ಹುಡುಕಿ

Tributes in Crans-Montana in honor of the victims of New Year's Day bar fire Tributes in Crans-Montana in honor of the victims of New Year's Day bar fire  (ANSA)

ಸ್ವಿಟ್ಜರ್ಲ್ಯಾಂಡ್‌ನ ಅಗ್ನಿ ದುರಂತದ ಬಲಿಯಾದವರಿಗಾಗಿ ಪೋಪ್ ಲಿಯೋ ಸಮೀಪತೆಯನ್ನು ಪುನರುಚ್ಚರಿಸಿದರು.

ಭಾನುವಾರದ ತ್ರಿಕಾಲ ಪ್ರಾರ್ಥನೆಯ ವೇಳೆ, ಜಗದ್ಗುರು XIVನೇ ಲಿಯೋರವರು ಜನವರಿ 1ರಂದು ಸ್ವಿಟ್ಜರ್ಲ್ಯಾಂಡ್‌ನ ಕ್ರಾನ್ಸ್–ಮಾಂಟಾನಾ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದ ಬಳಿಕ ಶೋಕದಲ್ಲಿರುವವರೊಂದಿಗೆ ತಮ್ಮ ಸಮೀಪತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಅಂತ್ಯದಲ್ಲಿ, ಜಗದ್ಗುರು XIVನೇ ಲಿಯೋರವರು ಜನವರಿ 1ರಂದು ಸ್ವಿಟ್ಜರ್ಲ್ಯಾಂಡ್‌ನ ಕ್ರಾನ್ಸ್–ಮಾಂಟಾನಾ ಪ್ರದೇಶದಲ್ಲಿ ಸಂಭವಿಸಿದ ದುರ್ಘಟನಾತ್ಮಕ ಅಗ್ನಿ ಅವಘಡದಿಂದ ಬಳಲುತ್ತಿರುವವರೊಂದಿಗೆ ತಮ್ಮ ಸಮೀಪತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದರು. ಅವರು ಸಾವನ್ನಪ್ಪಿದ ಯುವಕರಿಗಾಗಿ, ಗಾಯಗೊಂಡವರಿಗಾಗಿ ಮತ್ತು ಅವರ ಕುಟುಂಬಗಳಿಗಾಗಿ ತಮ್ಮ ಪ್ರಾರ್ಥನೆಗಳ ಭರವಸೆಯನ್ನು ನೀಡಿದರು.

ಸ್ವಿಸ್ ಪೊಲೀಸ್ ವರದಿಗಳ ಪ್ರಕಾರ, ಜನವರಿ 1ರ ಹೊಸ ವರ್ಷದ ಸಂಭ್ರಮದ ವೇಳೆ ಜನಸಂದಣಿ ತುಂಬಿದ್ದ ಸ್ಕೀ ರಿಸಾರ್ಟ್ ಪಟ್ಟಣದ ಒಂದು ಬಾರ್‌ನಲ್ಲಿ ಅಗ್ನಿ ಮತ್ತು ಸ್ಫೋಟ ಸಂಭವಿಸಿ, 40 ಮಂದಿ ಸಾವನ್ನಪ್ಪಿದ್ದು, 119 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.

ಜನವರಿ 2ರಂದು ಕಳುಹಿಸಲಾದ ಒಂದು ಟೆಲಿಗ್ರಾಂನಲ್ಲಿ, ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೋ ಪ್ಯಾರೊಲಿನ್ ಅವರ ಸಹಿಯಿಂದ ಜಗದ್ಗುರು XIVನೇ ಲಿಯೋರವರು ಅಗ್ನಿ ದುರಂತದ ಬಲಿಗಳೊಂದಿಗೆ ತಮ್ಮ ಶೋಕವನ್ನು ವ್ಯಕ್ತಪಡಿಸಿದರು.ಜಗದ್ಗುರುಗಳು , ಮರಣ ಹೊಂದಿದವರನ್ನು ಶಾಂತಿ ಮತ್ತು ಬೆಳಕಿನ ತನ್ನ ನಿವಾಸದಲ್ಲಿ ಸ್ವೀಕರಿಸಲಿ ಎಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತಾರೆ ಮತ್ತು ಹೃದಯದಲ್ಲಾಗಲಿ ದೇಹದಲ್ಲಾಗಲಿ ದುಃಖ ಅನುಭವಿಸುವವರಿಗೆ ಧೈರ್ಯ ನೀಡಲಿ ಎಂದು ತಮ್ಮ ಕಾಳಜಿ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದರು.

02 ಜನವರಿ 2026, 16:42