ವ್ಯಾಟಿಕನ್‌ನಲ್ಲಿ ಯಾತ್ರಿಕರನ್ನು ನಮಸ್ಕಾರಿಸಿದ ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಯಾತ್ರಿಕರನ್ನು ನಮಸ್ಕಾರಿಸಿದ ಜಗದ್ಗುರು ಲಿಯೋರವರು  (VINCENZO LIVIERI)

“ಜಗದ್ಗುರುಗಳು: ನಾವು ಎಲ್ಲರೂ ದೇವರನ್ನು ಮತ್ತು ಅವರ ಪ್ರೀತಿಯನ್ನು ಹುಡುಕುವವರೇ ಆಗಿದ್ದೇವೆ.”

ಫೆಬ್ರವರಿ ತಿಂಗಳ ಪಿಯಾಝಾ ಸ್ಯಾನ್ ಪಿಯೆಟ್ರೋ ಮ್ಯಾಗಜಿನ್ ಸಂಚಿಕೆಯಲ್ಲಿ, ಜಗದ್ಗುರು XIVನೇ ಲಿಯೋರವರು ದೇವರಲ್ಲಿ ನಂಬಿಕೆ ಇಡುವ ವಿಷಯದಲ್ಲಿ ಹೋರಾಡುತ್ತಿರುವ ರೊಕ್ಕೋ ರವರಿಗೆ ಪ್ರತಿಕ್ರಿಯಿಸುತ್ತಾರೆ. ಅವರು ವಿಶ್ವಾಸದ ನಿಜವಾದ ಪ್ರಶ್ನೆ ದೇವರನ್ನು ನಂಬುವುದೇ ಅಥವಾ ನಂಬದಿರುವುದೇ ಅಲ್ಲ, ಆದರೆ ದೇವರನ್ನು ಹುಡುಕುವುದೇ ಮುಖ್ಯವೆಂದು ಒತ್ತಿ ಹೇಳುತ್ತಾರೆ.

ವ್ಯಾಟಿಕನ್ ವರದಿ

 

ಇಟಾಲಿಯನ್ ಮ್ಯಾಗಜಿನ್ ಪಿಯಾಝಾ ಸ್ಯಾನ್ ಪಿಯೆಟ್ರೋ ಫೆಬ್ರವರಿ ಸಂಚಿಕೆ ಬಾಧೆಯನ್ನು ತಾಳುವ ವಿಶ್ವಾಸ ಎಂಬ ವಿಷಯಕ್ಕೆ ಸಮರ್ಪಿತವಾಗಿದೆ.

ಓದುಗರೊಂದಿಗೆ ಸಂವಾದಕ್ಕೆ ಮೀಸಲಾದ ವಿಭಾಗದಲ್ಲಿ, ಜಗದ್ಗುರು XIVನೇ ಲಿಯೋರವರು ದಕ್ಷಿಣ ಇಟಲಿಯ ರೆಜ್ಜಿಯೋ ಕಾಲಾಬ್ರಿಯಾದ ನಾಸ್ತಿಕನಾದ ರೊಕ್ಕೋ ರವರ ಪತ್ರಕ್ಕೆ ಉತ್ತರಿಸಿದ್ದಾರೆ. ದೇವರಲ್ಲಿ ನಂಬಿಕೆ ಇಡುವ ವಿಚಾರದಲ್ಲಿ ತಾನು ಅನುಭವಿಸುತ್ತಿರುವ ಹೋರಾಟವನ್ನು ಹಂಚಿಕೊಂಡು ರೊಕ್ಕೋ ವರು ಜಗದ್ಗುರುಗಳಿಗೆ ಅವರಿಗೆ ಪತ್ರ ಬರೆದಿದ್ದರು.

ರೊಕ್ಕೋ: ದೇವರನ್ನು ಹುಡುಕುತ್ತಿರುವ ನಾಸ್ತಿಕ

ತಮ್ಮ ಪತ್ರದಲ್ಲಿ, ರೊಕ್ಕೋ ರವರು ಸೂರ್ಯೋದಯಗಳು, ಸೂರ್ಯಾಸ್ತಗಳು, ನಕ್ಷತ್ರಭರಿತ ಆಕಾಶ ಮತ್ತು ಪ್ರಕೃತಿಯನ್ನು ಗಮನಿಸುತ್ತಾ “ಸಾಮರಸ್ಯದ ರಹಸ್ಯ” ಕುರಿತು ಚಿಂತಿಸಲು ಪ್ರೇರೇಪಿಸಿದ ಒಂದು ಕವಿತೆಯನ್ನು ಉಲ್ಲೇಖಿಸುತ್ತಾರೆ. ಆ ಕವಿತೆ ಈ ಮಾತುಗಳೊಂದಿಗೆ ಅಂತ್ಯಗೊಳ್ಳುತ್ತದೆ.

“ನಾನು ನಂಬುವುದಿಲ್ಲವೆಂದು ನಂಬುತ್ತೇನೆ ಶೂನ್ಯತೆಯ ಬಗ್ಗೆ ಸಂಪೂರ್ಣ ಖಚಿತನಾಗಿದ್ದರೂ, ದೇವರಿಗಾಗಿ ಹಾತೊರೆಯುತ್ತಲೇ ಇದ್ದೇನೆ. ನನ್ನ ನಾಟಕ ದೇವರೇ! ನನ್ನ ಅಶಾಂತಿ ದೇವರೇ!”

