ಜಗದ್ಗುರು ಲಿಯೋರವರು: ಶಾಂತಿ ತುರ್ತಾಗಿ ಅಗತ್ಯವಾಗಿದೆ ಅದಕ್ಕಾಗಿ ಜವಾಬ್ದಾರಿಯುತ ನಿರ್ಧಾರಗಳು ಬೇಕಾಗಿವೆ
ವ್ಯಾಟಿಕನ್ ವರದಿ
ಆಯುಧಗಳು ಮೌನವಾಗಲಿ, ಬಾಂಬ್ ದಾಳಿಗಳು ನಿಲ್ಲಲಿ, ತಕ್ಷಣವೇ ಯುದ್ಧ ವಿರಾಮ ಜಾರಿಯಾಗಲಿ, ಮತ್ತು ಶಾಂತಿಯ ದಾರಿ ಮಾಡಿಕೊಡುವ ಸಂವಾದವನ್ನು ಬಲಪಡಿಸಲಿ.
ಉಕ್ರೇನ್ ವಿರುದ್ಧದ ಯುದ್ಧ ಆರಂಭವಾಗಿ ನಾಲ್ಕು ವರ್ಷಗಳು ಪೂರ್ಣಗೊಂಡ ಈ ಸಂದರ್ಭದಲ್ಲಿ,ಪ್ರೇಷಿತರ ಅರಮನೆಯ ಕಿಟಕಿಯಿಂದ ತ್ರಿಕಾಲ ಪ್ರಾರ್ಥನೆಯ ನಂತರ ಜಗದ್ಗುರು ಲಿಯೋರವರು ಮಾತನಾಡುತ್ತಾ, ಸಂಪೂರ್ಣ ವಿಶ್ವದ ಕಣ್ಣುಗಳ ಮುಂದೆ ನಡೆಯುತ್ತಿರುವ ಈ ಭೀಕರ ಯುದ್ಧದಿಂದ ಬಳಲುತ್ತಿರುವ ಜನರತ್ತ ತಮ್ಮ ಹೃದಯ ಒಲಿದುಹೋಗಿರುವುದಾಗಿ ಹೇಳಿದರು.
ಎಷ್ಟೋ ಬಲಿಗಳು, ಎಷ್ಟೋ ಜೀವಗಳು ಮತ್ತು ಕುಟುಂಬಗಳು ಚೂರುಚೂರಾಗಿವೆ, ಅಪಾರ ವಿನಾಶ, ವರ್ಣಿಸಲಾರದಷ್ಟು ದುಃಖ ಪ್ರತಿಯೊಂದು ಯುದ್ಧವೂ ನಿಜವಾಗಿ ಸಂಪೂರ್ಣ ಮಾನವ ಕುಟುಂಬದ ಮೇಲೆ ಉಂಟಾಗುವ ಒಂದು ಗಾಯವಾಗಿದೆ ಅದು ತನ್ನ ಹಿಂದೆ ಮರಣ, ವಿನಾಶ ಮತ್ತು ತಲೆಮಾರುಗಳವರೆಗೆ ಗುರುತು ಬೀರುವ ನೋವಿನ ಹಾದಿಯನ್ನು ಬಿಟ್ಟುಹೋಗುತ್ತದೆ. ಶಾಂತಿಯನ್ನು ಮುಂದೂಡಲು ಸಾಧ್ಯವಿಲ್ಲ. ಅದು ತುರ್ತು ಅಗತ್ಯವಾಗಿದ್ದು, ನಮ್ಮ ಹೃದಯಗಳಲ್ಲಿ ನೆಲೆಸಬೇಕು ಮತ್ತು ಜವಾಬ್ದಾರಿಯುತ ನಿರ್ಧಾರಗಳಲ್ಲಿ ಅನುವಾದಗೊಳ್ಳಬೇಕು.
ಪ್ರಾರ್ಥನೆಯಲ್ಲಿ ಏಕತೆ
ಜಗದ್ಗರುಗಳು ಎಲ್ಲರನ್ನೂ ಯುದ್ಧದಿಂದ ಬಳಲುತ್ತಿರುವ ಉಕ್ರೇನ್ ಜನರಿಗಾಗಿ ಹಾಗೂ ಈ ಯುದ್ಧ ಮತ್ತು ಜಗತ್ತಿನ ಎಲ್ಲ ಸಂಘರ್ಷಗಳಿಂದ ನೋವು ಅನುಭವಿಸುವ ಎಲ್ಲರಿಗಾಗಿ ಪ್ರಾರ್ಥನೆಯಲ್ಲಿ ಒಂದಾಗುವಂತೆ ಬಲವಾಗಿ ಪ್ರೋತ್ಸಾಹಿಸಿದರು, ಬಹುಕಾಲದಿಂದ ನಿರೀಕ್ಷಿಸಲ್ಪಟ್ಟ ಶಾಂತಿಯ ವರವು ನಮ್ಮ ದಿನಗಳ ಮೇಲೆ ಪ್ರಕಾಶಿಸಲಿ ಎಂದು ಅವರು ಪ್ರಾರ್ಥಿಸಿದರು.
