ಹುಡುಕಿ

2026.01.02 Messaggio Papa SEEK Conference 2026.01.02 Messaggio Papa SEEK Conference  

ಪೋಪ್ ಅಮೆರಿಕದ ಯುವಕರಿಗೆ: ದೇವರು ನಿಮಗಾಗಿ ಏನನ್ನು ಕಾಯ್ದಿರಿಸಿದ್ದಾನೆಯೋ ಅದನ್ನು ಮುಕ್ತವಾಗಿ ಸ್ವೀಕರಿಸಿ.

ಅಮೆರಿಕದಲ್ಲಿ ನಡೆಯುತ್ತಿರುವ ಸೀಕ್ ಯುವ ಸಮಾವೇಶದಲ್ಲಿ ಭಾಗವಹಿಸುವವರಿಗೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ, ಜಗದ್ಗುರು ಲಿಯೋರವರು ಯುವಜನರನ್ನು ಯೇಸುವಿನೊಂದಿಗೆ ಸಮಯ ಕಳೆಯಲು ಆಹ್ವಾನಿಸುತ್ತಾರೆ ಅವರು ಮೊದಲ ಬಾರಿಗೆ ಯೇಸುವನ್ನು ಭೇಟಿಯಾಗುತ್ತಿದ್ದಾರೋ ಅಥವಾ ಈಗಾಗಲೇ ಅವರೊಂದಿಗೆ ಇರುವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೋ ಎಂಬುದನ್ನು ಲೆಕ್ಕಿಸದೆ ಯಾವಾಗಲೂ ಪ್ರಭು ನಿಮಗಾಗಿ ಏನು ಯೋಜಿಸಿಕೊಂಡಿದ್ದಾನೆ ಎಂಬುದಕ್ಕೆ ತೆರೆದ ಮನಸ್ಸಿರಲಿ ಎಂದು ಪ್ರೋತ್ಸಾಹಿಸುತ್ತಾರೆ.

ವ್ಯಾಟಿಕನ್ ವರದಿ

ನೀವು ಏನು ಹುಡುಕುತ್ತೀರಿ?

ಮೊದಲ ಶಿಷ್ಯರಿಗೆ ಯೇಸು ಕೇಳಿದ ಈ ಪ್ರಶ್ನೆ, ಅವರ ಹೃದಯದಲ್ಲಿ ಏನಿತ್ತು ಎಂಬುದನ್ನು ಆತ ತಿಳಿದಿದ್ದಾನೆ ಎಂಬುದನ್ನು ತೋರಿಸುತ್ತದೆ. ಅವರು ಚಿಂತನಶೀಲರಾಗಿದ್ದರು, ಆದರೆ ಒಳ್ಳೆಯ ಅರ್ಥದಲ್ಲಿ ದೇವರಿಗೆ ತೆರೆದ ಮನಸ್ಸಿನವರಾಗಿದ್ದು, ತಮ್ಮ ಜೀವನದಲ್ಲಿ ಅರ್ಥವನ್ನು ಹುಡುಕುತ್ತಿದ್ದರು.

ಅಮೆರಿಕದಲ್ಲಿ ನಡೆಯುವ ವಾರ್ಷಿಕ “ಸೀಕ್” ಯುವ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಯುವಕರಿಗೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ, ಜಗದ್ಗುರು ಲಿಯೋರವರು ಯೇಸು ಇಂದು ಪ್ರತಿಯೊಬ್ಬರಿಗೂ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು ಹೇಳುತ್ತಾರೆ.

ಎಂದು ಪೋಪ್ ಹೇಳಿದರು, ಉತ್ತರ ಒಬ್ಬ ವ್ಯಕ್ತಿಯಲ್ಲಿ ಸಿಗುತ್ತದೆ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ಮಾತ್ರ ನಿಜವಾದ ಶಾಂತಿ ಮತ್ತು ಆನಂದ ಸಿಗುತ್ತದೆ ಆತನೇ ನಮ್ಮ ಹೃದಯದ ಆಳವಾದ ಆಸೆಗಳನ್ನು ಪೂರೈಸುತ್ತಾನೆ.ಯೇಸುವನ್ನು ತಿಳಿದುಕೊಳ್ಳುವುದು

ಮೊದಲ ಶಿಷ್ಯರ ಅನುಭವವನ್ನು ಮುಂದುವರಿಸಿ ಚಿಂತನೆ ಮಾಡುತ್ತಾ, ಜಗದ್ಗುರು ಲಿಯೋ ರವರು  ಯೇಸುವು ಎಲ್ಲಿ ವಾಸಿಸುತ್ತಿದ್ದಾನೆ ಎಂದು ಕೇಳಿದ ವಿಚಾರವನ್ನು ನೆನಪಿಸಿದರು.