ತಮ್ಮ ಬರಹದಲ್ಲಿ, ರೊಕ್ಕೋರವರು ಜಗದ್ಗುರುಗಳ ಸಹಾಯವನ್ನು ಕೇಳುತ್ತಾ ಈ ಪ್ರಶ್ನೆಗಳನ್ನು ಕೇಳುತ್ತಾರೆ

“ತನ್ನನ್ನು ನಾಸ್ತಿಕನೆಂದು ಪರಿಗಣಿಸಿಕೊಂಡು ದೇವರನ್ನು ಪ್ರೀತಿಸುವುದು ಹೇಗೆ ಸಾಧ್ಯ? ನನಗೆ ದೇವರನ್ನು ಪ್ರೀತಿಸುವ ಅಗತ್ಯವಿದೆ ಎಂದು ಅನಿಸುತ್ತದೆ ಆದರೆ ನಾನು ನನ್ನನ್ನು ನಾಸ್ತಿಕನೆಂದು ಪರಿಗಣಿಸುತ್ತೇನೆ. ಅಥವಾ ಬಹುಶಃ, ನಾನು ನಾಸ್ತಿಕನೆಂದು ಭಾವಿಸುತ್ತಿದ್ದರೂ, ಆಳದಲ್ಲಿ ದೇವರನ್ನು ಹುಡುಕುತ್ತಿದ್ದೇನೆನಾ ಎಂದು ಕೇಳಲು

ಜಗದ್ಗುರು ಲಿಯೋರವರ ಉತ್ತರ

ಜಗದ್ಗುರು ಲಿಯೋರವರು ರೊಕ್ಕೋರವರಿಗೆ ಉತ್ತರಿಸುವಾಗ ಸಂತ ಅಗಸ್ಟೀನ್ ರವರ ಮಾತುಗಳನ್ನು ಉಲ್ಲೇಖಿಸಿದರು

ನೀನು ನನ್ನೊಳಗೇ ಇದ್ದೆ ಆದರೆ ನಾನು ನನ್ನ ಹೊರಗೆ ಇದ್ದೆ ಮತ್ತು ಅಲ್ಲಿ ನಾನು ನಿನ್ನನ್ನು ಹುಡುಕಿದೆ!

ಈ ಮಾತುಗಳೇ ಸಾಕು ದೇವರನ್ನು ಪ್ರೀತಿಸುವವರು, ನಿಷ್ಕಪಟ ಹೃದಯದಿಂದ ಅವರನ್ನು ಹುಡುಕುವವರು ನಾಸ್ತಿಕರಾಗಲು ಸಾಧ್ಯವಿಲ್ಲ,ಎಂದು ಜಗದ್ಗುರುಗಳು ಬರೆಯುತ್ತಾರೆ.

ಅವರು ಹೀಗೂ ಒತ್ತಿಹೇಳಿದರು: “ವಿಶ್ವಾಸದ ನಿಜವಾದ ಸಮಸ್ಯೆ ದೇವರನ್ನು ನಂಬುವುದೋ ಅಥವಾ ನಂಬದಿರುವುದೋ ಅಲ್ಲ, ಆದರೆ ಅವರನ್ನು ಹುಡುಕುವುದೇ!

ಅವರನ್ನು ಹುಡುಕುವ ಹೃದಯಕ್ಕೆ ಅವರು ತಮ್ಮನ್ನು ಕಂಡುಕೊಳ್ಳಲು ಅವಕಾಶ ನೀಡುತ್ತಾರೆ, ಎಂದು ಜಗದ್ಗುರುಗಳು ಮುಂದುವರಿಸಿದರು. “ಬಹುಶಃ ಸರಿಯಾದ ವ್ಯತ್ಯಾಸವು ವಿಶ್ವಾಸಿಗಳ ಮತ್ತು ಅವಿಶ್ವಾಸಿಗಳ ನಡುವೆ ಅಲ್ಲ, ಆದರೆ ದೇವರನ್ನು ಹುಡುಕುವವರ ಮತ್ತು ಹುಡುಕದವರ ನಡುವೆ ಇರಬೇಕು.ನಂಬುವುದಿಲ್ಲವೆಂದು ಭಾವಿಸುವವರೂ ಸಹ ವಾಸ್ತವದಲ್ಲಿ ದೇವರನ್ನು ಉತ್ಸುಕತೆಯಿಂದ ಹುಡುಕುವವರಾಗಿರಬಹುದು ಎಂದು ಅವರು ವಿವರಿಸಿದರು.

“ನೋಡಿ ರೊಕ್ಕೋ, ನಾವು ಎಲ್ಲರೂ ಪ್ರೀತಿಗಾಗಿ ಹಾತೊರೆಯುವವರೇ ಆಗಿದ್ದೇವೆ ನಾವು ಎಲ್ಲರೂ ದೇವರನ್ನು ಹುಡುಕುವವರೇ ಆಗಿದ್ದೇವೆ. ಇದೇ ನಮ್ಮ ಜೀವನದ ಗೌರವವೂ ಸೌಂದರ್ಯವೂ ಆಗಿದೆ, ಎಂದು ಜಗದ್ಗುರುಗಳು ಸಮಾರೋಪ ಮಾಡಿದರು.

24 ಫೆಬ್ರವರಿ 2026, 18:16