Peter To Rot with Archbishop Rochus Josef Tatamai MSC Peter To Rot with Archbishop Rochus Josef Tatamai MSC  (© Fr. Zdzislaw Mlak SVD in PNG)

ಮಹಾಧರ್ಮಾಧ್ಯಕ್ಷರಾದ ಟಾಟಮೈ ತಮ್ಮ ಸಂಬಂಧಿ, ಪೂಜ್ಯ ಪೀಟರ್ ಟು ರಾಟ್‌ ರವರ ಪರಂಪರೆ

ಪೂಜ್ಯ ಪೀಟರ್ ಟು ರೋಟ್ ರವರ ಸೋದರಳಿಯ ಮಹಾಧರ್ಮಾಧ್ಯಕ್ಷರಾದ ರೋಚಸ್ ಟಾಟಮೈರವರು, ಪಪುವಾ ನ್ಯೂಗಿನಿಯದ ಕಥೊಲಿಕ ರಕ್ತಸಾಕ್ಷಿಗಳರವರ ಕುಟುಂಬದ ಇತಿಹಾಸವನ್ನು ಹಂಚಿಕೊಳ್ಳುತ್ತಾ, ನಂಬಿಕೆಯು, ವಿಶ್ವಾಸ, ಪ್ರಾರ್ಥನೆ ಮತ್ತು ನಮ್ಮ ನೆರೆಹೊರೆಯವರಿಗೆ ಸಹಾಯ ಮಾಡುವ ಮೂಲಕ ನಮ್ಮ ದೈನಂದಿನ ಜೀವನದ ಭಾಗವಾಗಿದೆ ಎಂದು ಹೇಳಿದರು.

ಸಿಸ್ಟರ್ ಕ್ರಿಸ್ಟೀನ್ ಮಾಸಿವೊ, ಸಿಪಿಎಸ್

ಅಕ್ಟೋಬರ್ 19, 2025 ರಂದು ಪೂಜ್ಯರಾದ ಪೀಟರ್ ಟು ರೋಟ್ ರವರನ್ನು ಸಂತರ ಪದವಿಗೆ ಸೇರಿಸುವ ಮೊದಲು, ಪಪುವಾ ನ್ಯೂಗಿನಿಯಾದ ರಬೌಲ್‌ನ ಮಹಾಧರ್ಮಾಧ್ಯಕ್ಷರು, ಎಂಎಸ್‌ಸಿ, ಮಹಾಧರ್ಮಾಧ್ಯಕ್ಷರಾದ ರೋಚಸ್ ಜೋಸೆಫ್ ಟಾಟಮೈರವರು, ಹುತಾತ್ಮರ ಪರಂಪರೆಯ ಬಗ್ಗೆ ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡಿದರು, ಅದು ವೈಯಕ್ತಿಕವಾಗಿ ಮತ್ತು ಆಳವಾದ ಆಧ್ಯಾತ್ಮಿಕವಾಗಿದೆ ಎಂದು ಅವರು ಹೇಳಿದರು.

ಪೂಜ್ಯ ಪೀಟರ್ ಟು ರೋಟ್ 1945ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನವರಿಂದ ಪಪುವಾ ನ್ಯೂಗಿನಿಯಾದಲ್ಲಿ ತನ್ನ ವಿಶ್ವಾಸಕ್ಕಾಗಿ ಹುತಾತ್ಮರಾದ ಯುವ ಧರ್ಮೋಪದೇಶಕರಾಗಿದ್ದರು. ಮಹಾಧರ್ಮಾಧ್ಯಕ್ಷರಾದ ರೋಚಸ್ ಜೋಸೆಫ್ ಟಾಟಮೈರವರು ತಮ್ಮ ಮುತ್ತಜ್ಜನ ಧೈರ್ಯ ಮತ್ತು ನಂಬಿಕೆಯ ಕಥೆಗಳ ಮೂಲಕ ಅಳವಾದ ವಿಶ್ವಾಸದಲ್ಲಿ ಬೆಳೆದರು ಎಂದು ಹೇಳಿದರು. "ಚಿಕ್ಕ ವಯಸ್ಸಿನಿಂದಲೂ, ನಮ್ಮ ಮನೆಯಲ್ಲಿ ಅವರ ಉಪಸ್ಥಿತಿಯನ್ನು ನಾನು ಅನುಭವಿಸಿದೆ" ಎಂದು ಪಿಎನ್‌ಜಿ ಮಹಾಧರ್ಮಾಧ್ಯಕ್ಷರು ನೆನಪಿಸಿಕೊಂಡರು.

