ಜಗದ್ಗುರುಗಳು ಮಧ್ಯಪ್ರಾಚ್ಯದ ಬಗ್ಗೆ: “ಅವರಿಗೆ ಆಗುವ ಹಾನಿ, ಸಂಪೂರ್ಣ ಮಾನವಕುಲಕ್ಕೂ ಆಗುವ ಹಾನಿಯೇ.”
ವ್ಯಾಟಿಕನ್ ವರದಿ
ರೋಮಿನಲ್ಲಿ ಮಳೆಯ ಹವಾಮಾನ ಇದ್ದರೂ ಸಹ, ಸಾವಿರಾರು ಯಾತ್ರಿಕರು ಸಂತ ಪೇತ್ರರ ಚೌಕದಲ್ಲಿ ಸೇರಿ ಜಗದ್ಗುರು XIVನೇ ಲಿಯೋರವರೊಂದಿಗೆ ತ್ರಿಕಾಲ ಪ್ರಾರ್ಥನೆಯನ್ನು ಪಠಿಸಿದರು.
ಪ್ರಾರ್ಥನೆಯ ನಂತರ, ಜಗದ್ಗುರುಗಳು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಹಾಗೂ ಯುದ್ಧ ಮತ್ತು ಹಿಂಸಾಚಾರದಿಂದ ಚೂರುಚೂರಾಗಿರುವ ಜಗತ್ತಿನ ಇತರೆ ಭಾಗಗಳ ಬಗ್ಗೆ ತನ್ನ ಆಳವಾದ ಚಿಂತೆ ವ್ಯಕ್ತಪಡಿಸಿದರು. ಈ ಸಂಘರ್ಷಗಳಲ್ಲಿ ಅನೇಕ ಜನರು, ನಿರಪರಾಧಿಗಳು ಬಲಿಯಾಗಿರುವವರ ನೋವನ್ನು ಎದುರಿಸಿದಾಗ ನಾವು ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.
ಈ ನಿರಂತರ ಹಿಂಸಾಚಾರವು ಎಲ್ಲರನ್ನೂ ಗಾಯಗೊಳಿಸುತ್ತದೆ ಅವರಿಗೆ ಆಗುವ ಹಾನಿ, ಸಂಪೂರ್ಣ ಮಾನವಕುಲಕ್ಕೂ ಆಗುವ ಹಾನಿಯೇ ಎಂದು ಹೇಳಿದರು.
ಈ ಯುದ್ಧಗಳಿಂದ ಉಂಟಾಗುವ ನೋವು, ಮರಣ ಮತ್ತು ಪಾಡುಡ ಸಂಪೂರ್ಣ ಮಾನವ ಕುಟುಂಬಕ್ಕೆ ಅವಮಾನವಾಗಿದ್ದು, ದೇವರ ಮುಂದೆ ಒಂದು ಕೂಗು ಎಂದು ಜಗದ್ಗುರುಗಳು ಎಚ್ಚರಿಸಿದರು. ನಂತರ, ವೈರತ್ವ ನಿಲ್ಲಲಿ ಮತ್ತು ಪ್ರಾಮಾಣಿಕ ಸಂವಾದ ಹಾಗೂ ಪ್ರತಿಯೊಬ್ಬ ಮಾನವನ ಗೌರವದ ಮೇಲೆ ಆಧಾರಿತ ಶಾಂತಿಯ ಮಾರ್ಗಗಳು ಅಂತಿಮವಾಗಿ ತೆರೆದುಕೊಳ್ಳಲಿ ಎಂಬುದಕ್ಕಾಗಿ ಎಲ್ಲರೂ ತಮ್ಮ ಪ್ರಾರ್ಥನೆಯಲ್ಲಿ ಸ್ಥಿರವಾಗಿರಲು ಅವರು ಪ್ರೋತ್ಸಾಹಿಸಿದರು.
ಜಗದ್ಗರುಗಳು ಈ ಮನವಿಯನ್ನು ಮಾಡುವಾಗ, ಮಧ್ಯಪ್ರಾಚ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವ ವರದಿಗಳು ಮುಂದುವರಿದಿವೆ ಹಿಂಸಾಚಾರವು 23ನೇ ದಿನಕ್ಕೆ ಪ್ರವೇಶಿಸಿದೆ. ಲೆಬನಾನ್‌ನಲ್ಲಿ 1,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಭಾನುವಾರ ಬೆಳಿಗ್ಗೆ ಇಸ್ರೇಲ್ ನಗರಗಳ ಮೇಲೆ ಇರಾನಿನ ಕ್ಷಿಪಣಿ ದಾಳಿಗಳಲ್ಲಿ ಕನಿಷ್ಠ 160 ಜನರು ಗಾಯಗೊಂಡಿದ್ದಾರೆ. ಹಾಗೆಯೇ ಗಲ್ಫ್ ಪ್ರದೇಶದಲ್ಲಿ ಸೌದಿ ಅರೇಬಿಯಾ ಮತ್ತು ಬಹ್ರೇನ್ ಕೆಲವು ಡ್ರೋನ್ ಮತ್ತು ಕ್ಷಿಪಣಿಗಳ ಬಗ್ಗೆ ವರದಿ ಮಾಡಿವೆ.
ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡುವ ಮೊದಲು, ಜಗದ್ಗುರುಗಳು ರೋಮಿನ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಸಾವಿರಾರು ಓಟಗಾರರನ್ನೂ ಅಭಿನಂದಿಸಿದರು. ಅದೇ ಸಮಯದಲ್ಲಿ ರೋಮಿನ ನಗರದ ಹೃದಯಭಾಗದ ಮೂಲಕ ನಡೆದ ಈ ಮ್ಯಾರಥಾನ್‌ನಲ್ಲಿ ವಿವಿಧ ದೇಶಗಳಿಂದ ಬಂದ ಅನೇಕ ಕ್ರೀಡಾಪಟುಗಳನ್ನು ನೋಡುವುದು ನಂಬಿಕೆಯ ಸಂಕೇತ ಎಂದು ಅವರು ಹೇಳಿದರು. ಕ್ರೀಡೆಗಳು ಶಾಂತಿ, ಸಾಮಾಜಿಕ ಒಗ್ಗಟ್ಟು ಮತ್ತು ಆತ್ಮೀಯತೆಯ ಮಾರ್ಗಗಳನ್ನು ನಿರ್ಮಿಸಲಿ ಎಂಬ ತಮ್ಮ ಆಶಯವನ್ನು ಅವರು ವ್ಯಕ್ತಪಡಿಸಿದರು.
