ಹುಡುಕಿ

ತಾಯೊಬ್ಬಳಿಗೆ ಪೋಪ್ ಬರೆಯುತ್ತಾರೆ: ಎಲ್ಲಾ ಸವಾಲುಗಳನ್ನು ಮೆಟ್ಟಿನಿಲ್ಲಲು ಮಾತೆ ಮರಿಯಮ್ಮನವರಿಗೆ ಅರ್ಪಿಸಿಕೊಳ್ಳಿ

ಪಿಯಾಜೋ ಸಾನ್ ಪಿಯೆತ್ರೋ ಮಾಸಪತ್ರಿಕೆಯ ಇತ್ತೀಚಿನ ಆವೃತ್ತಿಯಲ್ಲಿ ಲಾರಾ ಎಂಬ ತಾಯಿಯೊಬ್ಬಳು ಹೇಗೆ ಆಕೆ ವಿಶ್ವಾಸದ ವಿಷಯದಲ್ಲಿ ಯಾತನೆಯನ್ನು ಹಾಗೂ ಗೊಂದಲವನ್ನು ಅನುಭವಿಸುತ್ತಿದ್ದಾಳೆ ಎಂದು ಪ್ರಕಟಿಸಲಾಗಿದೆ. ಈ ಪತ್ರಿಕೆಯ ಮೂಲಕ ಆಕೆ ಪೋಪ್ ಲಿಯೋ ಅವರಿಗೆ ಪತ್ರವನ್ನು ಬರೆದಿದ್ದಾಳೆ. ಇದಕ್ಕೆ ಉತ್ತರಿಸಿರುವ ಪೋಪ್, ಸದಾ ಮಾತೆ ಮರಿಯಮ್ಮನವರ ಹತ್ತಿರ ಇರಬೇಕೆಂದು ಹಾಗೂ ಅವರ ಮಧ್ಯಸ್ಥಿಕೆಯಲ್ಲಿ ಮುನ್ನಡೆಯಬೇಕೆಂದು ಪೋಪ್ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಲಾರಾ ತನ್ನ ಪತಿ ಮತ್ತು ಮೂವರು ಸುಂದರ ಹೆಣ್ಣುಮಕ್ಕಳಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದ್ದರೂ, ಕ್ರೈಸ್ತ ನಂಬಿಕೆಯಲ್ಲಿ ಬೆಳೆದಿದ್ದರೂ, ಆ ನಂಬಿಕೆಯನ್ನು ಅವಳು "ಎಂದಿಗಿಂತಲೂ ಬಲಶಾಲಿ" ಎಂದು ವಿವರಿಸುತ್ತಿದ್ದರೂ, ಮೇಲುಗೈ ಸಾಧಿಸುವಂತೆ ತೋರುವ ಪ್ರಲೋಭನೆಗಳನ್ನು ಹೇಗೆ ಜಯಿಸುವುದು ಎಂದು ಯೋಚಿಸುತ್ತಾಳೆ ಮತ್ತು ಪೋಪ್ ಅವರನ್ನು ಸಲಹೆ ಕೇಳುತ್ತಾಳೆ.

ಇದಕ್ಕೆ ಉತ್ತರಿಸಿದ ಪೋಪ್ ಮಾತೆ ಮರಿಯಮ್ಮನವರನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಬೇಕು ಅವರ ಆಶ್ರಯದಲ್ಲಿ ನಾವು ಮುಂದುವರೆದರೆ ನಮ್ಮ ವಿಶ್ವಾಸವನ್ನು ಹಾಗೂ ಭಕ್ತಿಯನ್ನು ಕಾಪಿಟ್ಟುಕೊಳ್ಳಬಹುದೆಂದು ಹೇಳಿದ್ದಾರೆ.

19 ಆಗಸ್ಟ್ 2025, 16:16