Britain's Queen Camilla meets nuns from The International Union of Superiors General Britain's Queen Camilla meets nuns from The International Union of Superiors General  (News Group Newspapers Ltd)

UISG ಸಹೋದರಿಯರ ಸೇವೆಯಿಂದ ರಾಣಿ ಕ್ಯಾಮಿಲ್ಲಾರವರು 'ವಿನಮ್ರಳಾಗಿದ್ದಾರೆ'

ಧಾರ್ಮಿಕ ಸಭೆಗಳ ನಾಯಕರು ಧರ್ಮಸಭೆ ಮತ್ತು ಪ್ರಪಂಚದಲ್ಲಿ ಪ್ರವಾದಿಯ ಧ್ವನಿ ಹಾಗೂ ಸಾಕ್ಷಿಯಾಗಲು ಅನುವು ಮಾಡಿಕೊಡುವ ಅಂತರರಾಷ್ಟ್ರೀಯ ಪ್ರಧಾನ ಶ್ರೇಷ್ಠಗುರುಗಳ ಒಕ್ಕೂಟ (UISG)ವನ್ನು ಪ್ರತಿನಿಧಿಸುವ ಕಥೊಲಿಕ ಸಹೋದರಿಯರ ಗುಂಪನ್ನು ರಾಣಿ ಕ್ಯಾಮಿಲ್ಲಾರವರು ಭೇಟಿಯಾಗುತ್ತಾರೆ.

ಲಿಂಡಾ ಬೋರ್ಡೋನಿ

ರಾಣಿ ಕ್ಯಾಮಿಲ್ಲಾರವರು ಗುರುವಾರ ರೋಮ್‌ನಲ್ಲಿ ಅಂತರರಾಷ್ಟ್ರೀಯ ಪ್ರಧಾನ ಶ್ರೇಷ್ಠಗುರುಗಳ ಒಕ್ಕೂಟದ (UISG) ಧಾರ್ಮಿಕ ಮಹಿಳೆಯರ ಗುಂಪನ್ನು ಭೇಟಿಯಾದರು, ವಿಶ್ವದಾದ್ಯಂತ ಸಂಘರ್ಷ, ಬಡತನ ಮತ್ತು ಸ್ಥಳಾಂತರದ ಪರಿಸ್ಥಿತಿಗಳಲ್ಲಿ ವಾಸಿಸುವ ಜನರಿಗೆ ಸಹಾಯ ಮಾಡುವ ಅವರ ಸೇವೆಗೆ ತಮ್ಮ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ರಾಜ ದ್ವಿತೀಯ ಚಾರ್ಲ್ಸ್ ರವರು ಮತ್ತು ರಾಣಿ ಕ್ಯಾಮಿಲ್ಲಾರವರು ಪವಿತ್ರ ಪೀಠಾಧಿಕಾರಿಯೊಂದಿಗಿನ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾಗವಹಿಸಿದ್ದ ಸಂತ ಪೌಲ್ ರವರ ಮಹಾದೇವಾಲಯದ ಗೋಡೆಗಳ ಹೊರಗೆ ನಡೆದ ಧರ್ಮಾಧ್ಯಕ್ಷರುಗಳ ದಿವ್ಯಬಲಿಪೂಜೆಯ ಆಚರಣೆಯ ನಂತರ ವಿಶ್ವಗುರುಗಲ ಬೇಡಾ ಕಾಲೇಜಿನಲ್ಲಿ ಈ ಸಭೆ ನಡೆಯಿತು.

ರಾಜರು ಗುರುವಿದ್ಯಾಮೊದಿರದ ಮೇಲ್ವಿಚಾರಕರನ್ನು/ರೆಕ್ಟರ್ ಮತ್ತು ವಿದ್ಯಾರ್ಥಿಗಳನ್ನು ಭೇಟಿಯಾದಾಗ, ರಾಣಿಯನ್ನು ಆರು UISG ಪ್ರತಿನಿಧಿಗಳು ಸ್ವಾಗತಿಸಿದರು, ಅವರು ತಮ್ಮ ಸೇವಾಕಾರ್ಯದ ಕಥೆಗಳನ್ನು ಮತ್ತು ಮಾನವ ಘನತೆಯ ಸೇವೆಯಲ್ಲಿ ಖಂಡಗಳಾದ್ಯಂತ ಧಾರ್ಮಿಕ ಮಹಿಳೆಯರನ್ನು ಒಂದುಗೂಡಿಸುವ ಧ್ಯೇಯದ ಕಥೆಗಳನ್ನು ಹಂಚಿಕೊಂಡರು.

