SCATTIDELGIORNO SCATTIDELGIORNO  (ANSA)

ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶದ ಇಂಧನ ಕ್ಷೇತ್ರದ ನಾಯಕರನ್ನು ಜಗದ್ಗುರುಗಳು ಭೇಟಿ ಮಾಡಿದರು

ತಮ್ಮ ಪೂರ್ವಾಧಿಕಾರಿಯಿಂದ ಆರಂಭಗೊಂಡ ಸಂಪ್ರದಾಯವನ್ನು ಮುಂದುವರಿಸುತ್ತಾ, ಜಗದ್ಗುರು ಲಿಯೋರವರು ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಧನ ಹಾಗೂ ಅತ್ಯಾವಶ್ಯಕ ಖನಿಜಗಳ ಕ್ಷೇತ್ರದ ಕೆಲವು ಉದ್ಯಮ ನಾಯಕರ ಸಣ್ಣ ಗುಂಪಿನೊಂದಿಗೆ ಭೇಟಿಯಾದರು. ಅವರ ಚರ್ಚೆಯ ಕೇಂದ್ರಬಿಂದುವು ಪ್ರದೇಶಗಳ ಅಗತ್ಯಗಳು ಮತ್ತು ಆಕಾಂಕ್ಷೆಗಳೊಂದಿಗೆ ಸೇತುವೆಗಳನ್ನು ನಿರ್ಮಿಸುವುದು, ನಮ್ಮ ಸಾಮಾನ್ಯ ಗೃಹವಾದ ಭೂಮಿಯ ಸಂರಕ್ಷಣೆ ಹಾಗೂ ಗೌರವಯುತ ಉದ್ಯೋಗವನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರ ಮೊದಲ ಉರ್ಬಿ ಎಟ್ ಓರ್ಬಿ (Urbi et Orbi) ಆಶೀರ್ವಚನವು ಸಂವಾದ ಮತ್ತು ಭೇಟಿಯ ಮೂಲಕ ಸೇತುವೆಗಳನ್ನು ನಿರ್ಮಿಸುವಂತೆ ಎಲ್ಲರಿಗೂ ಆಹ್ವಾನ ನೀಡಿತು ಹಾಗೂ ಶಾಂತಿಗಾಗಿ ಜನರಿಗೆ ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿತು. ಈ ಸಂದೇಶದ ಹಿನ್ನೆಲೆಯಲ್ಲಿ, ಜನವರಿ 24ರಂದು ವ್ಯಾಟಿಕನ್‌ನಲ್ಲಿ ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಇಂಧನ ಮತ್ತು ಅತ್ಯಾವಶ್ಯಕ ಖನಿಜ ಕ್ಷೇತ್ರಗಳ ಉದ್ಯಮ ನಾಯಕರ ಸಣ್ಣ ಗುಂಪಿನೊಂದಿಗೆ ಒಂದು ಸೀನೋಡಲ್ ಸಭೆ ನಡೆಯಿತು.

ಈ ಸಭೆ 2022ರಲ್ಲಿ ಆರಂಭವಾದ ಸೇತುವೆಗಳನ್ನು ನಿರ್ಮಿಸುವ ಮುಂದಾಳತ್ವ ಸರಣಿಯ ಏಳನೇ ಸಭೆಯಾಗಿದ್ದು, ಜಗದ್ಗುರು ಫ್ರಾನ್ಸಿಸ್ ರವರಿಂದ ಪಾಂಟಿಫಿಕಲ್ ಕಮಿಷನ್ ಫಾರ್ ಲ್ಯಾಟಿನ್ ಅಮೆರಿಕಾ (PCAL)ಗೆ ವಹಿಸಲಾದ ಧ್ಯೇಯದ ಭಾಗವಾಗಿ, ಹಾಗೂ ಆ ಸಮಯದ ಕಾರ್ಡಿನಲ್ ರಾಬರ್ಟ್ ಪ್ರೇವೋಸ್ಟ್ (PCAL ಅಧ್ಯಕ್ಷ) ರವರ ಸಹಕಾರದಲ್ಲಿ ಆಯೋಜಿಸಲಾಯಿತು. ಇದರ ಉದ್ದೇಶವು ವಿಶ್ವವಿದ್ಯಾಲಯಗಳೊಂದಿಗೆ ಒಳಗೊಳ್ಳುವಿಕೆಯ ಸೇತುವೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮ ಸಂಘಗಳೊಂದಿಗೆ ಸಮಾಧಾನದ ಸೇತುವೆಗಳು, ಹಾಗೂ ಪ್ರಾದೇಶಿಕ ಧರ್ಮಾಧ್ಯಕ್ಷ ಮತ್ತು ಧರ್ಮ ಸಭೆಯ ಸಮಾವೇಶಗಳೊಂದಿಗೆ ಸಹೋದರತ್ವದ ಸೇತುವೆಗಳನ್ನು ನಿರ್ಮಿಸುವುದಾಗಿದೆ.