ಯೇಸು ದೇವರ ಕುರಿಮರಿ ಎಂದು ಯಾರಾದರೂ ಹೇಳಿದರೆ ಸಾಕಾಗಲಿಲ್ಲ,  ಅವರು ಯೇಸುವನ್ನು ವೈಯಕ್ತಿಕವಾಗಿ ತಿಳಿಯಲು, ಆತನೊಂದಿಗೆ ಸಮಯ ಕಳೆಯಲು ಬಯಸಿದರು ಎಂದು ಅವರು ಹೇಳಿದರು.

ಸಮಾವೇಶದ ಸಮಯದಲ್ಲಿ ಯುವಜನರಿಗೆ ಪ್ರಭುವಿನೊಂದಿಗೆ ಸಮಯ ಕಳೆಯುವ ಅವಕಾಶ ದೊರೆಯುತ್ತದೆ ಕೆಲವರಿಗೆ ಅದು ಮೊದಲ ಬಾರಿಗೆ ಆಗಿರಬಹುದು, ಇನ್ನಿತರರಿಗೆ ಯೇಸುವಿನೊಂದಿಗೆ ತಮ್ಮ ಸಂಬಂಧವನ್ನು ಇನ್ನಷ್ಟು ಆಳಗೊಳಿಸುವ ಅವಕಾಶವಾಗಿರಬಹುದು.

ಜಗದ್ಗುರು ಲಿಯೋರವರು ಭಾಗವಹಿಸುವವರನ್ನು ಪ್ರಭು ನಿಮಗಾಗಿ ಏನು ಸಂಗ್ರಹಿಸಿಟ್ಟಿದ್ದಾನೆ ಎಂಬುದಕ್ಕೆ ತೆರೆದ ಮನಸ್ಸಿರಲಿ ಎಂದು ಪ್ರೋತ್ಸಾಹಿಸಿದರು. ಶಿಷ್ಯರ ಯೇಸುವಿನ ಮೊದಲ ಭೇಟಿಯು ಕೆಲವೇ ದಿನಗಳಾಗಿದ್ದರೂ, ಅದು ಅವರ ಜೀವನವನ್ನೇ ಶಾಶ್ವತವಾಗಿ ಬದಲಿಸಿತು ಎಂದು ಅವರು ನೆನಪಿಸಿದರು.

ಸುವಾರ್ತಾ ಉತ್ಸಾಹ

ಯೇಸುವನ್ನು ತಿಳಿದುಕೊಳ್ಳುವುದು, ಎಂದು ಜಗದ್ಗುರು ಮುಂದುವರಿಸಿದರು, ಸುವಾರ್ತಾ ಉತ್ಸಾಹವನ್ನು ಹುಟ್ಟಿಸುತ್ತದೆ. ಇದನ್ನು ಸಂತ ಆಂದ್ರೇಯರಲ್ಲಿ ನೋಡಬಹುದು ಅವರು ತಕ್ಷಣವೇ ತಮ್ಮ ಸಹೋದರ ಸಂತ ಪೇತ್ರನಿಗೆ ತಾವು ಮೆಸೀಯನನ್ನು ಕಂಡುಹಿಡಿದಿದ್ದೇನೆಂದು ತಿಳಿಸಿದರು.

ಸಮಾವೇಶದಲ್ಲಿರುವ ಯುವಜನರು ಸಹ ಪ್ರಭುವಿನೊಂದಿಗೆ ನಿಜವಾದ ಭೇಟಿಯಿಂದ ಪಡೆದ ಆನಂದವನ್ನು ನಿಮ್ಮ ಸುತ್ತಲಿರುವವರೊಂದಿಗೆ ಹಂಚಿಕೊಳ್ಳುವುದೇ ಸುವಾರ್ತಾ ಉತ್ಸಾಹದಿಂದ ಪ್ರೇರಿತರಾಗಲಿ ಎಂದು ಜಗದ್ಗುರು ಲಿಯೋ ಪ್ರಾರ್ಥಿಸಿದರು.

