ಹುಡುಕಿ

COP30 Nunzio Brasile COP30 Nunzio Brasile 

COP30ನಲ್ಲಿ 'ಹವಾಮಾನ ಬಿಕ್ಕಟ್ಟಿನ ಮಾನವೀಯ ಮುಖದʼ ಕುರಿತು ಪವಿತ್ರ ಪೀಠಾಧಿಕಾರಿಯ ಅಭಿಪ್ರಾಯ

COP30 ಗೆ ಪವಿತ್ರ ಪೀಠಾಧಿಕಾರಿಯ ನಿಯೋಗದ ಮುಖ್ಯಸ್ಥರು ವಿಶ್ವದಾದ್ಯಂತದ ಪರಿಸರ ಮಂತ್ರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಅಲೆಕ್ಸಾಂಡ್ರಾ ಸರ್ಗಂಟ್ - ಬೆಲೆಮ್, ಬ್ರೆಜಿಲ್

ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಒಟ್ಟುಗೂಡಿದ ಹತ್ತು ದಿನಗಳ ನಂತರ, ಹವಾಮಾನ ಸಚಿವರು ಬೆಲೆಮ್‌ಗೆ ಆಗಮಿಸಿದಾಗ, ನವೆಂಬರ್ 17, ಸೋಮವಾರದಂದು COP30ನ ರಾಜಕೀಯ ಹಂತವು ತನ್ನ ಎರಡನೇ ಹಂತವನ್ನು ಪ್ರವೇಶಿಸಿತು.

ನವೆಂಬರ್ 18, ಮಂಗಳವಾರ, ಪವಿತ್ರ ಪೀಠಾಧಿಕಾರಿಯ ನಿಯೋಗದ ಮುಖ್ಯಸ್ಥ ಮಹಾಧರ್ಮಾಧ್ಯಕ್ಷರಾದ ಗಿಯಾಂಬಟ್ಟಿಸ್ಟಾ ಡಿಕ್ವಾಟ್ರೋರವರು ವ್ಯಾಟಿಕನ್‌ನ ಆದ್ಯತೆಗಳನ್ನು ಪುನರುಚ್ಚರಿಸಲು ಭಾಷಣ ಮಾಡಿದರು.

ಬ್ರೆಜಿಲ್‌ನ ಪ್ರೇಷಿತ ರಾಯಭಾರಿಯಾಗಿರುವ ಮಹಾಧರ್ಮಾಧ್ಯಕ್ಷರಾದ, ನವೆಂಬರ್ 7ರಂದು ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು COP30 ಭಾಗವಹಿಸುವವರಿಗೆ ವಿಶ್ವಗುರು ಫ್ರಾನ್ಸಿಸ್ ರವರು ನೀಡಿದ ಸಂದೇಶವನ್ನು ಉಲ್ಲೇಖಿಸುವ ಮೂಲಕ ತಮ್ಮ ಹೇಳಿಕೆಗಳನ್ನು ಪ್ರಾರಂಭಿಸಿದರು.

ಹವಾಮಾನ ಬದಲಾವಣೆಯು, ಈ ಗ್ರಹದಲ್ಲಿರುವ ಪ್ರತಿಯೊಬ್ಬರ ಜೀವಕ್ಕೂ ಅಪಾಯವನ್ನುಂಟುಮಾಡುತ್ತಿದೆ ಎಂದು ವಿಶ್ವಗುರು ಹೇಳಿದ್ದರು, ಆದ್ದರಿಂದ ಇದಕ್ಕೆ ಅಂತರರಾಷ್ಟ್ರೀಯ ಸಹಕಾರ ಮತ್ತು ಜೀವನದ ಪವಿತ್ರತೆ, ಪ್ರತಿಯೊಬ್ಬ ಮಾನವನಿಗೂ ದೇವರು ನೀಡಿದ ಘನತೆ ಮತ್ತು ಸಾಮಾನ್ಯ ಒಳಿತನ್ನು ಕೇಂದ್ರದಲ್ಲಿರಿಸುವ ಒಗ್ಗಟ್ಟಿನ ಹಾಗೂ ಭವಿಷ್ಯವಾಣಿಯ ಪ್ರಾಮುಖ್ಯತೆ ಕಾಣಬಹುದಾಗಿದೆ.

