ಕಾಂಬೋಡಿಯಾ: ಸಂಘರ್ಷದ ಮಧ್ಯೆ ಶಾಂತಿಗಾಗಿ ಯುವಜನರ ಕೋರಿಕೆ
ಥೈಲ್ಯಾಂಡ್–ಕಾಂಬೋಡಿಯಾ ಗಡಿಭಾಗದ ಎರಡೂ ಕಡೆಗಳಲ್ಲಿ ಹಿಂಸಾತ್ಮಕ ಸಂಘರ್ಷಗಳು ಮುಂದುವರಿದಿವೆ. 2025 ಡಿಸೆಂಬರ್ 13ರ ಶನಿವಾರದ ಮುಂಜಾನೆ, ಎರಡೂ ದೇಶಗಳು ಬಾಂಬ್ ದಾಳಿಗಳು ಮತ್ತು ಗುಂಡಿನ ಚಕಮಕಿಗಳು ನಡೆಯುತ್ತಿರುವುದಾಗಿ ವರದಿ ಮಾಡಿವೆ. ಡಿಸೆಂಬರ್ ಆರಂಭದಲ್ಲಿ ಹಿಂಸಾಚಾರಗಳು ಪುನರಾರಂಭವಾದ ಬಳಿಕ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದು, ಎರಡೂ ದೇಶಗಳಲ್ಲಿ ಸೇರಿ ಸುಮಾರು 7 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಕಾಂಬೋಡಿಯಾದ ಬಟ್ಟಂಬಾಂಗ್ ಧರ್ಮಕ್ಷೇತ್ರದ ಉಪಧರ್ಮಪ್ರಾಂತ್ಯಾಧಿಕಾರಿ ಆಗಿರುವ ವಂದನೀಯ ಗುರುಗಳಾದ ಎನ್ರಿಕೆ ಫಿಗಾರೆಡೊ ಅಲ್ವರ್ಗೊನ್ಸಾಲೆಜ್ ಅವರು ಈ ಪರಿಸ್ಥಿತಿಯನ್ನು “ತೀವ್ರ ಒತ್ತಡದ ಕ್ಷಣ”ವೆಂದು ವರ್ಣಿಸಿದರು. “ಜನರು ಬಹಳ ಭಯಭೀತರಾಗಿದ್ದಾರೆ. 2 ಲಕ್ಷಕ್ಕೂ ಕಾಂಬೋಡಿಯಾದ ಶರಣಾರ್ಥಿಗಳು ಸ್ಥಳಾಂತರಗೊಂಡಿದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ.
ವ್ಯಾಟಿಕನ್‌ನ ಫೀಡೆಸ್ ಸುದ್ದಿ ಸಂಸ್ಥೆಯ ಪ್ರಕಾರ, ಡಿಸೆಂಬರ್ 10ರಂದು ನಡೆದ ಸಾಮಾನ್ಯ ಸಭೆಯಲ್ಲಿ ಜಗದ್ಗುರುಗಳಾದ ಪೂಜ್ಯ 14ನೆಯ ಲಿಯೋರವರು ನೀಡಿದ ಶಾಂತಿಯ ಕರೆ “ನಮಗೆ ಮಹತ್ತರ ಸಾಂತ್ವನ ಮತ್ತು ಆಶೆಯನ್ನು ನೀಡಿದೆ” ಎಂದು ಅವರು ಹೇಳಿದರು.
ನಡೆಯುತ್ತಿರುವುದೇನು?
ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಗಡಿಸಂಘರ್ಷವು 100ಕ್ಕೂ ಹೆಚ್ಚು ವರ್ಷಗಳಿಂದ ಮುಂದುವರಿದಿದೆ. ಫ್ರಾನ್ಸ್ 1953ರವರೆಗೆ ಕಾಂಬೋಡಿಯಾವನ್ನು ಆಳಿದ ನಂತರ, 1907ರಲ್ಲಿ ಗಡಿಯನ್ನು ರೇಖಾಂಕಿಸಿದ ಪರಿಣಾಮವಾಗಿ ಸ್ವಾಯತ್ತತೆ ಕುರಿತ ವಿವಾದಗಳು ಆರಂಭವಾದವು.
ಈ ವರ್ಷ ಬೇಸಿಗೆಯಲ್ಲಿ ಒಬ್ಬ ಕಾಂಬೋಡಿಯಾದ ಸೈನಿಕ ಸಾವನ್ನಪ್ಪಿದ ಬಳಿಕ ಹಿಂಸೆ ಹೆಚ್ಚಾಯಿತು. ಅದಕ್ಕೆ ಪ್ರತಿಕ್ರಿಯೆಯಾಗಿ, ಥೈಲ್ಯಾಂಡ್ ಗಡಿನಿಯಂತ್ರಣವನ್ನು ಕಠಿಣಗೊಳಿಸಿತು. ಕಾಂಬೋಡಿಯಾ, ಥಾಯ್ ಚಿತ್ರಗಳು ಹಾಗೂ ಥೈಲ್ಯಾಂಡಿನ ಹಣ್ಣು, ತರಕಾರಿ, ಅನಿಲ ಮತ್ತು ಇಂಧನದ ಆಮದು ಮೇಲೆ ನಿಷೇಧ ವಿಧಿಸಿತು.