ಅವರು ಯುವಜನರನ್ನು ದೇವರು ಅವರನ್ನು ಯಾವ ಕರೆಗೆ ಆಹ್ವಾನಿಸುತ್ತಿದ್ದಾನೆ ಎಂಬುದನ್ನು ಕೇಳಲು ಭಯಪಡಬೇಡಿ ಎಂದು ಉತ್ತೇಜಿಸಿದರು ಅದು ಯಾಜಕತ್ವವಾಗಿರಲಿ, ಧಾರ್ಮಿಕ ಜೀವನವಾಗಿರಲಿ, ಅಥವಾ ವಿವಾಹ ಮತ್ತು ಕುಟುಂಬ ಜೀವನವಾಗಿರಲಿ. ನೀವು ಕರೆಯನ್ನು ಅನುಭವಿಸಿದರೆ, ಭಯಪಡಬೇಡಿ… ದೇವರು ನಿಮ್ಮನ್ನು ಮುನ್ನಡೆಸಲಿ ಮತ್ತು ಮಾರ್ಗದರ್ಶನ ನೀಡಲಿ ಎಂದರು.

ಜಗದ್ಗುರು ಲಿಯೋರವರು ತಮ್ಮ ಸಂದೇಶವನ್ನು ಮರಿಯ ಮಾತೆಯ ಕಡೆಗೆ ತಿರುಗಿ ಅಂತ್ಯಗೊಳಿಸಿದರು:

ಯೇಸು ಕ್ರಿಸ್ತನಾದ ಆಕೆಯ ಪುತ್ರನನ್ನು ನಾವು ನಿಜವಾಗಿ ತಿಳಿಯಲು, ನಮ್ಮನ್ನು ಆತನ ಬಳಿಗೆ ಮುನ್ನಡೆಸುವಂತೆ, ನಮ್ಮ ಜೀವನದ ಪ್ರತಿಯೊಂದಕ್ಕೂ ದೇವರು ಹೊಂದಿರುವ ಅದ್ಭುತ ಯೋಜನೆಯನ್ನು ಅರಿಯುವಂತೆ ಮಾತೆ ಮರಿಯಮ್ಮನವರಲ್ಲಿ ಪ್ರಾರ್ಥಿಸೋಣ ಎಂದು ಅವರು ಆಹ್ವಾನಿಸಿದರು.

ಕ್ರಿಸ್ತನು ಲೋಕಕ್ಕೆ ಬಂದಿರುವುದನ್ನು ಆಚರಿಸುವುದು

ಜಗದ್ಗುರು ಲಿಯೋರವರ ಸಂದೇಶವನ್ನು ಕೊಲಂಬಸ್ ಧರ್ಮಕ್ಷೇತ್ರದ ಬಿಷಪ್ ಎರಲ್ ಫೆರ್ನಾಂಡಿಸ್ ಪರಿಚಯಿಸಿದರು ಅವರು ತಮ್ಮ ಧರ್ಮಕ್ಷೇತ್ರ ನಗರದಲ್ಲೇ ಉದ್ಘಾಟನಾ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು. ತಮ್ಮ ಉಪದೇಶದಲ್ಲಿ ಕ್ರಿಸ್ಮಸ್ ಘಟನೆಯನ್ನು ಪರಿಗಣಿಸುತ್ತಾ, ಬಿಷಪ್ ಫೆರ್ನಾಂಡಿಸ್ ಹೇಳಿದರು: ಕ್ರಿಸ್ತನು ಲೋಕಕ್ಕೆ ಕಳುಹಿಸಲ್ಪಟ್ಟಿರುವುದು ಆಚರಿಸಬೇಕಾದ ಸಂಗತಿಯೇ.

