ಪೋಪ್ ಲಿಯೋ XIV: ವಿಶ್ವ ಶಾಂತಿಗಾಗಿ ಜಪಸರವನ್ನು ಪ್ರಾರ್ಥಿಸಿ
ವರದಿ: ವ್ಯಾಟಿಕನ್ ನ್ಯೂಸ್
ಈ ಅಕ್ಟೋಬರ್ ತಿಂಗಳಲ್ಲಿ ಪೋಪ್ ಲಿಯೋ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ತಿಂಗಳು ಎಲ್ಲರೂ ವಿಶ್ವಶಾಂತಿಗಾಗಿ ಜಪಸರ ಪ್ರಾರ್ಥನೆಯನ್ನು ಮಾಡಬೇಕು ಎಂದು ಹೇಳಿದ್ದಾರೆ.
ಅಕ್ಟೋಬರ್ ತಿಂಗಳನ್ನು ಆರಂಭಿಸುವಾಗ ಈ ತಿಂಗಳು ಪವಿತ್ರ ಜಪಸರಕ್ಕೆ ಅರ್ಪಿತವಾಗಿದೆ ಆದುದರಿಂದ ನಾನು ನಿಮ್ಮೆಲ್ಲರನ್ನು ಪ್ರತಿದಿನ ಜಪಸರ ಪ್ರಾರ್ಥನೆಯನ್ನು ಜಗತ್ತಿನಲ್ಲಿ ಶಾಂತಿ ಮೂಡುವುದಕ್ಕಾಗಿ ಪ್ರಾರ್ಥಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ವಿಶ್ವಗುರು ಲಿಯೋ ಅವರು ಹೇಳಿದರು.
ಬುಧವಾರ ಸಾರ್ವಜನಿಕ ಭೇಟಿಯಲ್ಲಿ ವಿವಿಧ ಭಾಷೆಗಳನ್ನು ಉದ್ದೇಶಿಸಿ ಮಾತನಾಡುವಾಗ ಅವರು ಈ ಕುರಿತು ಮಾತನಾಡಿದ್ದಾರೆ.
ಈ ಜಗತ್ತು ಹಿಂಸೆಯಿಂದ ಬಳಲುತ್ತಿದೆ. ಸಾವಿರಾರು ಜನರು ಮಕ್ಕಳು ಹಾಗೂ ಮಹಿಳೆಯರು ತಮ್ಮದಲ್ಲದ ತಪ್ಪಿಗೆ ಬಲಿಯಾಗುತ್ತಿದ್ದಾರೆ. ಈ ಯುದ್ಧಗಳನ್ನು ಕೊನೆಗೊಳಿಸಲು ಪ್ರಾರ್ಥನೆ ಅತ್ಯಂತ ಶಕ್ತಿದಾಯಕ ಅಸ್ತ್ರವಾಗಿದೆ. ಆದುದರಿಂದ ಎಲ್ಲರೂ ಈ ತಿಂಗಳಾಧ್ಯಂತ ಜಪಸರವನ್ನು ಪ್ರತಿದಿನ ಪ್ರಾರ್ಥಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ವಿಶ್ವಗುರು ಎಲ್ಲಾ ಕಥೋಲಿಕರಿಗೆ ಕರೆ ನೀಡಿದ್ದಾರೆ.