ಅಕ್ಟೋಬರ್‌ನಲ್ಲಿ ನಡೆದ ನಾಜೂಕಾದ ಶಾಂತಿ ಒಪ್ಪಂದದ ಬಳಿಕವೂ ಉದ್ವಿಗ್ನತೆ ಕಡಿಮೆಯಾಗಲಿಲ್ಲ. ಡಿಸೆಂಬರ್ ೭ ರ ನಂತರ ಶಾಂತಿಯು ಕೊನೆಯಾಗಿ ಹಿಂಸಾಚಾರಗಳು ಹೆಚ್ಚಿವೆವಂದನೀಯ ಗುರುಗಳಾದ ಫಿಗಾರೆಡೊ ಅವರು, ಸ್ಥಳೀಯ ಧರ್ಮಸಭೆ ಜನರಿಗೆ ಸಾಂತ್ವನ ನೀಡುತ್ತಿರುವುದನ್ನು ವಿವರಿಸಿದರು. ಆದರೂ ಜನರು ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ: ಈ ಹಿಂಸಾಚಾರದ ಏರಿಕೆ ಏಕೆ? ಅವರು ಇದರ ಹಿಂದೆ ದೇಶೀಯ ರಾಜಕೀಯ ಕಾರಣಗಳಿವೆ ಎಂದು ಅಭಿಪ್ರಾಯಪಟ್ಟರು.
“ಬಾಹ್ಯ ಶತ್ರುಗಳೊಂದಿಗೆ ಯುದ್ದ ಮಾಡುವ ಮೂಲಕೆ ಆಂತರಿಕ ಶಾಂತಿಯನ್ನು ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಪುನಃ ಸ್ಥಾಪಿಸಲು ರಾಜಕೀಯ ಶಕ್ತಿಗಳು ಥಾಯ್ ಸೇನೆಯನ್ನು ಬಳಸುತ್ತಿವೆ,” ಎಂದರು. “ಆದರೆ ಥೈಲ್ಯಾಂಡಿನ ಯುವಜನರು ಈ ಹಿಂಸಾಚಾರದ ಮಾರ್ಗವನ್ನು ಬೆಂಬಲಿಸುತ್ತಿಲ್ಲ; ಅವರು ಶಾಂತಿಗಾಗಿ ಧ್ವನಿ ಎತ್ತುತ್ತಿದ್ದಾರೆ.”
ಭಾರೀ ನೋವಿನ ಮಧ್ಯೆ ಕ್ರಿಸ್ತಜಯಂತಿಯ ಆಶಯ
ವಂದನೀಯ ಗುರುಗಳಾದ ಫಿಗಾರೆಡೊ ಅವರು ಇತ್ತೀಚೆಗೆ ಬಂಟೇಯ್ ಮಿಯಾಂಚೇ ಪ್ರಾಂತ್ಯದಲ್ಲಿರುವ ಶರಣಾರ್ಥಿ ಶಿಬಿರಕ್ಕೆ ಭೇಟಿ ನೀಡಿ ಮಾನವೀಯ ಸಹಾಯ, ನೈತಿಕ ಹಾಗೂ ಆತ್ಮಿಕ ಬೆಂಬಲವನ್ನು ನೀಡಿದರು.
ಅಲ್ಲಿ ಆಶ್ರಯ ಪಡೆದಿದ್ದ ಸುಮಾರು 800 ಮಂದಿ — ಮಹಿಳೆಯರು, ವೃದ್ಧರು, ಅಂಗವಿಕಲರು ಮತ್ತು ಮಕ್ಕಳು — ತಮಗೆ ಕೈಬಿಟ್ಟಂತಾಗಿದೆ ಎಂಬ ಭಾವನೆ ವ್ಯಕ್ತಪಡಿಸಿ, “ನಮ್ಮ ನೋವು ಜಗತ್ತಿಗೆ ಗೊತ್ತಿದೆಯೇ?” ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಜಗದ್ಗುರುಗಳಾದ ಪೂಜ್ಯ 14ನೆಯ ಲಿಯೋ ಅವರ ಮಾತುಗಳು ಶಾಂತಿಯ ಹುಡುಕಾಟದಲ್ಲಿ ಅಮೂಲ್ಯವಾದ ಆಶೆಯ ಸಂಕೇತವಾಗಿವೆ ಎಂದು ಅವರು ಹೇಳಿದರು.