ಶಾಂತಿಗಾಗಿ ಪುನಃ ಪುನಃ ಮನವಿ
ರಷ್ಯಾದ ಉಕ್ರೇನ್ ಮೇಲೆ ನಡೆದ ವಿಶಾಲ ಆಕ್ರಮಣದ ನಾಲ್ಕನೇ ವಾರ್ಷಿಕೋತ್ಸವದ ಈ ದಿನದ ಮನವಿ ಕಹಿ ನೆನಪುಗಳನ್ನು ಹೊತ್ತುಕೊಂಡಿದ್ದರೂ, ಅದು ಇನ್ನೂ ಭರವಸೆಯನ್ನು ಜೀವಂತವಾಗಿರಿಸುತ್ತದೆ. ಯುರೋಪಿನ ಹೃದಯದಲ್ಲಿ ಶಾಂತಿಗಾಗಿ ಜಗದ್ಗುರು ಫ್ರಾನ್ಸಿಸ್ ರವರು ಸಲ್ಲಿಸಿದ್ದ ಮನವಿಗಳು ಸದಾ ಮೊಳಗುತ್ತಿದ್ದವು ಹುತಾತ್ಮರಾದ ಉಕ್ರೇನ್ ಜನರಿಗಾಗಿ ಅವರ ಆಳವಾದ ಕಾಳಜಿ ಸದಾ ಜೊತೆಯಲ್ಲಿತ್ತು. ಹುತಾತ್ಮರಾದ ಉಕ್ರೇನ್ ಜನರು ಎಂಬ ಅಭಿವ್ಯಕ್ತಿ ಅನೇಕ ಮಂದಿಗೆ ಪರಿಚಿತವಾಗಿದೆ.
ತಮ್ಮ ಆಯ್ಕೆಯ ತಕ್ಷಣವೇ ಜಗದ್ಗುರು XIVನೇ ಲಿಯೋರವರು ಈ ಯುದ್ಧವನ್ನು ಅರ್ಥಹೀನವೆಂದು ಕರೆದು, ನಿಜವಾದ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿಯನ್ನು ಸಾಧ್ಯವಾದಷ್ಟು ಬೇಗ ಸಾಧಿಸುವ ಅಗತ್ಯತೆಯನ್ನು ಒತ್ತಿಹೇಳಿದರು.
ಬಂಧಿಗಳ ಬಿಡುಗಡೆ ಮತ್ತು ಮಕ್ಕಳನ್ನು ಅವರ ಕುಟುಂಬಗಳಿಗೆ ಮರಳಿ ಕಳುಹಿಸುವುದು ಜಗದ್ಗುರುಗಳ ಪ್ರಾರ್ಥನೆಗಳಲ್ಲಿ ಪುನಃ ಪುನಃ ವ್ಯಕ್ತವಾಗುವ ವಿಷಯಗಳಾಗಿವೆ. ಈಗ, ವಿಶೇಷವಾಗಿ ಬಾಂಬ್ ದಾಳಿಗಳಿಂದ ಉಂಟಾಗಿರುವ ಹಾನಿಯನ್ನು ಹೆಚ್ಚಿಸುವ ತೀವ್ರ ಚಳಿಗಾಲವು ಅವರಿಗೆ ಹೆಚ್ಚಿನ ಚಿಂತೆ ಉಂಟುಮಾಡುತ್ತಿದೆ. ಆಯುಧಗಳ ಗರ್ಜನೆ ನಿಲ್ಲಲಿ, ಮತ್ತು ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಹಾಗೂ ಬದ್ಧತೆಯೊಂದಿಗೆ ಸಂಬಂಧಪಟ್ಟ ಪಕ್ಷಗಳು ಪ್ರಾಮಾಣಿಕ, ನೇರ ಮತ್ತು ಗೌರವಯುತ ಸಂವಾದಕ್ಕೆ ಧೈರ್ಯ ತೋರಲಿ ಎಂದು ಅವರು ತಮ್ಮ ಕ್ರಿಸ್ಮಸ್ ‘ಉರ್ಬಿ ಎಟ್ ಓರ್ಬಿ’ ಸಂದೇಶದಲ್ಲಿ ಹೇಳಿದ್ದಾರೆ.
