ಪಾಕಿಸ್ತಾನದ ವೈಮಾನಿಕ ದಾಳಿ ನಂತರ ಉಂಟಾದ ಹಾನಿಯನ್ನು ಪರಿಶೀಲಿಸುತ್ತಿರುವ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದ ನಿವಾಸಿ. ಪಾಕಿಸ್ತಾನದ ವೈಮಾನಿಕ ದಾಳಿ ನಂತರ ಉಂಟಾದ ಹಾನಿಯನ್ನು ಪರಿಶೀಲಿಸುತ್ತಿರುವ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದ ನಿವಾಸಿ.  (ANSA)

ಜಗದ್ಗರುಗಳು : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಶಾಂತಿ ಮತ್ತು ಸಂವಾದಕ್ಕಾಗಿ ಪ್ರಾರ್ಥನೆ

ಜಗದ್ಗುರು ಲಿಯೋರವರು ಇತ್ತೀಚಿನ ಘರ್ಷಣೆಗಳ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳು ಮರುಕಳಿಸಿ ಸಂವಾದದ ಮಾರ್ಗವನ್ನು ಅನುಸರಿಸಲಿ ಎಂದು ಮನವಿ ಮಾಡಿದರು; ಜೊತೆಗೆ ಬ್ರೆಜಿಲ್ ನಲ್ಲಿ ಸಂಭವಿಸಿದ ಭಾರೀ ನೆರೆಹಾವಳಿಯಿಂದ ಬಾಧಿತರಾದವರಿಗಾಗಿ ಪ್ರಾರ್ಥಿಸಿದರು.

ವ್ಯಾಟಿಕನ್ ವರದಿ

ಈ ವಾರದ ಆರಂಭದಲ್ಲಿ ಪಾಕಿಸ್ತಾನ ತನ್ನ ನೆರೆ ರಾಷ್ಟ್ರವು ಉಗ್ರರನ್ನು ಆಶ್ರಯಿಸುತ್ತಿದೆ ಎಂದು ಆರೋಪಿಸಿದ ನಂತರ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಯುದ್ಧಸಂಘರ್ಷಗಳು ಪ್ರಾರಂಭವಾದವು ಎರಡೂ ಪಾರ್ಶ್ವಗಳು ಪರಸ್ಪರದ ಭೂಭಾಗದ ಒಳಗೆ ದಾಳಿಗಳನ್ನು ನಡೆಸಿದವು.

ಭಾನುವಾರದ ತ್ರಿಕಾಲ ಪ್ರಾರ್ಥನೆಯ ವೇಳೆ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ತಮ್ಮ ಚಿಂತೆಯನ್ನು ವ್ಯಕ್ತಪಡಿಸಿ, ಎರಡೂ ಪಾರ್ಶ್ವಗಳು ತುರ್ತಾಗಿ ಸಂವಾದದ ಮಾರ್ಗಕ್ಕೆ ಮರಳಬೇಕೆಂದು ಮನವಿ ಮಾಡಿದರು.

ಇದಲ್ಲದೆ, ವಿಶ್ವದ ಎಲ್ಲಾ ಸಂಘರ್ಷ ಪ್ರದೇಶಗಳಲ್ಲಿ  ವಿಶೇಷವಾಗಿ ಇಸ್ರೇಲ್  ಮತ್ತು ಯುನೈಟೆಡ್ ಸ್ಟೇಟ್ಸ್ ಇರಾನ್ ಮೇಲೆ ದಾಳಿ ನಡೆಸಿ, ಅದಕ್ಕೆ ಪ್ರತಿಯಾಗಿ ಇರಾನ್  ಸಮೀಪದ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವ ಮಧ್ಯ ಪೂರ್ವ ಪ್ರದೇಶದಲ್ಲೂ  ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂದು ಅವರು ಪ್ರಾರ್ಥಿಸಿದರು.

ವಿಶ್ವದ ಎಲ್ಲಾ ಸಂಘರ್ಷಗಳಲ್ಲಿ ಸೌಹಾರ್ದತೆ ಮೇಲುಗೈ ಸಾಧಿಸಲಿ ಎಂದು ನಾವು ಒಟ್ಟಾಗಿ ಪ್ರಾರ್ಥಿಸೋಣ, ಎಂದು ಜಗದ್ಗುರುಗಳು ಹೇಳಿದರು. ದೇವರ ವರವಾದ ಶಾಂತಿಯೇ ಜನಾಂಗಗಳ ನಡುವಿನ ಗಾಯಗಳನ್ನು ಗುಣಪಡಿಸಬಲ್ಲದು.

ಬ್ರೆಝಿಲ್‌ನಲ್ಲಿ ನೆರೆಹಾವಳಿ

ಇತ್ತೀಚಿನ ದಿನಗಳಲ್ಲಿ ಭೀಕರ ನೆರೆಹಾವಳಿಯನ್ನು ಅನುಭವಿಸುತ್ತಿರುವ ಮಿನಾಸ್ ಗೆರೈಸ್ ರಾಜ್ಯದ ಜನರೊಂದಿಗೆ ತಮ್ಮ ಆಪ್ತತೆಯನ್ನು ಜಗದ್ಗುರು ಲಿಯೋರವರು ವ್ಯಕ್ತಪಡಿಸಿದರು.

ಬಲಿಯಾದವರಿಗಾಗಿ, ತಮ್ಮ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗಾಗಿ ಮತ್ತು ರಕ್ಷಣಾ ಕಾರ್ಯಗಳಲ್ಲಿ ತೊಡಗಿರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ,ಎಂದು ಅವರು ಹೇಳಿದರು.

ಭಾರೀ ಮಳೆ ಮತ್ತು ನೆರೆಹಾವಳಿಯ ಪರಿಣಾಮವಾಗಿ ದಕ್ಷಿಣ-ಪೂರ್ವ ಬ್ರೆಝಿಲ್‌ನಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ.

ಮೃತರಾದವರಲ್ಲಿ ಹೆಚ್ಚಿನವರು ಜುಯಿಜ್ ಡಿ ಫೋರಾ ಮತ್ತು ಊಭ ನಗರಗಳಲ್ಲಿ ವಾಸಿಸುತ್ತಿದ್ದರು ಈ ನಗರಗಳು ರಿಯೊ ಡಿ ಜನೈರೊ ನಗರದ ಉತ್ತರಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿವೆ.

01 ಮಾರ್ಚ್ 2026, 15:55