Sen. Mark Warner Volunteers At Arlington Food Assistance Center To Assist Families Hurt By Gov't Shutdown

ಸಂತ್ರಸ್ತರುಗಳ ಘನತೆಯನ್ನು ನೆನಪಿಸಿಕೊಳ್ಳಲು ಯುಎಸ್ ಧರ್ಮಾಧ್ಯಕ್ಷರುಗಳಿಗೆ ಕರೆ

1890ರ ಹತ್ಯಾಕಾಂಡದ ಸುತ್ತಲಿನ ಇತಿಹಾಸವನ್ನು ಗೌರವಿಸುವ ಅಗತ್ಯವನ್ನು ಅಮೇರಿಕದ ದಕ್ಷಿಣ ಡಕೋಟಾದ ಧರ್ಮಾಧ್ಯಕ್ಷರು ಒತ್ತಿಹೇಳುತ್ತಾರೆ, ಆ ಸಮಯದಲ್ಲಿ ನೂರಾರು ಸ್ಥಳೀಯ ಲಕೋಟಾದ ಜನರನ್ನು ಸೈನಿಕರು ಕೊಂದರು. ಈ ಹತ್ಯಾಕಾಂಡದಲ್ಲಿ ಭಾಗವಹಿಸಿದ ಸೈನಿಕರಿಗೆ ನೀಡಲಾಗುವ ಗೌರವ ಪದಕಗಳನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಯುಎಸ್ ರಕ್ಷಣಾ ಕಾರ್ಯದರ್ಶಿಯವರು ಘೋಷಿಸಿದರು.

ವ್ಯಾಟಿಕನ್ ಸುದ್ದಿ

1890ರ ಹತ್ಯಾಕಾಂಡದಲ್ಲಿ ಭಾಗಿಯಾದ ಇಪ್ಪತ್ತು ಸೈನಿಕರಿಗೆ ನೀಡಲಾದ ಗೌರವ ಪದಕಗಳನ್ನು ಉಳಿಸಿಕೊಳ್ಳುವ ಬಗ್ಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಘೋಷಿಸಿದ ನಿರ್ಧಾರಕ್ಕೆ ಅಮೆರಿಕದ ದಕ್ಷಿಣ ಡಕೋಟಾದ ರಾಪಿಡ್ ಪಟ್ಟಣದ ಧರ್ಮಾಧ್ಯಕ್ಷರಾದ ಸ್ಕಾಟ್ ಬುಲಕ್ ರವರು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸುಮಾರು 300 ನಿರಾಯುಧ ಲಕೋಟಾದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದರು. ಸೈನಿಕರಿಗೆ ನೀಡಲಾಗುವ ಗೌರವಗಳನ್ನು ಉಳಿಸಿಕೊಳ್ಳುವ ರಕ್ಷಣಾ ಕಾರ್ಯದರ್ಶಿಯ ನಿರ್ಧಾರದ ನಂತರ, ಧರ್ಮಾಧ್ಯಕ್ಷರು ದಕ್ಷಿಣ ಡಕೋಟಾದ ವೆಸ್ಟ್ ರಿವರ್‌ನ ಡಿ ಸ್ಮೆಟ್ ಜೆಸ್ವಿಟ್ ಸಮುದಾಯದೊಂದಿಗೆ ಈ ವಿಷಯದ ಕುರಿತು ಹೇಳಿಕೆ ನೀಡಿದರು.