ಕುಟುಂಬ ಮತ್ತು ವಿಶ್ವಾಸ
1912ರಲ್ಲಿ ಜನಿಸಿದ ಪೀಟರ್ ಟು ರೋಟ್, ರಕುನೈ ಗ್ರಾಮದಲ್ಲಿನ ಕುಟುಂಬದ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿದ್ದರು. “ಅವರ ಒಡಹುಟ್ಟಿದವರು ಪೀಟರ್ ಟು ರೋಟ್ ರವರ ಅಕ್ಕ ಥೆರೆಸಾ ಇಯಾವರ್ಪಿಲಾಕ್ ರವರು; ಪೀಟರ್ ಟು ರೋಟ್ ರವರ ಹಿರಿಯ ಸಹೋದರ ಜೋಸೆಫ್ ಟಾಟಮೈರವರು, ಸ್ವತಃ ಪೀಟರ್ ಟು ರೋಟ್; ಮತ್ತು ಗೇಬ್ರಿಯಲ್ ಟೆಲೋರವರು. ಅವರ ಪೋಷಕರಾದ ಏಂಜೆಲೊ ಟೊಪುಯಾರವರು ಮತ್ತು ಮಾರಿಯಾ ಇಯಾತುಮುಲ್ ರವರು ಕಥೊಲಿಕರಾಗಿ ಸ್ನಾನದೀಕ್ಷೆ ಮಾಡಿದ ಮೊದಲಿಗರು ಮತ್ತು ನಮ್ಮ ಸಮುದಾಯದಲ್ಲಿ ಇಡೀ ಕುಟುಂಬವು ಪವಿತ್ರ ಹೃದಯದ ಸಭೆಯ ಧರ್ಮಪ್ರಚಾರಕರಿಂದ ಸ್ನಾನದೀಕ್ಷೆ ಸ್ವೀಕರಿಸಲ್ಪಟ್ಟಿತು, ”ಎಂದು ಮಹಾಧರ್ಮಾಧ್ಯಕ್ಷರಾದ ಟಾಟಮೈರವರು ಹೇಳಿದರು.

ಮಹಾಧರ್ಮಾಧ್ಯಕ್ಷರು ತಮ್ಮ ವಂಶಾವಳಿಯನ್ನು ನೇರವಾಗಿ ತಮ್ಮ ಅಜ್ಜ ಚಿಕ್ಕಪ್ಪ ಪೀಟರ್ ಟು ರಾಟ್ ಅವರ ಹಿರಿಯ ಸಹೋದರ ಜೋಸೆಫ್ ಟಾಟಮೈರವರೆಗೆ ಗುರುತಿಸುತ್ತಾರೆ.

ನನ್ನ ಹೆತ್ತವರು ಮತ್ತು ಅಜ್ಜಿಯರು ದೇವರು ಹಾಗೂ ಸಮುದಾಯದ ಬಗ್ಗೆ ಅವರ ಅಚಲ ಬದ್ಧತೆಯ ಬಗ್ಗೆ ನಮಗೆ ಹೇಳುತ್ತಿದ್ದರು. ಅದು ಕೇವಲ ಇತಿಹಾಸವಲ್ಲ, ಅದು ಜೀವಂತ ಉದಾಹರಣೆಯಾಗಿತ್ತು ಎಂದು ಅವರು ಹೇಳಿದರು.

ಮಹಾಧರ್ಮಾಧ್ಯಕ್ಷರಾದ ಟಾಟಮೈ ರವರ ಅಜ್ಜ ಒಂದು ದಿನ ಕುಟುಂಬದಲ್ಲಿ ಒಬ್ಬ ಧರ್ಮಗುರುವಾಗುತ್ತಾರೆ ಎಂದು ಆಶಿಸಿದ್ದರು, ಮತ್ತು ರೋಚಸ್ ಟಾಟಮೈ ರವರನ್ನು ಒಬ್ಬ ಯಾಜಕರಾಗಿ ದೀಕ್ಷೆ ಸ್ವೀಕರಿಸಿದ ದಿನದಂದು ಹಳ್ಳಿಯ ಹಿರಿಯರು ಈ ವಿಷಯಗಳನ್ನು ನೆನಪಿಸಿಕೊಂಡರು.
 

02 ಅಕ್ಟೋಬರ್ 2025, 15:23