ಜಗದ್ಗರುಗಳ ತಪಸ್ಸು ಕಾಲದ ಧ್ಯಾನ ಶಿಬಿರವನ್ನು ಪ್ರಾರ್ಥನೆ ಮತ್ತು ಮನನದೊಂದಿಗೆ ಸಮಾಪಿಸಿದರು.
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ವ್ಯಾಟಿಕನ್ ನಲ್ಲಿ ನಡೆದ ಒಂದು ವಾರದ ಆತ್ಮೀಯ ವ್ಯಾಯಾಮಗಳ ಸಮಾಪ್ತಿಯಲ್ಲಿ ಕೃತಜ್ಞತೆ ಮತ್ತು ಮನನದ ಮಾತುಗಳನ್ನು ಹಂಚಿಕೊಂಡರು.ಎರಿಕ್ ವಾಡ೯ನ್ ರವರು ಬೋಧಿಸಿದ ತಪಸ್ಸು ಕಾಲದ ಧ್ಯಾನ ಶಿಬಿರದ ಪ್ರಮುಖ ವಿಷಯಗಳನ್ನು ಅವರು ಒಟ್ಟುಗೂಡಿಸಿ, ಈ ದಿನಗಳನ್ನು “ಆಳವಾದ ಆತ್ಮೀಯ ಅನುಭವ”ವೆಂದು ವರ್ಣಿಸಿದರು. ಪರೀಕ್ಷೆಗಳು ಎಂಬ ಧ್ಯಾನದಿಂದ ಆರಂಭವಾಗಿ, ಸನ್ಯಾಸ ಜೀವನ ಮತ್ತು ಕ್ಲೈರ್ವಾಕ್ಸ್‌ನ ಬರ್ನಾರ್ಡ್ ರವರ ಸಾಕ್ಷಿಯವರೆಗೆ ಈ ಧ್ಯಾನಗಳು ಸಾಗಿದವು ಎಂದು ಅವರು ಹೇಳಿದರು.
ಜಗದ್ಗರುಗಳು ತಮ್ಮನ್ನು ಆಳವಾಗಿ ಸ್ಪರ್ಶಿಸಿದ ಕ್ಷಣಗಳನ್ನು ಉಲ್ಲೇಖಿಸಿ, ಜಗದ್ಗುರು III ನೇ ಯುಜೀನ್ ರವರ ಆಯ್ಕೆಯ ಕುರಿತ ಧ್ಯಾನವನ್ನು ಸ್ಮರಿಸಿದರು. ಆಗ ಸಂತ ಬರ್ನಾರ್ಡ್ ರವರು ಹೇಳಿದ ಮಾತುಗಳನ್ನು ಅವರು ಉಲ್ಲೇಖಿಸಿದರು: ನೀನು ಏನು ಮಾಡಿದ್ದೀ ದೇವರು ನಿನ್ನ ಮೇಲೆ ಕರುಣೆ ತೋರಲಿ.ಮೇ 8ರಂದು ತಾವು ಮತ್ತು ಸಹೋದರ ಕಾರ್ಡಿನಲ್‌ಗಳು ಪವಿತ್ರ ಬಲಿ ಪೂಜೆ ಆಚರಣೆಗೆ ಸೇರಿದ್ದ ಸಂದರ್ಭವನ್ನೂ ಅವರು ನೆನಪಿಸಿಕೊಂಡರು. ಅಲ್ಲಿ ಫಿಲಿಪ್ಪಿಯರಿಗೆ ಬರೆದ ಪತ್ರ ವಾಕ್ಯ ಉಲ್ಲೇಖಿತವಾಗಿತ್ತು.
ಈ ಆತ್ಮಸಮ್ಮಿಲನದ ಮನೋಭಾವದಲ್ಲಿ ನಾವು ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರೂ, ಎಂದು ಅವರು ಹೇಳಿದರು. ಪ್ರಾರ್ಥನೆಯಲ್ಲಿ ಒಂದಾಗಿ ಸೇರುವುದು ನಮ್ಮ ವೈಯಕ್ತಿಕ ಜೀವನಕ್ಕೂ ಮತ್ತು ಧರ್ಮ ಸಭೆಗೂ ಅತಿ ಮಹತ್ವದ ಕ್ಷಣವೆಂದು ಅವರು ಒತ್ತಿಹೇಳಿದರು. ಇದು ಆತ್ಮಪರಿಶೀಲನೆಗೆ ಮತ್ತು ನಂಬಿಕೆಯ ಗಾಢತೆಯತ್ತ ಕರೆದೊಯ್ಯುವ ಸಮಯವಾಗಿದೆ.
