ಜಗದ್ಗುರುಗಳು: II ನೇ ಪ್ಯಾಟ್ರಿಯಾರ್ಕ್ ಇಲಿಯಾ ರವರು ಕಠಿಣ ಕಾಲಗಳಲ್ಲಿ ಜಾರ್ಜಿಯಾವನ್ನು ಬೆಂಬಲಿಸಿದರು.
ವ್ಯಾಟಿಕನ್ ವರದಿ
ಮಾರ್ಚ್ 17 ರಂದು, ಜಾರ್ಜಿಯನ್ ಆರ್ಥಡಾಕ್ಸ್ ಧರ್ಮ ಸಭೆಯ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ಯಾಟ್ರಿಯಾರ್ಕ್ ಹಾಗೂ ಸಂಪೂರ್ಣ ಜಾರ್ಜಿಯಾದ ಕ್ಯಾಥೋಲಿಕೋಸ್-ಪ್ಯಾಟ್ರಿಯಾರ್ಕ್ ಆಗಿದ್ದ ಅವರ ಪವಿತ್ರತೆ ಮತ್ತು ಮಹಿಮೆಯುಳ್ಳ II ನೇ ಇಲಿಯಾ ರವರು, ಅದೇ ದಿನ ಮೊದಲು ಆಸ್ಪತ್ರೆಗೆ ದಾಖಲಾದ ನಂತರ ನಿಧನರಾದರು.
ವಿಧಿವಶರಾದ ಪ್ಯಾಟ್ರಿಯಾರ್ಕ್ ರವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ, ಕ್ರೈಸ್ತ ಏಕತೆಯನ್ನು ಉತ್ತೇಜಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕುರ್ಟ್ ಕೊಚ್ ರವರು, ಜಗದ್ಗುರು XIVನೇ ಲಿಯೋರವರು ಸಂದೇಶವನ್ನು ಓದಿದರು. ಆ ಸಂದೇಶವು ಸೆನಾಕಿ ಮತ್ತು ಚ್ಖೊರೊತ್ಸವ್ಕು ಮೆಟ್ರೋಪಾಲಿಟನ್ ಹಾಗೂ ಪ್ಯಾಟ್ರಿಯಾರ್ಕಲ್ ಸೀಟ್‌ನ ಲೋಕಮ್ ಟೆನೆನ್ಸ್ ಆಗಿರುವ ಶಿಯೋ ಮಹಾಶಯರಿಗೆ ಉದ್ದೇಶಿತವಾಗಿತ್ತು, ಜೊತೆಗೆ ಜಾರ್ಜಿಯಾದ ಆರ್ಥಡಾಕ್ಸ್ ಧರ್ಮ ಸಭೆಯ ಪವಿತ್ರ ಸೈನೋಡ್‌ಗೆ ಕೂಡ ಸಲ್ಲಿಸಲಾಯಿತು.
“ನನ್ನ ಹೃದಯಪೂರ್ವಕ ಸಂತಾಪವನ್ನು ತಿಳಿಸುತ್ತಾ, ನಿಮ್ಮ ಮಹಿಮೆ, ಪವಿತ್ರ ಸೈನೋಡ್‌ಗೆ ಮತ್ತು ಸಂಪೂರ್ಣ ಜಾರ್ಜಿಯಾದ ಆರ್ಥಡಾಕ್ಸ್ ಧರ್ಮ ಸಭೆಗೆ, ನಿಮ್ಮ ದುಃಖದಲ್ಲಿ ನನ್ನ ಸಹೋದರತ್ವದ ಏಕತೆಯನ್ನು ಭರವಸೆ ನೀಡುತ್ತೇನೆ, ಎಂದು ಜಗದ್ಗುರುಗಳು ಬರೆದಿದ್ದಾರೆ ಅವರು ಮತ್ತೂ, ಮ್ಟ್ಸ್ಖೇಟಾ-ಟಿಬಿಲಿಸಿ ಆರ್ಚ್‌ಬಿಷಪ್ ಹಾಗೂ ಅಬ್ಖಾಜಿಯಾ ಮತ್ತು ಬಿಚ್ವಿಂಟಾ ಮೆಟ್ರೋಪಾಲಿಟನ್ ಆಗಿ ಸೇವೆ ಸಲ್ಲಿಸಿದ್ದ ಪ್ಯಾಟ್ರಿಯಾರ್ಕ್ ರವರಿಗಾಗಿ ಪ್ರಾರ್ಥನೆ ಹಾಗೂ ಸ್ಮರಣೆಯಲ್ಲಿ ತಮ್ಮನ್ನು ಸೇರಿಕೊಳ್ಳುವುದಾಗಿ ಹೇಳಿದರು.
