ಜಗದ್ಗರುಗಳು: ದೇವರೊಂದಿಗೆ ಸಂಬಂಧವಿಲ್ಲದೆ ಜೀವನ ಅಸ್ಥವ್ಯಸ್ಥವಾಗುತ್ತದೆ
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಶನಿವಾರ ಸ್ಪೇನ್‌ನ ಅಲ್ಕಾಲಾ ದೆ ಹೆನಾರೆಸ್, ಟೊಲೆಡೋ, ಕಾರ್ಟಜೆನಾ ಹಾಗೂ ಕ್ಯಾಟಲೋನಿಯಾದ ಅಂತರಧರ್ಮಪ್ರಾಂತ್ಯ ಸೆಮಿನಾರಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಗುರು ವಿದ್ಯಾ ಮಂದಿರವನ್ನು ಭೇಟಿಯಾದರು. ತಮ್ಮ ಭಾಷಣದಲ್ಲಿ ಅವರು ಯಾಜಕತ್ವದ ರೂಪುಗೊಳಿಸುವಿಕೆಯ ಮುಖ್ಯ ಅಂಶಗಳನ್ನು ವಿವರಿಸುವಂತೆ ಟ್ರುಜಿಲ್ಲೊ ಮಹಾಧರ್ಮಪ್ರಾಂತ್ಯದ ಮುಖ್ಯ ಗುರು ಮಂದಿರಕ್ಕೆ ಬರೆದ ತಮ್ಮ ಪತ್ರವನ್ನು ಓದಲು ಅವರಿಗೆ ಸೂಚಿಸಿದರು. ಆದರೆ ಇಂದು ವಿಶೇಷವಾಗಿ ಅತೀಂದ್ರಿಯ ದೃಷ್ಟಿಕೋನದ ಮಹತ್ವವನ್ನು ಒತ್ತಿಹೇಳಲು ಬಯಸುವುದಾಗಿ ಹೇಳಿದರು.
ಜಿ. ಕೆ. ಚೆಸ್ಟರ್ಟನ್ ರವರ ಧರ್ಮದ್ರೋಹಿಗಳು ಎಂಬ ಕೃತಿಯಿಂದ ಉಲ್ಲೇಖಿಸಿ, ಅತೀಂದ್ರಿಯತೆಯನ್ನು ತೆಗೆದರೆ ಸಹಜತೆಯಲ್ಲ, ಅಸಹಜತೆಯೇ ಉಳಿಯುತ್ತದೆ ಎಂದು ಜಗದ್ಗುರುಗಳು ನೆನಪಿಸಿದರು. ದೇವರನ್ನು ದೈನಂದಿನ ನಿರ್ಧಾರಗಳ ಅಂಚಿಗೆ ತಳ್ಳುವ ಜೀವನಶೈಲಿಯೇ ನಿಜವಾದ ಅಸಹಜತೆ ಎಂದು ಅವರು ವಿವರಿಸಿದರು. ಮಾನವನು ದೇವರೊಂದಿಗೆ ಸಂಬಂಧದಲ್ಲೇ ಬದುಕಲು ಸೃಷ್ಟಿಸಲ್ಪಟ್ಟಿದ್ದಾನೆ ಆ ಸಂಬಂಧ ದುರ್ಬಲವಾದಾಗ ಜೀವನ ಒಳಗಿನಿಂದಲೇ ಅಸ್ತವ್ಯಸ್ತವಾಗುತ್ತದೆ ಎಂದರು.
