಲ್ಲಿ ಏಕಾಂಗಿಯಾಗದಂತೆ ಸಹಾಯ ಮಾಡಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಕೊನೆಯಲ್ಲಿ ಜಗದ್ಗುರುಗಳು ಮಕ್ಕಳ ಮತ್ತು ಅಸುರಕ್ಷಿತ ಸ್ಥಿತಿಯಲ್ಲಿರುವವರ ರಕ್ಷಣೆ ಧರ್ಮ ಸಭೆಯ ಜೀವನದಲ್ಲಿ ಪ್ರತ್ಯೇಕ ವಿಷಯವಲ್ಲ. ಅದು ಧರ್ಮಾಧ್ಯಕ್ಷೀಯ ಸೇವೆ, ಶಿಕ್ಷಣ, ಆಡಳಿತ ಮತ್ತು ಶಿಸ್ತು ಸೇರಿದಂತೆ ಧರ್ಮ ಸಭೆಯ ಎಲ್ಲಾ ಕ್ಷೇತ್ರಗಳಲ್ಲಿ ಅಡಕವಾಗಿರುವ ಮಹತ್ವದ ಆಯಾಮವಾಗಿದೆ.

16 ಮಾರ್ಚ್ 2026, 08:58