ಕೀನ್ಯಾ: ‘ಮದ್ಯಪಾನಿಗಳಿಗೆ ಸ್ನೇಹಿತರು’ ಎಂಬ ಹೆಸರಿನಲ್ಲಿ ಧಾರ್ಮಿಕ ಸಹೋದರಿಯ
ಹೋಲಿ ಇನ್ನೋಸೆಂಟ್ಸ್ BSSS c ಒಂದು ಧರ್ಮಾಧಾರಿತ ಪುನರ್ವಸತಿ ಮತ್ತು ಮನೋವೈದ್ಯಕೀಯ ಆರೈಕೆ ಕೇಂದ್ರವಾಗಿದೆ. ಈ ಕೇಂದ್ರವನ್ನು 2021ರಲ್ಲಿ ಮೇರೂ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೂಜ್ಯ ಸೆಲ್ಸಿಯಸ್ ಮುಗಾಂಬಿ ಹಾಗೂ ಹೋಲಿ ಇನ್ನೋಸೆಂಟ್ಸ್ ಸೇವಿಕಾ ಸಂಘದ ಸ್ಥಾಪಕಿಯಾದ ಸಹೋದರಿ ವೆರೋನಿಕಾ ನ್ಕಿರೋಟೆ ರುಕುಂಗಾ ಸ್ಥಾಪಿಸಿದರು. ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ ಹಾಗೂ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಈ ಕೇಂದ್ರ ಆರಂಭವಾಯಿತು.
ಯಾವುದೇ ತೀರ್ಪು ಇಲ್ಲದೆ ಪ್ರೀತಿ, ದಯೆ ಮತ್ತು ಕರುಣೆಯಿಂದ ಸಮಾಜದ ಗಾಯಗೊಂಡವರನ್ನು ಗುಣಪಡಿಸುವ ಉದ್ದೇಶದಿಂದ ಸಹೋದರಿಯರು ಒಂದು ಸುರಕ್ಷಿತ ಸ್ಥಳವನ್ನು ನಿರ್ಮಿಸಿದ್ದಾರೆ. ಇಲ್ಲಿ ನೋವು ಅರ್ಥಪೂರ್ಣವಾಗುತ್ತದೆ ಮತ್ತು ಮುರಿದ ಜೀವನಗಳಿಗೆ ಹೊಸ ಆಶೆ ಸಿಗುತ್ತದೆ.
ಸಹೋದರಿ ವೆರೋನಿಕಾ ಅವರ ಮಾತಿನಲ್ಲಿ, “ ಸಮಾಜದ ಅತ್ಯಂತ ನೋವಿನಲ್ಲಿರುವವರಿಗಾಗಿ. ತೀರ್ಪು ನೀಡದೆ, ಅವರ ಜೊತೆ ನಿಂತು ಸಹಾಯ ಮಾಡುವುದೇ ನಮ್ಮ ಸೇವೆ ಹಾಗೂ ಧ್ಯೇಯ.”
ವಿಶ್ವಾಸ ಮತ್ತು ಕರುಣೆಯಿಂದ ಹುಟ್ಟಿದ ಸೇವೆ
ವ್ಯಾಕುಲ ಮಾತೆ ಮರಿಯಾಳ ಆದರ್ಶದಲ್ಲಿ ಈ ಸೇವಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅವರು ತಮ್ಮ ನೋವು ಅನುಭವಿಸುತ್ತಿದ್ದ ಮಗನೊಂದಿಗೆ ನಿಂತಂತೆ, ನಾವು ವ್ಯಸನ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುವವರೊಂದಿಗೆ ನಿಂತಿದ್ದೇವೆ.”
“ಆರಂಭದಿಂದಲೂ ಅನೇಕರು ಚಿಕಿತ್ಸೆ ಪಡೆದು ಸಮಾಜಕ್ಕೆ ಮರುಸೇರಿದ್ದಾರೆ. ನಾವು ಇಂದಿನ ‘ಹೆರೋದ್‌ಗಳು’ ಎಂದು ಕರೆಯಬಹುದಾದ ಮದ್ಯ ಮತ್ತು ಮಾದಕ ವ್ಯಸನವನ್ನು ಎದುರಿಸುತ್ತಿದ್ದೇವೆ,” ಎಂದು ಅವರು ಸೇರಿಸುತ್ತಾರೆ.
ಕೇಂದ್ರ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತದೆ. ಇಲ್ಲಿ BPSS ಎಂಬ ನಾಲ್ಕು ಅಂಶಗಳ ಮೇಲೆ ಆಧಾರಿತ ಸಮಗ್ರ ಆರೈಕೆ ನೀಡಲಾಗುತ್ತದೆ: ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆತ್ಮಿಕ. ಇದರಿಂದ ರೋಗಿಗಳನ್ನು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಸಂಪೂರ್ಣ ಮಾನವೀಯ ಗೌರವದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.
