ಹುಡುಕಿ

ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ಜಗದ್ಗುರುಗಳು: ಯುದ್ಧಗಳು ಮತ್ತು ಮಾನವ ಗೌರವದ ಮೇಲಿನ ಗೌರವ ಕುಸಿತದ ನಡುವೆ, ಶಾಂತಿಗಾಗಿ ಪ್ರಾರ್ಥಿಸೋಣ

ಜಗದ್ಗುರು XIV ನೇ ಲಿಯೋರವರು ವಿಶ್ವಾಸಿಗಳನ್ನು ಕ್ರೈಸ್ತ ಏಕತೆಗೆ ಹಾಗೂ ಶಾಂತಿಗಾಗಿ ಪ್ರಾರ್ಥಿಸಲು ಆಹ್ವಾನಿಸುತ್ತಾರೆ. ವಿಶೇಷವಾಗಿ ಮಾನವ ಗೌರವದ ಮೇಲಿನ ಗೌರವದ ಕೊರತೆ ಮತ್ತು ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಉದ್ವಿಗ್ನತೆಗಳಿಂದ ಗುರುತಿಸಿಕೊಂಡಿರುವ ನಮ್ಮ ಕಾಲಘಟ್ಟದಲ್ಲಿ ಶಾಂತಿಗಾಗಿ ಪ್ರಾರ್ಥಿಸುವುದು ಅತ್ಯಂತ ಅಗತ್ಯವೆಂದು ಅವರು ಒತ್ತಿಹೇಳುತ್ತಾರೆ.

ವ್ಯಾಟಿಕನ್ ವರದಿ

 

ಮಾನವ ಗೌರವದ ಮೌಲ್ಯದ ಮೇಲಿನ ಗೌರವ ಕ್ರಮೇಣ ಕುಸಿಯುತ್ತಿರುವಂತೆಯೂ, ಯುದ್ಧವು ಮತ್ತೆ ಸಾಮಾನ್ಯವಾದಂತೆ ಕಾಣುತ್ತಿರುವಂತೆಯೂ ಗುರುತುಗೊಂಡಿರುವ ಇತಿಹಾಸದ ಈ ಕ್ಷಣದಲ್ಲಿ, ನಾವು ಶಾಂತಿಗಾಗಿ ಪ್ರಾರ್ಥಿಸೋಣ ಎಂದು ಜಗದ್ಗುರು XIVನೇ ಲಿಯೋರವರು  ಮನವಿ ಮಾಡಿದರು. ಬುಧವಾರ ವ್ಯಾಟಿಕನ್‌ನ VI ನೇ ಪೌಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ದರ್ಶನದ ವೇಳೆ ಅವರು ಈ ಆಹ್ವಾನವನ್ನು ನೀಡಿದರು.

ತಮ್ಮ ಧಾರ್ಮಿಕ ಶಿಕ್ಷಣ ಬೋಧನೆಯನ್ನು ಮುಗಿಸಿದ ನಂತರ ಪೋರ್ಚುಗೀಸ್ ಭಾಷಾಭಿಮಾನಿ ವಿಶ್ವಾಸಿಗಳನ್ನು ಅಭಿನಂದಿಸುತ್ತಾ, ಜಗದ್ಗುರುಗಳು ಹೀಗೆ ಪ್ರಾರ್ಥಿಸಿದರು.ತಂದೆಯನ್ನು ಪ್ರಕಟಿಸುವ ಯೇಸುವಿನ ಮಾನವತ್ವವು ನಮಗೆ ನ್ಯಾಯ ಮತ್ತು ಸಮಾಧಾನದ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡಲಿ ಎಂದರು.

ಜನವರಿ 18 ರಿಂದ 25 ರವರೆಗೆ ನಡೆಯುತ್ತಿರುವ ಕ್ರೈಸ್ತ ಏಕತೆಯ ಪ್ರಾರ್ಥನಾ ವಾರದ ಸಂದರ್ಭವನ್ನು ವಿಶೇಷವಾಗಿ ಉಲ್ಲೇಖಿಸಿ, ಜಗದ್ಗುರು XIVನೇ ಲಿಯೋರವರು ವಿಶ್ವಾಸಿಗಳನ್ನು ಕ್ರೈಸ್ತರ ನಡುವೆ ಏಕತೆಗಾಗಿ ಮತ್ತು ಜಗತ್ತಿನಾದ್ಯಂತ ಶಾಂತಿಗಾಗಿ ಪ್ರಾರ್ಥಿಸಲು ಆಹ್ವಾನಿಸಿದರು.

