ತಪಸ್ಸು ಕಾಲದ ಅವಧಿಯಲ್ಲಿ ರೋಮಿನ ಐದು ಧರ್ಮ ಕೇಂದ್ರಗಳಿಗೆ ಭೇಟಿ ನೀಡಲಿರುವ ಜಗದ್ಗುರು XIVನೇ ಲಿಯೋರವರು
ವ್ಯಾಟಿಕನ್ ವರದಿ
ಶುಕ್ರವಾರ ರೋಮಿನ ಪ್ರಾಂತ್ಯ ಪ್ರಕಟಿಸಿದಂತೆ, ಜಗದ್ಗುರು XIVನೇ ಲಿಯೋರವರು ವಿಭೂತಿ ಬುಧವಾರದ ಮುಂದಿನ ದಿನವಾದ ಗುರುವಾರ, ಫೆಬ್ರವರಿ 19ರಂದು ರೋಮ್ ಧರ್ಮಪ್ರಾಂತ್ಯದ ಯಾಜಕರೊಂದಿಗೆ ಭೇಟಿಯಾಗಲಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ, ನಂತರ ಜಗದ್ಗುರುಗಳು ತಮ್ಮ ಧರ್ಮಪ್ರಾಂತ್ಯದ ಧರ್ಮ ಕೇಂದ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಪ್ರಾಂತ್ಯ ತಿಳಿಸಿದೆ.
ತಪಸ್ಸು ಕಾಲದ ಐದು ಭಾನುವಾರಗಳ ಪ್ರತಿಯೊಂದರಲ್ಲಿ, ಜಗದ್ಗುರು XIVನೇ ಲಿಯೋರವರು ಶಾಶ್ವತ ನಗರವಾದ ರೋಮ್‌ನ ಐದು ಧರ್ಮಾಧಿಕಾರಿಗಳ ಪ್ರದೇಶಗಳನ್ನು ಪ್ರತಿನಿಧಿಸುವ ಧರ್ಮ ಕೇಂದ್ರದ ಸಮುದಾಯಗಳನ್ನು ಭೇಟಿಯಾಗಲಿದ್ದಾರೆ.
ಇವು ನಿಜವಾದ ಧರ್ಮಾಧಿಕಾರಿಗಳ ಭೇಟಿಗಳಾಗಿರುತ್ತವೆ, ಎಂದು ರೋಮ್‌ನ ಪ್ರಾಂತ್ಯದ ಜನರಲ್ ಕಾರ್ಡಿನಲ್ ಬಾಲ್ಡೋ ರೈನಾ ಹೇಳಿದರು. ಆದ್ದರಿಂದ ಜಗದ್ಗುರು XIVನೇ ಲಿಯೋರವರು ಧರ್ಮಾಧಿಕಾರಿಗಳ ಕಾರ್ಯಕರ್ತರು ಹಾಗೂ ಯುವಜನರನ್ನು ಒಳಗೊಂಡಂತೆ ವಿವಿಧ ಧರ್ಮ ಕೇಂದ್ರದ ಸಮೂಹಗಳೊಂದಿಗೆ ಭೇಟಿಯಾಗಲಿದ್ದಾರೆ.
ನಂತರ ಜಗದ್ಗುರುಗಳು ಸಂಪೂರ್ಣ ಧರ್ಮ ಕೇಂದ್ರದ ಸಮುದಾಯದೊಂದಿಗೆ ಪವಿತ್ರ ಬಲಿ ಪೂಜೆಯನ್ನು ಆಚರಿಸಲಿದ್ದಾರೆ ಎಂದು ಕಾರ್ಡಿನಲ್ ರೈನಾ ತಿಳಿಸಿದರು.
ಭೇಟಿ ನೀಡಲಿರುವ ಧರ್ಮ ಕೇಂದ್ರಗಳು ಇಂತಿವೆ ಫೆಬ್ರವರಿ 15ರಂದು ದಕ್ಷಿಣ ಪ್ರದೇಶದ ಒಸ್ಟಿಯಾ ಲಿಡೋದಲ್ಲಿರುವ ಪವಿತ್ರ ರಾಣಿ ಮರಿಯಮ್ಮನವರ ದೇವಾಲಯ ಫೆಬ್ರವರಿ 22ರಂದು ಮಧ್ಯ ಪ್ರದೇಶದ ಕ್ಯಾಸ್ಟ್ರೋ ಪ್ರೆಟೋರಿಯೋದಲ್ಲಿರುವ ಯೇಸು ಕ್ರಿಸ್ತರ ಅತಿಪವಿತ್ರ ಹೃದಯ ದೇವಾಲಯ,ಮಾರ್ಚ್ 1ರಂದು ಪೂರ್ವ ಪ್ರದೇಶದ ನಮ್ಮ ಕರ್ತನಾದ ಯೇಸು ಕ್ರಿಸ್ತರ ಸ್ವಗಾ೯ರೋಹಣ ದೇವಾಲಯ,ಮಾರ್ಚ್ 8ರಂದು ಪಶ್ಚಿಮ ಪ್ರದೇಶದ ಪ್ರಸ್ತುತಿಯ ಧನ್ಯ ಮರಿಯಮ್ಮ ದೇವಾಲಯ, ಹಾಗೂ ಮಾರ್ಚ್ 15ರಂದು ಉತ್ತರ ಪ್ರದೇಶದ ಪೊಂಟೆ ಮಮ್ಮೊಲೋದಲ್ಲಿರುವ ಯೇಸು ಕ್ರಿಸ್ತರ ಅತಿ ಪವಿತ್ರ ಹೃದಯ ದೇವಾಲಯ.
ತಮ್ಮ ಪೂರ್ವಾಧಿಕಾರಿಗಳ ಹೆಜ್ಜೆಗುರುತುಗಳನ್ನು ಅನುಸರಿಸುತ್ತಾ, ಜಗದ್ಗುರುಗಳು ತಮ್ಮ ಧರ್ಮಪ್ರಾಂತ್ಯದ ಧರ್ಮ ಕೇಂದ್ರಗಳಿಗೆ ಭೇಟಿ ನೀಡಲು ಆರಂಭಿಸುತ್ತಿದ್ದಾರೆ, ಎಂದು ಕಾರ್ಡಿನಲ್ ರೈನಾರವರು ಹೇಳಿದರು. ಇದು ನಮ್ಮೆಲ್ಲರಿಗೂ ಅಪಾರ ಸಂತೋಷದ ಮೂಲವಾಗಿದ್ದು, ನಮ್ಮ ಧರ್ಮಾಧ್ಯಕ್ಷರೊಂದಿಗೆ ಸೇರಿ ನಮ್ಮ ಧರ್ಮಾಧಿಕಾರಿಗಳ ಯೋಜನೆಯನ್ನು ಅಭಿವೃದ್ಧಿಪಡಿಸುವ ಒಂದು ಮಹತ್ವದ ಅವಕಾಶವಾಗಿದೆ.
