ಜಗದ್ಗುರು XIVನೇ ಲಿಯೋರವರು ಏಂಜಲಸ್ ನಲ್ಲಿ ನಿಷ್ಠಾವಂತರನ್ನು ಮುನ್ನಡೆಸುತ್ತಾರೆ ಎಂದರು. ಜಗದ್ಗುರು XIVನೇ ಲಿಯೋರವರು ಏಂಜಲಸ್ ನಲ್ಲಿ ನಿಷ್ಠಾವಂತರನ್ನು ಮುನ್ನಡೆಸುತ್ತಾರೆ ಎಂದರು.  (ANSA)

ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರುಗಳು: ವಿಮೋಚಕನು ಇತಿಹಾಸದ ಗಾಯಗಳನ್ನು ರೂಪಾಂತರಗೊಳಿಸುತ್ತಾನೆ

ಜಗದ್ಗುರು XIVನೇ ಲಿಯೋರವರು ತಪಸ್ಸು ಕಾಲದ ಎರಡನೇ ಭಾನುವಾರದಂದು ನಡೆದ ತ್ರಿಕಾಲ ಪ್ರಾರ್ಥನೆಯ ವೇಳೆ ರೂಪಾಂತರದ ರಹಸ್ಯದ ಕುರಿತು ಚಿಂತನೆ ಮಾಡಿ, ಕ್ರಿಸ್ತನು ವಿಮೋಚಕನಾಗಿ ಇತಿಹಾಸದ ಗಾಯಗಳನ್ನು ರೂಪಾಂತರಗೊಳಿಸಿ ದೇವರ ರಕ್ಷಣೆಯ ವರವನ್ನು ಪ್ರಕಟಿಸುತ್ತಾನೆ ಎಂದು ಹೇಳಿದ್ದಾರೆ

ವ್ಯಾಟಿಕನ್ ವರದಿ

ಭಾನುವಾರದ ಸುವಾರ್ತೆಯಲ್ಲಿ ವರ್ಣಿಸಲ್ಪಟ್ಟ ಯೇಸುವಿನ ರೂಪಾಂತರವು ಪುನರುತ್ಥಾನ ಹಬ್ಬದ ಬೆಳಕನ್ನು ಪೂರ್ವಸೂಚಿಸುತ್ತದೆ ಮರಣ ಮತ್ತು ಪುನರುತ್ಥಾನದ ಘಟನೆ, ಕತ್ತಲೆ ಮತ್ತು ಹೊಸ ಬೆಳಕಿನ ಅನುಭವ  ಹಿಂಸೆಯಿಂದ ಕೋಲಾಹಲಗೊಂಡ ದೇಹಗಳ ಮೇಲೆ, ನೋವಿನಿಂದ ಶಿಲುಬೆಗೆ ಹಾಕಲ್ಪಟ್ಟವರ ಮೇಲೆ, ದುರವಸ್ಥೆಯಲ್ಲಿ ತೊರೆದುಹೋಗಲ್ಪಟ್ಟವರ ಮೇಲೆ ಕ್ರಿಸ್ತನು ಹರಿಸುವ ಬೆಳಕು ಎಂದು ಜಗದ್ಗುರು XIVನೇ ಲಿಯೋರವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ವೇಳೆ ನೀಡಿದ ತನ್ನ ಧರ್ಮೋಪದೇಶದಲ್ಲಿ ಹೇಳಿದ್ದಾರೆ.

ಯೇಸುವಿನೊಂದಿಗೆ ಹೋದ ಶಿಷ್ಯರು ಅವರ ಮಹಿಮೆಯನ್ನು ಕಂಡರೂ, ಅವರು ಕಂಡದ್ದನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಯಿತು  ವಾಕ್ಯವನ್ನು ಆಲಿಸಲು ಮೌನದ ಸಮಯ, ಪ್ರಭುವಿನ ಸಮೀಕ್ಷೆಯನ್ನು ಅನುಭವಿಸಲು ಮನೋಮಾರ್ಪಣೆಯ ಸಮಯ” ಅಗತ್ಯವಾಯಿತು.

ತನ್ನ ಪ್ರಭೋಧನೆಯಲ್ಲಿ ಜಗದ್ಗುರುಗಳು ನೆನಪಿಸಿದರು ಮಾಂಸಧಾರಿಯಾದ ವಾಕ್ಯನಾದ ಯೇಸು, ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಮಧ್ಯೆ ನಿಂತಿರುವಂತೆ ಶಿಷ್ಯರು ಕಂಡರು ಧರ್ಮಶಾಸ್ತ್ರವನ್ನು ಮೋಶೆ ಪ್ರತಿನಿಧಿಸಿದರೆ, ಪ್ರವಾದಿಗಳನ್ನು ಏಲೀಯ ಪ್ರತಿನಿಧಿಸಿದರು.