ಆಗಮನ ಕಾಲವನ್ನು ಕಾಂಬೋಡಿಯಾದ ಸ್ಥಳೀಯ ಧರ್ಮಸಭೆ, ತಮ್ಮ ಅಸ್ಥಿರ ಮತ್ತು ಅಸುರಕ್ಷಿತ ಪರಿಸ್ಥಿತಿಯನ್ನು ದೇವರ ಕೈಯಲ್ಲಿ ಸಮರ್ಪಿಸುವ ಸಮಯವಾಗಿ ಕಾಣುತ್ತಿದೆ. ನೋವಿನ ಮಧ್ಯೆಯೂ ವಿಶ್ವಾಸಿಗಳು ಪ್ರಾರ್ಥನೆಯಲ್ಲಿ ಒಂದಾಗಿ ಸೇರುತ್ತಿದ್ದಾರೆ. ಪ್ರಾರ್ಥನೆ ಜನರನ್ನು “ಪರಸ್ಪರ ಸಹಭಾಗಿತ್ವ ಮತ್ತು ಏಕತೆಯಲ್ಲಿ ಇನ್ನಷ್ಟು ಗಟ್ಟಿಗೊಳಿಸುತ್ತಿದೆ” ಎಂದು ವಂದನೀಯ ಗುರುಗಳು ಹೇಳಿದರು. ಕ್ರಿಸ್ತರ ಜನನೋತ್ಸವದ ಮುನ್ನ, ಪ್ರಭು ಯೇಸು ಕ್ರಿಸ್ತರು ಶಾಂತಿ ಮತ್ತು ಭರವಸೆಯನ್ನು ನೀಡಲು ಬಂದರು ಎಂಬುದನ್ನು ಜನರು ನೆನಪಿಸಿಕೊಸ್ಮರಿಸುತ್ತಾ ನಂಬಿಕೆಯಿಂದಿದ್ದಾರೆ.
ಸಂಘರ್ಷಕ್ಕೆ ಮಾನವ ಮುಖ
ಡಿಸೆಂಬರ್ 7 ರಿಂದ ಹಿಂಸೆ ಹೆಚ್ಚಾದ ಬಳಿಕ ಮಾನವೀಯ ಪರಿಣಾಮ ಭಾರೀ ಆಗಿದೆ. 13 ನಾಗರಿಕರು ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿದ್ದಾರೆ. 1.9 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ಪ್ರೀಹ್ ವಿಹಾರ್, ಸೀಮ್ ರೀಪ್, ಒಡ್ಡಾರ್ ಮೀಂಚೆ , ಬಂಟೇಯ್ ಮೀಂಚೆ, ಬಟ್ಟಂಬಾಂಗ್ ಮತ್ತು ಪುರ್ಸಾಟ್ ಪ್ರಾಂತ್ಯಗಳು ಬಾಂಬ್ ದಾಳಿಗಳು, ಡ್ರೋನ್ ಮೂಲಕ ಸ್ಫೋಟಕ ದಾಳಿಗಳು, ವಾಯು ದಾಳಿ ಮತ್ತು ಟ್ಯಾಂಕ್ ದಾಳಿಗಳನ್ನು ಎದುರಿಸಿವೆ. ಈ ಹಿನ್ನೆಲೆಯಲ್ಲಿ, ಕಾರಿತಾಸ್ ಕಾಂಬೋಡಿಯಾ ಸ್ಥಳೀಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಆರು ಪ್ರಾಂತ್ಯಗಳಲ್ಲಿ ಸಾವಿರಾರು ಜನರಿಗೆ ನೆರವು ಒದಗಿಸುತ್ತಿದೆ.
ಕಾರಿತಾಸ್ ಕಾಂಬೋಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಕಿಮ್ ರಟ್ಟಾನಾ ಅವರು, ಸಂಸ್ಥೆ “ಆಹಾರ, ನೀರು, ಶಿಕ್ಷಣ, ರಕ್ಷಣೆ ಮತ್ತು ಮಾನಸಿಕ–ಸಾಮಾಜಿಕ ಬೆಂಬಲವನ್ನು 3,200 ಕುಟುಂಬಗಳಿಗೆ ನೀಡುತ್ತಿದೆ” ಎಂದು ಹೇಳಿದರು. ಇದಲ್ಲದೆ, ಪ್ರೀಹ್ ವಿಹಾರ್, ಸೀಮ್ ರೀಪ್, ಒಡ್ಡಾರ್ ಮೀಂಚೆ , ಬಂಟೇಯ್ ಮೀಂಚೆ ಪ್ರಾಂತ್ಯಗಳಲ್ಲಿ 20 ಹೊಸ ಶಿಬಿರಗಳನ್ನು ನಿರ್ಮಿಸಲಾಗಿದೆ.
ಈ ಶಿಬಿರಗಳು 5,000 ಕುಟುಂಬಗಳಿಗೆ 1,500 ತಾತ್ಕಾಲಿಕ ಆಶ್ರಯಗಳು, ಆಹಾರ ಸಹಾಯ, ಸ್ವಚ್ಛತಾ ಸೌಲಭ್ಯಗಳು ಹಾಗೂ ಮಕ್ಕಳಿಗೂ ವಯಸ್ಕರಿಗೂ ಮಾನಸಿಕ ಬೆಂಬಲ ಮತ್ತು ರಕ್ಷಣೆ ಒದಗಿಸುತ್ತಿವೆ ಎಂದು ಅವರು ವಿವರಿಸಿದರು.