ಜಗದ್ಗುರು ಲಿಯೋರವರು ಸಂತ ಜಾನ್ ಲ್ಯಾಟೆರನ್ನ ಮಹಾ ಬಸಿಲಿಕಾ ದೇವಾಲಯದಿಂದ ಜನಸ್ತೋಮವನ್ನು ಉದ್ದೇಶಿಸಿ ಭಾಷಣ ಮಾಡಿದರು. ಜಗದ್ಗುರು ಲಿಯೋರವರು ಸಂತ ಜಾನ್ ಲ್ಯಾಟೆರನ್ನ ಮಹಾ ಬಸಿಲಿಕಾ ದೇವಾಲಯದಿಂದ ಜನಸ್ತೋಮವನ್ನು ಉದ್ದೇಶಿಸಿ ಭಾಷಣ ಮಾಡಿದರು.  (AFP or licensor)

ಜಗದ್ಗುರು XIVನೇ ಲಿಯೋರವರು ರೋಮ್ ಧರ್ಮಕ್ಷೇತ್ರಕ್ಕೆ ನಾಲ್ವರು ಸಹಾಯಕ ಧರ್ಮಾಧ್ಯಕ್ಷರುಗಳನ್ನು ನೇಮಿಸಿದರು

ಜಗದ್ಗುರು XIVನೇ ಲಿಯೋರವರು ತಮ್ಮ ರೋಮ್ ಧರ್ಮಕ್ಷೇತ್ರಕ್ಕಾಗಿ ನಾಲ್ವರು ಹೊಸ ಸಹಾಯಕ ಧರ್ಮಾಧ್ಯಕ್ಷರುಗಳನ್ನು ನೇಮಿಸಿದ್ದಾರೆ; ಇವರು ಎಲ್ಲರೂ ಈಗಾಗಲೇ ರೋಮ್‌ನಲ್ಲಿ ಧರ್ಮ ಕೇಂದ್ರದ ಗುರುಗಳಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು

ವ್ಯಾಟಿಕನ್ ವರದಿ

 

ರೋಮ್‌ನ  ಧರ್ಮಾಧ್ಯಕ್ಷರು ತಮ್ಮ ಧರ್ಮಕ್ಷೇತ್ರಕ್ಕಾಗಿ ನಾಲ್ವರು ಹೊಸ ಸಹಾಯಕ ಧರ್ಮಾಧ್ಯಕ್ಷರುಗಳನ್ನು ನೇಮಿಸಿದ್ದಾರೆ: ಸ್ಟೆಫಾನೋ ಸ್ಪಾರಪಾನಿ, ಅಲೆಸ್ಸಾಂದ್ರೊ ಜೆನೋಬ್ಬಿ, ಆಂದ್ರೇಯ ಕಾರ್ಲೆವಾಲೆ ಮತ್ತು ಮಾರ್ಕೊ ವಾಲೆಂತಿ. ಇವರು ಎಲ್ಲರೂ ಈಗಾಗಲೇ ರೋಮ್‌ನಲ್ಲಿ ಧರ್ಮ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ವಂ. ಸ್ವಾಮಿ. ಸ್ಟೆಫಾನೋ ಸ್ಪಾರಪಾನಿ ಅವರು ಜುಲೈ 24, 1956ರಂದು ರೋಮ್‌ನಲ್ಲಿ ಜನಿಸಿದರು. ಅವರು ರೋಮ್‌ನ ಜಗದ್ಗುರುಗಳ ಲಾಟರನ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿ, ನಂತರ ನೈತಿಕ ಧರ್ಮಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಕ್ಟೋಬರ್ 4, 1991ರಂದು ರೋಮ್ ಧರ್ಮಕ್ಷೇತ್ರಕ್ಕಾಗಿ ಯಾಜಕರಾಗಿ ಅಭಿಷೇಕಗೊಂಡರು. ನಂತರ ಅವರು ಈ ಹುದ್ದೆಗಳನ್ನು ವಹಿಸಿಕೊಂಡಿದ್ದಾರೆ: ಕಾರ್ವಿಯಾಲೆಯಲ್ಲಿ ಸಹಾಯಕ ಧರ್ಮ ಕೇಂದ್ರದ ಗುರುಗಳಾಗಿ (1991–1995) ಮತ್ತು ಧರ್ಮ ಕೇಂದ್ರದ ಗುರುಗಳಾಗಿ (1995–2010); 2010ರಿಂದ ಸಾನ್ ಬಾಸಿಲಿಯೋ ಧರ್ಮ ಕೇಂದ್ರದ ಗುರುಗಳಾಗಿ  2015ರಿಂದ ಆಲ್ಮೋ ಕೊಲ್ಲೇಜಿಯೋ ಕಾಪ್ರಾನಿಕಾ ಧಾರ್ಮಿಕ ವಿದ್ಯಾಲಯದ ಆತ್ಮೀಯ ಪಿತೃ; 2025ರಿಂದ ನಗರದ ಉತ್ತರ ವಲಯದ ಧರ್ಮಾಧ್ಯಕ್ಷೀಯ ಪ್ರತಿನಿಧಿಯಾಗಿದ್ದರು.