ನಂಬಿಕೆಯ ಸಮರ್ಪಿತ ಸಾಕ್ಷಿ
ಸಂದೇಶದಲ್ಲಿ, ಪವಿತ್ರ ಪಿತೃ II ನೇ ಇಲಿಯಾ (1933–2026) ರವರ ದೀರ್ಘ ಜೀವನವನ್ನು ನೆನಪಿಸಿಕೊಂಡು, “ಪುನರುತ್ಥಾನಿ ಕ್ರಿಸ್ತನಲ್ಲಿ ನಂಬಿಕೆಯ ಸಮರ್ಪಿತ ಸಾಕ್ಷಿ” ಎಂದು ವರ್ಣಿಸಿದರು. ಪ್ಯಾಟ್ರಿಯಾರ್ಕ್ ರವರ ಸೇವೆ ಜಾರ್ಜಿಯಾದ ಜನರನ್ನು ಕಠಿಣ ಕಾಲಗಳು ಮತ್ತು ಆಳವಾದ ಇತಿಹಾಸದ ಬದಲಾವಣೆಗಳ ಮಧ್ಯೆ ಜೊತೆಗೈದು, ಪರಂಪರೆಯನ್ನು ಪ್ರೀತಿಯಿಂದ ಕಾಪಾಡುತ್ತಾ, ಜನರ ಹೃದಯಗಳು ಮತ್ತು ಸಮುದಾಯಗಳನ್ನು ಭರವಸೆಯತ್ತ ತೆರೆಯುವ ಕಾರ್ಯವಾಗಿತ್ತು ಇದರಲ್ಲಿ 1991–1993ರ ಜಾರ್ಜಿಯಾದ ನಾಗರಿಕ ಯುದ್ಧವೂ ಒಳಗೊಂಡಿತ್ತು.
ಇದಲ್ಲದೆ, ಜಗದ್ಗುರು ಲಿಯೋರವರು ಕ್ಯಾಥೋಲಿಕೋಸ್-ಪ್ಯಾಟ್ರಿಯಾರ್ಕ್ ರವರ ಸಂಗೀತದ ಮೇಲಿನ ಪ್ರೀತಿ ಮತ್ತು ಆಸಕ್ತಿಯನ್ನು ವಿಶೇಷವಾಗಿ ಉಲ್ಲೇಖಿಸಿದರು ಇದು ದೇವರ ಸೌಂದರ್ಯದ ಹುಡುಕಾಟಕ್ಕೆ ಪ್ರೇರಣೆಯಾಗಿ, ಜನರನ್ನು ಒಂದಾಗಿಸಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ವ್ಯತ್ಯಾಸಗಳನ್ನು ಮೀರಿ ಧರ್ಮ ಸಭೆಗಳನ್ನು ಹತ್ತಿರ ತರುತ್ತದೆ ಎಂದು ಅವರು ಹೇಳಿದರು.
1977ರಿಂದ 2026ರವರೆಗೆ ನಡೆದ 49 ವರ್ಷದ ಸೇವೆಯಲ್ಲಿ, II ನೇ ಪ್ಯಾಟ್ರಿಯಾರ್ಕ್ ಇಲಿಯಾರವರು ಆಧ್ಯಾತ್ಮಿಕ ತಂದೆ, ಸಮಾಧಾನದ ಧ್ವನಿ ಮತ್ತು ಏಕತೆಯ ಅಸಮರ್ಪಿತ ನಿರ್ಮಾತೃ ಆಗಿದ್ದರು। ಅವರು ಜಗದ್ಗುರು ಲಿಯೋರವರ ಪೂರ್ವಸ್ಥರಾದ ಜಗದ್ಗುರು II ನೇ ಜಾನ್ ಪಾಲ್ ಮತ್ತು ಜಗದ್ಗುರು ಫ್ರಾನ್ಸಿಸ್ ರವರನ್ನು ಭೇಟಿಯಾಗಿದ್ದರು.
1999ರಲ್ಲಿ, ಜಗದ್ಗುರು II ನೇ ಜಾನ್ ಪಾಲ್ ರವರ ಜಾರ್ಜಿಯಾ ಪ್ರವಾಸದ ವೇಳೆ, ಪೋಲಿಷ್ ಜಗದ್ಗುರು ಮತ್ತು ಪ್ಯಾಟ್ರಿಯಾರ್ಕ್ ಜಗತ್ತಿಗೆ ಶಾಂತಿಯ ತುರ್ತು ಮನವಿಯನ್ನು ಮಾಡಿದರು ನಂತರ 2016ರ ಅಕ್ಟೋಬರ್‌ನಲ್ಲಿ, ಜಗದ್ಗುರು ಫ್ರಾನ್ಸಿಸ್ ರವರು ಜಾರ್ಜಿಯಾದ ಟಿಬಿಲಿಸಿಗೆ ಭೇಟಿ ನೀಡಿ, II ನೇ ಪ್ಯಾಟ್ರಿಯಾರ್ಕ್ ಇಲಿಯಾರವರನ್ನು ಭೇಟಿಯಾದರು.
