ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  (ANSA)

ಜಗದ್ಗುರು XIV ನೇ ಲಿಯೋ : ಶಾಂತಿಯುತ ಸಹವಾಸಕ್ಕೆ ಮಾರ್ಗವನ್ನು ತೋರಿಸುವುದು ಕಥೋಲಿಕ ಸಾಮಾಜಿಕ ಬೋಧನೆ

ಲಕ್ಸಂಬರ್ಗ್‌ನಲ್ಲಿ ಸೆಂಟೆಸಿಮಸ್ ಅನ್ನಸ್ ಪ್ರೋ ಪೊಂಟಿಫಿಸೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ 2026ರ ಯೂರೋಪಿಯನ್ ಸಮ್ಮೇಳನಕ್ಕೆ ಕಳುಹಿಸಿದ ಸಂದೇಶದಲ್ಲಿ, ಜಗದ್ಗುರುXIV ನೇ ಲಿಯೋರವರು, ಧರ್ಮ ಸಭೆಯ ಸಾಮಾಜಿಕ ಬೋಧನೆ ಸಮಾಜಗಳಿಗೆ ನಿಜವಾದ ಗೌರವ ಮತ್ತು ಶಾಂತಿಯುತ ಸಹವಾಸದ ಮಾರ್ಗವನ್ನು ತೋರಿಸುತ್ತದೆ ಎಂದು ದೃಢಪಡಿಸಿದ್ದಾರೆ.

ವ್ಯಾಟಿಕನ್ ವರದಿ

ಲಕ್ಸಂಬರ್ಗ್‌ನಲ್ಲಿ ಸೆಂಟೆಸಿಮಸ್ ಅನ್ನಸ್ ಪ್ರೋ ಪೊಂಟಿಫಿಸೆ ಫೌಂಡೇಶನ್‌ 2026ರ ಯೂರೋಪಿಯನ್ ಸಮ್ಮೇಳನವನ್ನು ಶುಕ್ರವಾರ, ಜನವರಿ 23ರಂದು ಆಯೋಜಿಸುತ್ತಿದೆ.

ಈ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು, ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೇತ್ರೊ ಪ್ಯಾರೋಲಿನ್ ಸಹಿ ಹಾಕಿದ ಸಂದೇಶದ ಮೂಲಕ, “ಯೂರೋಪಿನಲ್ಲಿ ಶಾಂತಿ ನಿರ್ಮಾಣ: ಕ್ಯಾಥೋಲಿಕ್ ಸಾಮಾಜಿಕ ಚಿಂತನೆ ಮತ್ತು ಸಾರ್ವತ್ರಿಕ ಮೌಲ್ಯಗಳಿಗೆ ಯಾವ ಪಾತ್ರ?” ಎಂಬ ವಿಷಯಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇಂದಿನ ಜಗತ್ತಿನಲ್ಲಿ ಧರ್ಮವು ಸೂಚಿಸುವ ಸಾರ್ವತ್ರಿಕ ಮೌಲ್ಯಗಳು ಹಾಗೂ ಅವು ಸಾಮಾನ್ಯ ಹಿತಕ್ಕೆ ನೀಡುವ ಕೊಡುಗೆಗಳ ಕುರಿತು ಚರ್ಚಿಸಲು ಸಮಾಜಗಳು ಹಿಂಜರಿಯುತ್ತಿರುವ ಸಂದರ್ಭದಲ್ಲಿಈ ವಿಷಯ ಅತ್ಯಂತ ಪ್ರಸ್ತುತವಾಗಿದೆ ಎಂದು ಜಗದ್ಗರುಗಳು ಹೇಳಿದರು.

ಈ ಹಿಂಜರಿಕೆಯು ವಿಭಿನ್ನ ಕಾರಣಗಳಿಂದ ಉಂಟಾಗಿದ್ದರೂ, ಅದರ ಮೂಲದಲ್ಲಿ ಸಾಪೇಕ್ಷತಾವಾದದ ವ್ಯಾಪ್ತಿ ಮತ್ತು ಸತ್ಯವನ್ನು ಕೇವಲ ಅಭಿಪ್ರಾಯಕ್ಕೆ ಸೀಮಿತಗೊಳಿಸುವ ಪ್ರವೃತ್ತಿಯೇ ಇರುವ ಸಂಕಟ ಅಡಗಿದೆ ಎಂದು ಅವರು ಹೇಳಿದರು.