ವಂ. ಸ್ವಾಮಿ. ಅಲೆಸ್ಸಾಂದ್ರೊ ಜೆನೋಬ್ಬಿ ರವರು ನವೆಂಬರ್ 10, 1969ರಂದು ರೋಮ್‌ನಲ್ಲಿ ಜನಿಸಿದರು. ಅವರು ಜಗದ್ಗುರುಗಳ ರೋಮನ್ ಪ್ರಮುಖ ಗುರುಮಠದಲ್ಲಿ ವಿದ್ಯಾಭ್ಯಾಸ ಮಾಡಿ, ಏಪ್ರಿಲ್ 28, 1996ರಂದು ರೋಮ್ ಧರ್ಮಕ್ಷೇತ್ರಕ್ಕಾಗಿ ಯಾಜಕರಾಗಿ ಅಭಿಷೇಕಗೊಂಡರು. ಅವರು ಸಾನ್ ಪೊಲಿಕಾರ್ಪೊ ಪಾರಿಷ್‌ನಲ್ಲಿ ಸಹಾಯಕ ಗುರುಗಳಾಗಿ (1996–2008) ಹಾಗೂ ಧರ್ಮ ಕೇಂದ್ರದ ಗುರುಗಳಾಗಿ (2008–2017) ಆಗಿ ಸೇವೆ ಸಲ್ಲಿಸಿದರು. 2017ರಿಂದ ಸಾಂತಾ ಲೂಸಿಯಾ ಧರ್ಮ ಕೇಂದ್ರದ ಗುರುಗಳಾಗಿ ಮತ್ತು 2025ರಿಂದ ನಗರದ ಪಶ್ಚಿಮ ವಲಯದ ಧರ್ಮಾಧ್ಯಕ್ಷೀಯ ಪ್ರತಿನಿಧಿ ಆಗಿದ್ದಾರೆ.

