ಹುಡುಕಿ

ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ 

ಪೂರ್ವ ಧರ್ಮಸಭೆಗಳ ಸುದ್ದಿ – 27 ಮಾರ್ಚ್ 2026

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿಗಳಲ್ಲಿ, ಲೌವ್ರೆ ಡಿ ಓರಿಯಂಟ್ ಸಂಸ್ಥೆಯ ಸಹಯೋಗದಲ್ಲಿ ಸಿದ್ಧಗೊಂಡ ವರದಿಯಲ್ಲಿ, ಮಧ್ಯಪ್ರಾಚ್ಯದ ಮುಂದುವರಿಯುತ್ತಿರುವ ಯುದ್ಧದ ಹಿನ್ನೆಲೆಗಳಲ್ಲಿ ಪವಿತ್ರ ಭೂಮಿಯಲ್ಲಿ ನಡೆಯಲಿರುವ ಪುನರುತ್ಥಾನ ಮಹೋತ್ಸವದ ಆಚರಣೆಗಳು ಹೇಗೆ ಪರಿಣಾಮಕ್ಕೊಳಗಾಗುತ್ತಿವೆ ಎಂಬುದನ್ನು ಪರಿಶೀಲಿಸಲಾಗಿದೆ.

ಜೆರುಸಲೇಮಿನ ಕ್ರೈಸ್ತರು ಈ ವರ್ಷ ಪ್ರಸಿದ್ಧವಾದ ಆಲಿವ್ ಬೆಟ್ಟದ ಗರಿಗಳ ಭಾನುವಾರದ ಮೆರವಣಿಗೆಯಿಂದ ವಂಚಿತರಾಗಲಿದ್ದಾರೆ.

ಈ ವಿಷಯವನ್ನು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರು ಮಾರ್ಚ್ 23ರಂದು ಪ್ರಕಟಿಸಿದ ಸಂದೇಶದಲ್ಲಿ ಘೋಷಿಸಿದರು.

ಈ ಪರಿಸ್ಥಿತಿ ಹೊಸದಾಗಿಲ್ಲ; ಮುಂದುವರಿಯುತ್ತಿರುವ ಸಂಘರ್ಷ ಮತ್ತು ಬಾಂಬ್ ದಾಳಿಗಳ ಭೀತಿಯಿಂದ, ಸ್ಥಳೀಯ ಸಮುದಾಯವು ಸಾಮಾನ್ಯವಾಗಿ ಆಚರಿಸುವ ತಪಸ್ಸು ಕಾಲದ ಅವಧಿಯ ಆಚರಣೆಗಳನ್ನು ಅನುಸರಿಸಲು ಸಾಧ್ಯವಾಗಿಲ್ಲ.

ಈ ಲೆಂಟ್ ಆಚರಣೆಗಳಲ್ಲಿ ಪವಿತ್ರ ಸಮಾಧಿ ದೇವಾಲಯ ಮತ್ತು ಯೇಸುವಿನ ಪಾಡುಗಳ ಪವಿತ್ರ ಸ್ಥಳಗಳಲ್ಲಿ ನಡೆಯುವ ಆಚರಣೆಗಳು ಪ್ರಮುಖವಾಗಿರುತ್ತವೆ.

ಫೆಬ್ರವರಿ 28ರಿಂದ, ಯಾತ್ರಿಕರ ಗುಂಪುಗಳನ್ನು ತಡೆಯುವ ಉದ್ದೇಶದಿಂದ ಹಲವು ಪ್ರಮುಖ ಸ್ಥಳಗಳನ್ನು ಮುಚ್ಚಲಾಗಿದೆ.

ಇವುಗಳಲ್ಲಿ ಪವಿತ್ರ ಸಮಾಧಿ ದೇವಾಲಯ, ದೇವಾಲಯ ಬೆಟ್ಟ (ಟೆಂಪಲ್ ಮೌಂಟ್) ಮತ್ತು ಪಶ್ಚಿಮ ಗೋಡೆ ಸೇರಿವೆ.

ಇದರಿಂದ ಉಂಟಾದ ಮತ್ತೊಂದು ಪರಿಣಾಮವಾಗಿ, ಪವಿತ್ರ ಗುರುವಾರದಂದು ನಡೆಯಬೇಕಿದ್ದ ಪವಿತ್ರ ಅಭಿಷೇಕ ಬಲಿಯನ್ನು ಮುಂದೂಡಲಾಗಿದೆ.

ಸಾಧ್ಯವಾದರೆ, ಇದನ್ನು ಪುನರುತ್ಥಾನ ಮಹೋತ್ಸವದ ಅವಧಿ ಮುಗಿಯುವ ಮೊದಲು ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಈ ಎಲ್ಲಾ ನಿರ್ಬಂಧಗಳ ನಡುವೆಯೂ, ಧರ್ಮಪ್ರಾಂತ್ಯದ   ದೇವಾಲಯಗಳು ತೆರೆಯಲ್ಪಟ್ಟಿವೆ.

ವಿಶ್ವಾಸಿಗಳನ್ನು ವಿಶೇಷವಾಗಿ ಮಾರ್ಚ್ 28ರ ಶನಿವಾರ ಶಾಂತಿಯ ವರವನ್ನು ಬೇಡುವ ಉದ್ದೇಶದಿಂದ ಜಪಮಾಲೆ ಪ್ರಾರ್ಥನೆಯಲ್ಲಿ ಒಂದಾಗಲು ಆಹ್ವಾನಿಸಲಾಗಿದೆ.

ಪ್ರಧಾನ ಗುರುಗಳು , ಈ ಪರಿಸ್ಥಿತಿಯಲ್ಲಿ ಆಚರಣೆಗಳನ್ನು ವಿಭಿನ್ನ ರೀತಿಯಲ್ಲಿ ಅನುಭವಿಸಲು—ಕುಟುಂಬದೊಂದಿಗೆ ಅಥವಾ ಸಮುದಾಯದಲ್ಲಿ—ಧ್ಯಾನ ಮತ್ತು ಭರವಸೆಯ ಮನೋಭಾವದೊಂದಿಗೆ ಪಾಲ್ಗೊಳ್ಳಲು ಪ್ರೇರೇಪಿಸಿದ್ದಾರೆ.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

27 ಮಾರ್ಚ್ 2026, 18:41