“ನೋವಿನಿಂದ ಭರವಸೆಯೆಡೆಗೆ”: ಜಗದ್ಗುರುಗಳ ಅಪೋಸ್ತಲಿಕ ಭೇಟಿಯ ಸಂದರ್ಭದಲ್ಲಿಅರ್ಮೇನಿಯಾದ ಕಥೋಲಿಕ ಧರ್ಮಸಭೆಯ ಪಿತಾಮಹರ ಹೇಳಿಕೆ
ಭರವಸೆ, ಏಕತೆ, ಶಾಂತಿ ಮತ್ತು ನ್ಯಾಯ.
ದಿನಾಂಕ 2-12-2025ರಂದು ಕೊನೆಗೊಂಡ, ಟರ್ಕಿ ಮತ್ತು ಲೆಬನನ್ ದೇಶಗಳಿಗೆ ಜಗದ್ಗುರು 14ನೆಯ ಲಿಯೋ ರವರ ಅಪೋಸ್ತೋಲಿಕ ಭೇಟಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅರ್ಮೇನಿಯಾದ ಕಥೋಲಿಕ ಧರ್ಮಸಭೆಯ ಪಿತಾಮಹರಾದ ರಫಾಯೇಲ್ ಬೆದ್ರೋಸ್ 12ನೆಯ ಮಿನಾಸ್ಸಿಯನ್ ಭರವಸೆ, ಏಕತೆ, ಶಾಂತಿ ಮತ್ತು ನ್ಯಾಯ ಈ ಭೇಟಿಯು ಬಿತ್ತಿರುವ ಬೀಜಗಳಾಗಿವೆ ಎಂದರು.
ವಿಶ್ವಾಸಿಗಳ ನಂಬಿಕೆಯ ಜೀವನ
ನೋವನ್ನು ಮೌನವಾಗಿ ಸಹಿಸು ತ್ತಾ, ವಿಶ್ವಾಸವನ್ನು ಸ್ಥಿರವಾಗಿಟ್ಟುಕೊಂಡು, ಧೈರ್ಯವಾಗಿ ತಮ್ಮ ಸಾಕ್ಷಿಯ ಜೀವನ ನಡೆಸುತ್ತಿರುವ, ಟರ್ಕಿ ಮತ್ತು ಲೆಬನೋನಿನ ಜನರ ದೃಢ ವಿಶ್ವಾಸವನ್ನು ಜಗದ್ಗುರುಗಳು ಮೆಚ್ಚಿದ್ದಾರೆ. ಎಂದು ತಮ್ಮ ಪ್ರಾಂತ್ಯದ ವಿಶ್ವಾಸಿಗಳ ಬಗ್ಗೆ ಮಾತನಾಡಿದ ಪಿತಾಮಹರು, ಜಗದ್ಗುರುಗಳು ಯುವಜನರೊಂದಿಗಿನ ತಮ್ಮ ಭೇಟಿಯಲ್ಲಿ ಮತ್ತು ಬೇಯ್ರತ್ ಜಲಮುಖದಲ್ಲಿ ನಡೆದ ಸಮಾರೋಪ ಬಲಿಪೂಜೆಯಲ್ಲಿ ನಮ್ಮ ಜನರ ವಿಶ್ವಾಸದ ಜೀವನವನ್ನು ಪ್ರತ್ಯಕ್ಷವಾಗಿ ಕಂಡಿ ದ್ದಾರೆ ಎಂದು ತಿಳಿಸಿದರು.
ಕಷ್ಟ ಸಹಿಷ್ಣುತೆ ಮತ್ತು ಭರವಸೆಯೆಡೆಗೆ ರೂಪಾಂತರ
ಇಲ್ಲಿನ ಜನರ ಕಷ್ಟಗಳ ಬಗ್ಗೆ ವಿವರಿಸಿದಾಗ, ಜಗದ್ಗುರುಗಳು ನಮ್ಮ ನೋವನ್ನು ತಮ್ಮ ನೋವನ್ನಾಗಿ ಸ್ವೀಕರಿಸಿದ್ದು ಅವರ ಕಣ್ಣೋಟದಲ್ಲಿ ಕಂಡುಬಂದಿತು. ಜನರ ಕಷ್ಟಗಳನ್ನು ಗಂಭೀರ ಹೃದಯದಿಂದ ಆಲಿಸಿದ ಜಗದ್ಗುರುಗಳು, ಕಷ್ಟಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಭರವಸೆಯ ಭಾವನೆಯನ್ನು ನೀಡಿದ್ದು ಅತಿ ಶ್ಲಾಘನೀಯ.
