ಹುಡುಕಿ

FILES-US-RUSSIA-NUCLEAR-HEALTH FILES-US-RUSSIA-NUCLEAR-HEALTH  (AFP or licensors)

ಅಮೆರಿಕಾ ಹಾಗೂ ಜಪಾನ್‌ನ ಧರ್ಮಾಧ್ಯಕ್ಷರಿಂದ ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಪುನರ್‌ಬದ್ಧತೆಯ ಕರೆ

ಅಣ್ವಸ್ತ್ರ ನಿಷೇಧ ಒಪ್ಪಂದದ ಐದನೇ ವಾರ್ಷಿಕೋತ್ಸವದ ಅಂಗವಾಗಿ, ಜಪಾನ್ ಮತ್ತು ಅಮೆರಿಕದ ಹಲವು ಧರ್ಮಾಧ್ಯಕ್ಷರು ಅಣ್ವಸ್ತ್ರರಹಿತ ಜಗತ್ತಿನತ್ತ ರಾಷ್ಟ್ರಗಳು ಮತ್ತಷ್ಟು ದೃಢ ಹೆಜ್ಜೆ ಇಡಬೇಕೆಂದು ಆಗ್ರಹಿಸಿದ್ದಾರೆ ಲೇಖನ:ಜೆನ್ನಿ ಕ್ರಾಸ್ಕಾ

ಅಣ್ವಸ್ತ್ರ ನಿಷೇಧ ಒಪ್ಪಂದ (TPNW) ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಮೆರಿಕಾ ಮತ್ತು ಜಪಾನ್‌ನ ಕಥೋಲಿಕ ಧರ್ಮಾಧ್ಯಕ್ಷರು ವಿಶ್ವ ನಾಯಕರಿಗೆ ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ದಿಕ್ಕಿನಲ್ಲಿ ಕಾಯಂ ಮತ್ತು ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

“ಅಣ್ವಸ್ತ್ರರಹಿತ ಜಗತ್ತು” ಎಂಬ ಗುರಿಗೆ ಕಾರ್ಯನಿರ್ವಹಿಸುವ ಅಣ್ವಸ್ತ್ರರಹಿತ ಜಗತ್ತಿಗೆ ಪಾಲುದಾರಿಕೆ (ಪಾರ್ಟ್ನರ್‌ಶಿಪ್ ಫಾರ್ ಎ ವರ್ಲ್ಡ್ ವಿತೌಟ್ ನ್ಯೂಕ್ಲಿಯರ್ ವೆಪನ್ಸ್) ಎಂಬ ಒಕ್ಕೂಟವು ಜನವರಿ 21ರಂದು ಬಿಡುಗಡೆ ಮಾಡಿದ  ಸಂಯುಕ್ತ ಹೇಳಿಕೆಯಲ್ಲಿ, ಜಾಗತಿಕ ಅಸ್ಥಿರತೆ ಹಾಗೂ ಮರುಕಳಿಸುತ್ತಿರುವ ಅಣುಬೆದರಿಕೆಗಳ ನಡುವೆ ನಿಶಸ್ತ್ರೀಕರಣದ ನೈತಿಕ ತುರ್ತುಪಡೆ ಇನ್ನಷ್ಟು ಗಟ್ಟಿಯಾಗಿರುವುದು ಎಂದು ಎಚ್ಚರಿಸಲಾಗಿದೆ.

ಈ ವಾರ್ಷಿಕೋತ್ಸವಕ್ಕೆ ಕೆಲವೇ ತಿಂಗಳುಗಳ ಮೊದಲು, 2025ರ ಆಗಸ್ಟ್‌ನಲ್ಲಿ—ಅಮೆರಿಕದ ಹಲವು ಧರ್ಮಾಧ್ಯಕ್ಷರು ಹಿರೋಷಿಮಾ ಮತ್ತು ನಾಗಸಾಕಿ ನಗರಗಳಿಗೆ ಭೇಟಿ ನೀಡಿ, ಅಣುಬಾಂಬ್ ದಾಳಿಗಳ 80ನೇ ವಾರ್ಷಿಕೋತ್ಸವವನ್ನು ಸ್ಮರಿಸಿದ್ದರು.

