ಹುಡುಕಿ

ಚಾಲ್ಡಿಯನ್ ಕಥೋಲಿಕ ಧರ್ಮಸಭೆಯ ಹೊಸ ಪಿತಾಮಹರಾದ  ಪೂಜ್ಯ ಧರ್ಮಾಧ್ಯಕ್ಷ ಅಮೇಲ್ ನೋನಾ ಚಾಲ್ಡಿಯನ್ ಕಥೋಲಿಕ ಧರ್ಮಸಭೆಯ ಹೊಸ ಪಿತಾಮಹರಾದ ಪೂಜ್ಯ ಧರ್ಮಾಧ್ಯಕ್ಷ ಅಮೇಲ್ ನೋನಾ 

ಹೊಸ ಪಿತಾಮಹರಾಗಿ ಪೂಜ್ಯ ಧರ್ಮಾಧ್ಯಕ್ಷ ಅಮೇಲ್ ನೋನಾ ಆಯ್ಕೆ

ಧರ್ಮಾಧ್ಯಕ್ಷ ಅಮೇಲ್ ನೋನಾ ಅವರು ಏಪ್ರಿಲ್ 12ರಂದು ಚಾಲ್ಡಿಯನ್ ಕಥೋಲಿಕ ಧರ್ಮಸಭೆಯ ಹೊಸ ಪಿತಾಮಹರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು, ಪ್ರಧಾನ ಗುರು ಲೂಯಿಸ್ ರಫಾಯೇಲ್ ಸಾಕೋ ಅವರು ಮಾರ್ಚ್ 10ರಂದು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು.

ವ್ಯಾಟಿಕನ್ ವರದಿ

ಈ ನೇಮಕವು ಬಾಗ್ದಾದ್‌ನ ಚಾಲ್ಡಿಯನ್ ಧರ್ಮಸಭೆಯ ಸೀನೋಡ್ ಸಭೆಯ ಸಂದರ್ಭದಲ್ಲಿ ನಡೆಯಿತು; ಈ ಸಭೆ ಏಪ್ರಿಲ್ 9ರಿಂದ 15ರವರೆಗೆ ರೋಮ್‌ನಲ್ಲಿ ಸೇರಿಕೊಂಡಿತ್ತು.

ಈ ಸಭೆಯ ಸದಸ್ಯರನ್ನು ಏಪ್ರಿಲ್ 10ರಂದು ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ಭೇಟಿ ಮಾಡಿದ್ದರು. ಹೊಸದಾಗಿ ಆಯ್ಕೆಯಾದ ಪಿತಾಮಹರು “ಮೂರನೇ ಪೌಲ” ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದು, ಅವರು ಪೂಜ್ಯ ಜಗದ್ಗುರುಗಳಿಂದ ಧಾರ್ಮಿಕ ಏಕತೆಯ ಅನುಮೋದನೆಯನ್ನು ಕೋರುವುದಾಗಿ ತಿಳಿದುಬಂದಿದೆ.

ಏಕತೆಯನ್ನು ಬಲಪಡಿಸುವ ವಿಶ್ವಾಸ

ಚಾಲ್ಡಿಯನ್ ಧರ್ಮಸಭೆಯ ಪ್ರಕಟಣೆಯ ಪ್ರಕಾರ, “ಈ ಸೇವೆಯ ಮೂಲಕ ವಿಶ್ವಾಸಿಗಳನ್ನು ಅವರ ನಂಬಿಕೆಯಲ್ಲಿ ಬಲಪಡಿಸಲಾಗುವುದು, ಅವರ ಏಕತೆಯನ್ನು ಗಟ್ಟಿಗೊಳಿಸಲಾಗುವುದು ಮತ್ತು ಸುವಾರ್ತೆಯ ಸಾಕ್ಷಿಯನ್ನು ನೀಡುವ ಧರ್ಮಸಭೆಯ ಕಾರ್ಯವನ್ನು ಪುನರುಜ್ಜೀವನಗೊಳಿಸಲಾಗುವುದು” ಎಂಬ ವಿಶ್ವಾಸವನ್ನು ಸೀನೋಡ್ ಸದಸ್ಯರು ವ್ಯಕ್ತಪಡಿಸಿದ್ದಾರೆ.

1968ರಲ್ಲಿ ಉತ್ತರ ಇರಾಕ್‌ನ ಅಲ್ಕೋಶ್‌ನಲ್ಲಿ ಜನಿಸಿದ ಅಮೇಲ್ ನೋನಾ ಅವರು ಚಾಲ್ಡಿಯನ್ ಕಥೋಲಿಕ ಧರ್ಮಸಭೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

2009ರಿಂದ ಅವರು ಮೋಸೂಲ್ ಮಹಾಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ವಿಶೇಷವಾಗಿ ಕಠಿಣ ಅವಧಿಯಲ್ಲಿ—2014ರಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಉಗ್ರ ಸಂಘಟನೆಯ ಉದಯ ಮತ್ತು ಅದರ ಪರಿಣಾಮವಾಗಿ ಸಾವಿರಾರು ವಿಶ್ವಾಸಿಗಳ ಸ್ಥಳಾಂತರ—ಸ್ಥಳೀಯ ಕ್ರೈಸ್ತ ಸಮುದಾಯವನ್ನು ಮುನ್ನಡೆಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

12 ಏಪ್ರಿಲ್ 2026, 20:05