ಪ್ರಧಾನ ಗುರು ರಾಬರ್ಟ್ ಮೆಕ್‌ಎಲ್ರಾಯ್: ಇರಾನ್ ಯುದ್ಧ “ನೈತಿಕ ಅನ್ಯಾಯ”; ಯುದ್ಧ ವಿರಾಮ ಸ್ಥಿರವಾಗಿರಲಿ ಎಂದು ಪ್ರಾರ್ಥಿಸೋಣ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
ನಾವು ಶಾಂತಿಯ ಅರಸರಾದ ನಮ್ಮ ದೇವರಲ್ಲಿ, ಅಧಿಕಾರದಲ್ಲಿರುವವರು ತಮ್ಮ ಸ್ವಾರ್ಥವನ್ನು ತೊರೆದು, ಈ ಕಹಿಯಾದ ಮತ್ತು ಅನಾವಶ್ಯಕ ಯುದ್ಧ-ಹಿಂಸೆಯಲ್ಲಿ ಸಿಲುಕಿರುವ ಎಲ್ಲರ ಹಿತವನ್ನು ಮುಂದಿಟ್ಟು ಕಾರ್ಯನಿರ್ವಹಿಸುವಂತೆ ಅವರ ಹೃದಯಗಳನ್ನು ಸ್ಪರ್ಶಿಸಲಿ ಎಂದು ಹಂಬಲಿಸಿ ಪ್ರಾರ್ಥಿಸುತ್ತೇವೆ.
ವಾಷಿಂಗ್ಟನ್ ಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ರಾಬರ್ಟ್ ಮೆಕ್‌ಎಲ್ರಾಯ್ ಅವರು ಪಾಲಕ ಸಂತರಾದ ಸಂತ ಪೇತ್ರರ ಪ್ರಧಾನ ದೇವಾಲಯದಲ್ಲಿ ಶನಿವಾರ ಸಂಜೆ ಅವರು ಶಾಂತಿಗಾಗಿ ಆಚರಿಸಿದ ಜಾಗರಣೆ ಬಲಿಪೂಜೆಯಲ್ಲಿ ಈ ಮಾತುಗಳನ್ನು ಹೇಳಿದರು. ಅದಕ್ಕೂ ಕೆಲ ಗಂಟೆಗಳ ಮೊದಲು, ರೋಮ್‌ನಲ್ಲಿ ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರು ವಿಶ್ವ ಶಾಂತಿಗಾಗಿ ಜಾಗರಣೆ ಪ್ರಾರ್ಥನೆಯನ್ನು ನಡೆಸಿದರು.
ತಮ್ಮ ಉಪದೇಶದಲ್ಲಿ, ಪೂಜ್ಯ ಜಗದ್ಗುರು ರಾಷ್ಟ್ರಗಳ ನಾಯಕರಿಗೆ ಆಯುಧಗಳನ್ನು ಬಿಟ್ಟು, ಸಂಭಾಷಣೆ ಮತ್ತು ಮಧ್ಯಸ್ಥಿಕೆಯ ಮೇಜಿನ ಬಳಿಗೆ ಕುಳಿತುಕೊಳ್ಳಲು ಮನವಿ ಮಾಡಿದರು; “ಈ ಮೇಜು ಶಸ್ತ್ರಸಜ್ಜುಗೊಳಿಸುವ ಯೋಜನೆಗಳು ರೂಪುಗೊಳ್ಳುವ ಮತ್ತು ಮಾರಕ ಕ್ರಮಗಳು ನಿರ್ಧಾರಗೊಳ್ಳುವ ಮೇಜಾಗಿರಬಾರದು” ಎಂದು ಹೇಳಿದರು. ಮುಂದುವರೆದು, “ಯುದ್ಧದ ತರ್ಕವನ್ನು ತಿರಸ್ಕರಿಸುವುದರಿಂದ ಅಪಾರ್ಥ ಮತ್ತು ತಿರಸ್ಕಾರ ಎದುರಾದರೂ ಕೂಡ, ಧರ್ಮಸಭೆ ಯಾವಾಗಲೂ ಶಾಂತಿಯ ಕರೆ ನೀಡುವಲ್ಲಿ ಮುನ್ನುಗ್ಗುತ್ತಲೇ ಇರುತ್ತದೆ”; ಮತ್ತು ಧರ್ಮಸಭೆ ಯಾವಾಗಲೂ “ಯಾವುದೇ ಮಾನವ ಅಧಿಕಾರಕ್ಕಿಂತ ದೇವರಿಗೆ ವಿಧೇಯತೆಯನ್ನು” ಬೋಧಿಸುತ್ತದೆ.