ಅವರ ಈ ತೀರ್ಥಯಾತ್ರೆಯಲ್ಲಿ ಪ್ರಾರ್ಥನೆ, ದಾಳಿಯಿಂದ ಬದುಕುಳಿದವರೊಂದಿಗೆ ಸಂವಾದ, ಹಾಗೂ ಜಪಾನ್‌ನ ಧರ್ಮಾಧ್ಯಕ್ಷರೊಂದಿಗೆ ಸೇರಿ ಶಾಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ನಡೆದಿದ್ದು—ಅಣ್ವಸ್ತ್ರರಹಿತ ಲೋಕಕ್ಕಾಗಿ ತಮ್ಮ ಸಂಯುಕ್ತ ಬದ್ಧತೆಯನ್ನು ಮತ್ತಷ್ಟು ಗಾಢಗೊಳಿಸಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಥೋಲಿಕ ಬೋಧನೆಯಲ್ಲಿ ನೆಲೆಯಾದ ಕರೆ

ಧರ್ಮಾಧ್ಯಕ್ಷರು ನೆನಪಿಸಿರುವಂತೆ, 2017ರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ನಿಷೇಧದ ಒಪ್ಪಂದಕ್ಕೆ (TPNW) ಮೊದಲ ರಾಷ್ಟ್ರ-ರಾಜ್ಯವಾಗಿ ಸಹಿ ಹಾಕಿ ಅನುಮೋದನೆ ನೀಡಿದ್ದು ವ್ಯಾಟಿಕನ್. ಇದು ಪವಿತ್ರ ಪೀಠವು ಅಣ್ವಸ್ತ್ರಗಳ ಸಂಪೂರ್ಣ ನಿರ್ಮೂಲನೆಗೆ ಹೊಂದಿರುವ ಅಚಲ ಬದ್ಧತೆಯ ಪ್ರತೀಕ ಎಂದು ಅವರು ವಿವರಿಸಿದ್ದಾರೆ.

ಇದಕ್ಕೆ ವಿರುದ್ಧವಾಗಿ, 1970ರ ಪರಮಾಣು ಪ್ರಸರಣ ರಹಿತ ಒಪ್ಪಂದ  (NPT) ಅಡಿಯಲ್ಲಿ ಅಣ್ವಸ್ತ್ರಧಾರಕ ರಾಷ್ಟ್ರಗಳು ನಿಶಸ್ತ್ರೀಕರಣಕ್ಕಾಗಿ “ಸದ್ಭಾವನೆಯ ಮಾತುಕತೆ” ನಡೆಸಬೇಕೆಂಬ ಬಾಧ್ಯತೆ ಹೊಂದಿದ್ದರೂ, ಆ ಕರ್ತವ್ಯವನ್ನು ಪಾಲಿಸಲಾಗುತ್ತಿಲ್ಲ ಎಂದು ಹೇಳಿಕೆಯಲ್ಲಿ ತೀವ್ರ ವಿಷಾದ ವ್ಯಕ್ತವಾಗಿದೆ.

“ಅಣ್ವಸ್ತ್ರ ಶಕ್ತಿಗಳು ತಮ್ಮ ಬಹುಕಾಲದ ಬಾಧ್ಯತೆಗಳನ್ನು ಎಂದಿಗೂ ಗೌರವಿಸಿಲ್ಲ” ಎಂದು ಹೇಳಿಕೆ ಸ್ಪಷ್ಟವಾಗಿ ಟೀಕಿಸುತ್ತದೆ. ಅಸ್ತ್ರಸಂಗ್ರಹ ಕಡಿಮೆ ಮಾಡುವ ಬದಲು, ಅಣ್ವಸ್ತ್ರ ರಾಷ್ಟ್ರಗಳು “ಅಣ್ವಸ್ತ್ರಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ” ಉದ್ದೇಶದ ಭಾರೀ ಆಧುನೀಕರಣ ಯೋಜನೆಗಳಲ್ಲಿ ತೊಡಗಿರುವುದನ್ನು ಧರ್ಮಾಧ್ಯಕ್ಷರು ಖಂಡಿಸಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳ ನಿಷೇಧದ (TPNW) ಒಪ್ಪಂದದ ಕಾನೂನುಬದ್ಧ ಬಲ ಅನುಮೋದನೆ ನೀಡಿದ ರಾಷ್ಟ್ರಗಳಿಗೆ ಮಾತ್ರ ಅನ್ವಯಿಸಿದರೂ, ಅದರ ನೈತಿಕ ಬಲ ವಿಶ್ವವ್ಯಾಪಿ ಎಂದು ಅವರು ಒತ್ತಿ ಹೇಳಿದ್ದಾರೆ.