ದೇವರ ಬಗ್ಗೆ ಮಾತನಾಡುತ್ತಾ, ಆದರೆ ದೇವರ ಸಾನ್ನಿಧ್ಯದ ಅರಿವಿಲ್ಲದೆ ಬದುಕುವ ಯಾಜಕನಿಗಿಂತ ಅಸಹಜವಾದುದು ಇನ್ನೇನಿದೆ ಎಂದು ಜಗದ್ಗುರುಗಳು ಪ್ರಶ್ನಿಸಿದರು. ದೇವರ ವಿಷಯಗಳಿಗೆ ಅಭ್ಯಾಸವಾಗಿಬಿಟ್ಟರೂ ದೇವರಿಂದಲೇ ಬದುಕದಿರುವುದು ಅತ್ಯಂತ ಅಪಾಯಕಾರಿ,ಎಂದು ಅವರು ಎಚ್ಚರಿಸಿದರು. ಎಲ್ಲವೂ ದೇವರೊಂದಿಗೆ ಜೀವಂತ ಮತ್ತು ನೈಜ ಸಂಬಂಧದಿಂದಲೇ ಆರಂಭವಾಗಬೇಕು ಮತ್ತು ಅದಕ್ಕೇ ಮರಳಬೇಕು ಎಂದು ಹೇಳಿದರು.
ಅತೀಂದ್ರಿಯ ದೃಷ್ಟಿಕೋನ ಎಂದರೆ ದೈನಂದಿನ ಜೀವನದ ಆಳವಾದ ಅರ್ಥವನ್ನು ಹುಡುಕುವುದು ಎಂದು ಜಗದ್ಗುರುಗಳು ವಿವರಿಸಿದರು. ಗುರು ವಿದ್ಯಾರ್ಥಿಯರನ್ನು ದೇವರ ಸಾನ್ನಿಧ್ಯವನ್ನು ಅಭ್ಯಾಸ ಮಾಡುವ ಮೂಲಕ ತಮ್ಮ ನಂಬಿಕೆಯನ್ನು ನೈಜ ಜೀವನದ ಆಯ್ಕೆಗಳಲ್ಲಿ ಅನುವಾದಿಸಬೇಕು ಎಂದರು. ಹೊರಗೆ ನಿಂತಿದ್ದರೂ ಒಳಗೆ ಒಣಗಿರುವ ಮರಗಳಂತೆ, ಚಟುವಟಿಕೆಗಳ ತೀವ್ರತೆಯನ್ನು ಫಲಪ್ರದತೆಯೆಂದು ಭ್ರಮಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
ಯಾಜಕತ್ವದ ರೂಪುಗೊಳಿಸುವಿಕೆಯ ಮೂಲಭೂತ ಅಂಶವೆಂದರೆ ಆತನೊಂದಿಗೇ ಇರುವುದು ಮತ್ತು ಒಳಗಿನಿಂದ ರೂಪುಗೊಳ್ಳಲು ಅವಕಾಶ ನೀಡುವುದು ಎಂದು ಜಗದ್ಗುರುಗಳು ಹೇಳಿದರು. ಮಾನಸಿಕ ಶಾಸ್ತ್ರದಂತಹ ಉಪಕರಣಗಳು ಉಪಯುಕ್ತವಾದರೂ, ನಮ್ಮ ಹೃದಯಗಳನ್ನು ರೂಪಿಸುವ ನಿಜವಾದ ನಾಯಕ ಪವಿತ್ರಾತ್ಮನೇ ಎಂದು ಅವರು ನೆನಪಿಸಿದರು. ಅಂತಿಮವಾಗಿ, ಪ್ರತಿದಿನದ ಸಾಮಾನ್ಯತೆಯಲ್ಲಿ ಪ್ರಭುವಿಗೆ ತಮ್ಮನ್ನು ಪರಿವರ್ತಿಸಲು ಅವಕಾಶ ನೀಡುವಂತೆ ಅವರು ಗುರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ನೀವು ಒಬ್ಬರಲ್ಲ ಕ್ರಿಸ್ತನು ನಿಮ್ಮ ಮುಂದೆ ನಡೆಯುತ್ತಾನೆ, ಕನ್ಯಾ ಮರಿಯಳು ನಿಮ್ಮೊಂದಿಗಿದ್ದಾರೆ, ಮತ್ತು ಧರ್ಮ ಸಭೆ ತನ್ನ ಪ್ರಾರ್ಥನೆಗಳಿಂದ ನಿಮ್ಮನ್ನು ಬೆಂಬಲಿಸುತ್ತದೆ, ಎಂದು ಅವರು ಹೇಳಿದರು.