ಪೂಜ್ಯ ಜಗದ್ಗುರುಗಳ ಆಹ್ವಾನವನ್ನು ಸ್ವಾಗತಿಸಿದ ಪ್ರಧಾನ ಗುರು, ಶಾಂತಿಗಾಗಿ ಬಲಿಪೂಜೆಯನ್ನು ಆಚರಿಸಿ, ತಮ್ಮ ಉಪದೇಶವನ್ನು ಪ್ರಭು ತನ್ನ ಪುನರುತ್ಥಾನದ ಮೂಲಕ ನಮಗೆ ನೀಡುವ ಶಾಂತಿಯ ಮನನದಿಂದ ಪ್ರಾರಂಭಿಸಿದರು; ಅದು “ಈ ಭೂಮಿಯ ಮೇಲಿನ ನಮ್ಮ ಜೀವನಕ್ಕೆ ಅಗತ್ಯವಾದ ಏಕೈಕ ದಿಕ್ಸೂಚಿ”ಯಾಗಿದ್ದು, ಮತ್ತು ಪ್ರಭುವಿನ ಶಿಷ್ಯರಾಗಿ “ನಾವು ಬದುಕುತ್ತಿರುವ ಲೋಕದಲ್ಲಿ ಶಾಂತಿಯ ನಿರ್ಮಾತೃಗಳಾಗಬೇಕಾದ ಜವಾಬ್ದಾರಿ”ಯನ್ನೂ ನೀಡುತ್ತದೆ ಎಂದು ಹೇಳಿದರು.
ನಾವು ಮೊದಲನೆಯದಾಗಿ, ನಮ್ಮ ಹೃದಯಗಳಲ್ಲಿ ಮತ್ತು ಆತ್ಮಗಳಲ್ಲಿ, ನಮ್ಮ ಕುಟುಂಬಗಳಲ್ಲಿ, ಮತ್ತು ರಾಷ್ಟ್ರಗಳ ನಡುವೆ ಶಾಂತಿಯ ನಿರ್ಮಾತೃಗಳಾಗಲು ಕರೆಯಲ್ಪಟ್ಟಿದ್ದೇವೆ. ರಾಷ್ಟ್ರಗಳ ನಡುವೆ ಶಾಂತಿಯ ನಿರ್ಮಾತೃಗಳಾಗಿರುವ ಈ ಕೊನೆಯ ಜವಾಬ್ದಾರಿ—“ನಮ್ಮನ್ನು ನಾಗರಿಕತೆಗಳ ಅಂತ್ಯಕ್ಕೆ ಮತ್ತು ನಿಜವಾದ ಶಾಂತಿಯ ಬದಲು ಪ್ರಭುತ್ವದ ಹಂಬಲದ ಕಡೆಗೆ ಆಕರ್ಷಿಸುವ ಯುದ್ಧದ ಮಾರ್ಗವನ್ನು ತಿರಸ್ಕರಿಸುವುದಾಗಿದೆ”—ಇದೇ ಈಗ ನಾವು ಹೊರಬೇಕಾದ ಭಾರವಾದ ಹೊರೆಯಾಗಿದೆ.
ಈ ಅನೈತಿಕ ಯುದ್ಧದ ನಡುವೆ
“ನಾವು ಅನೈತಿಕ ಯುದ್ಧದ ಮಧ್ಯದಲ್ಲಿ ಇದ್ದೇವೆ. ನಾವು ಈ ಯುದ್ಧಕ್ಕೆ ಅವಶ್ಯಕತೆಯಿಂದಲ್ಲ, ಆಯ್ಕೆಯಿಂದ ಪ್ರವೇಶಿಸಿದ್ದೇವೆ. ಯುದ್ಧದ ಕಡೆಗೆ ತಿರುಗುವ ಮೊದಲು ಮಾತುಕತೆಯ ಮಾರ್ಗವನ್ನು ಪೂರ್ಣವಾಗಿ ಮತ್ತು ದೃಢವಾಗಿ ಅನುಸರಿಸಲು ನಾವು ವಿಫಲರಾಗಿದ್ದೇವೆ.” ನಮ್ಮಲ್ಲಿ ಸ್ಪಷ್ಟ ಉದ್ದೇಶವೇ ಇರಲಿಲ್ಲ; ಬದಲಿಗೆ ನಾವು ನಿರಪೇಕ್ಷ ಶರಣಾಗತಿಯಿಂದ ಆಡಳಿತ ಬದಲಾವಣೆವರೆಗೆ, ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ದುರ್ಬಲೀಕರಣದಿಂದ ಪರಮಾಣು ಸಾಮಗ್ರಿಗಳ ನಿರ್ಮೂಲನೆಯೆಡೆಗೆ ನಾವು ಧಾವಿಸುತ್ತಿದ್ದೇವೆ.
