ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಮಾತೆ ಮರಿಯಮ್ಮನವರಂತೆ ವಿಶ್ವಾಸಿಸುವುದನ್ನು ಕಲಿಯಿರಿ

ಇಂದು ಅಮಲೋದ್ಭವಿ ಮಾತೆಯ ಮಹೋತ್ಸವದ ನಿಮಿತ್ತ ಪೋಪ್ ಲಿಯೋ ಅವರು ತ್ರಿಕಾಲ ಪ್ರಾರ್ಥನೆಯನ್ನು ಪಠಿಸುತ್ತಾರೆ ಹಾಗೂ ಈ ಸಂದರ್ಭದಲ್ಲಿ ಅವರು ಮಾತೆ ಮರಿಯ ವಿಶ್ವಾಸಿಸಿದಂತೆ ವಿಶ್ವಾಸಿಸಲು ನಾವೆಲ್ಲರೂ ಕಲಿಯಬೇಕು ಎಂದು ಹೇಳಿದರು.

ವರದಿ: ವ್ಯಾಟಿಕನ್ ನ್ಯೂಸ್

ಇಂದು ಅಮಲೋದ್ಭವಿ ಮಾತೆಯ ಮಹೋತ್ಸವದ ನಿಮಿತ್ತ ಪೋಪ್ ಲಿಯೋ ಅವರು ತ್ರಿಕಾಲ ಪ್ರಾರ್ಥನೆಯನ್ನು ಪಠಿಸುತ್ತಾರೆ ಹಾಗೂ ಈ ಸಂದರ್ಭದಲ್ಲಿ ಅವರು ಮಾತೆ ಮರಿಯ ವಿಶ್ವಾಸಿಸಿದಂತೆ ವಿಶ್ವಾಸಿಸಲು ನಾವೆಲ್ಲರೂ ಕಲಿಯಬೇಕು ಎಂದು ಹೇಳಿದರು.

ಮಾತೆ ಮರಿಯಮ್ಮನವರು ದೇವರ ಚಿತ್ತಕ್ಕೆ ಹೌದು ಎಂದದ್ದು ಬಹಳ ವಿಶೇಷ ಹಾಗೂ ಸುಂದರ ಅಭಿವ್ಯಕ್ತಿಯಾಗಿದೆ. ಇದೇ ಅಭಿವ್ಯಕ್ತಿಯನ್ನು, ಅಂದರೆ ದೇವರ ಚಿತ್ತಕ್ಕೆ ಸದಾ ಮಣಿಯುವುದನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು ಎಂದು ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.

ಇದೇ ಕುರಿತು ಪೋಪ್ ಲಿಯೋ ಅವರು ನಮ್ಮ ದೀಕ್ಷಾಸ್ನಾನದ ಕುರಿತೂ ಸಹ ಚಿಂತನೆಯನ್ನು ನಡೆಸಿದರು.

08 ಡಿಸೆಂಬರ್ 2025, 17:31