ಹುಡುಕಿ

ಜಗದ್ಗುರು XIV ನೇ ಲಿಯೋರವರು ಲಕ್ಸೆಂಬಗ೯ನ ಗ್ರ್ಯಾಂಡ್ ಡ್ಯೂಕ್ ಮತ್ತು ಡಚೆಸ್ ರವರನ್ನು ಸ್ವೀಕರಿಸಿದರು. ಜಗದ್ಗುರು XIV ನೇ ಲಿಯೋರವರು ಲಕ್ಸೆಂಬಗ೯ನ ಗ್ರ್ಯಾಂಡ್ ಡ್ಯೂಕ್ ಮತ್ತು ಡಚೆಸ್ ರವರನ್ನು ಸ್ವೀಕರಿಸಿದರು.   (ANSA)

ಜಗದ್ಗುರು XIV ನೇ ಲಿಯೋವರು ಲಕ್ಸಂಬರ್ಗ್‌ನ ಮಹಾ ಡ್ಯೂಕ್ ಮತ್ತು ಮಹಾ ಡಚೆಸ್ ರವರನ್ನು ಸ್ವೀಕರಿಸಿದರು

ಜಗದ್ಗುರು XIV ನೇ ಲಿಯೋವರು ಶುಕ್ರವಾರ ವಾಟಿಕನ್‌ನಲ್ಲಿ ಲಕ್ಸಂಬರ್ಗ್‌ನ ಮಹಾ ಡ್ಯೂಕ್ ಗಿಯೊಮ್ ಹಾಗೂ ಅವರ ಪತ್ನಿ ಮಹಾ ಡಚೆಸ್ ಸ್ಟೆಫಾನಿರವರನ್ನು ಭೇಟಿಯಾಗಿ ಸ್ವೀಕರಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋವರು ಶುಕ್ರವಾರ ವ್ಯಾಟಿಕನ್‌ನಲ್ಲಿ ಲಕ್ಸಂಬರ್ಗ್‌ನ ಮಹಾ ಡ್ಯೂಕ್ ಗಿಯೊಮ್  ಹಾಗೂ ಮಹಾ ಡಚೆಸ್ ಸ್ಟೆಫಾನಿ ಅವರನ್ನು ಆತ್ಮೀಯವಾಗಿ ಸ್ವೀಕರಿಸಿದರು.

ಜಗದ್ಗರುಗಳ ಅಧಿಕಾರಿ ಹುದ್ದೆಯ ಪತ್ರಿಕಾ ಕಚೇರಿಯಿಂದ ಬಿಡುಗಡೆಗೊಂಡ ಹೇಳಿಕೆಯ ಪ್ರಕಾರ, ನಂತರ ಮಹಾ ಡ್ಯೂಕ್ ರವರು ಜಗದ್ಗುರುಗಳ ಅಧಿಕಾರ ಹುದ್ದೆಯ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ ಹಾಗೂ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಂಬಂಧಗಳ ಕಾರ್ಯದರ್ಶಿಯಾದ ಮಹಾಧ್ಯಕ್ಷ ಪಾಲ್ ರಿಚರ್ಡ್ ಗ್ಯಾಲಘರ್ ರವರನ್ನು ಭೇಟಿ ಮಾಡಿದರು.

ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಆತ್ಮೀಯ ಮಾತುಕತೆಗಳ ವೇಳೆ, ಜಗದ್ಗುರುಗಳ ಅಧಿಕಾರ ಹುದ್ದೆ ಮತ್ತು ಲಕ್ಸಂಬರ್ಗ್ ನಡುವಿನ ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ಗಮನಿಸಲಾಯಿತು ಎಂದು ಹೇಳಿಕೆ ತಿಳಿಸಿದೆ.

ಸಾಮಾಜಿಕ ಏಕತೆ, ಯುವಜನರ ಶಿಕ್ಷಣ, ಹಾಗೂ ಜೀವದ ಗೌರವ ಮತ್ತು ಮಾನವ ವ್ಯಕ್ತಿಯ ಘನತೆಯ ರಕ್ಷಣೆ ಎಂಬಂತಹ ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಚರ್ಚೆ ನಡೆಯಿತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಅಂತಿಮವಾಗಿ, ಪ್ರಸ್ತುತ ಅಂತರರಾಷ್ಟ್ರೀಯ ವಿಷಯಗಳ ಕುರಿತು ವಿಶೇಷವಾಗಿ ಯೂರೋಪಿಯನ್ ಸಂದರ್ಭದ ಮೇಲೆ ಗಮನ ಹರಿಸಿ ಅಭಿಪ್ರಾಯ ವಿನಿಮಯವೂ ನಡೆದಿತ್ತು ಎಂದು ಹೇಳಿಕೆ ತಿಳಿಸಿದೆ.

23 ಜನವರಿ 2026, 00:00