ಕ್ಯಾಸ್ಟೆಲ್ ಗ್ಯಾಂಡೊಲ್ಫೋದಲ್ಲಿ ಜಗದ್ಗುರು XIVನೇ ಲಿಯೋರವರು ಕ್ಯಾಸ್ಟೆಲ್ ಗ್ಯಾಂಡೊಲ್ಫೋದಲ್ಲಿ ಜಗದ್ಗುರು XIVನೇ ಲಿಯೋರವರು  (ANSA)

ಜಗದ್ಗುರು XIV ನೇ ಲಿಯೋರವರು: ಶಾಂತಿಗಾಗಿ ಕಾರ್ಯನಿರ್ವಹಿಸಿ ಮತ್ತು ಆಯುಧಗಳಿಲ್ಲದೆ ಪರಿಹಾರಗಳನ್ನು ಹುಡುಕಿ

ಜಗದ್ಗುರು XIV ನೇ ಲಿಯೋರವರು ಕಾಸ್ಟೆಲ್ ಗಾಂಡೋಲ್ಫೊದಲ್ಲಿರುವ ವಿಲ್ಲಾ ಬರ್ಬೆರಿನಿ ನಿವಾಸದ ಹೊರಭಾಗದಲ್ಲಿ ಪತ್ರಕರ್ತರಿಗೆ ಸಂಕ್ಷಿಪ್ತ ಹೇಳಿಕೆಯನ್ನು ನೀಡಿದರು. ಈ ಸಂದರ್ಭದಲ್ಲೂ ಅವರು ಮತ್ತೊಮ್ಮೆ ಶಾಂತಿಗಾಗಿ ಕಾರ್ಯನಿರ್ವಹಿಸಲು ಮತ್ತು ಸಂವಾದವನ್ನು ಉತ್ತೇಜಿಸಲು ತಮ್ಮ ಮನವಿಯನ್ನು ಪುನರುಚ್ಚರಿಸಿದರು.

ವ್ಯಾಟಿಕನ್ ವರದಿ

ಶಾಂತಿಗಾಗಿ ಪ್ರಾರ್ಥಿಸಿ, ಶಾಂತಿಗಾಗಿ ಕೆಲಸ ಮಾಡಿ, ದ್ವೇಷ ಕಡಿಮೆಯಾಗಲಿ. ಲೋಕದಲ್ಲಿ ದ್ವೇಷವು ನಿರಂತರವಾಗಿ ಹೆಚ್ಚುತ್ತಿದೆ.

ಇದು ಕಾಸ್ಟೆಲ್ ಗಾಂಡೋಲ್ಫೊದಲ್ಲಿರುವ ವಿಲ್ಲಾ ಬರ್ಬೆರಿನಿ ನಿವಾಸದ ಹೊರಭಾಗದಲ್ಲಿ ಪತ್ರಕರ್ತರ ಗುಂಪಿನೊಂದಿಗೆ ಜಗದ್ಗುರು XIVನೇ ಲಿಯೋರವರು ಹಂಚಿಕೊಂಡ ಮನವಿ. ನಿನ್ನೆ ಮತ್ತು ಇಂದು ನಡುವಿನ ಅವಧಿಯಲ್ಲಿ ಅವರು ತಮ್ಮ ಸಾಂಪ್ರದಾಯಿಕ ವಿಶ್ರಾಂತಿ ಮತ್ತು ಕಾರ್ಯದ ದಿನವನ್ನು ಅಲ್ಲಿ ಕಳೆದಿದ್ದರು.

ಮಧ್ಯಪ್ರಾಚ್ಯದಲ್ಲಿ ದಾಳಿಗಳು ಹೆಚ್ಚುತ್ತಿದ್ದು, ಜಗತ್ತಿನಾದ್ಯಂತ ಭಯ ಮತ್ತು ಉದ್ವಿಗ್ನತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿಯೂ, ಶಾಂತಿಯ ಗುರಿಯನ್ನು ಮುಂದುವರಿಸಬೇಕೆಂದು ಜಗದ್ಗುರುಗಳು ಒತ್ತಾಯಿಸಿದರು. ಅದೇ ವೇಳೆ, ಸಂವಾದವನ್ನು ಉತ್ತೇಜಿಸಲು ನಿಜವಾದ ಪ್ರಯತ್ನ ಮಾಡಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಆಯುಧಗಳಿಲ್ಲದೆ ಪರಿಹಾರಗಳನ್ನು ಹುಡುಕಬೇಕು ಎಂದು ಎಲ್ಲರನ್ನೂ ಅವರು ಕೋರಿದರು.

ಈ ಮಾತುಗಳು ಕಳೆದ ಭಾನುವಾರ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳನ್ನೇ ಪ್ರತಿಧ್ವನಿಸುತ್ತವೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿ ಹಾಗೂ ಇರಾನ್ ಮಧ್ಯಪ್ರಾಚ್ಯದ ಹಲವಾರು ಪ್ರದೇಶಗಳ ಮೇಲೆ ನಡೆಸಿದ ಬಾಂಬ್ ದಾಳಿಗಳನ್ನು ಉಲ್ಲೇಖಿಸಿ, ಜಗದ್ಗುರುಗಳು ಹೀಗೆ ಹೇಳಿದರು:

ಸ್ಥಿರತೆ ಮತ್ತು ಶಾಂತಿ ಪರಸ್ಪರ ಬೆದರಿಕೆಗಳಿಂದಲೂ, ವಿನಾಶ, ವೇದನೆ ಮತ್ತು ಮರಣವನ್ನು ಬಿತ್ತುವ ಆಯುಧಗಳ ಬಳಕೆಯಿಂದಲೂ ದೊರೆಯುವುದಿಲ್ಲ ಆದರೆ ವಿವೇಕಬದ್ಧ, ಸತ್ಯನಿಷ್ಠ ಮತ್ತು ಹೊಣೆಗಾರಿಕೆಯುತ ಸಂವಾದದ ಮೂಲಕ ಮಾತ್ರ ಸಾಧಿಸಬಹುದು ಎಂದರು.

03 ಮಾರ್ಚ್ 2026, 18:32