ಸಂತ  ಪೇತ್ರರ  ಚೌಕದಲ್ಲಿ ತ್ರಿಕಾಲ ಪ್ರಾರ್ಥನೆ ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆ  (ANSA)

ಅಂತರರಾಷ್ಟ್ರೀಯ ಮಹಿಳಾ ದಿನದಂದು ಐಕ್ಯತೆಯ ಅಗತ್ಯವನ್ನು ಜಗದ್ಗುರು ಲಿಯೋರವರು ಒತ್ತಿಹೇಳಿದರು.

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ, ಪುರುಷರು ಮತ್ತು ಮಹಿಳೆಯರ ಸಮಾನ ಗೌರವವನ್ನು ಗುರುತಿಸುವಲ್ಲಿ ಹೊಸ ಬದ್ಧತೆಯನ್ನು ತೋರಿಸಬೇಕೆಂದು ಜಗದ್ಗುರು ಲಿಯೋರವರು ಕರೆ ನೀಡಿದರು.

ವ್ಯಾಟಿಕನ್ ವರದಿ

 

ಸಂತ ಪೇತ್ರರ ಚೌಕದಲ್ಲಿ ಭಾನುವಾರದ ತ್ರಿಕಾಲ ಪ್ರಾರ್ಥನೆಗಾಗಿ ಸೇರಿದ್ದ ಸುಮಾರು ಹದಿನೈದು ಸಾವಿರ ಯಾತ್ರಿಕರು ಮತ್ತು ಭೇಟಿದಾರರನ್ನು, ಹಾಗೆಯೇ ಮನೆಗಳಿಂದ ವೀಕ್ಷಿಸುತ್ತಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಇಂದು ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನವೆಂದು ನೆನಪಿಸಿದರು.

ಜಗದ್ಗರುಗಳು ತಮ್ಮ ಕೇಳುಗರಿಗೆ ಪುರುಷರು ಮತ್ತು ಮಹಿಳೆಯರ ಸಮಾನ ಗೌರವವನ್ನು ಗುರುತಿಸುವಲ್ಲಿ ನಮ್ಮ ಬದ್ಧತೆಯನ್ನು ಮತ್ತೆ ಹೊಸದಾಗಿ ದೃಢಪಡಿಸೋಣ ಎಂದು ಪ್ರೋತ್ಸಾಹಿಸಿದರು. ಕ್ರೈಸ್ತರಿಗೆ ಈ ಕರ್ತವ್ಯವು ಸುವಾರ್ತೆಯ ಆಧಾರದಲ್ಲಿದೆ ಎಂದು ಅವರು ಹೇಳಿದರು. ಬಾಲ್ಯದಿಂದಲೇ ಅನೇಕ ಮಹಿಳೆಯರು ಇನ್ನೂ ಭೇದಭಾವಕ್ಕೆ ಒಳಗಾಗುತ್ತಿದ್ದಾರೆ ಮತ್ತು ವಿವಿಧ ರೀತಿಯ ಹಿಂಸೆಗೆ ಗುರಿಯಾಗುತ್ತಿದ್ದಾರೆ ಎಂಬುದನ್ನು ಅವರು ಖಂಡಿಸಿದರು. ಅಂತಹ ಮಹಿಳೆಯರಿಗೆ ವಿಶೇಷವಾಗಿ ನನ್ನ ಐಕ್ಯತೆ ಮತ್ತು ಪ್ರಾರ್ಥನೆಗಳಿವೆ ಎಂದು ಜಗದ್ಗುರುಗಳು ಹೇಳಿದರು.

ಜಗದ್ಗುರು ಲಿಯೋರವರು ಇದೇ ವಿಷಯವನ್ನು ಇಂದು ಪ್ರಕಟವಾದ ಪಿಯಾಝಾ ಸ್ಯಾನ್ ಪಿಯೆಟ್ರೋ ಮಾಸಪತ್ರಿಕೆಯ ಮಾರ್ಚ್ ಸಂಚಿಕೆಯಲ್ಲಿ ಕೂಡ ಉಲ್ಲೇಖಿಸಿದ್ದಾರೆ. ಮಹಿಳೆಯರ ಮೇಲಿನ ಹಿಂಸೆಯ ಕುರಿತು ಓದುಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಯುವಜನರಲ್ಲಿ ಗೌರವದ ಸಂಸ್ಕೃತಿ ಬೆಳೆಸಲು ಶಾಲೆಗಳು ಮತ್ತು ಧರ್ಮಸಭೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸುವುದರ ಜೊತೆಗೆ ಲಿಂಗ ಸಮಾನತೆಗಾಗಿ ಕ್ರಮ ಕೈಗೊಳ್ಳಬೇಕೆಂದು ಕರೆ ನೀಡುತ್ತದೆ. ಇದು 20ನೇ ಶತಮಾನದ ಆರಂಭದಲ್ಲಿ ಆರಂಭಗೊಂಡಿದ್ದು, ಮಹಿಳೆಯರ ಹಕ್ಕುಗಳನ್ನು ಮುಂದುವರಿಸಲು ಜಾಗೃತಿ ಮೂಡಿಸುವ, ಆಚರಣೆ ನಡೆಸುವ ಮತ್ತು ಬೆಂಬಲ ಒದಗಿಸುವ ದಿನವಾಗಿ ಬೆಳೆಯಲಾಗಿದ ಎಂದರು.

08 ಮಾರ್ಚ್ 2026, 17:14