ನಿರಾಶರಾಗಬೇಡಿ
ಪ್ಯಾಟ್ರಿಯಾರ್ಕ್ ರವರನ್ನು ದೇವರಿಗೆ ಒಪ್ಪಿಸಿ, ಜಗದ್ಗುರು ಲಿಯೋರವರು ಸಂತ ಪೌಲರ ಮಾತುಗಳನ್ನು ಸ್ಮರಿಸಿದರು. ಯೇಸು ಕ್ರಿಸ್ತನ ಪುನರುತ್ಥಾನವೇ ಕ್ರೈಸ್ತ ನಂಬಿಕೆಯ ಆಧಾರವಾಗಿದ್ದು, ನಮ್ಮ ಭರವಸೆಯ ದಾರಿಯಾಗಿದೆ ಎಂದು ಅದು ನಮಗೆ ನೆನಪಿಸುತ್ತದೆ ಆದ್ದರಿಂದ, ಒಬ್ಬ ಕುರಿಗಾಹಿಯ ಮರಣದ ಎದುರು ನಮ್ಮ ಹೃದಯಗಳು ನಿರಾಶೆಗೆ ಒಳಗಾಗಬಾರದು ಎಂದು ಅವರು ಹೇಳಿದರು. ಬದಲಾಗಿ, ಕಳೆದುಕೊಂಡ ಜೀವನವು ಹೊಸದಾಗಿ ಪರಿವರ್ತಿತವಾಗಿದೆ ಎಂಬ ನಿಶ್ಚಿತತೆಯತ್ತ ನಾವು ಮುಖ ಮಾಡಬೇಕು.
ಸಂದೇಶದ ಅಂತ್ಯದಲ್ಲಿ, “ಲೋಕಮ್ ಟೆನೆನ್ಸ್ ಸೇವೆಯ ಹೊಣೆಗಾರಿಕೆಯನ್ನು ಹೊರುತ್ತಿರುವ” ಶಿಯೋ ಮಹಾಶಯರಿಗೆ ಜಗದ್ಗುರು ಲಿಯೋರವರು ತಮ್ಮ ಸಹೋದರತ್ವದ ಸಮೀಪತೆಯನ್ನು ವ್ಯಕ್ತಪಡಿಸಿದರು. ಮೃತ ಪ್ಯಾಟ್ರಿಯಾರ್ಕ್ ರವರನ್ನು ಪ್ರೇರೇಪಿಸಿದ ಅದೇ ಪ್ರೇಷಿತರ ಪ್ರೀತಿಯಿಂದ ನೀವು ಜಾರ್ಜಿಯಾದ ಆರ್ಥಡಾಕ್ಸ್ ಧರ್ಮ ಸಭೆಯನ್ನು ನಡೆಸಲಿ ಎಂಬ ಉದ್ದೇಶದಿಂದ ಅವರು ತಮ್ಮ ಪ್ರಾರ್ಥನೆಗಳನ್ನು ಭರವಸೆ ನೀಡಿದರು.
ಜಗದ್ಗುರು ಲಿಯೋರವರು ದೇವರ ತಾಯಿಯು ಶಿಯೋ ಮಹಾಶಯರು, ಪವಿತ್ರ ಸೈನೋಡ್ ಹಾಗೂ ಸಂಪೂರ್ಣ ಜಾರ್ಜಿಯನ್ ಜನತೆಯನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದರು.
ಜಾರ್ಜಿಯನ್ ಆರ್ಥಡಾಕ್ಸ್ ಧರ್ಮ ಸಭೆ
ಪೂರ್ವ ಆರ್ಥಡಾಕ್ಸ್ ಧರ್ಮ ಸಭೆಯ ಒಂದು ಶಾಖೆಯಾಗಿದ್ದು, ಜಾರ್ಜಿಯಾ ದೇಶದ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿದೆ. 3 ಮಿಲಿಯನ್ ಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಇದು, ಆ ದೇಶದ ಅತಿ ದೊಡ್ಡ ಕ್ರೈಸ್ತ ಪಂಥವಾಗಿದೆ.
