ಹುಡುಕಿ

Papa Leone in Aula Paolo VI per l'udienza generale

ಸಾಮಾನ್ಯ ದರ್ಶನದಲ್ಲಿ ಜಗದ್ಗುರುಗಳು: ನಾವು ದೇವರ ಪ್ರಿಯ ಮಕ್ಕಳಾಗಿದ್ದೇವೆ

ತಮ್ಮ ಸಾಪ್ತಾಹಿಕ ಸಾಮಾನ್ಯ ದರ್ಶನದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ವಿಶ್ವಾಸಿಗಳನ್ನು ಸ್ಮರಿಸುತ್ತಾ, ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ದಿವ್ಯ ಪ್ರಕಟಣೆಯ ಕುರಿತು ಇರುವ ‘ದೇಯಿ ವರ್ಬುಮ್’ ಎಂಬ ಡೋಗ್ಮಾಟಿಕ್ ಸಂವಿಧಾನದ ಮೇಲೆ ನಡೆಯುತ್ತಿರುವ ತಮ್ಮ ಧರ್ಮೋಪದೇಶವನ್ನು ಅವರು ಮುಂದುವರಿಸುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋವರು ಬುಧವಾರದ ಸಾಮಾನ್ಯ ದರ್ಶನದಲ್ಲಿ ಮಾತನಾಡುತ್ತಾ, ಯೇಸು ಕ್ರಿಸ್ತನ ಮೂಲಕ ಕ್ರೈಸ್ತರು ದೇವರಾದ ತಂದೆಯನ್ನು ತಿಳಿದುಕೊಳ್ಳುತ್ತಾರೆ ಮತ್ತು ಸಂಪೂರ್ಣ ವಿಶ್ವಾಸದಿಂದ ತಮ್ಮನ್ನು ಆತನಿಗೆ ಒಪ್ಪಿಸಿಕೊಳ್ಳುತ್ತಾರೆ ಎಂದು ಹೇಳಿದರು. ಎರಡನೇ ವಾಟಿಕನ್ ಸಭೆಯ ಕುರಿತ ತಮ್ಮ ಕಟೇಕಿಸಿಸ್ ಸರಣಿಯನ್ನು ಮುಂದುವರಿಸುತ್ತಾ, ಅವರು ಈ ವಾರವೂ ದಿವ್ಯ ಪ್ರಕಟಣೆಯ ಕುರಿತು ಇರುವ ದೇಯಿ ವರ್ಬುಮ್ ಎಂಬ ಡೋಗ್ಮಾಟಿಕ್ ಸಂವಿಧಾನದ ಮೇಲೆ ಗಮನ ಕೇಂದ್ರೀಕರಿಸಿದರು. ಈ ದಸ್ತಾವೇಜನ್ನು ಅವರು ಕಳೆದ ವಾರ ಸಭೆಯ ಅತ್ಯಂತ ಸುಂದರ ಹಾಗೂ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ ಎಂದು ವರ್ಣಿಸಿದ್ದರು.

 

ಜಗದ್ಗರುಗಳು ದೇವರು ತನ್ನನ್ನು ಒಡಂಬಡಿಕೆಯ ಸಂಭಾಷಣೆಯ ಮೂಲಕ ಪ್ರಕಟಿಸುತ್ತಾನೆ ಎಂದು ನೆನಪಿಸಿದರು. ಈ ಪ್ರಕಟಣೆ ಕೇವಲ ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲ, ಬದಲಾಗಿ ಸ್ನೇಹದ ಸಂಬಂಧದಲ್ಲಿ ನಮ್ಮೊಂದಿಗೆ ಇತಿಹಾಸವನ್ನು ಹಂಚಿಕೊಳ್ಳುವದು ಮತ್ತು ಪರಸ್ಪರ ಸಂಗಮಕ್ಕೆ ಕರೆಯುವ ಸಂಬಂಧಾತ್ಮಕ ಜ್ಞಾನವಾಗಿದೆ. ಈ ದಿವ್ಯ ಪ್ರಕಟಣೆಯ ಪೂರ್ಣತೆ ಯೇಸು ಕ್ರಿಸ್ತನಲ್ಲಿ ಸಂಭವಿಸುತ್ತದೆ ಏಕೆಂದರೆ ಕ್ರಿಸ್ತನಲ್ಲಿ ದೇವರು ತನ್ನನ್ನೇ ನಮಗೆ ನೀಡುತ್ತಾನೆ ಮತ್ತು ನಮ್ಮ ಆಳವಾದ ಸತ್ಯವನ್ನು ನಾವು ಅರಿಯುವಂತೆ ಮಾಡುತ್ತಾನೆ.

