ಮೋನಾಕೋದಲ್ಲಿನ ಧರ್ಮ ಸಭೆ ಜಗದ್ಗುರು XIVನೇ ಲಿಯೋರವರ ಆಗಮನವನ್ನು ಹರ್ಷದಿಂದ ನಿರೀಕ್ಷಿಸುತ್ತದೆ
ವ್ಯಾಟಿಕನ್ ವರದಿ
ಮೋನಾಕೋ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತದಲ್ಲಿರುವ ಜಗದ್ಗುರುಗಳನ್ನು ಸ್ವಾಗತಿಸುವ ಅವಕಾಶ ದೊರೆಯುತ್ತಿರುವುದರಿಂದ ರಾಜ್ಯ ಮತ್ತು ಧಾರ್ಮಿಕ ಅಧಿಕಾರಿಗಳು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 25ರಂದು ಬುಧವಾರ ಪ್ರಕಟಿಸಿದ ಎರಡು ಪತ್ರಿಕಾ ಪ್ರಕಟಣೆಗಳಲ್ಲಿ ಪ್ರಿನ್ಸ್ ಅರಮನೆ ಮತ್ತು ಮೋನಾಕೋ ಮಹಾಧರ್ಮಪ್ರಾಂತ್ಯವು ಮಧ್ಯಾಹ್ನ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯನ್ನು ದೃಢಪಡಿಸಿವೆ. ಜಗದ್ಗುರು XIVನೇ ಲಿಯೋರವರು ಮಾರ್ಚ್ 28ರ ಶನಿವಾರ, ಗರಿಗಳ ಭಾನುವಾರದ ಹಿಂದಿನ ದಿನ, “ಲೆ ರೋಶೆರ್” (ರಾಕ್) ಗೆ ಭೇಟಿ ನೀಡಲಿದ್ದಾರೆ.
ಪ್ರಿನ್ಸ್ II ನೇ ಆಲ್ಬರ್ಟ್ ರವರು ಜನವರಿ 17ರಂದು ವ್ಯಾಟಿಕನ್‌ನಲ್ಲಿ ನಡೆದ ಖಾಸಗಿ ಭೇಟಿ ವೇಳೆ ಜಗದ್ಗುರುಗಳನ್ನು ರಾಜ್ಯಕ್ಕೆ ಆಹ್ವಾನಿಸಿದ್ದರು. “ಶತಮಾನಗಳ ಕಾಲದಿಂದ ಪ್ರಿನ್ಸ್ ಕುಟುಂಬವು ಹಾಗೂ ಅದರೊಂದಿಗೆ ರಾಜ್ಯವು ಪೇತ್ರನ ಉತ್ತರಾಧಿಕಾರಿಗಳೊಂದಿಗೆ ಹೊಂದಿರುವ ಬಾಂಧವ್ಯವನ್ನು ನಾವು ಚೆನ್ನಾಗಿ ತಿಳಿದಿದ್ದೇವೆ,ಎಂದು ಕಥೋಲಿಕ ಧರ್ಮವನ್ನು ರಾಜ್ಯಧರ್ಮವಾಗಿ ಹೊಂದಿರುವ ಮೋನಾಕೋ ಮಹಾಧರ್ಮಪ್ರಾಂತ್ಯ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಮಾನವ ಜೀವಿತದ ಆರಂಭದಿಂದ ಅಂತ್ಯದವರೆಗೆ ಗೌರವ, ಸಮಗ್ರ ಪರಿಸರ ಸಂರಕ್ಷಣೆ ಮತ್ತು ‘ನಮ್ಮ ಸಾಮೂಹಿಕ ಗೃಹ’ದ ಕಾಪಾಡುವಿಕೆ, ಹಾಗೂ ಕ್ರೀಡೆಗಳ ಮೇಲಿನ ಹಂಚಿಕೆಯ ಆಸಕ್ತಿ ಎಂಬಂತೆ ಇಬ್ಬರೂ ಪ್ರಭುತ್ವಗಳ ನಡುವೆ ಇರುವ ಸಾಮಾನ್ಯ ಬದ್ಧತೆಗಳನ್ನು ಧರ್ಮ ಸಭೆಯು ನೆನಪಿಸಿಕೊಂಡಿದೆ.