ಆತ್ಮೀಯತೆಯ ವಿನಿಮಯದ ಕೊನೆಯಲ್ಲಿ, ಸಹೋದರಿಯರು ರಾಣಿ ಕ್ಯಾಮಿಲ್ಲಾರವರಿಗೆ UISG ಯ ಜಾಗತಿಕ ಕಳ್ಳಸಾಗಣೆ ವಿರೋಧಿ ಜಾಲವಾದ ತಾಲಿತಾ ಕುಮ್‌ನ ಸದಸ್ಯೆ ಸಿಸ್ಟರ್ ಸಾಂಡ್ರಾ ಡಿ ಫಿಲಿಪ್ಪಿಸ್ ರಚಿಸಿದ ಸಾಂಕೇತಿಕ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಈ ವರ್ಣಚಿತ್ರವು ಮಾನವ ಕಳ್ಳಸಾಗಣೆಯಿಂದ ಬದುಕುಳಿದ ಮಹಿಳೆಯರು ಮತ್ತು ಗಾಯಗೊಂಡ ಮಕ್ಕಳ ಸ್ಥಿತಿಸ್ಥಾಪಕ ಮುಖಗಳನ್ನು ಚಿತ್ರಿಸುತ್ತದೆ, ಮಧ್ಯದಲ್ಲಿ, ಹಾರಲು ಹೊರಟಿರುವ ಹಕ್ಕಿಯೊಂದಿಗೆ ಚಾಚಿದ ಕೈಯನ್ನು ಚಿತ್ರಿಸುತ್ತದೆ. ಇದು ದುಃಖ ಮತ್ತು ಪರಿವರ್ತನೆ ಎರಡನ್ನೂ ಪ್ರತಿನಿಧಿಸುತ್ತದೆ, "ಆಳವಾದ ನೋವಿನಲ್ಲೂ ಬೆಳಕು, ಸೌಂದರ್ಯ ಮತ್ತು ಭರವಸೆ ಇರಬಹುದು" ಎಂದು ತಾಲಿತಾ ಕುಮ್‌ನ ಅಂತರರಾಷ್ಟ್ರೀಯ ಸಂಯೋಜಕರಾದ ಸಿಸ್ಟರ್ ಅಬ್ಬಿ ಅವೆಲಿನೊರವರು ವಿವರಿಸಿದರು.

ಸಹೋದರಿಯರ ಉಡುಗೊರೆ ಮತ್ತು ಕಥೆಗಳಿಗಾಗಿ ರಾಣಿಯವರು ಸಹೋದರಿಯರಿಗೆ ಧನ್ಯವಾದ ಅರ್ಪಿಸಿದರು. ಸಹೋದರಿಯರ ಸೇವೆಯ ಮಿತಿಯನ್ನು ಕೇಳಲು ನಂಬಲಾಗದಷ್ಟು ಹೃದಯಸ್ಪರ್ಶಿಯಾಗಿದ್ದಾರೆ, ನಿಮ್ಮ ಕೆಲಸ ಮತ್ತು ನೀವು ಸೇವೆ ಸಲ್ಲಿಸುವವರ ಶಕ್ತಿ ಹಾಗೂ ಧೈರ್ಯದಿಂದ ನಾನು ವಿನಮ್ರನಾಗಿದ್ದೇನೆ ಎಂದು ಹೇಳಿದರು.

ಅಭ್ಯಂಗಿತ ಮಹಿಳೆಯರ ಜಾಗತಿಕ ಕುಟುಂಬ
ಈ ಗುಂಪನ್ನು ಪರಿಚಯಿಸುತ್ತಾ, UISG ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿಸ್ಟರ್ ರೊಕ್ಸಾನ್ನೆ ಶೇರ್ಸ್ ರವರು, ಸಂಸ್ಥೆಯ ಧ್ಯೇಯ ಮತ್ತು ವ್ಯಾಪ್ತಿಯನ್ನು ವಿವರಿಸಿದರು. ಅಂತರರಾಷ್ಟ್ರೀಯ ಪ್ರಧಾನ ಶ್ರೇಷ್ಠಗುರುಗಳ ಒಕ್ಕೂಟವು 95 ದೇಶಗಳಿಂದ 1,900ಕ್ಕೂ ಹೆಚ್ಚು ಸಭಾ ನಾಯಕರನ್ನು ಒಟ್ಟುಗೂಡಿಸುತ್ತದೆ ಎಂದು ಅವರು ಹೇಳಿದರು. ನಾವು ಒಟ್ಟಾಗಿ, ಶಾಲೆಗಳು, ಆಸ್ಪತ್ರೆಗಳು, ನಿರಾಶ್ರಿತರ ಶಿಬಿರಗಳು, ಗ್ರಾಮೀಣ ಧ್ಯೇಯಗಳು ಮತ್ತು ಹೆಚ್ಚಾಗಿ ಅಂಚಿನಲ್ಲಿರುವ ಸಮುದಾಯಗಳಲ್ಲಿ ದೇವರ ಜನರ ಸೇವೆಯಲ್ಲಿ ಜೀವಿಸಿಸುವ ಮತ್ತು ಕೆಲಸ ಮಾಡುವ ಸುಮಾರು 600,000 ಸಹೋದರಿಯರನ್ನು ಪ್ರತಿನಿಧಿಸುತ್ತೇವೆ.
 

23 ಅಕ್ಟೋಬರ್ 2025, 21:57