ದೇಹ, ಮನಸ್ಸು ಮತ್ತು ಆತ್ಮದ ಆರೈಕೆ
ಕೇಂದ್ರದ ಕಾರ್ಯ ವೈಖರಿಯ ಬಗ್ಗೆ ತಿಳಿಸಿಕೊಟ್ಟ ಸಹೋದರಿ ಪ್ಯೂರಿಟಿ ಮಾಥೆಂ, ಇಲ್ಲಿ 2021ರಿಂದ ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆ, ಮಾನಸಿಕ ಆರೈಕೆ, ಸಮಾಲೋಚನೆ, ವೈದ್ಯಕೀಯ ಡಿಟಾಕ್ಸ್ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು.
ಸಹೋದರಿ ಪ್ಯೂರಿಟಿ ಮಾಥೆಂಗೆ ಅವರ ಪ್ರಕಾರ, ಈ ಅವಧಿಯಲ್ಲಿ ಅನೇಕ ಜೀವನಗಳು ಬದಲಾಗಿದೆ. “ನಾವು ರಸ್ತೆಗಳಿಂದ ಕರೆತಂದ ಒಬ್ಬ ವ್ಯಕ್ತಿ ಈಗ ಉದ್ಯೋಗದಲ್ಲಿದ್ದಾನೆ. ಮತ್ತೊಬ್ಬರು ಗುಣಮುಖರಾದ ನಂತರ ನಮ್ಮ ಸಿಬ್ಬಂದಿಯಾಗಿದ್ದಾರೆ. ಇಂತಹ ಘಟನೆಗಳು ನಮ್ಮನ್ನು ಮುಂದುವರಿಯಲು ಪ್ರೇರೇಪಿಸುತ್ತವೆ,” ಎಂದು ಸಿಸ್ಟರ್ ಪ್ಯೂರಿಟಿ ಹೇಳಿದ್ದಾರೆ.
ಕೇಂದ್ರದ ತಂಡದಲ್ಲಿ ಮನೋವೈದ್ಯರು, ನರ್ಸ್‌ಗಳು, ಮನೋವಿಜ್ಞಾನಿಗಳು, ಪ್ರಯೋಗಾಲಯ ತಜ್ಞರು, ಸಮಾಲೋಚಕರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದ್ದಾರೆ. “ಪ್ರತಿಯೊಬ್ಬರಿಗೂ ಇಲ್ಲಿ ಪಾತ್ರವಿದೆ. ಇನ್ನಷ್ಟು ಸಹಭಾಗಿಗಳು ಮತ್ತು ಸದುದ್ದೇಶದ ಜನರು ನಮ್ಮೊಂದಿಗೆ ಸೇರುವಂತೆ ನಾವು ಪ್ರಾರ್ಥಿಸುತ್ತೇವೆ,” ಎಂದು ಅವರು ಹೇಳುತ್ತಾರೆ.
ವಿಜ್ಞಾನ ಮತ್ತು ಆಧ್ಯಾತ್ಮ ಒಟ್ಟಿಗೆ
ಕ್ಲಿನಿಕಲ್ ಮನೋವೈದ್ಯರಾದ ಕೆಲ್ವಿನ್ ಮ್ವೇಗಾ ಅವರ ಮಾತಿನಲ್ಲಿ, “ಪ್ರತಿ ವ್ಯಕ್ತಿಗೆ ಅವಶ್ಯಕತೆ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ನಂತರವೂ ಮನೆ ಭೇಟಿ ಮತ್ತು ಅನುಸರಣೆ ಮಾಡಲಾಗುತ್ತದೆ.”
“ಪ್ರವೇಶಕ್ಕೂ ಮುನ್ನ ಲಿವರ್ ಮತ್ತು ಕಿಡ್ನಿ ಸೇರಿದಂತೆ ಪ್ರಮುಖ ಅಂಗಗಳ ಪರೀಕ್ಷೆಗಳನ್ನು ಮಾಡಲಾಗುತ್ತದೆ. ವ್ಯಕ್ತಿಯ ಅಗತ್ಯಕ್ಕೆ ಅನುಗುಣವಾಗಿ ವೈದ್ಯಕೀಯ ಡಿಟಾಕ್ಸ್ ಮತ್ತು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆತ್ಮಿಕ ಬೆಂಬಲ ಒಳಗೊಂಡ ಚಿಕಿತ್ಸೆ ನೀಡಲಾಗುತ್ತದೆ.”
ಕುಟುಂಬ ಚಿಕಿತ್ಸೆ ಮತ್ತು ಜೀವನ ಕೌಶಲ್ಯ ತರಬೇತಿಯೂ ಈ ಕಾರ್ಯಕ್ರಮದ ಭಾಗವಾಗಿದೆ.
“ಬಿಡುಗಡೆಯಾದ ನಂತರ ಮರು ವ್ಯಸನ ತಪ್ಪಿಸಲು ಮನೆ ಭೇಟಿ ಮತ್ತು ಅನುಸರಣೆ ಮಾಡುತ್ತೇವೆ,” ಎಂದು ಮ್ವೇಗಾ ಹೇಳುತ್ತಾರೆ.