ರಾಜ್ಯ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ನಡುವಿನ ಶತಮಾನಗಳ ಸಹಕಾರ
ಈ ಭೇಟಿ 1297ರಿಂದ ಮೋನಾಕೋವನ್ನು ಆಳುತ್ತಿರುವ ಗ್ರಿಮಾಲ್ಡಿ ವಂಶ ಮತ್ತು ಪೇತ್ರನ ಉತ್ತರಾಧಿಕಾರಿಗಳ ನಡುವಿನ ಶತಮಾನಗಳ ಹಳೆಯ ಬಾಂಧವ್ಯದ ಮುಂದುವರಿಕೆಯಾಗಿದೆ. ಪ್ರಿನ್ಸ್ ಅರಮನೆಯ ಪ್ರಕಾರ, ಇದು ವಿಶ್ವದ ಎರಡು ಅತಿಸಣ್ಣ ರಾಷ್ಟ್ರಗಳ ನಡುವಿನ ದೀರ್ಘಕಾಲದ ವಿಶ್ವಾಸಾರ್ಹ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
2021ರ ಜುಲೈನಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ರವರು ಮೋನಾಕೋಗೆ ಮೂರು ದಿನಗಳ ಅಧಿಕೃತ ಭೇಟಿ ನೀಡಿ, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ರಾಜ್ಯದ ನಡುವಿನ ಒಪ್ಪಂದದ 40ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದರು. ಈ ಒಪ್ಪಂದವು ಮೋನಾಕೋ ಧರ್ಮಪ್ರಾಂತ್ಯವನ್ನು ಮಹಾಧರ್ಮಪ್ರಾಂತ್ಯದ ಗೌರವಕ್ಕೆ ಏರಿಸಿತು. ಆದರೆ, ಎರಡು ರಾಜ್ಯಗಳ ನಡುವಿನ ಅಧಿಕೃತ ರಾಜತಾಂತ್ರಿಕ ಸಂಬಂಧಗಳು 1887ರಲ್ಲಿ ಜಗದ್ಗುರು XIVನೇ ಲಿಯೋರವರು ಕ್ವೆಮಾಡ್ಮೋಡಮ್ ಸೊಲ್ಲಿಸಿಟಸ್ ಧರ್ಮಾಧ್ಯಕ್ಷ ಎಂಬ ಮೋನಾಕೋ ಧರ್ಮಪ್ರಾಂತ್ಯವನ್ನು ಸ್ಥಾಪಿಸಿದಾಗ ಪ್ರಾರಂಭಗೊಂಡವು. 2027ರಲ್ಲಿ ಮಹಾಧರ್ಮಪ್ರಾಂತ್ಯವು ತನ್ನ 140ನೇ ವಾರ್ಷಿಕೋತ್ಸವವನ್ನು, ಜೊತೆಗೆ 1247 ಡಿಸೆಂಬರ್ 6ರಂದು ಜಗದ್ಗುರು IV ನೇ ಇನೋಸೆಂಟ್ ರವರುಪ್ರೊ ಪ್ಯೂರಿಟೇಟ್ ಎಂಬ ರಾಕ್ ಪ್ರದೇಶದಲ್ಲಿ ಮೊದಲ ಧರ್ಮ ಕೇಂದ್ರವನ್ನು ಸ್ಥಾಪಿಸಲು ಅನುಮತಿಸಿದ 780ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಈ ಮಹತ್ವದ ಎರಡು ಸ್ಮರಣೋತ್ಸವಗಳ ಮುನ್ನವೇ ಜಗದ್ಗುರು XIVನೇ ಲಿಯೋರವರ ಐತಿಹಾಸಿಕ ಭೇಟಿ ನಡೆಯಲಿದೆ.
ಮೋನಾಕೋ ಜೀವನದಲ್ಲಿ ಕಥೋಲಿಕ ಧರ್ಮ ಸಭೆಯ ಕೇಂದ್ರಸ್ಥಾನ
ಮೋನಾಕೋ ರಾಜ್ಯವು ಯೂರೋಪಿನಲ್ಲಿನ ಕಥೋಲಿಕ ಧರ್ಮವನ್ನು ರಾಜ್ಯಧರ್ಮವಾಗಿ ಉಳಿಸಿಕೊಂಡಿರುವ ಕೆಲವು ದೇಶಗಳಲ್ಲಿ ಒಂದಾಗಿದೆ. 1962ರ ಸಂವಿಧಾನವು 38,000ಕ್ಕೂ ಹೆಚ್ಚು ನಿವಾಸಿಗಳಿಗೆ ಧರ್ಮಸ್ವಾತಂತ್ರ್ಯವನ್ನು ಖಾತ್ರಿಪಡಿಸಿದರೂ, ಸ್ಥಳೀಯ ಧರ್ಮ ಸಭೆ ಮೋನಾಕೋ ಜೀವನದಲ್ಲಿ ಕೇಂದ್ರ ಸಂಸ್ಥೆಯಾಗಿ ಉಳಿದಿದ್ದು, ಅನೇಕ ರೀತಿಯಲ್ಲಿ ಸಕ್ರಿಯವಾಗಿದ್ದು, ಸಾರ್ವಜನಿಕರಿಗೆ ಹೆಚ್ಚು ತಿಳಿಯದ ಜೀವಂತತೆಯನ್ನು ಹೊಂದಿದೆ ಎಂದು ಮಹಾಧರ್ಮಪ್ರಾಂತ್ಯ ಹೇಳಿದೆ.
ಜಗದ್ಗರುಗಳು ಮುಂಬರುವ ಭೇಟಿ ಐತಿಹಾಸಿಕ ಮಹತ್ವಕ್ಕಿಂತಲೂ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿದೆ. ಪ್ರಿನ್ಸ್ ಅರಮನೆಯ ಪ್ರಕಾರ, ಜಗದ್ಗುರುಗಳ ಆಗಮನವು ಸಂವಾದ, ಶಾಂತಿ ಮತ್ತು ಹಂಚಿಕೊಂಡ ಜವಾಬ್ದಾರಿಯ ಮನೋಭಾವದಲ್ಲಿ ಶಕ್ತಿಶಾಲಿ ಭರವಸೆಯ ಸಂಕೇತವಾಗಲಿದೆ. ಜಗದ್ಗುರು XIV ನೇ ಲಿಯೋರವರ ಎರಡನೇ ಪ್ರೇಷಿತರ ಪ್ರವಾಸದ ವಿವರವಾದ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