ಧ್ಯಾನಗಳಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾದ ವಿಷಯಗಳಲ್ಲಿ, ಜಾನ್ ಹೆನ್ರಿ ನ್ಯೂಮನ್ ಮತ್ತು ಅವರ ಕಾವ್ಯಕೃತಿ ಜೆರೋಂಟಿಯಸ್‌ನ ಕನಸು ಪ್ರಮುಖವಾಗಿದ್ದವು ಎಂದು ಜಗದ್ಗುರುಗಳು ಹೇಳಿದರು. ಆ ಕೃತಿಯಲ್ಲಿ ಮರಣ ಮತ್ತು ನ್ಯಾಯತೀರ್ಪನ್ನು “ಪ್ರಿಸಮ್” ಎಂಬ ರೂಪಕದ ಮೂಲಕ ವಿವರಿಸಿ, ದೇವರ ಮುಂದೆ ಮಾನವನ ಭಯ ಮತ್ತು ಅಯೋಗ್ಯತೆಯನ್ನು ವ್ಯಕ್ತಪಡಿಸಲಾಗಿದೆ. ಕ್ರೈಸ್ತ ಜೀವನದಲ್ಲಿ ಸ್ವಾತಂತ್ರ್ಯ ಮತ್ತು ಸತ್ಯವೂ ಅತ್ಯಾವಶ್ಯಕ ಆಯಾಮಗಳೆಂದು ಅವರು ತಿಳಿಸಿದರು.
ಮತ್ತೊಮ್ಮೆ ಧರ್ಮಪ್ರಚಾರಕ ಪಾಲ್ ರವರ ಫಿಲಿಪ್ಪಿಯರ ಪತ್ರವನ್ನು ಉಲ್ಲೇಖಿಸಿ, ಕ್ರಿಸ್ತನೊಂದಿಗೆ ಇರಲು ಹೊರಟು ಹೋಗುವ ಆಸೆ ಮತ್ತು ಇತರರ ನಂಬಿಕೆಯ ಬೆಳವಣಿಗೆಗಾಗಿ ಉಳಿಯುವ ಕರೆಯ ನಡುವೆ ಒತ್ತಡದಲ್ಲಿದ್ದೇನೆ ಎಂಬ ವಾಕ್ಯವನ್ನು ಜಗದ್ಗುರುಗಳು ನೆನಪಿಸಿದರು. ಕ್ರಿಸ್ತನ ಸುವಾರ್ತೆಗೆ ಯೋಗ್ಯವಾದ ರೀತಿಯಲ್ಲಿ ನಡೆದುಕೊಳ್ಳಿರಿ ಎಂಬ ಪ್ರೇರಣೆಯೇ ಈ ಪ್ರಾರ್ಥನೆ ಮತ್ತು ಮನನದ ದಿನಗಳ ಅಂತಿಮ ಆಹ್ವಾನವೆಂದು ಅವರು ಹೇಳಿದರು.
ಕೊನೆಯಲ್ಲಿ, ಜಗದ್ಗುರುಗಳು ಬೋಧನೆಗಾಗಿ ಬಿಷಪ್ ವಾರ್ಡನ್ ರವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ದೈವಾರಾಧನಾ ವಿಧಿ ಆಚರಣೆಗಳ ಕಚೇರಿ ಹಾಗೂ ಗಾಯನ ಬಳಗಕ್ಕೂ ಧನ್ಯವಾದಗಳನ್ನು ಅರ್ಪಿಸಿದರು. ಸಂಗೀತವು ನಮ್ಮ ಪ್ರಾರ್ಥನೆಯಲ್ಲಿ ಅತ್ಯಂತ ಮುಖ್ಯವಾದದ್ದು ಅದು ಮಾತುಗಳು ಸಾಧ್ಯವಾಗದ ರೀತಿಯಲ್ಲಿ ನಮ್ಮ ಆತ್ಮವನ್ನು ಪ್ರಭುವಿನತ್ತ ಎತ್ತುತ್ತದೆ, ಎಂದು ಅವರು ಹೇಳಿದರು.