ಸತ್ಯ, ಆತ್ಮಸಾಕ್ಷಿ ಮತ್ತು ಕರುಣೆಯ ಆಧಾರದ ಮೇಲೆ
ಡಿ ಸ್ಮೆಟ್ ಜೆಸ್ವಿಟ್ ಸಮುದಾಯ ಮತ್ತು ಧರ್ಮಾಧ್ಯಕ್ಷರಾದ ಬುಲಕ್ ರವರ ಹೇಳಿಕೆಯು ಹತ್ಯಾಕಾಂಡವು ಒಂದು ಶೌರ್ಯದ ಕೃತ್ಯವಲ್ಲ ಆದರೆ ಗಂಭೀರ ನೈತಿಕ ದೌರ್ಜನ್ಯ ಎಂದು ಒತ್ತಿಹೇಳಿತು. ಹತ್ಯಾಕಾಂಡವನ್ನು ಖಂಡಿಸಿ ಜನರಲ್ ನೆಲ್ಸನ್ ಮೈಲ್ಸ್ ಅವರ 1891ರ ಪತ್ರ ಮತ್ತು ಪದಕಗಳನ್ನು ಖಂಡಿಸಿ 2024ರ ದಕ್ಷಿಣ ಡಕೋಟಾ ಸೆನೆಟ್ ನಿರ್ಣಯ 701 ಸೇರಿದಂತೆ ಐತಿಹಾಸಿಕ ಮೂಲಗಳನ್ನು ಉಲ್ಲೇಖಿಸಿ, ಅಂತಹ ಕೃತ್ಯಗಳನ್ನು ಗೌರವಿಸುವುದು ಇತಿಹಾಸವನ್ನು ವಿರೂಪಗೊಳಿಸುತ್ತದೆ ಮತ್ತು ಗೌರವ ಪದಕವನ್ನು ಅವಮಾನಿಸುತ್ತದೆ ಎಂದು ಹೇಳಿಕೆ ಹೇಳುತ್ತದೆ.

ಡಿಸೆಂಬರ್ 29, 1890 ರಂದು ವೂಂಡೆಡ್ ನೀ ಕ್ರೀಕ್‌ನಲ್ಲಿ ನಡೆದ ದುರಂತದ ಸತ್ಯಗಳು ಸ್ಪಷ್ಟವಾಗಿವೆ. ಆ ದಿನ, ಯು.ಎಸ್. ಸೇನಾ ಸೈನಿಕರು ಸುಮಾರು 300 ಲಕೋಟಾದ ಮಹಿಳೆಯರು, ಮಕ್ಕಳು ಮತ್ತು ನಿರಾಯುಧ ಪುರುಷರನ್ನು ಹತ್ಯೆ ಮಾಡಿದರು. ಇದು ಯುದ್ಧವಾಗಿರಲಿಲ್ಲ. ಈ ಕೃತ್ಯಗಳನ್ನು ಗೌರವಾನ್ವಿತವೆಂದು ಗುರುತಿಸುವುದು ಇತಿಹಾಸವನ್ನೇ ವಿರೂಪಗೊಳಿಸಿದಂತೆ, ಆದ್ದರಿಂದ, ನಮ್ಮ ಪ್ರತಿಕ್ರಿಯೆಯು 'ರಾಜಕೀಯ ಸರಿಯಾದತೆ'ಯಲ್ಲಿ ಅಲ್ಲ, ಬದಲಾಗಿ ಸತ್ಯ, ಆತ್ಮಸಾಕ್ಷಿ ಮತ್ತು ಕರುಣೆಯಲ್ಲಿ ನೆಲೆಗೊಂಡಿರುವ ಪ್ರಾರ್ಥನಾಪೂರ್ವಕ ಸರಿಯಾದತೆಯಲ್ಲಿ ಬೇರೂರಿದೆ" ಎಂದು ಅವರು ಬರೆಯುತ್ತಾರೆ.

