2022 ರಲ್ಲಿ ವಾಷಿಂಗ್ಟನ್ ಡಿ.ಸಿ ಯಲ್ಲಿ ವಾಷಿ೯ಕ ಮಾಚ್೯ ಫಾರ್ ಲೈಫ್ 2022 ರಲ್ಲಿ ವಾಷಿಂಗ್ಟನ್ ಡಿ.ಸಿ ಯಲ್ಲಿ ವಾಷಿ೯ಕ ಮಾಚ್೯ ಫಾರ್ ಲೈಫ್  (2026 Getty Images)

ಜಗದ್ಗುರು XIV ನೇ ಲಿಯೋವರಿಂದ ಅಮೆರಿಕದ ‘ಮಾರ್ಚ್ ಫಾರ್ ಲೈಫ್’ಗೆ ಸಂದೇಶ: ಆರೋಗ್ಯಕರ ಸಮಾಜಗಳು ಮಾನವ ಜೀವವನ್ನು ರಕ್ಷಿಸುತ್ತವೆ

ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ 2026ರ ‘ಮಾರ್ಚ್ ಫಾರ್ ಲೈಫ್’ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಜಗದ್ಗುರು XIVನೇ ಲಿಯೋರವರು ಸಂದೇಶ ಕಳುಹಿಸಿ, ಜೀವನವು ಅದರ ಎಲ್ಲಾ ಹಂತಗಳಲ್ಲಿಯೂ ಗೌರವಿಸಲ್ಪಡುವಂತೆ ಮಾಡುವುದಕ್ಕಾಗಿ ಮುಂದುವರಿದು ಶ್ರಮಿಸಬೇಕು ಎಂದು ವಿಶೇಷವಾಗಿ ಯುವಜನರನ್ನು ಉತ್ತೇಜಿಸಿದರು.

ವ್ಯಾಟಿಕನ್ ವರದಿ

 

ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆಯಲಿರುವ 2026ರ ‘ಮಾರ್ಚ್ ಫಾರ್ ಲೈಫ್’ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಾವಿರಾರು ಜನರಿಗೆ ಜಗದ್ಗುರು XIVನೇ ಲಿಯೋರವರು  ಹೃದಯಪೂರ್ವಕ ಶುಭಾಶಯಗಳನ್ನು ಕಳುಹಿಸಿ, ತಮ್ಮ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಿದರು. ಮಾನವ ಜೀವದ ಹಕ್ಕನ್ನು ರಕ್ಷಿಸುವುದು ಇತರ ಎಲ್ಲಾ ಮಾನವ ಹಕ್ಕುಗಳ ಅನಿವಾರ್ಯ ಅಡಿಪಾಯವಾಗಿರುವುದನ್ನು ಸಾರ್ವಜನಿಕವಾಗಿ ಸಾಕ್ಷ್ಯಪಡಿಸುವ ಈ ಕಾರ್ಯಕ್ರಮಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಈ ತಿಂಗಳ ಆರಂಭದಲ್ಲಿ ಜಗದ್ಗುರುಗಳ ಅಧಿಕಾರ ಹುದ್ದೆಗೆ ಮಾನ್ಯತೆ ಪಡೆದ ರಾಜತಾಂತ್ರಿಕ ಪ್ರತಿನಿಧಿಗಳಿಗೆ ನೀಡಿದ ಭಾಷಣವನ್ನು ಸ್ಮರಿಸಿದ ಜಗದ್ಗುರು XIVನೇ ಲಿಯೋರವರ, ಆರೋಗ್ಯಕರ ಮತ್ತು ನಿಜವಾದ ಪ್ರಗತಿಶೀಲ ಸಮಾಜವೆಂದರೆ ಮಾನವ ಜೀವದ ಪವಿತ್ರತೆಯನ್ನು ಕಾಪಾಡುವ ಮತ್ತು ಅದನ್ನು ಸಕ್ರಿಯವಾಗಿ ಉತ್ತೇಜಿಸುವ ಸಮಾಜವೆಂದು ವಿವರಿಸಿದರು. ಮಾನವ ಜೀವದ ಗೌರವವು ಸಮಾಜದ ಮೂಲ ಮೌಲ್ಯವಾಗಿರಬೇಕು ಎಂದು ಅವರು ಒತ್ತಿಹೇಳಿದರು.

ಈ ಹಿನ್ನೆಲೆಯಲ್ಲಿಯೇ, ವಿಶೇಷವಾಗಿ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸಮಾಜದ ಎಲ್ಲಾ ಹಂತಗಳಲ್ಲಿ—ನಾಗರಿಕ ಹಾಗೂ ರಾಜಕೀಯ ನಾಯಕರೊಂದಿಗೆ ಸಂವಾದದ ಮೂಲಕವೂ—ಜೀವನವು ಅದರ ಎಲ್ಲ ಹಂತಗಳಲ್ಲಿಯೂ ಗೌರವಿಸಲ್ಪಟ್ಟು ರಕ್ಷಿಸಲ್ಪಡುವಂತೆ ಮಾಡಲು ನಿರಂತರವಾಗಿ ಶ್ರಮಿಸುವಂತೆ ಪ್ರೋತ್ಸಾಹಿಸಿದರು.

ಗರ್ಭದಲ್ಲಿರುವ ಶಿಶುಗಳ ಪರವಾಗಿ ಶಾಂತಿಯುತವಾಗಿ ಮೆರವಣಿಗೆ ನಡೆಸುವ ಎಲ್ಲರೊಂದಿಗೆ ಯೇಸು ಕ್ರಿಸ್ತರು ಜೊತೆಗಿರಲಿ ಎಂದು ಜಗದ್ಗರುಗಳು ಪ್ರಾರ್ಥಿಸಿದರು. ಅವರ ಪರವಾಗಿ ನೀವು ಧ್ವನಿ ಎತ್ತುವ ಮೂಲಕ, ನಮ್ಮ ಅತಿ ಸಣ್ಣ ಸಹೋದರ ಸಹೋದರಿಯರಲ್ಲಿ ಕರ್ತನಿಗೆ ಸೇವೆ ಸಲ್ಲಿಸುವ ಆಜ್ಞೆಯನ್ನು ನೀವು ನೆರವೇರಿಸುತ್ತಿದ್ದೀರಿ ಎಂದು ಅವರು ಹೇಳಿದರು.

ಸಂದೇಶದ ಅಂತ್ಯದಲ್ಲಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನೂ ಹಾಗೂ ಪ್ರಾರ್ಥನೆ ಮತ್ತು ತ್ಯಾಗದ ಮೂಲಕ ಅವರನ್ನು ಬೆಂಬಲಿಸುವವರನ್ನೂ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂರಕ್ಷಕಿಯಾದ ನಿಷ್ಕಳಂಕ ಮರಿಯಮ್ಮನವರಿಗೆ ಜಗದ್ಗುರು XIVನೇ ಲಿಯೋರವರು ಸಮರ್ಪಿಸಿದರು.

22 ಜನವರಿ 2026, 00:00