ಹುಡುಕಿ

ಪೋಪ್ ಲಿಯೋ ಸೃಜಿಸಿದ ಚೀನಿ ಧರ್ಮಕ್ಷೇತ್ರಕ್ಕೆ ಧರ್ಮಾಧ್ಯಕ್ಷರ ನೇಮಕ

ಚೀನಾ ಸರ್ಕಾರ ಹಾಗೂ ಪವಿತ್ರ ಪೀಠದ ನಡುವಿನ ಒಪ್ಪಂದದ ಮೇರೆಗೆ ಜೋಸೆಫ್ ವಾಂಗ್ ಝೆಂಗುಯ್ ಅವರು ನೂತನವಾಗಿ ರಚಿಸಲಾಗಿರುವ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಅಭ್ಯಂಗಿತರಾಗಿದ್ದಾರೆ. ಝಾಂಗ್ಜಿಯಾಕೌ ಧರ್ಮಕ್ಷೇತ್ರವನ್ನು ಪೋಪ್ ಹದಿನಾಲ್ಕನೇ ಲಿಯೋ ಅವರು ಎರಡು ತಿಂಗಳ ಹಿಂದೆ ರಚಿಸಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ XIV ಅವರು ಚೀನಾ ಧರ್ಮಸಭೆಯ ಪಾಲನಾ ಒಳಿತಿಗಾಗಿ 1946 ರಲ್ಲಿ ಪೋಪ್ ಹನ್ನೆರಡನೇ ಭಕ್ತಿನಾಥರು ಸ್ಥಾಪಿಸಿದ್ದ ಶುವಾನ್ವ ಮತ್ತು ಶುವಾನ್ಸಿ ಧರ್ಮಕ್ಷೇತ್ರಗಳನ್ನು ರದ್ದುಪಡಿಸಿ, ನೂತನವಾಗಿ ಝಾಂಗ್ಜಿಯಾಕೌ ಧರ್ಮಕ್ಷೇತ್ರವನ್ನು ರಚಿಸಿದ್ದಾರೆ. ಇದು ಬೀಜಿಂಗ್ ಮಹಾಧರ್ಮಕ್ಷೇತ್ರದ ಪಾಲನಾ ಆಡಳಿತಕ್ಕೆ ಒಳಪಟ್ಟಿದೆ.

ಮೊನ್ಸಿಜ್ಞೊರ್ ಜೋಸೆಫ್ ವಾಂಗ್ ಝೆಂಗುಯ್ ಅವರು ಇಂದು ಈ ನೂತನ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ಅಭ್ಯಂಗಿತರಾಗಿದ್ದಾರೆ.

10 ಸೆಪ್ಟೆಂಬರ್ 2025, 15:24