ಅನ್ನಾಬಾದಲ್ಲಿ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅನ್ನಾಬಾದಲ್ಲಿ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ  (@Vatican Media)

ಅನ್ನಾಬಾದ ಸಂತ ಆಗಸ್ಟಿನ್ ಬಸಿಲಿಕಾದ ರೆಕ್ಟರ್: ‘ಪೂಜ್ಯ ಜಗದ್ಗುರು ಲಿಯೋ ಭೇಟಿ ಕುರಿತು ಅಲ್ಜೀರಿಯಾದ ಜನರಿಗೆ ಅಪಾರ ಸಂತೋಷವಿದೆ’

ಅನ್ನಾಬಾದ ಸಂತ ಆಗಸ್ಟಿನ್ ಬಸಿಲಿಕಾದ ರೆಕ್ಟರ್ ವಂ. ಫ್ರೆಡ್ ವೆಕೆಸಾ ಅವರು, ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರನ್ನು ಸ್ವಾಗತಿಸಲು ಸ್ಥಳೀಯ ಸಮುದಾಯದಲ್ಲಿ ಅಪಾರ ಸಂತೋಷವಿದೆ ಎಂದು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ. ಕಥೋಲಿಕರು ಮಾತ್ರವಲ್ಲದೆ ಅವರ ಭೇಟಿ ಅಲ್ಜೀರಿಯಾದ ಎಲ್ಲಾ ಜನರಿಗೆ-ಕ್ರೈಸ್ತರಲ್ಲದವರಿಗೂ ಸಂತೋಷದ ವಿಷಯ ಎಂದು ಅವರು ಹೇಳಿದ್ದಾರೆ.

ಲೇಖಕರು: ಒಲಿವಿಯರ್ ಬೊನ್ನೆಲ್ ಮತ್ತು ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

“ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಭೇಟಿ ಕ್ರೈಸ್ತರಿಗೆ ಮಾತ್ರವಲ್ಲ, ಅಲ್ಜೀರಿಯಾದ ಜನರಿಗೂ ಮಹತ್ವದ್ದಾಗಿದೆ. ವಿಶೇಷವಾಗಿ ಸಂತ ಆಗಸ್ಟಿನ್ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿಧನರಾದ ಅನ್ನಾಬಾದಲ್ಲಿ ಜನರು ಅತ್ಯಂತ ಉತ್ಸಾಹಭರಿತರಾಗಿದ್ದಾರೆ.”

ಅನ್ನಾಬಾದಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯ ಒಲಿವಿಯರ್ ಬೊನ್ನೆಲ್ ಅವರೊಂದಿಗೆ ಮಾತನಾಡಿದ ವಂ. ಫ್ರೆಡ್ ವೆಕೆಸಾ, ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಅಪೋಸ್ತೋಲಿಕ ಪ್ರವಾಸದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಪೂಜ್ಯ ಜಗದ್ಗುರು ಲಿಯೋ ಅವರ ಈ ಭೇಟಿ ಅಲ್ಜೀರಿಯಾದಿಗೆ ನಡೆಯುತ್ತಿರುವ ಪ್ರಪ್ರಥಮ ಜಗದ್ಗುರುಗಳ ಭೇಟಿಯಾಗಿದೆ ಭೇಟಿ. “ಇಲ್ಲಿನ ವಾತಾವರಣ ಶಾಂತವಾಗಿದೆ, ನಾವು ಸಂತೋಷದಲ್ಲಿದ್ದೇವೆ. ಪೂಜ್ಯ ಜಗದ್ಗುರು ಅವರ ಭೇಟಿ ಕ್ರೈಸ್ತರಿಗೆ ಮಾತ್ರವಲ್ಲ, ಅಲ್ಜೀರಿಯಾದ ವಿಶೇಷವಾಗಿ ಅನ್ನಾಬಾದ ಜನರಿಗೆ ಸಂಬಂಧಿಸಿದೆ” ಎಂದು ವಂ. ವೆಕೆಸಾ ಹೇಳಿದರು.

ಹಿಂದಿನ ವರ್ಷ ಮೇ 8ರಂದು ಆಗಸ್ಟಿನಿಯನ್ ಸಭೆಗೆ ಸೇರಿದವರಾಗಿ ಪೂಜ್ಯ ಜಗದ್ಗುರು ಲಿಯೋ ಆಯ್ಕೆಯಾದ ಸಂದರ್ಭವನ್ನು ಅವರು ಉಲ್ಲೇಖಿಸಿದರು.“ಇದು ಇಲ್ಲಿ ಎಲ್ಲರಿಗೂ ಸಂತೋಷದ ವಿಷಯವಾಗಿತ್ತು. ಬಹುಮುಖ್ಯವಾಗಿ ಮುಸ್ಲಿಂ ಸಹೋದರರು ಮತ್ತು ಸಹೋದರಿಯರು ನಮಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದರು. ಕಾರಣ, ಪೂಜ್ಯ ಜಗದ್ಗುರು ಆಗಸ್ಟಿನ್ ಅವರ ಪುತ್ರರಾಗಿದ್ದಾರೆ ಎಂಬುದೇ.”

