ಹುಡುಕಿ

ಫೆಬ್ರವರಿ 2026 ರಲ್ಲಿ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್‌ನ ಸಮಗ್ರ ಸಭೆಯಲ್ಲಿ ಭಾಗವಹಿಸುವವರನ್ನು ಜಗದ್ಗುರು XIVನೇ ಲಿಯೋರವರು  ಸ್ವಾಗತಿಸುತ್ತಾರೆ. ಫೆಬ್ರವರಿ 2026 ರಲ್ಲಿ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್‌ನ ಸಮಗ್ರ ಸಭೆಯಲ್ಲಿ ಭಾಗವಹಿಸುವವರನ್ನು ಜಗದ್ಗುರು XIVನೇ ಲಿಯೋರವರು ಸ್ವಾಗತಿಸುತ್ತಾರೆ.  (ANSA)

ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್: ಹೊಸ ನಿಯಮಾವಳಿಗಳಲ್ಲಿ ಬೆಂಬಲಿಗರನ್ನು ಪರಿಚಯಿಸಲಾಗಿದೆ

ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಸಂಸ್ಥೆಯ ಹೊಸ ನಿಯಮಾವಳಿಗಳು ಒಂದು ಹೊಸ ವರ್ಗವನ್ನು ಪರಿಚಯಿಸುತ್ತವೆ. ಈ ಅಕಾಡೆಮಿಯನ್ನು ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು 1994ರಲ್ಲಿ ಸ್ಥಾಪಿಸಿದ್ದು, ಮಾನವ ಜೀವದ ಮೌಲ್ಯವನ್ನು ರಕ್ಷಿಸಲು ಮತ್ತು ವ್ಯಕ್ತಿಯ ಗೌರವವನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ.

ವ್ಯಾಟಿಕನ್ ವರದಿ

ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಸಂಸ್ಥೆಯು 2016ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಪ್ರಕಟಿಸಿದ ನಿಯಮಾವಳಿಗಳನ್ನು ನವೀಕರಿಸಿ, “ಬೆಂಬಲಿಗರು” ಎಂಬ ಹೊಸ ವರ್ಗವನ್ನು ಪರಿಚಯಿಸಿದೆ. ಇವರು ಅಕಾಡೆಮಿಯ ಸಂಸ್ಥಾತ್ಮಕ ಉದ್ದೇಶಗಳನ್ನು ತಮ್ಮದೇ ಎಂದು ಗುರುತಿಸಿಕೊಂಡು, ಅದರ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿಗೆ ಸಹಕಾರ ನೀಡುವವರು. ಇವರಿಗೆ ಶೈಕ್ಷಣಿಕ ಪ್ರೊಫೈಲ್ ಇರಬೇಕೆಂಬ ಅವಶ್ಯಕತೆ ಇಲ್ಲ ಆದರೆ ಅಕಾಡೆಮಿಯು ಉತ್ತೇಜಿಸುವ ಗುರಿಗಳನ್ನು ಬೆಂಬಲಿಸಲು ಬಯಸುವ ವ್ಯಕ್ತಿಗಳಾಗಿರುತ್ತಾರೆ.

27 ಫೆಬ್ರವರಿ 2026ರಂದು ದಿನಾಂಕಿತವಾಗಿದ್ದು, ಜಗದ್ಗುರು XIVನೇ ಲಿಯೋರವರ ಸಹಿಯಿರುವ ಹೊಸ ನಿಯಮಾವಳಿ ಸಂಸ್ಥೆಯ ರಚನೆಯನ್ನು ವಿವರಿಸುತ್ತದೆ ಅಧ್ಯಕ್ಷ ಮಂಡಳಿ, ಕೇಂದ್ರ ಕಚೇರಿ, ಸದಸ್ಯರು ಹಾಗೂ ಬೆಂಬಲಿಗರು. ಇದರಲ್ಲಿ ಅಧ್ಯಕ್ಷ ಮಂಡಳಿಯ ಆಡಳಿತಾತ್ಮಕ ಜವಾಬ್ದಾರಿಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ, ಕೇಂದ್ರ ಕಚೇರಿಯ ಕಾರ್ಯನಿರ್ವಹಣಾ ಮತ್ತು ಸಮನ್ವಯ ಪಾತ್ರವನ್ನು ಮರುದೃಢಪಡಿಸಲಾಗಿದೆ.

ಬೆಂಬಲಿಗರನ್ನು ಆಡಳಿತ ಮಂಡಳಿಯ ನಿರ್ಣಯದ ಮೂಲಕ, ರಾಜ್ಯ ಕಾರ್ಯದರ್ಶಿಗಳ ಕಚೇರಿಯ ಪೂರ್ವಾನುಮತಿಗೆ ಒಳಪಟ್ಟಂತೆ, ಮೂರು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ. ಈ ಅವಧಿಯನ್ನು ಇನ್ನೂ ಎರಡು ಬಾರಿ ನವೀಕರಿಸಬಹುದು.

ಈ ಪಠ್ಯವು ಒಂದು ವರ್ಷದ ಹಿಂದೆ ಪ್ರಾರಂಭವಾದ ಪ್ರಕ್ರಿಯೆಯ ಫಲವಾಗಿದ್ದು, ನಂತರದ ವಿಧಿಗಳ ಮರುಸಂಖ್ಯಾಕರಣದೊಂದಿಗೆ ಕ್ರಮಬದ್ಧವಾದ ಅಧಿಕೃತ ಸಮನ್ವಯಗೊಳಿಸುವಿಕೆಯನ್ನು ಹೊಂದಿದೆ ಆದರೆ ಮೂಲಭೂತ ಬದಲಾವಣೆಗಳನ್ನು ಒಳಗೊಂಡಿಲ್ಲ.

ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು  11 ಫೆಬ್ರವರಿ 1994ರಂದು ಮೋಟು ಪ್ರೊಪ್ರಿಯೊ ವಿಟೇ ಮಿಸ್ಟೀರಿಯಂ ಮೂಲಕ ಸ್ಥಾಪಿಸಿದ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್‌ನ ಉದ್ದೇಶವೆಂದರೆ ಮಾನವ ಜೀವದ ಮೌಲ್ಯವನ್ನು ರಕ್ಷಿಸಿ ಉತ್ತೇಜಿಸುವುದು ಹಾಗೂ ವ್ಯಕ್ತಿಯ ಗೌರವವನ್ನು ಕಾಪಾಡುವುದು ಎಂದರು.

27 ಫೆಬ್ರವರಿ 2026, 20:24