ಈಗಾಗಲೇ ಜಗತ್ತಿನ ಬಹುಪಾಲು ರಾಷ್ಟ್ರಗಳು ಈ ಒಪ್ಪಂದವನ್ನು ಬೆಂಬಲಿಸಿರುವುದರಿಂದ, ಅಣ್ವಸ್ತ್ರಧಾರಕ ರಾಷ್ಟ್ರಗಳ ಮೇಲೆ ದಿಕ್ಕುಬದಲಾವಣೆಗಾಗಿ ನೈತಿಕ ಒತ್ತಡ ಹೆಚ್ಚಾಗಲಿದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಅಪಾಯವನ್ನು ಹೆಚ್ಚಿಸುತ್ತಿರುವ ಜಾಗತಿಕ ಉದ್ವಿಗ್ನತೆಗಳು

ಉಕ್ರೇನ್ ಯುದ್ಧದ ಹಿನ್ನೆಲೆದಲ್ಲಿ ರಷ್ಯಾದ ಅಣುಬೆದರಿಕೆಗಳು, ಹಾಗೂ ಮಧ್ಯಪ್ರಾಚ್ಯದ ಹೆಚ್ಚುತ್ತಿರುವ ಉದ್ವಿಗ್ನತೆಗಳು—ಜಗತ್ತು ಇನ್ನೂ ಅಣು ವಿಪತ್ತಿನ ಅಂಚಿನಲ್ಲಿಯೇ ಇರುವುದಕ್ಕೆ ಸಾಕ್ಷಿ ಎಂದು ಹೇಳಿಕೆಯಲ್ಲಿ ಎತ್ತಿ ತೋರಿಸಲಾಗಿದೆ.

ಈ ವಾಸ್ತವಗಳು ತಕ್ಷಣದ ಕ್ರಮದ ಅಗತ್ಯವನ್ನು ಮತ್ತಷ್ಟು ಗಂಭೀರಗೊಳಿಸುತ್ತವೆ ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ.

“ಅಣ್ವಸ್ತ್ರ ಭೀತಿ 80 ವರ್ಷಗಳಿಂದ ಮುಂದುವರಿಯುತ್ತಿರುವುದು ಅತಿಯಾದುದು; ಹಿರೋಷಿಮಾ ಮತ್ತು ನಾಗಸಾಕಿಯ ಅಣುದಾಳಿ ಸಂಗ್ರಹಾಲಯಗಳಲ್ಲಿ ಉಳಿಸಿರುವ ಸಾಕ್ಷ್ಯಗಳು, ಅಣುಯುದ್ಧವು ಮಾನವತೆಗೆ ತರುತ್ತಾದ ಅಪಾರ ಬೆಲೆ ಏನೆಂಬುದನ್ನು ಸ್ಪಷ್ಟವಾಗಿ ನೆನಪಿಸುತ್ತದೆ ಎಂದು ಅವರು ಸೂಚಿಸಿದ್ದಾರೆ.

ಹಿರೋಷಿಮಾದಿಂದ ಬಂದ ಗಂಭೀರ ಧ್ವನಿ

2025ರ ಆಗಸ್ಟ್‌ನಲ್ಲಿ ಜಪಾನ್‌ಗೆ ನಡೆದ ತೀರ್ಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಾಷಿಂಗ್ಟನ್ ಡಿ.ಸಿ. ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ರಾಬರ್ಟ್ ಮೆಕ್‌ಎಲ್ರಾಯ್ ಹಿರೋಷಿಮಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ನೀಡಿದ ಸಂದೇಶವನ್ನು ಹೇಳಿಕೆ ಉಲ್ಲೇಖಿಸಿದೆ.

“ಅಣ್ವಸ್ತ್ರಗಳ ವಿಸ್ತರಣೆ ಮತ್ತು ಅಪಾಯಕಾರಿ ಧೋರಣೆಗಳ ನಡುವೆ ಬದುಕುವುದನ್ನು ನಾವು ಒಪ್ಪುವುದಿಲ್ಲ. ವಿರೋಧಿಸುತ್ತೇವೆ, ಸಂಘಟಿತರಾಗುತ್ತೇವೆ, ಪ್ರಾರ್ಥಿಸುತ್ತೇವೆ—ಜಗತ್ತಿನ ಅಣ್ವಸ್ತ್ರ ಸಂಗ್ರಹ ಸಂಪೂರ್ಣ ನಾಶವಾಗುವವರೆಗೆ ನಮ್ಮ ಪ್ರಯತ್ನ ನಿಲ್ಲುವುದಿಲ್ಲ,” ಎಂದು ಅವರು ಘೋಷಿಸಿದ್ದರು.