ಸಂತ ಆಗಸ್ಟಿನ್ ಅವರೇ ಅಲ್ಜೀರಿಯಾ ಜನರನ್ನು ಪೂಜ್ಯ ಜಗದ್ಗುರುವರೊಂದಿಗೆ ಸಂಪರ್ಕಿಸುವ ಪ್ರಮುಖ ಕಾರಣ ಎಂದು ಬಸಿಲಿಕಾದ ರೆಕ್ಟರ್ ಹೇಳಿದರು.

 “ಏಕೆಂದರೆ ಸಂತ ಆಗಸ್ಟಿನ್ ಇಲ್ಲೇ ಜನಿಸಿದರು, ಇಲ್ಲೇ ಧರ್ಮಾಧ್ಯಕ್ಷರಾಗಿದ್ದರು, ಮತ್ತು ಇಲ್ಲಿಯೇ ನಿಧನರಾದರು. ಆದ್ದರಿಂದ ಸಂತ ಆಗಸ್ಟಿನ್ ಅಲ್ಜೀರಿಯಾ ಜನರ ಇತಿಹಾಸದ ಭಾಗವಾಗಿದ್ದಾರೆ. ಅದೇ ಅವರಿಗೆ ಈ ಸಂದರ್ಭವನ್ನು ವಿಶೇಷವಾಗಿಸಿದೆ ಮತ್ತು ಅವರನ್ನು ಭೇಟಿ ಮಾಡಲು ಉತ್ಸಾಹವನ್ನುಂಟುಮಾಡಿದೆ.”

ಜಗದ್ಗುರುಗಳ ಈ  ಭೇಟಿಯನ್ನು ರಾಷ್ಟ್ರೀಯ ಘಟನೆಯಾಗಿ ವಿವರಿಸಿದ ವಂ. ವೆಕೆಸಾ, “ಇದು ಅಲ್ಪಸಂಖ್ಯಾತರಾದ ಕ್ರೈಸ್ತರಿಗೆ ಮಾತ್ರ ಸೀಮಿತವಲ್ಲ; ಇದು ಎಲ್ಲಾ ಅಲ್ಜೀರಿಯಾ ಜನರಿಗೆ ಸಂಬಂಧಿಸಿದ ರಾಷ್ಟ್ರೀಯ ಘಟನೆ” ಎಂದು ಹೇಳಿದರು.

“ಸರ್ಕಾರವು ಅವರನ್ನು ಪೂಜ್ಯ ಜಗದ್ಗುರುವಾಗಿ ಆಹ್ವಾನಿಸಿದೆ, ಆದರೆ ನಾವು ಅವರನ್ನು ಸಹೋದರನಾಗಿ ಸ್ವಾಗತಿಸಲು ಬಯಸುತ್ತೇವೆ. ಅವರು ಪೂಜ್ಯ ಜಗದ್ಗುರು ಎಂಬುದನ್ನು ನಾವು ಒಪ್ಪುತ್ತೇವೆ, ಆದರೆ ಅವರು ಆಗಸ್ಟಿನಿಯನ್. ಒಮ್ಮೆ ಆಗಸ್ಟಿನಿಯನ್ ಆದ ಮೇಲೆ, ಎಂದಿಗೂ ಆಗಸ್ಟಿನಿಯನ್ ಆಗಿಯೇ ಇರುತ್ತಾರೆ,” ಎಂದು ಅವರು ಹೇಳಿದರು.

ಕೊನೆಯಲ್ಲಿ, ಸಂತ ಆಗಸ್ಟಿನ್ ಬಸಿಲಿಕಾದ ರೆಕ್ಟರ್ ಅವರು, ಪೂಜ್ಯ ಜಗದ್ಗುರು ಲಿಯೋ ಅವರು ವಿಚಾರಗಳಲ್ಲಿ ವಿಶೇಷವಾಗಿ ಶಾಂತಿಯ ವಿಷಯದಲ್ಲಿ ಆಗಸ್ಟಿನಿಯನ್ ಪರಂಪರೆಯಲ್ಲಿಯೇ ಇರುವುದಾಗಿ ವಿವರಿಸಿದರು.

“ಅವರ ಭೇಟಿ ಅಂತರಧರ್ಮ ಸಂವಾದದ ಭಾಗವಾಗಿದೆ, ಶಾಂತಿಯ ಸಂದೇಶವನ್ನು ಮುಂದುವರಿಸಲು. ತಮ್ಮ ಮಾತು ಮತ್ತು ಕ್ರಿಯೆಗಳ ಮೂಲಕ ಅವರು ಶಾಂತಿಯನ್ನು ಉತ್ತೇಜಿಸುತ್ತಿದ್ದಾರೆ; ಇದು ಸಂತ ಆಗಸ್ಟಿನ್ ಅವರ ಹೆಜ್ಜೆಗುರುತುಗಳನ್ನು ಅನುಸರಿಸುವುದಾಗಿದೆ” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

14 ಏಪ್ರಿಲ್ 2026, 20:18