ಈ ಪ್ರದೇಶದಲ್ಲಿ ಬೇರೂರಿರುವ ಸವಾಲುಗಳನ್ನು ಎದುರಿಸಲು ಹಾಗೂ ನಿವಾರಿಸಲು ಶ್ರದ್ದಾಪೂರಿತ ಶಾಂತಿಯ ಮಾರ್ಗವೇ ಹೊರತು ಬೇರೆ ಮಾರ್ಗವಿಲ್ಲ. ಅದಕ್ಕಾಗಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಶಾಂತಿಯ ದಾಹವಿದೆ ಎಂದು ನುಡಿದರು.
ಜೆರುಸಲೇಮಿಗೆ ಆಹ್ವಾನ
2033ರಲ್ಲಿ ನಡೆಯುವ ವಿಮೋಚನೆಯ ಜೂಬಿಲಿಗೆ ಜೆರುಸಲೇಮಿಗೆ ಸಕಲ ಕ್ರೈಸ್ತ ಸಭೆಗಳನ್ನು ಆಹ್ವಾನಿಸಲಾಯಿತು. 2033ನೆಯ ಜ್ಯುಬಿಲಿಯ ವರ್ಷವು ಪ್ರಭು ಯೇಸುವಿನ ಮರಣ ಪುನರುತ್ಥಾನದ 2000 ವರ್ಷಗಳ ಸ್ಮರಣೆಯ ವರ್ಷವಾಗಲಿದೆ.
ಮುಂದುವರೆಸಿ, ಇದು ಆರಂಭವಷ್ಟೇ, ಈಗಾಗಲೇ ಎಲ್ಲ ವಿಶ್ವಾಸಿಗಳೂ ಒಗ್ಗಟ್ಟಿನಿಂದಿದ್ದಾರೆ ಎಂದು ಪಿತಾಮಹರು ತಿಳಿಸಿದರು, ವಿಶ್ವಾಸದ ಪಯಣದಲ್ಲಿ, ಪ್ರಾರ್ಥನೆಯನ್ನು ಅಜೇಯ ಆಯುಧವಾಗಿಸಿಕೊಳ್ಳಲು ಕರೆನೀಡಿದರು.
ನಾವು ಎಂದೂ ಏಕಾಂಗಿಗಳಲ್ಲ
ಜಗದ್ಗುರುಗಳು ಅರ್ಪಿಸಿದ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿದ, ಜನಸಮೂಹದ ಕುರಿತು ಮಾತನಾಡಿದ ಪಿತಾಮಹರು “ಲಕ್ಷಕ್ಕೂ ಮೇಲ್ಪಟ್ಟು ಪ್ರಾರ್ಥನೆಗೆ ಸೇರಿದ ಜನಸಮೂಹವನ್ನು ಕಂಡು ನಾನು ಅತಿ ಭಾವುಕನಾದೆ” ಎಂದು ಹಂಚಿಕೊಂಡರು.
ಸಂದರ್ಶನದ ಅಂತ್ಯದಲ್ಲಿ " ನಾವು ಎಂದೂ ಒಂಟಿಯಾಗಿಲ್ಲ ಎಂಬುದಕ್ಕೆ ನೆರೆದಿದ್ದ ಜನಸಮೂಹವೇ ಸಾಕ್ಷಿ, ಈ ಏಕತಾ ಮಾರ್ಗದಲ್ಲೇ ನಾವು ಮುಂದೆ ಸಾಗಬೇಕು” ಎಂದು ಕರೆ ನೀಡಿದರು