“ಜನರು ಗುಣಮುಖರಾಗುವುದನ್ನು ನೋಡುವುದೇ ನನಗೆ ಪ್ರೇರಣೆ. ಸಮಾಜ ಕೈಬಿಟ್ಟಿದ್ದವರ ಜೀವನ ಮತ್ತೆ ಸರಿಯಾಗುತ್ತದೆ. ಪುನರ್ವಸತಿ ಕೆಲಸ ಮಾಡುತ್ತದೆ,” ಎಂದು ಅವರು ಹೇಳುತ್ತಾರೆ.
ಸಮುದಾಯದ ಸಹಭಾಗಿತ್ವ
ಸಾಮಾನ್ಯ ಸದಸ್ಯರಾದ ವಿನ್ಸೆಂಟ್ ಮುತ್ವಿರಿ ಅವರು, “ಸಹೋದರಿಯರ ಸೇವೆ ಜೀವಗಳನ್ನು ಉಳಿಸುತ್ತಿದೆ. ಸಮುದಾಯವೂ ಇದನ್ನು ಗುರುತಿಸಿದೆ,” ಎನ್ನುತ್ತಾರೆ.
ಸೇವೆ ವಿಶಿಷ್ಟವಾಗಿದೆ ಮತ್ತು ಅತ್ಯಂತ ಅಗತ್ಯವಾಗಿದೆ. ನಾವು ಸಮುದಾಯ ಜಾಗೃತಿ, ಸಂಪರ್ಕ ಮತ್ತು ವಕಾಲತ್ತಿನ ಮೂಲಕ ಸಹೋದರಿಯರು ಹೋಗಲಾಗದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತೇವೆ.”
ಸಮುದಾಯದಲ್ಲಿ ಅವರನ್ನು ‘ಮದ್ಯಪಾನಿಗಳಿಗೆ ಸ್ನೇಹಿತರು’ ( Friends of the Drunkards) ಎಂದು ಕರೆಯಲಾಗುತ್ತದೆ. “ಅವರು ಈ ಹೆಸರನ್ನು ವಿನಯದಿಂದ ಧರಿಸಿದ್ದಾರೆ. ಅವರ ಪ್ರೀತಿ ಜೀವಗಳನ್ನು ಉಳಿಸುತ್ತಿದೆ,” ಎಂದು ಅವರು ಹೇಳುತ್ತಾರೆ.
‘ನೀವು ಒಂಟಿಯಲ್ಲ’
ಕೇಂದ್ರದ ಆರೈಕೆದಾರಿಯಾದ ಸಹೋದರಿ ಜೋನ್ ನ್ಯಾಕಾಟೋ ಅವರು, “ಸಮಸ್ಯೆ ಇದ್ದರೆ ಮುಂದೆ ಬನ್ನಿ. ಮಾತಾಡೋಣ. ಎಲ್ಲರಿಗೂ ಶುದ್ಧ ಮನಸ್ಸು ಮತ್ತು ಶುದ್ಧ ಜೀವನ ಬೇಕು. ಜೀವನ ಇಲ್ಲಿಯೇ ಮುಗಿಯುವುದಿಲ್ಲ. ನೀವು ಏಕಾಂಗಿಯಲ್ಲ. ನಾವು ನಿಮ್ಮ ಜೊತೆಗಿದ್ದೇವೆ,” ಎಂದು ವ್ಯಸನ ಅಥವಾ ಮಾನಸಿಕ ಸಮಸ್ಯೆಗಳಿಂದ ಬಳಲುವವರಿಗೆ ಮನವಿ ಮಾಡುತ್ತಾರೆ:
“ಯಾರಾದರೂ ಸಮಯ, ಸಂಪನ್ಮೂಲ ಅಥವಾ ಶಕ್ತಿಯ ಮೂಲಕ ಸಹಾಯ ಮಾಡಬಹುದು. ಒಟ್ಟಾಗಿ ನಾವು ಈ ಅಂತರವನ್ನು ತುಂಬಬಹುದು.”
ಕರುಣೆಗೆ ಕರೆಯು
ವ್ಯಸನ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಸಮಾಜ ತಳ್ಳಿಹಾಕುವಾಗ, ಈ ಸಹೋದರಿಯರು ಪ್ರತಿ ವ್ಯಕ್ತಿಗೂ ಹೊಸ ಬದುಕು ಸಾಧ್ಯವೆಂದು ತೋರಿಸುತ್ತಿದ್ದಾರೆ. ಒಂದೊಂದು ಜೀವವನ್ನು ಉಳಿಸುವ ಮೂಲಕ, ಆರೋಗ್ಯಕರ ಮತ್ತು ಕರುಣೆಯ ಸಮಾಜವನ್ನು ನಿರ್ಮಿಸುವುದೇ ಅವರ ಸಂದೇಶ.