ಜೋರ್ಧಾನಿನಲ್ಲಿ ನಡೆದ ಅವರ ದೀಕ್ಷಾಸ್ನಾನದ ದಿನದಂತೆ,” ಎಂದು ಜಗದ್ಗುರು ಲಿಯೋರವರು ಹೇಳಿದರು, ಇಲ್ಲಿಯೂ ನಾವು ತಂದೆಯ ಧ್ವನಿಯನ್ನು ಕೇಳುತ್ತೇವೆ ‘ಇವನು ನನ್ನ ಪ್ರಿಯ ಪುತ್ರನು,’ ಎಂದು ಘೋಷಿಸುವ ಧ್ವನಿ; ಅದೇ ವೇಳೆ ಪವಿತ್ರಾತ್ಮನು ಪ್ರಕಾಶಮಯವಾದ ಮೋಡದಂತೆ ಯೇಸುವನ್ನು ಆವರಿಸುತ್ತಾರೆ.”

ದೇವರ ಮಾನವೀಯ ಮಹಿಮೆಯ ಈ ಪ್ರಕಟಣೆ, ಪೇತ್ರ, ಯಾಕೋಬ ಮತ್ತು ಯೋಹಾನರಿಗೆ ಜನರ ಗುಂಪುಗಳಿಗೆ ಪ್ರದರ್ಶನವಾಗಿ ತೋರಿಸಲ್ಪಡುವ ಮಹಿಮೆಯಲ್ಲ, ಆದರೆ ಗಂಭೀರ ಆಂತರಿಕ ಸಮೀಪತೆಯಲ್ಲಿ ಅನಾವರಣಗೊಳ್ಳುವ ವಿನಮ್ರ ಮಹಿಮೆಯನ್ನು ಧ್ಯಾನಿಸಲು ಅವಕಾಶ ನೀಡುತ್ತದೆ.

ಲೋಕದಲ್ಲಿರುವ ಕೆಡುಕಿನ ನಡುವೆಯೂ ದೇವರ ಮಹಿಮೆಯಿಂದ ಹೊಳೆಯುವ ಯೇಸುವಿನ ದೇಹದ ರೂಪಾಂತರವು ವಿಮೋಚಕನು ಇತಿಹಾಸದ ಗಾಯಗಳನ್ನು ರೂಪಾಂತರಗೊಳಿಸಿ ನಮ್ಮ ಮನಸ್ಸುಗಳನ್ನೂ ಹೃದಯಗಳನ್ನೂ ಪ್ರಕಾಶಮಾನಗೊಳಿಸುತ್ತಾರೆ ಅವರ ಪ್ರಕಟಣೆ ರಕ್ಷಣೆಯ ವರವಾಗಿದೆ ಎಂಬುದನ್ನು ತೋರಿಸುತ್ತದೆ.

ಜಗದ್ಗುರು ಲಿಯೋರವರು ಕೇಳಿದರು: “ಇದು ನಮ್ಮನ್ನು ಆಕರ್ಷಿಸುತ್ತಿದೆಯೇ? ಆಶ್ಚರ್ಯ ಮತ್ತು ಪ್ರೀತಿಯ ದೃಷ್ಟಿಯಿಂದ ನಾವು ದೇವರ ನಿಜವಾದ ಮುಖವನ್ನು ಕಾಣುತ್ತೇವೇ?”

ಅವರು ತಮ್ಮ ಮಾತುಗಳನ್ನು ಹೀಗೆ ಸಮಾಪಿಸಿದರು: ನಾಸ್ತಿಕತೆಯ ನಿರಾಶೆಗೆ ತಂದೆಯ ಉತ್ತರವೆಂದರೆ ತನ್ನ ಪುತ್ರನಾದ ರಕ್ಷಕನ ವರ ಅಜ್ಞೇಯತೆಯ ಏಕಾಂತದಿಂದ ಪವಿತ್ರಾತ್ಮನು ನಮ್ಮನ್ನು ವಿಮೋಚಿಸಿ ಶಾಶ್ವತ ಜೀವ ಮತ್ತು ಕೃಪೆಯ ಸಹಭಾಗಿತ್ವವನ್ನು ನೀಡುತ್ತಾನೆ ಮತ್ತು ನಮ್ಮ ದುರ್ಬಲ ನಂಬಿಕೆಗೆ ಪ್ರತಿಯಾಗಿ ಭವಿಷ್ಯದ ಪುನರುತ್ಥಾನದ ವಾಗ್ದಾನವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದರು.

01 ಮಾರ್ಚ್ 2026, 15:48