“ಮತ್ತು ನಮ್ಮ ದಾಳಿಗಳಿಂದ ಉಂಟಾಗಬಹುದಾದ ಜಾಗತಿಕ ವಿನಾಶದ ಸರಪಳಿಯನ್ನು ನಾವು ಕಣ್ಮುಚ್ಚಿದ್ದೇವೆ. ಇರಾನ್‌ನಾಚೆಗೆ ಯುದ್ಧ ವಿಸ್ತಾರವಾಗುವುದು, ವಿಶ್ವ ಆರ್ಥಿಕತೆಯ ಅಸ್ತವ್ಯಸ್ತತೆ, ಮತ್ತು ಜೀವಹಾನಿಗಳ ವಿಷಯದಲ್ಲಿ ಕುರುಡರಾಗಿದ್ದೇವೆ.”
“ಈ ಪ್ರತಿಯೊಂದು ನೀತಿ ವೈಫಲ್ಯವೂ, ಸಮಾನವಾಗಿ ನೈತಿಕ ವೈಫಲ್ಯವಾಗಿದ್ದು, ಕಥೋಲಿಕ ನ್ಯಾಯಯುತ ಯುದ್ಧ ತತ್ವಗಳ ಪ್ರಕಾರ ಈ ಯುದ್ಧದ ಆರಂಭವೂ ಅದರ ಯಾವುದೇ ಮುಂದುವರಿಕೆಯೂ ನೈತಿಕವಾಗಿ ಅಸಂಗತವಾಗುತ್ತದೆ.”
ಪೂಜ್ಯ ಜಗದ್ಗುರು ಒತ್ತಿಹೇಳಿದ ವಿಷಯವನ್ನು ಸ್ಮರಿಸಿದ ಅವರು —ಈ ಕ್ಷಣದಲ್ಲಿ ಕಥೋಲಿಕ ಉಪದೇಶ ಅನುಮತಿಸುವ ಏಕೈಕ ಮಾರ್ಗವೆಂದರೆ ವೈಮನಸ್ಸಿನ ಶಾಶ್ವತ ಅಂತ್ಯ ಮತ್ತು ಶಾಶ್ವತ ಶಾಂತಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ನಿರ್ಮಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳುವುದು.
ಪೂಜ್ಯ ಜಗದ್ಗುರು ಸೂಚಿಸಿದಂತೆ, ಪ್ರಧಾನ ಗುರು ಮೆಕ್‌ಎಲ್ರಾಯ್, ಹೃದಯಗಳ ಮತ್ತು ಆತ್ಮಗಳ ಪರಿವರ್ತನೆ ಮಾತ್ರವೇ ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ನಿಜವಾದ ಮಾರ್ಗವಾಗಿದ್ದು, ಅದು ನಮ್ಮ ಶಸ್ತ್ರಾಸ್ತ್ರಗಳನ್ನು ತೊರೆದು, ಮೊದಲು ಸೌಹಾರ್ದದಿಂದ ಆರಂಭವಾಗುವ ಪರಿವರ್ತನೆಯಾಗಿದೆ. ಆದ್ದರಿಂದ, ವಾಷಿಂಗ್ಟನ್ ಮಹಾಧರ್ಮಾಧ್ಯಕ್ಷರು ಪ್ರಾರ್ಥನೆಯಲ್ಲಿ ಅವರ ಈ ಪ್ರಾರ್ಥನಾ ಕೂಟದ ಮಹತ್ವವನ್ನು ಒತ್ತಿಹೇಳಿದರು.
ಶಾಂತಿ ಪ್ರತಿಪಾದಿಸಲೇಬೇಕು
“ಯುದ್ಧ ವಿರಾಮವು ಸ್ಥಿರವಾಗಿರಲಿ ಮತ್ತು ಅದು ಮಧ್ಯಪ್ರಾಚ್ಯದಲ್ಲಿ ಶಾಂತಿಯ ಉದಯಕ್ಕೆ ದೃಢವಾದ ಅಡಿಪಾಯವಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಇರಾನ್ ಕ್ರೂರ ಆಡಳಿತ ಸ್ವಭಾವ ಮತ್ತು ಅಮೇರಿಕಾ ಹಾಗೂ ಇಸ್ರಾಯೇಲ್ ದಾಳಿಗಳಿಂದ ಇರಾನ್ ಮೇಲೆ ಉಂಟಾದ ಭಾರೀ ನಾಶವನ್ನು ನಾವು ಅರಿತಿದ್ದೇವೆ.”