ಅವರು ಕ್ರಿಸ್ಮಸ್‌ನ ಅಷ್ಟ ದಿನವನ್ನು ಮಾತ್ರವಲ್ಲದೆ, ದೇವಮಾತೆ ಮರಿಯಮ್ಮನವರ ಮಹೋತ್ಸವವನ್ನೂ, ಹಾಗೂ ಪೂರ್ವ ಕ್ರೈಸ್ತರು ಜನವರಿ 1ರಂದು ಆಚರಿಸುವ ಯೇಸುವಿನ ಸುನ್ನತಿ ಹಬ್ಬವನ್ನೂ ಪ್ರಸ್ತಾಪಿಸಿದರು. ಅವರು ವಿಶ್ವ ಶಾಂತಿ ದಿನದ ಆಚರಣೆಯನ್ನೂ ಉಲ್ಲೇಖಿಸಿ, ಕ್ರಿಸ್ತನಿಂದ ಬರುವ ಅಸ್ತ್ರರಹಿತ ಮತ್ತು ಅಸ್ತ್ರಶೂನ್ಯಗೊಳಿಸುವ ಶಾಂತಿಗಾಗಿ ಜಗದ್ಗುರು ಲಿಯೋರವರ ಕರೆಯನ್ನು ಒತ್ತಿ ಹೇಳಿದರು. ಬಿಷಪ್ ಫೆರ್ನಾಂಡಿಸ್ ತಮ್ಮ ಉಪದೇಶವನ್ನು ಶಾಂತಿಯ ರಾಣಿಯಾದ ಧನ್ಯ ಕನ್ಯಾ ಮರಿಯಳ ಪ್ರಾರ್ಥನೆಯೊಂದಿಗೆ ಅಂತ್ಯಗೊಳಿಸಿದರು. ಈಗಲೂ ಮುಂದಿನ ವರ್ಷದಲ್ಲೂ ನಾವು ಈ ಶಾಂತಿಯನ್ನು ಅನುಭವಿಸೋಣ ಮತ್ತು ಸ್ವರ್ಗದಿಂದ ಇಳಿದು ಬಂದ ಆಕೆಯ ಪುತ್ರನೊಂದಿಗೆ ನಮ್ಮ ಸ್ನೇಹವನ್ನು ಇನ್ನಷ್ಟು ಗಾಢಗೊಳಿಸೋಣ, ನಾವು ಎತ್ತರದ ಕಡೆಗೆ ಏರಲು ಸಾಧ್ಯವಾಗಲಿ ಎಂದು ಅವರು ವಿನಂತಿಸಿದರು.

ಸೀಕ್ 2026

ಎತ್ತರಗಳ ಕಡೆಗೆ ಎಂಬುದು ಈ ವರ್ಷದ ಸೀಕ್ ಸಮಾವೇಶದ ಘೋಷವಾಕ್ಯವಾಗಿದೆ.

ಫೋಕಸ್ ( ಕಥೋಲಿಕ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಸಹಭಾಗಿತ್ವ) ವತಿಯಿಂದ ಆಯೋಜಿಸಲ್ಪಡುವ ಈ ವಾರ್ಷಿಕ ಕಾರ್ಯಕ್ರಮವು ಐದು ದಿನಗಳ ಅನುಭವವಾಗಿದ್ದು, ಪ್ರಾರ್ಥನೆ, ಆರಾಧನೆ, ಸಂಸ್ಕಾರಗಳು ಮತ್ತು ಪ್ರೇರಣಾದಾಯಕ ವಕ್ತಾರರ ಮೂಲಕ ಸಾವಿರಾರು ಕಥೋಲಿಕರು ಕ್ರಿಸ್ತನನ್ನು ಭೇಟಿಯಾಗಲು ಒಂದಾಗುತ್ತಾರೆ.

26ನೇ ಸೀಕ್ ಸಮಾವೇಶದಲ್ಲಿ 25,000ಕ್ಕೂ ಹೆಚ್ಚು ಯುವಕರು ಭಾಗವಹಿಸುತ್ತಿದ್ದು, ಇದು ಜನವರಿ 1ರಿಂದ 5ರವರೆಗೆ ಅಮೆರಿಕದ ಕೊಲಂಬಸ್ (ಒಹಾಯೋ), ಡೆನ್ವರ್ (ಕೊಲೊರಾಡೊ) ಮತ್ತು ಫೋರ್ಟ್ ವರ್ತ್ (ಟೆಕ್ಸಾಸ್) ನಗರಗಳಲ್ಲಿ ನಡೆಯುತ್ತಿದೆ.

02 ಜನವರಿ 2026, 16:31