ನವೆಂಬರ್ - ಜನವರಿ ಪೋಪರ ದೈವಾರಾಧನಾ ವಿಧಿ ಆಚರಣೆಗಳು
ವರದಿ: ವ್ಯಾಟಿಕನ್ ನ್ಯೂಸ್
ನವೆಂಬರ್ ತಿಂಗಳಿಂದ ಜನವರಿ ತಿಂಗಳವರೆಗೆ ಪೋಪರ ದೈವಾರಾಧನಾ ವಿಧಿಗಳ ಪಟ್ಟಿಯನ್ನು ವ್ಯಾಟಿಕನ್ ಮಾಧ್ಯಮ ಕಚೇರಿಯು ಬಿಡುಗಡೆ ಮಾಡಿದೆ.
ನವೆಂಬರ್ 1 ರಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಸಂತ ಜಾನ್ ಹೆನ್ರಿ ನ್ಯೂಮನ್. ಅವರನ್ನು ಧರ್ಮಸಭೆಯ ಪಂಡಿತ ಎಂದು ಘೋಷಿಸಲಿದ್ದಾರೆ. ನವೆಂಬರ್ 2 ರಂದು ಪೋಪ್ ಲಿಯೋ ಅವರು ಅಗಲಿದ ಪೋಪ್ ಫ್ರಾನ್ಸಿಸ್, ಕಾರ್ಡಿನಲ್ಲುಗಳು ಹಾಗೂ ಧರ್ಮಾಧ್ಯಕ್ಷರ ಆತ್ಮಗಳಿಗಾಗಿ ಸಕಲ ಸಂತರ ದಿನದಂದು ಬಲಿಪೂಜೆಯನ್ನು ಆರ್ಪಿಸಲಿದ್ದಾರೆ.
ನವೆಂಬರ್ 9 ರಂದು ಲ್ಯಾಟರನ್ ಮಹಾದೇವಾಲಯದ ಸಮರ್ಪಣೆಯ ಅಂಗವಾಗಿ ಅಂದು ಅಲ್ಲಿ ಅವರು ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ನವೆಂಬರ್ 16 ರಂದು ಬಡವರ ಜ್ಯೂಬಿಲಿ ನಡೆಯಲಿದ್ದು, ಸಂತ ಪೇತ್ರರ ಚೌಕದಲ್ಲಿ ಅವರು ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಡಿಸೆಂಬರ್ 8 ರಂದು ಅಮಲೋದ್ಭವಿ ಮಾತೆಯ ಹಬ್ಬದ ಬಲಿಪೂಜೆಯನ್ನು ಹಾಗೂ 12 ರಂದು ಗ್ವಾಡಲೂಪೆ ಮಾತೆಯ ಹಬ್ಬದಂದು ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಇದೇ ಮೊದಲ ಬಾರಿಗೆ ಪೋಪ್ ಆದ ನಂತರ ಅವರು ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದರಿಂದ ಈ ವರ್ಷ ಅವರಿಗೆ ವಿಶೇಷ ಕ್ರಿಸ್ಮಸ್ ಆಗಿದೆ.
ಜನವರಿಯಲ್ಲಿ ಹೊಸವರ್ಷ ಹಾಗೂ ಮೂರು ರಾಯರ ಹಬ್ಬಗಳ ಬಲಿಪೂಜೆಯಲ್ಲಿ ಪೋಪ್ ಭಾಗವಹಿಸಲಿದ್ದು, ಅರ್ಪಿಸಲಿದ್ದಾರೆ.