ಈ ಧ್ಯೇಯವನ್ನು ಸಾಧಿಸಲು,  ಸೇತುವೆಗಳನ್ನು ನಿರ್ಮಿಸುವ ಮುಂದಾಳತ್ವ ಪ್ರದೇಶೀಯ ಅಗತ್ಯಗಳು, ನಮ್ಮ ಸಾಮಾನ್ಯ ಗೃಹವಾದ ಭೂಮಿಯ ಸಂರಕ್ಷಣೆ ಮತ್ತು ಗೌರವಯುತ ಉದ್ಯೋಗಕ್ಕೆ ಸಂಬಂಧಿಸಿದ ಆಕಾಂಕ್ಷೆಗಳ ಬಗ್ಗೆ ಗಮನಪೂರ್ವಕವಾಗಿ ಆಲಿಸುವಿಕೆಯನ್ನು ಒಳಗೊಂಡಿದೆ. ಜಗದ್ಗರುಗಳ ಹುದ್ದೆ ಸಾಮಾಜಿಕ ಬೋಧನೆಯ ಬೆಳಕಿನಲ್ಲಿ ವಿವಿಧ ಸಂಘಟನೆಗಳ ನಡುವೆ ಹಂಚಿಕೊಂಡ ಸಾಮಾಜಿಕ ವಿವೇಚನೆಯನ್ನು ಉತ್ತೇಜಿಸುವುದು ಹಾಗೂ ನ್ಯಾಯಯುತ ಪರಿವರ್ತನೆಯ ಪ್ರಕ್ರಿಯೆಗಳನ್ನು ಆರಂಭಿಸುವುದೂ ಇದರ ಭಾಗವಾಗಿದೆ.

ಇದುವರೆಗೆ ಅಮೆರಿಕಾದ ವಿವಿಧ ಭಾಗಗಳಿಂದ ಬಂದ ಧರ್ಮಾಧ್ಯಕ್ಷರು, ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಕುಲಪತಿಗಳು, ಕಾರ್ಮಿಕ ಸಂಘಗಳು, ಉದ್ಯಮ ಸಂಘಗಳು ಮತ್ತು ಸಂಘಟಿತ ಸಮುದಾಯಗಳೊಂದಿಗೆ ಆರು ಸೀನೋಡಲ್ ಸಭೆಗಳು ನಡೆದಿವೆ. ಈ ಸಭೆಗಳು ಧರ್ಮ ಸಭೆ ಮತ್ತು ಸಮಾಜದ ವಿಭಿನ್ನ ಕ್ಷೇತ್ರಗಳ ನಡುವೆ ನಿರಂತರ ಸಂವಾದವನ್ನು ಬಲಪಡಿಸಿವೆ.

ಈ ಸಭೆಗಳ ಫಲವಾಗಿ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶದ ಮೂರು ಕ್ಷೇತ್ರಗಳು ಪವಿತ್ರ ತಂದೆಯನ್ನು ಭೇಟಿಯಾಗಿ, ಕಾರ್ಡಿನಲ್‌ಗಳು ಜಗದ್ಗುರುಗಳ ಅಧಿಕಾರ ಸ್ಥಳ ಪತ್ರಿಕಾಗೋಷ್ಠಿಗೆ ಮಂಡಿಸಿದ ಜೀವನವು ಸೂತ್ರದ ಮೇಲೆ ನಿಂತಿದೆ ಮತ್ತು ಹವಾಮಾನ ನ್ಯಾಯ ಮತ್ತು ಸಾಮಾನ್ಯ ಗೃಹಕ್ಕಾಗಿ ಕರೆ ಎಂಬ ವಿಷಯಗಳ ಕುರಿತು ಸಂವಾದ ನಡೆಸಬೇಕೆಂಬ ಪ್ರಸ್ತಾವನೆ ಮೂಡಿಬಂದಿತು. ಆರ್ಥಿಕ ಅಭಿವೃದ್ಧಿಯಿಂದ ಉಂಟಾಗುವ ಉದ್ವಿಗ್ನತೆಗಳ ಮಧ್ಯೆ ಶಾಂತಿಗಾಗಿ ಸಂವಾದದ ಸೇತುವೆಗಳನ್ನು ನಿರ್ಮಿಸುವ ಉದ್ದೇಶದಿಂದ ಪಿ ಸಿ ಎ ಎಲ್  ಜನವರಿ 24ರಂದು ಈ ಏಳನೇ ಸಭೆಯನ್ನು ಆಯೋಜಿಸಿತು.

ಈ ಸಭೆಯಲ್ಲಿ ಉದ್ಯಮ ನಾಯಕರು ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್  ಪ್ರದೇಶದ ಇಂಧನ ಮತ್ತು ಖನಿಜ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಒಟ್ಟಾಗಿ ಯಾವ ವಿಷಯಗಳನ್ನು ಮುಂಚಿತವಾಗಿ ಊಹಿಸಬೇಕು, ಉತ್ತೇಜಿಸಬೇಕು ಮತ್ತು ಭರವಸೆಯೊಂದಿಗೆ ನಿರೀಕ್ಷಿಸಬೇಕು ಎಂಬುದರ ಬಗ್ಗೆ ಸಂಯುಕ್ತವಾಗಿ ವಿವೇಚಿಸಿದರು. ಮೂಲತಃ ಈ ಸಭೆಯನ್ನು ಜಗದ್ಗುರು ಫ್ರಾನ್ಸಿಸ್ ರವರೊಂದಿಗೆ 2025ರಲ್ಲಿ ನಡೆಸಲು ಯೋಜಿಸಲಾಗಿದ್ದರೂ, ಅವರ ಆರೋಗ್ಯದ ಕಾರಣದಿಂದ ಅದನ್ನು ಮುಂದೂಡಲಾಗಿತ್ತು.

24 ಜನವರಿ 2026, 00:00