ಗೌದಲುಪೆಯ ಕನ್ಯಾ ಮರಿಯಮ್ಮನವರ ಹಬ್ಬದಂದು ನಡೆದ ಪವಿತ್ರ ಬಲಿ ಪೂಜೆ ಆಚರಣೆಯಲ್ಲಿ ಜಗದ್ಗುರು XIVನೇ ಲಿಯೋರವರು ಗೌದಲುಪೆಯ ಕನ್ಯಾ ಮರಿಯಮ್ಮನವರ ಹಬ್ಬದಂದು ನಡೆದ ಪವಿತ್ರ ಬಲಿ ಪೂಜೆ ಆಚರಣೆಯಲ್ಲಿ ಜಗದ್ಗುರು XIVನೇ ಲಿಯೋರವರು  (ANSA)

ಜಗದ್ಗುರು XIVನೇ ಲಿಯೋರವರು: ಗೌದಲುಪೆ ಕನ್ಯಾ ಮರಿಯಮ್ಮನವರು ಮತ್ತು ಸುವಾರ್ತೆಯ ಸಂಸ್ಕೃತೀಕರಣ

2026ರ ಫೆಬ್ರವರಿ 24ರಿಂದ 26ರವರೆಗೆ ಮೆಕ್ಸಿಕೋ ನಗರದಲ್ಲಿ ನಡೆದ ಗೌದಲುಪೆಯ ಘಟನೆಯ ಕುರಿತು ನಡೆದ ಧರ್ಮಶಾಸ್ತ್ರ– ಧರ್ಮಾಧ್ಯಕ್ಷರ ಮಹಾಸಭೆಗೆ ಕಳುಹಿಸಿದ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಗೌದಲುಪೆ ತಾಯಿ ಮರಿಯಮ್ಮನನ್ನು ನಿಜವಾದ ಸಂಸ್ಕೃತೀಕರಣದ ಮಾದರಿಯೂ, ಧರ್ಮ ಸಭೆಯ ಸುವಾರ್ತಾ ಮಿಷನ್‌ಗೆ ಶಾಶ್ವತ ಮಾನದಂಡವಾಗಿಯೂ ಪರಿಚಯಿಸಿದ್ದಾರೆ.

ವ್ಯಾಟಿಕನ್ ವರದಿ

ಲ್ಯಾಟಿನ್ ಅಮೆರಿಕಕ್ಕಾಗಿ ಜಗದ್ಗುರುಗಳ ಆಯೋಗ, ಮೆಕ್ಸಿಕೋ ಎಪಿಸ್ಕೋಪಲ್ ಸಮಿತಿ, ಕೊಲಂಬಸ್‌ನ ಶೂರರು ಮತ್ತು ಜಗದ್ಗುರುಗಳ ಅಂತರರಾಷ್ಟ್ರೀಯ ಮರಿಯಮ್ಮನವರ ಅಕಾಡೆಮಿ ಪ್ರೋತ್ಸಾಹಿಸಿದ ಧರ್ಮಶಾಸ್ತ್ರ– ಧರ್ಮಾಧ್ಯಕ್ಷೀಯ ಮಹಾಸಭೆಯ ಉದ್ದೇಶ, 2031ರ ಜೂಬಿಲಿಗೆ ಸಿದ್ಧತೆಯಾಗಿ ಗೌದಲುಪೆಯ ಘಟನೆಯ ಕುರಿತು ಚಿಂತನೆಗೆ ಹೊಸ ಚೈತನ್ಯ ನೀಡುವುದಾಗಿದೆ. ಈ ಜೂಬಿಲಿ, ಸಂತ ಜುವಾನ್ ಡಿಯಾಗೋರವರಿಗೆ ಟೆಪಿಯಾಕ್ ಬೆಟ್ಟದಲ್ಲಿ ನಡೆದ ದರ್ಶನಗಳ 500ನೇ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ.

ಫೆಬ್ರವರಿ 5ರಂದು ತಮ್ಮ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ದೇವರು ಇತಿಹಾಸದಲ್ಲಿ ತಾನು ಪ್ರಕಟವಾಗುವ ವಿಧಾನವನ್ನು ವಿಶ್ಲೇಷಿಸುತ್ತಾರೆ. ದೇವರು ಹೊರಗಿನಿಂದ ಹೇರಲಾದ ತತ್ತ್ವಶಾಸ್ತ್ರೀಯ ಕಲ್ಪನೆಯಾಗಿ ಅಲ್ಲ, ಮಾನವ ಅನುಭವದೊಳಗೆ ಪ್ರವೇಶಿಸಿ, ಮಾನವನ ಸ್ವಾತಂತ್ರ್ಯವನ್ನು ಸ್ಪರ್ಶಿಸುವ ಮೂಲಕ ತಾನು ಪ್ರಕಟಗೊಳ್ಳುತ್ತಾನೆ. ಸುವಾರ್ತಾಪ್ರಚಾರ ಎಂದರೆ ಯೇಸು ಕ್ರಿಸ್ತನನ್ನು ಪ್ರಸ್ತುತಗೊಳಿಸಿ, ವ್ಯಕ್ತಿಗತ ಮತ್ತು ಸಮುದಾಯ ಜೀವನವನ್ನು ರೂಪಿಸುವ ಜೀವಂತ ಸಂಬಂಧವನ್ನು ಬೆಳೆಸುವುದೆಂದು ಅವರು ವಿವರಿಸುತ್ತಾರೆ.