ಮಾನವ ಜೀವನದ ಪವಿತ್ರ ಘನತೆ
ಅವರು ಪ್ರತಿಯೊಬ್ಬ ಮಾನವ ಜೀವನದ, ಸಂತ್ರಸ್ತರುಗಳು ಮತ್ತು ಅಪರಾಧಿಗಳು, ಪವಿತ್ರ ಘನತೆಯನ್ನು ನೆನಪಿಸಿಕೊಳ್ಳುವಲ್ಲಿ, "ಕ್ರೈಸ್ತರ ವಿಶ್ವಾಸದಲ್ಲಿ ನೆಲೆಗೊಂಡಿರುವ" ಈ ಹಿಂದಿನ ದುರಂತ ಘಟನೆಯನ್ನು ನೋಡುವುದನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಅದೇ ಸಮಯದಲ್ಲಿ ದುಷ್ಟ ಕ್ರಿಯೆಗಳನ್ನು ಆಚರಿಸಲಾಗುವುದಿಲ್ಲ ಎಂದು ಒತ್ತಾಯಿಸುತ್ತಾರೆ. ಅವರು ಪ್ರಾಮಾಣಿಕತೆ ಮತ್ತು ಕರುಣೆಯಲ್ಲಿ ಬೇರೂರಿರುವ ಸತ್ಯ, ಪಶ್ಚಾತ್ತಾಪ ಮತ್ತು ಸಮನ್ವಯಕ್ಕಾಗಿ, ಶಾಂತಿ ಹಾಗೂ ನ್ಯಾಯದ ಭವಿಷ್ಯವನ್ನು ನಿರ್ಮಿಸಲು ಐತಿಹಾಸಿಕ ಅನ್ಯಾಯಗಳನ್ನು ಎದುರಿಸಲು ಅಮೆರಿಕದವರನ್ನು ಒತ್ತಾಯಿಸುತ್ತಾರೆ ಎಂದು ಕರೆ ನೀಡುತ್ತಾರೆ.

ಈ ಹೇಳಿಕೆಯು ಲಕೋಟಾ ಜನರಿಗೆ ಅವರು ಸಲ್ಲಿಸಿದ ಸೇವೆಯನ್ನು ಮತ್ತಷ್ಟು ನೆನಪಿಸುತ್ತದೆ ಮತ್ತು ಸರ್ಕಾರವು ತನ್ನ ಸೈನಿಕರನ್ನು ಗೌರವಿಸುವ ಉದ್ದೇಶವನ್ನು ಅವರು ಒಪ್ಪಿಕೊಳ್ಳುತ್ತಾರೆ, ಆದರೆ ಸಂತ್ರಸ್ತರುಗಳ ಮಾನವೀಯತೆಯನ್ನು ಅಳಿಸಿಹಾಕುವ ಅಥವಾ ಹಿಂಸಾಚಾರದ ಕೃತ್ಯಗಳನ್ನು ವೈಭವೀಕರಿಸುವ ಯಾವುದೇ ನಿರೂಪಣೆಯನ್ನು ದೃಢವಾಗಿ ತಿರಸ್ಕರಿಸುತ್ತದೆ.

ಸತ್ಯವನ್ನು ಮಾತನಾಡುವುದು
ಯೇಸುವಿನ ಶಕ್ತಿ ಮತ್ತು ಪ್ರೀತಿಯ ಮೂಲಕ, ನಾವು ಅವರಂತೆ, ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲಲು, ಸತ್ಯದಲ್ಲಿ ಒಟ್ಟಿಗೆ ನಡೆಯಲು, ಬಲಿಪಶುಗಳನ್ನು ನೆನಪಿಸಿಕೊಳ್ಳಲು, ಪ್ರಾಮಾಣಿಕತೆ ಮತ್ತು ಸಹಾನುಭೂತಿಯಲ್ಲಿ ಬೇರೂರಿರುವ ಸಮನ್ವಯವನ್ನು ಹುಡುಕಲು ಆರಿಸಿಕೊಳ್ಳೋಣ. ನಮ್ಮ ಹಂಚಿಕೆಯ ಇತಿಹಾಸದ ಶಿಲುಬೆಯನ್ನು ಎದುರಿಸುವ ಮೂಲಕ ಮಾತ್ರ ನಾವು ಪುನರುತ್ಥಾನದತ್ತ ಸಾಗಬಹುದು, ದೇವರ ಎಲ್ಲಾ ಪ್ರೀತಿಯ ಮಕ್ಕಳಿಗೆ ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಭವಿಷ್ಯ ಸೃಷ್ಟಿಸೋಣ.
 

23 ಅಕ್ಟೋಬರ್ 2025, 22:06