ವಂ.ಸ್ವಾಮಿ. ಆಂದ್ರೇಯ ಕಾರ್ಲೆವಾಲೆ ರವರು ಏಪ್ರಿಲ್ 8, 1971ರಂದು ರೋಮ್‌ನಲ್ಲಿ ಜನಿಸಿದರು. ಜಗದ್ಗರುಗಳ ರೋಮನ್ ಪ್ರಮುಖ ಗುರುಮಠದಲ್ಲಿ  ಅಧ್ಯಯನ ಮಾಡಿ, ಮೇ 3, 1998ರಂದು ಯಾಜಕರಾಗಿ ಅಭಿಷೇಕಗೊಂಡರು. ಅವರು ಸಾಂತಾ ಗಲ್ಲಾ ಅಲ್ಲಾ ಗರ್ಬಟೆಲ್ಲಾ (1998–2003) ಮತ್ತು ಸಂತ್’ಇರೆನೇಯೊ ಆ ಚೆಂಟೊಚೆಲ್ಲೆ (2003–2009) ಧರ್ಮ ಕೇಂದ್ರದ ಸಹಾಯಕ ಗುರುಗಳಾಗಿ  ಸೇವೆ ಸಲ್ಲಿಸಿದರು; 2009–2015ರ ಅವಧಿಯಲ್ಲಿ ಪಾಂಟಿಫಿಕಲ್ ರೋಮನ್ ಪ್ರಮುಖ ಗುರುಮಠದಲ್ಲಿ ಸಹಾಯಕನಾಗಿದ್ದರು; 2015–2025ರ ಅವಧಿಯಲ್ಲಿ ಸಾಂತಾ ಮಾರಿಯಾ ದಿ ಲೊರೆತೊ ಆ ಕಾಸ್ಟೆಲ್ವೆರ್ಡೆ-ಲುಂಗ್ಹೆಜ್ಜಾ ಧರ್ಮ ಕೇಂದ್ರದ ಗುರುಗಳಾಗಿದ್ದರು. ಈ ಅವಧಿಯಲ್ಲಿ ತಮ್ಮ ಪ್ರಿಫೆಕ್ಚರ್‌ನ ಗುರುಗಳಿಂದ ಪ್ರಿಫೆಕ್ಟ್ ಆಗಿ ಆಯ್ಕೆಯಾಗಿದ್ದರು. 2025ರಿಂದ ಅಪ್ಪಿಯೋ-ಲಾತಿನೊ ಪ್ರದೇಶದ ಸಾನ್ ಜಿಯೋವನ್ನಿ ಬತ್ತಿಸ್ತಾ ದೆ ರೋಸ್ಸಿ ಧರ್ಮ ಕೇಂದ್ರದ ಗುರುಗಳಾಗಿದ್ದರು.

ವಂ.ಸ್ವಾಮಿ ಮಾರ್ಕೊ ವಾಲೆಂತಿ ಅವರು ಫೆಬ್ರವರಿ 28, 1961ರಂದು ರೋಮ್‌ನ ಉತ್ತರ ಭಾಗದ ಕಾಂಟಲುಪೊ ಇನ್ ಸಬೀನಾ ಪಟ್ಟಣದಲ್ಲಿ ಜನಿಸಿದರು. ಅವರು ಜಗದ್ಗುರುಗಳ ರೋಮನ್ ಚಿಕ್ಕ ಮತ್ತು ಪ್ರಮುಖ ಗುರುಮಠದಲ್ಲಿ ವಿದ್ಯಾಭ್ಯಾಸ ಮಾಡಿ, ರೋಮ್‌ನಲ್ಲಿ ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ರೋಮ್‌ನ ಲಾ ಸಪಿಯೆನ್ಜಾ ವಿಶ್ವವಿದ್ಯಾಲಯದಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದರು. ಏಪ್ರಿಲ್ 26, 1986ರಂದು ಯಾಜಕರಾಗಿ ಅಭಿಷೇಕಗೊಂಡ ಅವರು, ಸಾಂತಾ ಮರಿಯಾ ಗೊರೆತ್ತಿ (1986–1989), ಸಾಂತಾ ಮರಿಯಾ ಮದ್ದಲೆನಾ ದೆ’ ಪಾಜ್ಜಿ (1990–1994) ಮತ್ತು ಗ್ರಾನ್ ಮಾದ್ರೆ ದಿ ದಿಯೋ (1994–1996)ಧರ್ಮ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿದರು; 1996–2010ರಲ್ಲಿ ಸಾನ್ ಜ್ಯೂಸೆಪ್ಪೆ ಆರ್ತಿಜಿಯಾನೊ ಧರ್ಮ ಕೇಂದ್ರದ ಗುರುಗಳಾಗಿ; 2010–2024ರಲ್ಲಿ ಸಾನ್ ಸಟುರ್ನಿನೊ ಪಾರಿಷ್ ಪಾದ್ರಿಯಾಗಿದ್ದರು. 2024ರಿಂದ ನಮ್ಮ ಪ್ರಭು ಯೇಸು ಕ್ರಿಸ್ತನ ಪರಿವರ್ತನೆ ಧರ್ಮ ಕೇಂದ್ರದ ಗುರುಗಳಾಗಿದ್ದರು.

25 ಫೆಬ್ರವರಿ 2026, 17:17