ಈ ಮಾತುಗಳು ಧರ್ಮಾಧ್ಯಕ್ಷರ ಮತ್ತು ಧರ್ಮಸಭೆಯ ನಡುವಿನ ನಾಯಕರ ನಡುವಿನ ನಿರಂತರ ಸಹಕಾರ ಮತ್ತು ಶಾಂತಿ ಬದ್ಧತೆಯನ್ನು ಸ್ಪಷ್ಟಪಡಿಸುತ್ತವೆ

ಶಾಂತಿಗಾಗಿ ಪಾಲುದಾರಿಕೆ

“ಅಣ್ವಸ್ತ್ರರಹಿತ ಜಗತ್ತು” ಎಂಬ ಗುರಿಗಾಗಿ ಕೆಲಸ ಮಾಡುವ ಈ ಪಾಲುದಾರಿಕೆ ಒಕ್ಕೂಟದಲ್ಲಿ—ಸಾಂಟಾ ಫೆ ಮಹಾಧರ್ಮಕ್ಷೇತ್ರ, ಸಿಯಾಟಲ್ ಮಹಾಧರ್ಮಕ್ಷೇತ್ರ, ನಾಗಸಾಕಿ ಮಹಾಧರ್ಮಕ್ಷೇತ್ರ, ಹಿರೋಷಿಮಾ ಧರ್ಮಕ್ಷೇತ್ರ ಸೇರಿದಂತೆ ಹಲವು ಮಹಾಧರ್ಮಕ್ಷೇತ್ರಗಳು ಸೇರಿವೆ.

ಶಾಂತಿ ಮತ್ತು ನಿಶಸ್ತ್ರೀಕರಣ ಕುರಿತು ಕಥೋಲಿಕ ಬೋಧನೆಯನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುವುದೇ ಇದರ ಉದ್ದೇಶ.

ಈ ಸಹಕಾರವು ಧರ್ಮಸಭೆಯೊಳಗೆ  ಅಣ್ವಸ್ತ್ರ ನಿಶಸ್ತ್ರೀಕರಣವನ್ನು ಆಧ್ಯಾತ್ಮಿಕ-ನೈತಿಕ ಆದ್ಯತೆಯಾಗಿ ಎತ್ತಿ ಹಿಡಿಯುವ ಬೆಳೆಯುತ್ತಿರುವ ಚಳವಳಿಯನ್ನೇ ಪ್ರತಿಬಿಂಬಿಸುತ್ತದೆ ಖಂಡಗಳನ್ನೂ ಸಂಸ್ಕೃತಿಗಳನ್ನೂ ಮೀರಿ ಇದು ಸೇತುವೆ ಕಟ್ಟುತ್ತದೆ ಎಂದು ಹೇಳಿಕೆ ಸೂಚಿಸುತ್ತದೆ.

ಶಾಂತಿಯ ಬೆಳಕಿನತ್ತ ಒಂದು ಹೆಜ್ಜೆ

ಧರ್ಮಾಧ್ಯಕ್ಷರು ಅಣ್ವಸ್ತ್ರ ನಿಷೇಧ ಒಪ್ಪಂದವನ್ನು(TPNW) “ಶಾಂತಿಯ ಬೆಳಕಿನತ್ತ ತೆಗೆದುಕೊಳ್ಳಲಾದ ಮಹತ್ತರ ಹೆಜ್ಜೆ” ಎಂದು ವರ್ಣಿಸಿದ್ದಾರೆ. ವಿಶ್ವ ನಾಯಕರು ನಿಶಸ್ತ್ರೀಕರಣದತ್ತ ಮಾಪನಗೊಳ್ಳಬಹುದಾದ ಪ್ರಗತಿಯನ್ನು ತೋರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ಅಣ್ವಸ್ತ್ರಧಾರಕ ರಾಷ್ಟ್ರಗಳು ಈಗಾದರೂ ದೃಶ್ಯಮಾನವಾದ, ಸ್ಪಷ್ಟವಾದ ಪ್ರಗತಿಯನ್ನು ಆರಂಭಿಸಬೇಕಾದ ಕಾಲ ಬಹಳ ಹಿಂದೆಯೇ ಬಂದಿದೆ,” ಎಂದು ಅವರು ಕೊನೆಯಲ್ಲಿ ಕಟ್ಟುನಿಟ್ಟಾಗಿ ಒತ್ತಿ ಹೇಳಿದ್ದಾರೆ.

 

22 ಜನವರಿ 2026, 11:09