ಗೌದಲುಪೆ: ಕ್ರಿಸ್ತನೊಂದಿಗೆ ಸಂಧಾನದ ಮಾದರಿ

ಗೌದಲುಪೆಯ ಕನ್ಯಾಮಾತೆಯನ್ನು ಉಲ್ಲೇಖಿಸಿ, ಜಗದ್ಗುರುಗಳು ನಿಜವಾದ ಸಂಸ್ಕೃತೀಕರಣವು ಸಂಸ್ಕೃತಿಗಳನ್ನು ದೇವತ್ವಕ್ಕೇರಿಸುವುದೂ ಅಲ್ಲ, ತಳ್ಳಿಹಾಕುವುದೂ ಅಲ್ಲ ಎಂದು ಹೇಳುತ್ತಾರೆ. ಬದಲಾಗಿ, ಅವುಗಳನ್ನು ಸ್ವೀಕರಿಸಿ, ಶುದ್ಧಗೊಳಿಸಿ, ಕ್ರಿಸ್ತನೊಂದಿಗೆ ಭೇಟಿಯಾಗುವ ಸ್ಥಳಗಳಾಗಿ ರೂಪಿಸುವುದು ಅದರ ಗುರಿ. ಟೆಪೆಯಾಕ್ ಘಟನೆಯು, ಕ್ರೈಸ್ತ ಪ್ರಕಟನೆಗೆ ಹೊಂದಿರುವ ಸಮಗ್ರತೆಯನ್ನೂ ಹೊಸತನವನ್ನೂ ಕಾಪಾಡುತ್ತಾ, ಬಲಾತ್ಕಾರವಿಲ್ಲದೆ ಸುವಾರ್ತೆಯನ್ನು ಪ್ರಕಟಿಸುವ ಮಾದರಿಯಾಗಿದೆ ಎಂದು ಅವರು ಸೂಚಿಸುತ್ತಾರೆ.

ಸಂಸ್ಕೃತೀಕರಣ: ಸವಾಲಿನ ಮತ್ತು ಶುದ್ಧೀಕರಣದ ಪ್ರಕ್ರಿಯೆ

 ಜಗದ್ಗುರು ಲಿಯೋರವರು ಸಂಸ್ಕೃತೀಕರಣವು ಸವಾಲಿನ ಮತ್ತು ಶುದ್ಧೀಕರಣದ ಪ್ರಕ್ರಿಯೆಯಾಗಿದೆ ಎಂದು ಒತ್ತಿ ಹೇಳುತ್ತಾರೆ. ಸಂಸ್ಕೃತಿಗಳೊಳಗೆ ಇರುವ “ವಾಕ್ಯದ ಬೀಜಗಳನ್ನು” ಗುರುತಿಸುವುದರ ಜೊತೆಗೆ, ಕ್ರಿಸ್ತನ ಪಾಸ್ಕ ರಹಸ್ಯದಿಂದ ಹರಿಯುವ ಕೃಪೆಯ ಬೆಳಕಿನಲ್ಲಿ ಪ್ರತಿಯೊಂದು ಮಾನವ ವಾಸ್ತವಿಕತೆಯೂ ಪ್ರಕಾಶಮಾನವಾಗಿ ಪರಿವರ್ತಿತವಾಗಬೇಕು. ಎಷ್ಟು ಶ್ರೀಮಂತವಾದರೂ ಯಾವುದೇ ಸಂಸ್ಕೃತಿಯೂ ವಿಶ್ವಾಸದ ಅಂತಿಮ ಮಾನದಂಡವಾಗಲು ಸಾಧ್ಯವಿಲ್ಲ.

ಇದಲ್ಲದೆ, ಇಂದಿನ ನಗರೀಕರಣಗೊಂಡ ಮತ್ತು ಬಹುಮುಖ ಸಮಾಜಗಳಲ್ಲಿ ವಿಶ್ವಾಸದ ಪರಂಪರೆ ಸ್ವಯಂಸಿದ್ಧವಾಗಿರುವುದಿಲ್ಲ ಎಂಬುದನ್ನು ಅವರು ಗಮನಿಸುತ್ತಾರೆ. ಆದ್ದರಿಂದ, 2007ರ ಅಪರೆಸಿಡಾ ಡಾಕ್ಯುಮೆಂಟ್ ನಲ್ಲಿ  ಸತತತೆಯಲ್ಲಿ, ಧರ್ಮ ಸಭೆಯ ಪ್ರಮುಖ ಕರ್ತವ್ಯವಾದ ಧಾರ್ಮಿಕ ಶಿಕ್ಷಣ ಬೋಧನೆಗಾಗಿ ಹೊಸ ಬದ್ಧತೆಯನ್ನು ಅವರು ಕೋರಿದ್ದಾರೆ. ಇದು ಇಂದಿನ ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಲು ಸಮರ್ಥವಾದ, ಪ್ರೌಢ ಮತ್ತು ಜಾಗೃತ ಶಿಷ್ಯತ್ವವನ್ನು ಬೆಳೆಸುವ ದಾರಿಯಾಗಿದೆ.

25 ಫೆಬ್ರವರಿ 2026, 17:08