ಹುಡುಕಿ

2025.12.10 Myriam Wijlens, Yeshica Marianne Umaña Calderón 2025.12.10 Myriam Wijlens, Yeshica Marianne Umaña Calderón 

ಧಾರ್ಮಿಕ ಕಾನೂನು ತಜ್ಞರಿಂದ ಮಕ್ಕಳ ಕಲ್ಯಾಣದ ಬಗ್ಗೆ ಹೊಸ ಪಠ್ಯಪುಸ್ತಕ

ಎರ್ಫುಟ್ ವಿಶ್ವವಿದ್ಯಾಲಯದ ಧಾರ್ಮಿಕ ಕಾನೂನು ತಜ್ಞೆ ಮಿರಿಯಂ ವಿಲೆನ್ಸ್ ಮತ್ತು ಅವರ ಸಂಶೋಧನಾ ಸಹಾಯಕಿ ಯೆಶಿಕಾ ಮರಿಯನ್ ಉಮಾನಾ ಕಲ್ದೆರೋನ್ ಬುಧವಾರ “ಮಕ್ಕಳ ಕಲ್ಯಾಣ: ಪ್ರೋತ್ಸಾಹ – ರಕ್ಷಣೆ – ಹಕ್ಕುಗಳು” ಎಂಬ ಇಂಗ್ಲಿಷ್ ಪಠ್ಯಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ. ಈ ಗ್ರಂಥವು ಮಕ್ಕಳ ಹಿತಾಸಕ್ತಿ ತತ್ವಗಳನ್ನು ಧರ್ಮಸಭೆ ಹಾಗೂ ಅಂತರರಾಷ್ಟ್ರೀಯ ಕಾನೂನು ದೃಷ್ಟಿಕೋನದಲ್ಲಿ ವಿವರಿಸುತ್ತದೆ.

ಈ ಪುಸ್ತಕವು ವಿಲೆನ್ಸ್ ಅವರು ಸುಮಾರು 15 ವರ್ಷಗಳಿಂದ ನೀಡಿದ ಅಂತರಶಾಖಾ ಪಾಠ್ಯಕ್ರಮದ ಆಧಾರದ ಮೇಲೆ ರೂಪುಗೊಂಡಿದೆ. 2021ರಿಂದ ಪಾಠ್ಯಕ್ರಮ ಇಂಗ್ಲಿಷ್‌ನಲ್ಲಿ ನಡೆಯುತ್ತದೆ, ಮತ್ತು 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದನ್ನು ಪೂರ್ಣಗೊಳಿಸಿದ್ದಾರೆ. ಈ ಇಂಗ್ಲಿಷ್‌ ಪಾಠ್ಯಕ್ರಮಕ್ಕಾಗಿ 2023ರಲ್ಲಿ ಜರ್ಮನ್ ರೆಕ್ಟರ್ಸ್‌ ಸಮಿತಿ ಅವರಿಗೆ ನವೀನ ಮತ್ತು ಅಂತರರಾಷ್ಟ್ರೀಯ ಬೋಧನಾ ಮಾದರಿಯ ಪ್ರಶಸ್ತಿಯನ್ನು ನೀಡಿದೆ.

ಪಠ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಹಾಗೂ ಸಂವಿಧಾನಿಕ ಕಾನೂನು, ಮನಶ್ಯಾಸ್ತ್ರ, ವೈದ್ಯಕೀಯ, ನೈತಿಕತೆ, ಡಿಜಿಟಲ್ ಅಧ್ಯಯನ, ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಕಾನೂನು ಕ್ಷೇತ್ರಗಳ 35 ತಜ್ಞರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ 12 ಮಂದಿ—ವಿಶ್ವಸಂಸ್ಥೆಯ ಪ್ರತಿನಿಧಿಗಳು, ಶಿಶು ಮತ್ತು ಮಕ್ಕಳ ವೈದ್ಯರು, ನೈತಿಕ ತಜ್ಞರು, ಜೊತೆಗೆ ಪವಿತ್ರ ಪೀಠದ ವಿಶ್ವಸಂಸ್ಥೆ ವೀಕ್ಷಕಾಂಗದ ಉಪ ಖಾಯಂ ವೀಕ್ಷಕರಾದ ವಂ. ಗು. ರಾಬರ್ಟ್ ಮರ್ಫಿ ಮತ್ತು ಕಿರಿಯರ ರಕ್ಷಣಾ ಆಯೋಗದ ಕಾರ್ಯದರ್ಶಿ ಲೂಯಿಸ್ ಅಲಿ ಹೆರೇರಾ—ಪುಸ್ತಕಕ್ಕೆ ಲೇಖನಗಳನ್ನು ನೀಡಿದ್ದಾರೆ. ವಿಲೆನ್ಸ್ ಮತ್ತು ಕಲ್ದೆರೋನ್ ಬುಧವಾರ ರೋಮ್‌ನಲ್ಲಿ ಈ ಕೃತಿಯನ್ನು ಅವರಿಗೆ ಹಸ್ತಾಂತರಿಸಿದ್ದಾರೆ.

ಪುಸ್ತಕವು ಮಕ್ಕಳ ಹಿತಾಸಕ್ತಿ ಎಂಬ ತತ್ವವನ್ನು ಧಾರ್ಮಿಕ ಕಾನೂನು ಮತ್ತು ಅಂತರರಾಷ್ಟ್ರೀಯ ಕಾನೂನು ಎರಡರಲ್ಲಿಯೂ ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ವೈಲೆನ್ಸ್ ಅವರ ಮಾತಿನಲ್ಲಿ, ತಾತ್ವಿಕ ಬೋಧನೆ ಎಲ್ಲ ವಿದ್ಯಾರ್ಥಿಗಳಿಗೂ ತಲುಪುವಂತೆ ರೂಪುಗೊಳ್ಳಬೇಕು. ಇಂತಹ ಪಠ್ಯಪ್ರಸ್ತುತಿಗಳು ಧರ್ಮಸಭೆಯ ಧಾರ್ಮಿಕ ಪ್ರಚಾರದ ಭಾಗವಾಗಬೇಕೆಂದು ತಿಳಿಸಿದರು.

ಪುಸ್ತಕವು ಮುದ್ರಿತ ಆವೃತ್ತಿಯಲ್ಲೂ ಲಭ್ಯವಿದ್ದು, ಈ ಕೆಳಗೆ ನೀಡಿರುವ ಲಿಂಕ್ ನಲ್ಲಿಆನ್‌ಲೈನ್‌ನಲ್ಲಿ ಓದುವ ವ್ಯವಸ್ಥೆಯನ್ನೂ ಮಾಡಲಾಗಿದೆ.

https://metadata.lit-verlag.de/downloads/91836-9/9783643918369.pdf

12 ಡಿಸೆಂಬರ್ 2025, 13:56