 

ದೇಯಿ ವರ್ಬುಮ್ ಅನ್ನು ಉಲ್ಲೇಖಿಸುತ್ತಾ, ಜಗದ್ಗುರು XIVನೇ ಲಿಯೋರವರು  “ದೇವರ ಹಾಗೂ ಮಾನವನ ರಕ್ಷಣೆಯ ಅತ್ಯಂತ ಆಳವಾದ ಸತ್ಯವು ಕ್ರಿಸ್ತನಲ್ಲಿ ಪ್ರಕಾಶಿಸುತ್ತದೆ ಆತನೇ ದಿವ್ಯ ಪ್ರಕಟಣೆಯ ಮಧ್ಯಸ್ಥನೂ ಸಂಪೂರ್ಣತೆಯೂ ಆಗಿದ್ದಾನೆ ಎಂದು ಹೇಳಿದರು. ಯೇಸು ಕ್ರಿಸ್ತನು ನಮ್ಮನ್ನು ತಂದೆಯೊಂದಿಗೆ ತನ್ನದೇ ಸಂಬಂಧದಲ್ಲಿ ಪಾಲುಗೊಳಿಸುವ ಮೂಲಕ ತಂದೆಯನ್ನು ನಮಗೆ ಪ್ರಕಟಿಸುತ್ತಾನೆ. ಪವಿತ್ರಾತ್ಮನ ಕಾರ್ಯದಿಂದ ನಾವು ಪುತ್ರನ ಮೂಲಕ ತಂದೆಯ ಬಳಿಗೆ ಪ್ರವೇಶ ಪಡೆದು ದೈವಿಕ ಸ್ವಭಾವದಲ್ಲಿ ಪಾಲುಗೊಳ್ಳುತ್ತೇವೆ.

 

ಯೇಸುವಿನ ಮೂಲಕ ದೇವರು ನಮಗೆ ತನ್ನನ್ನು ಪ್ರಕಟಿಸಿಕೊಂಡಿದ್ದಾನೆ ಮತ್ತು ಅದೇ ಸಮಯದಲ್ಲಿ ನಮ್ಮ ನಿಜವಾದ ಗುರುತನ್ನು  ದೇವರ ಮಕ್ಕಳಾಗಿರುವುದನ್ನು ನಮಗೆ ತೋರಿಸಿದ್ದಾನೆ ಎಂದು ಜಗದ್ಗರುಗಳು ವಿವರಿಸಿದರು. ಸಂತ ಪೌಲನ ಮಾತುಗಳನ್ನು ಉಲ್ಲೇಖಿಸಿ, ನೀವು ಮಕ್ಕಳಾಗಿರುವುದರಿಂದ ದೇವರು ತನ್ನ ಪುತ್ರನ ಆತ್ಮವನ್ನು ನಿಮ್ಮ ಹೃದಯಗಳಲ್ಲಿ ಕಳುಹಿಸಿದ್ದಾನೆ ಆ ಆತ್ಮ ಅಪ್ಪ ತಂದೆ ಎಂದು ಕೂಗುತ್ತದೆ ಎಂದು ಅವರು ನೆನಪಿಸಿದರು. ಕ್ರಿಸ್ತನಲ್ಲಿ ನಾವು ತಂದೆಯಿಂದ ಪರಿಚಿತರಾಗಿರುವ ಮಕ್ಕಳಾಗಿ, ಪೂರ್ಣ ಜೀವನದ ಗುರಿಗೆ ಕರೆಯಲ್ಪಟ್ಟಿದ್ದೇವೆ.

 

ಅಂತಿಮವಾಗಿ, ಜಗದ್ಗುರು XIVನೇ ಲಿಯೋರವರು  ಯೇಸು ಕ್ರಿಸ್ತನು ತನ್ನ ಸಂಪೂರ್ಣ ಮಾನವತ್ವದ ಮೂಲಕವೇ ತಂದೆಯನ್ನು ನಮಗೆ ಪ್ರಕಟಿಸುತ್ತಾನೆ ಎಂದು ಒತ್ತಿಹೇಳಿದರು. ದೇವರ ಸತ್ಯವು ಮಾನವೀಯತೆಯನ್ನು ಕಡಿಮೆ ಮಾಡುವಲ್ಲಿ ಸಂಪೂರ್ಣವಾಗಿ ಪ್ರಕಟವಾಗುವುದಿಲ್ಲ ಯೇಸುವಿನ ಸಂಪೂರ್ಣ ಮಾನವತ್ವವೇ ತಂದೆಯ ಸತ್ಯವನ್ನು ನಮಗೆ ತಿಳಿಸುತ್ತದೆ. ಯೇಸುವಿನ ಮಾರ್ಗವನ್ನು ಅಂತ್ಯದವರೆಗೆ ಅನುಸರಿಸುವಾಗ, ಯಾವುದೂ ನಮ್ಮನ್ನು ದೇವರ ಪ್ರೀತಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂಬ ದೃಢ ನಂಬಿಕೆಗೆ ನಾವು ತಲುಪುತ್ತೇವೆ ಎಂದು ಅವರು ಹೇಳಿದರು.

21 ಜನವರಿ 2026, 00:00