ತಮ್ಮ ಯಾತನೆಯ ಮೊದಲು ಯೇಸು ತನ್ನ ಶಿಷ್ಯರ ಏಕತೆಗಾಗಿ ಪ್ರಾರ್ಥಿಸಿದ್ದನ್ನು ನೆನಪಿಸಿಕೊಂಡು, ಜರ್ಮನ್ ಭಾಷಾಭಿಮಾನಿ ಯಾತ್ರಿಕರನ್ನು ಉದ್ದೇಶಿಸಿ ಜಗದ್ಗುರುಗಳು ಹೀಗೆ ಹೇಳಿದರು ಈ ಕ್ರೈಸ್ತ ಏಕತೆಯ ಪ್ರಾರ್ಥನಾ ವಾರದಲ್ಲಿ, ಯೇಸುವಿನೊಂದಿಗೆ ನಾವು ಪ್ರಾರ್ಥಿಸೋಣ ಆತನ ಎಲ್ಲಾ ಶಿಷ್ಯರು ಏಕತೆಯನ್ನು ಕಂಡುಕೊಳ್ಳಲಿ, ಇದರಿಂದ ಜಗತ್ತು ಆತನಲ್ಲಿಯೂ ಆತನ ಪ್ರಕಟಣೆಯಲ್ಲಿಯೂ ನಂಬಿಕೆ ಇಡಲಿ ಎಂದರು.

ಈ ವರ್ಷದ ಪ್ರಾರ್ಥನಾ ವಾರದ ವಿಷಯವಾದ ಒಂದು ದೇಹ ಮತ್ತು ಒಂದು ಆತ್ಮವಿದೆ ನಿಮ್ಮ ಕರೆಯಲ್ಲಿಯೇ ನಿಮಗೆ ಒಂದೇ ಭರವಸೆ ನೀಡಲಾಗಿದೆ (ಎಫೆಸಿಯ 4:4) ಎಂಬ ವಾಕ್ಯವನ್ನು ಉಲ್ಲೇಖಿಸಿದ ಜಗದ್ಗುರು ಜಗತ್ತಿನಾದ್ಯಂತ ಹರಡಿರುವ ಎಲ್ಲಾ ಧರ್ಮ ಸಭೆಯ ಮೇಲೆ ತನ್ನ ಆತ್ಮದ ವರವನ್ನು ಸುರಿಸಬೇಕೆಂದು  ಧರ್ಮ ಸಭೆಯನ್ನು ಬೇಡಿಕೊಳ್ಳಲು ಕ್ರೈಸ್ತರನ್ನು ಪ್ರೇರೇಪಿಸಿದರು, ಆ ವರದ ಮೂಲಕ ವಿಭಜನೆಗಳನ್ನು ಜಯಿಸಿ ದೃಢವಾದ ಏಕತೆಯ ಬಂಧಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ವಾರದ ಆರಂಭದಲ್ಲಿ, ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದೇಶದ ವೇಳೆ ಜಗದ್ಗುರು XIVನೇ ಲಿಯೋರವರು  ಜಗತ್ತಿನಾದ್ಯಂತ ಇರುವ ಕಥೋಲಿಕ ಸಮುದಾಯಗಳನ್ನು, ಎಲ್ಲಾ ಕ್ರೈಸ್ತರ ಸಂಪೂರ್ಣ ಹಾಗೂ ದೃಶ್ಯಮಾನ ಏಕತೆಗಾಗಿ ಈ ದಿನಗಳಲ್ಲಿ ತಮ್ಮ ಪ್ರಾರ್ಥನೆಯನ್ನು ಇನ್ನಷ್ಟು ತೀವ್ರಗೊಳಿಸಬೇಕೆಂದು ಆಹ್ವಾನಿಸಿದ್ದರು.

ಸಾಂಪ್ರದಾಯಿಕವಾಗಿ ಸಂತ ಪೌಲನ ಪರಿವರ್ತನೆಯ ಮಹೋತ್ಸವದ ದಿನವಾದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಸಂಜೆ 5.30 ಕ್ಕೆ ಸಂತ ಪಾಲರ ಬಸಿಲಿಕಾದಲ್ಲಿ ಸಂಜೆ ಪ್ರಾರ್ಥನೆಯ ಆಚರಣೆಗೆ ಅಧ್ಯಕ್ಷತೆ ವಹಿಸಲಿದ್ದಾರೆ.

21 ಜನವರಿ 2026, 00:00