ಯಾವುದೇ ಖಂಡವೋ ಅಥವಾ ಸಮುದಾಯವೋ, ತನ್ನ ನಿಯಮಗಳು ಮತ್ತು ಮೌಲ್ಯಗಳನ್ನು ರೂಪಿಸುವ ಸಾಮಾನ್ಯವಾಗಿ ಅಂಗೀಕೃತ ಸತ್ಯಗಳಿಲ್ಲದೆ ಶಾಂತಿಯಲ್ಲಿ ಬದುಕಲು ಹಾಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಜಗದ್ಗರು XIVನೇ ಲಿಯೋರವರು ಸೇರಿಸಿದರು.

ನಂತರ ಜಗದ್ಗುರು ಲಿಯೋರವರು, ಮಾನವ ವ್ಯಕ್ತಿಯನ್ನು ದೇವರ ರೂಪ ಮತ್ತು ಸಮಾನತೆಯಲ್ಲಿ ಸೃಷ್ಟಿಸಲಾಗಿದೆ ಎಂಬ ಸತ್ಯವನ್ನು ಸ್ಮರಿಸಿದರು.

ಜಗದ್ಗುರು ಸಂತ II ನೇ ಜಾನ್ ಪಾಲ್ ರವರು ತಮ್ಮ ಸೆಂಟೆಸಿಮಸ್ ಅನ್ನಸ್ ಪ್ರೇಷಿತರ ಪರಿಪತ್ರದಲ್ಲಿ ಹೇಳಿರುವಂತೆ, ಸತ್ಯವನ್ನು ತಿಳಿಯುವ ಮತ್ತು ಆ ಸತ್ಯಕ್ಕೆ ಅನುಗುಣವಾಗಿ ಬದುಕುವ ಸ್ವಾಭಾವಿಕ ಹಾಗೂ ಮೂಲಭೂತ ಹಕ್ಕಿಗೆ ಗೌರವವಿಲ್ಲದೆ ಯಾವುದೇ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬ ಮಾತುಗಳನ್ನು ಜಗದ್ಗುರುಗಳು ಉಲ್ಲೇಖಿಸಿದರು.

ಕಥೋಲಿಕ ಸಾಮಾಜಿಕ ಬೋಧನೆ ಯೇಸು ಕ್ರಿಸ್ತರ ವಚನಗಳು ಮತ್ತು ಕಾರ್ಯಗಳಲ್ಲಿ ಬೇರುಬಿಟ್ಟಿದ್ದು, ಅವರು ತಮಗೇ ಮಾರ್ಗ, ಸತ್ಯ ಮತ್ತು ಜೀವನವೆಂದು ಪ್ರಕಟಿಸಿಕೊಂಡಿದ್ದಾರೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು.

ಧರ್ಮ ಸಭೆಯ ಸಾಮಾಜಿಕ ಭೋಧನೆಯ ಗಡಿಗಳನ್ನು ಮೀರಿದ ದೃಷ್ಟಿಕೋನವನ್ನು ಹೊಂದಿದ್ದು, ಸಾಮೂಹಿಕ ಹಿತಾಸಕ್ತಿಗಳು ಮತ್ತು ಜೀವನಶೈಲಿಗೆ ವೇದಿಕೆಯನ್ನು ಒದಗಿಸುವ ಮೂಲಕ ಶಾಂತಿಯುತ ಸಹವಾಸವನ್ನು ಸಾಧ್ಯವಾಗಿಸುತ್ತದೆ ಎಂದು ಅವರು ಹೇಳಿದರು.

ಸಂದೇಶದ ಅಂತ್ಯದಲ್ಲಿ, ಲಕ್ಸಂಬರ್ಗ್‌ನಲ್ಲಿ ನಡೆಯುವ ಈ ಸಮ್ಮೇಳನವು ಯೂರೋಪಿನ ಆಳವಾದ ಕ್ರೈಸ್ತ ಮೂಲಗಳನ್ನು ನೆನಪಿಸುವುದಕ್ಕೂ, ಇನ್ನಷ್ಟು ಶಾಂತ ಮತ್ತು ನ್ಯಾಯಯುತ ಯೂರೋಪಿಯನ್ ಖಂಡವನ್ನು ನಿರ್ಮಿಸುವಲ್ಲಿ ಕಥೋಲಿಕ ಮೌಲ್ಯಗಳ ಪಾತ್ರವನ್ನು ಮುಂದುವರಿಸುವುದಕ್ಕೂ ಸಹಕಾರಿಯಾಗಲಿ ಎಂಬ ಆಶಯವನ್ನು ಜಗದ್ಗುರು XIVನೇ ಲಿಯೋರವರು ವ್ಯಕ್ತಪಡಿಸಿದರು.

22 ಜನವರಿ 2026, 00:00