ಯುದ್ಧದ ಬಲಿಗಳೊಂದಿಗೆ ಹೃದಯಸ್ಪರ್ಶಿ ಐಕ್ಯತೆ
ತಮ್ಮ ಪೂರ್ವಗಾಮಿಯು ಉಕ್ರೇನ್ ಜನತೆಗೆ ತೋರಿಸಿದ್ದ ಐಕ್ಯತೆಯನ್ನು ಮುಂದುವರಿಸುತ್ತಾ, ಜಗದ್ಗುರು ಲಿಯೋರವರು ಪಾಪಲ್ ಅಲ್ಮೋನರ್ ಮುಖಾಂತರ ಉಕ್ರೇನ್‌ಗೆ ಪುನಃ ಪುನಃ ಮಾನವೀಯ ಸಹಾಯ ಕಳುಹಿಸಿದ್ದಾರೆ. ಅವರು ರಷ್ಯಾ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕವೂ ಮಾತುಕತೆ ನಡೆಸಿದರು, ಯುದ್ಧದ ಬಲಿಗಳೊಂದಿಗೆ ಕೆಲಸ ಮಾಡುವ ಸಂಘಟನೆಗಳನ್ನೂ, ಮುಂಚೂಣಿಯಲ್ಲಿರುವ ಉಕ್ರೇನ್ ಸೈನಿಕರ ತಾಯಂದಿರು ಮತ್ತು ಪತ್ನಿಯರನ್ನೂ, ಅವಕಾಶಗಳಿಂದ ವಂಚಿತಗೊಂಡ ಮಕ್ಕಳನ್ನೂ ಮತ್ತು ಯುವಕರನ್ನೂ ಭೇಟಿಯಾಗಿದ್ದಾರೆ. ತುರ್ತು ಆಶ್ರಯ ಪಡೆದವರನ್ನೂ ಅವರು ಭೇಟಿಯಾಗಿದ್ದು, ಅನೇಕ ಪವಿತ್ರರ ಸಾಕ್ಷ್ಯದಿಂದ ಸಮೃದ್ಧವಾಗಿರುವ ಮತ್ತು ಅನೇಕ ಹುತಾತ್ಮರ ರಕ್ತದಿಂದ ಪವಿತ್ರಗೊಂಡ ಭೂಮಿಯ ವಿಶ್ವಾಸವನ್ನು ಅವರು ಪ್ರಶಂಸಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಉಕ್ರೇನ್ ಅಧ್ಯಕ್ಷರೊಂದಿಗೆ ನಡೆದ ಭೇಟಿಯಲ್ಲಿ, ಮಾತುಕತೆಗಳಿಗೆ ಆತಿಥ್ಯ ವಹಿಸಲು ಜಗದ್ಗುರುಗಳ ಅಧಿಕಾರ ಸ್ಥಳವು ಆಸಕ್ತಿ ಹೊಂದಿದೆ ಎಂದು ಅವರು ಪುನರುಚ್ಚರಿಸಿದರು. ಕೀವ್‌ಗೆ ಭೇಟಿ ನೀಡುವ ವಿಚಾರವನ್ನೂ ಅವರು ಪರಿಗಣಿಸಿದ್ದಾರೆ, ಆದರೆ ಅದಕ್ಕೆ ಸೂಕ್ತವಾದ ಜಾಣ್ಮೆಯ ವಾಸ್ತವಿಕತೆ ಅಗತ್ಯವಿದೆ ಎಂದು ಒಪ್ಪಿಕೊಂಡಿದ್ದಾರೆ. ನಾಗರಿಕರು ಮತ್ತು ಮೂಲಸೌಕರ್ಯಗಳಿಗೆ ಗಂಭೀರ ಹಾನಿ ಉಂಟುಮಾಡುತ್ತಿರುವ ಹೆಚ್ಚುತ್ತಿರುವ ಸಂಕಟ ಯುದ್ಧದ ತೀವ್ರತೆಯ ಎದುರು, ತಮ್ಮ ಮೊದಲ ಅಂತರರಾಷ್ಟ್ರೀಯ ಪ್ರವಾಸದಿಂದ ಮರಳಿದ ಬಳಿಕ ಅವರು ಯುರೋಪ್ ಮತ್ತು ಇಟಲಿಯ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳಿದರು. ಆಗಸ್ಟ್ ಅಂತ್ಯದಲ್ಲಿ ಗಂಭೀರ ಸಂವಾದದ ಬದ್ಧತೆಗಾಗಿ ಅವರು ಆಶಿಸಿದರು ಉಕ್ರೇನ್ ರಾಷ್ಟ್ರೀಯ ಹಬ್ಬದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿಂಸೆಯಿಂದ ಗಾಯಗೊಂಡ ಹೃದಯದಿಂದ ಅವರು ಬಲಿಯಾದವರ ಕುಟುಂಬಗಳಿಗೆ ಮತ್ತು ಸ್ಥಳಾಂತರಿತರಾದ ಜನರಿಗೆ ತಮ್ಮ ಸಂತಾಪ ಸೂಚಿಸಿದರು.