ಹೀಗಾಗಿ, ಪ್ರಧಾನ ಗುರು ರಾಬರ್ಟ್ ಮೆಕ್‌ಎಲ್ರಾಯ್ ಅವರು ನಾವು ಇನ್ನಷ್ಟು ಪ್ರಾರ್ಥಿಸಬೇಕು ಎಂದು ಹೇಳಿದರು. “ಶಾಂತಿಯ ಅರಸರಾದ ದೇವರನ್ನು ನಾವು ಬೇಡಿಕೊಳ್ಳುತ್ತೇವೆ—ಅಧಿಕಾರದ ಸ್ಥಾನದಲ್ಲಿರುವವರು ತಮ್ಮ ಸ್ವಾರ್ಥಗಳನ್ನು ಮೀರಿ, ಈ ಕಹಿಯಾದ ಮತ್ತು ಅನಾವಶ್ಯಕ ಸಂಘರ್ಷದಲ್ಲಿ ಸಿಲುಕಿರುವ ಎಲ್ಲರ ಹಿತವನ್ನು ಸಂಪೂರ್ಣವಾಗಿ ಗಮನಿಸುವಂತೆ ಅವರ ಮನಸ್ಸು ಮತ್ತು ಹೃದಯಗಳನ್ನು ತೆರೆಯಲಿ.”
ಅವರು ಅಲ್ಲಿ ಉಪಸ್ಥಿತರಿದ್ದವರಿಗೆ, “ಈ ರಾತ್ರಿ ಅವರು ದೇವಾಲಯವನ್ನು ತೊರೆಯುವಾಗ, ಅವರು ಪ್ರಾರ್ಥನೆಗೆ ಮಾತ್ರ ಸೀಮಿತವಾಗಿರಬಾರದು” ಎಂದು ಕರೆ ನೀಡಿದರು.
“ನಾವು ಅತ್ಯಂತ ಪ್ರೀತಿಸುವ ಈ ಪ್ರಜಾಪ್ರಭುತ್ವದ ನಾಗರಿಕರು ಮತ್ತು ವಿಶ್ವಾಸಿಗಳಾಗಿ, ನಮ್ಮ ಪ್ರತಿನಿಧಿಗಳು ಮತ್ತು ನಾಯಕರೊಂದಿಗೆ ಶಾಂತಿಗಾಗಿ ನಿಲ್ಲಬೇಕು. ನಾವು ಪ್ರಾರ್ಥಿಸಿದ್ದೇವೆ ಎಂದು ಹೇಳುವುದು ಮಾತ್ರ ಸಾಕಾಗುವುದಿಲ್ಲ. ನಾವು ಕ್ರಿಯೆಯಲ್ಲಿಯೂ ತೊಡಗಬೇಕು. ಏಕೆಂದರೆ, ಒಂದು ಅಥವಾ ಎರಡೂ ಪಕ್ಷಗಳ ಹಠದ ಕಾರಣದಿಂದ ಮಾತುಕತೆಗಳು ವಿಫಲವಾಗುವ ಸಾಧ್ಯತೆ ಇದೆ, ಮತ್ತು ನಮ್ಮ ಅಧ್ಯಕ್ಷರು ಈ ಅನೈತಿಕ ಯುದ್ಧಕ್ಕೆ ಮತ್ತೆ ಪ್ರವೇಶಿಸಬಹುದು.”
“ಆ ಗಂಭೀರ ಕ್ಷಣದಲ್ಲಿ, ನಮ್ಮ ಹೆಸರಿನಲ್ಲಿ ಅಲ್ಲ. ಈ ಕ್ಷಣದಲ್ಲಿ ಅಲ್ಲ. ನಮ್ಮ ದೇಶದೊಂದಿಗೆ ಅಲ್ಲ ನಾವು ಸ್ಪಷ್ಟವಾಗಿ ಮತ್ತು ಏಕಸ್ವರದಲ್ಲಿ ಲೋಕದಲ್ಲಿ ಶಾಂತಿಯ ನಿರ್ಮಾತೃಗಳಾಗಲು ಕರೆಯಲ್ಪಟ್ಟ ಯೇಸು ಕ್ರಿಸ್ತನ ಶಿಷ್ಯರಾಗಿ: ಹಿಂಸೆಗೆ 'ಇಲ್ಲ' ಎಂದು ಉತ್ತರಿಸಬೇಕು” ಎಂದು ಪ್ರಧಾನ ಗುರು ರಾಬರ್ಟ್ ಮೆಕ್‌ಎಲ್ರಾಯ್ ಅವರು ಕೊನೆಗೊಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).