ಮಹಿಳೆಯರು ಮತ್ತು ಹುಡುಗಿಯರು
ಮಹಾಧರ್ಮಾಧ್ಯಕ್ಷರಾದ ಡಿಕ್ವಾಟ್ರೋರವರು ಹವಾಮಾನ ಬಿಕ್ಕಟ್ಟಿನ ಮಾನವೀಯ ಮುಖವನ್ನು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಲಿಂಗ ಕ್ರಿಯಾ ಯೋಜನೆಯು, ಮಹಿಳೆಯರು ಮತ್ತು ಹುಡುಗಿಯರು ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ಹವಾಮಾನ ಬದಲಾವಣೆಯಿಂದ ಅಸಮಾನವಾಗಿ ಪರಿಣಾಮವನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಪವಿತ್ರ ಪೀಠಾಧಿಕಾರಿಯು ಆಶಿಸುತ್ತಾರೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಸ್ವಾರ್ಥತತೆಯ ಹಿತಾಸಕ್ತಿಗಳನ್ನು ಬದಿಗಿಟ್ಟು, ಪರಸ್ಪರ ಮತ್ತು ಭವಿಷ್ಯದ ಪೀಳಿಗೆಗೆ ಸೂಕ್ತವಾದ ಜವಾಬ್ದಾರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಸಾಮಾನ್ಯ ಭಾಷೆ ಮತ್ತು ಒಮ್ಮತವನ್ನು ಹುಡುಕುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಶಿಕ್ಷಣದ ಪಾತ್ರ
ಅಂತಿಮವಾಗಿ, ಹವಾಮಾನ ಸವಾಲಿನ ಪ್ರಮಾಣವನ್ನು ಎದುರಿಸುವಾಗ, ಆರ್ಥಿಕ ಮತ್ತು ಕಾರ್ಯಾಚರಣೆಯ ಸಂಪನ್ಮೂಲಗಳು ಅವಶ್ಯಕ ಆದರೆ ಈ ಸಂಪನ್ಮೂಲಗಳು ಸಾಕಾಗುವುದಿಲ್ಲ. ರಾಜಕೀಯ ಮತ್ತು ತಾಂತ್ರಿಕ ಪರಿಹಾರಗಳು ಹೊಸ, ಸುಸ್ಥಿರ ಜೀವನ ವಿಧಾನಗಳು ಮತ್ತು ಸೃಷ್ಟಿಯನ್ನು ಕಾಪಾಡಿಕೊಳ್ಳುವ ಶೈಕ್ಷಣಿಕ ಪ್ರಕ್ರಿಯೆಯೊಂದಿಗೆ ಸೇರದ ಹೊರತು ನಾವು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರೇಷಿತ ರಾಯಭಾರಿಯು ಹೇಳಿದರು. ಬೆಲೆಮ್‌ನಲ್ಲಿ ಎರಡನೇ ಸುತ್ತಿನ ಪ್ರಸ್ತಾವನೆಗಳ ಸಮಯದಲ್ಲಿ ತಮ್ಮ ನವೀಕರಿಸಿದ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳಿಗೆ (NDCs) ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳನ್ನು ಸೇರಿಸಿರುವ ಅನೇಕ ದೇಶಗಳಿಂದ ಬಂದ ಪ್ರೋತ್ಸಾಹದಾಯಕ ಸಂಕೇತಗಳನ್ನು ಮಹಾಧರ್ಮಾಧ್ಯಕ್ಷರು ಸ್ವಾಗತಿಸಿದರು.
 

18 ನವೆಂಬರ್ 2025, 21:44