ಹುಡುಕಿ

Foto funerali cardinale Lucian Mureşan Foto funerali cardinale Lucian Mureşan 

ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರ – ಅಕ್ಟೋಬರ್ 1, 2025

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿಯಲ್ಲಿ: ಒಮ್ಮೆ ಕಿರುಕುಳಕ್ಕೊಳಗಾದ ರೊಮೇನಿಯನ್ ಕಾರ್ಡಿನಲ್ ರವರ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ, ಇಥಿಯೋಪಿಯನ್ನರು ಶಿಲುಬೆಯ ಹಬ್ಬವನ್ನು ಆಚರಿಸುತ್ತಾರೆ ಮತ್ತು ನೈಸಿಯಾದ 1700ನೇ ವಾರ್ಷಿಕೋತ್ಸವವನ್ನು ಇರಾಕ್‌ನಲ್ಲಿ ಆಚರಿಸಲಾಗುತ್ತಿದೆ.

ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರ

ಪೂರ್ವ ಕ್ರೈಸ್ತರ ಕುರಿತು ನಿಮ್ಮ ಸಾಪ್ತಾಹಿಕ ನವೀಕರಣವಾದ ಸುದ್ಧಿಯು ಓರಿಯಂಟ್‌ಗೆ ಸುಸ್ವಾಗತ.

ಕಾರ್ಡಿನಲ್ ಲೂಸಿಯನ್ ಮುರೇಸನ್ ರವರ ಅಂತ್ಯಕ್ರಿಯೆ
ರೊಮೇನಿಯನ್ ಗ್ರೀಕ್-ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಲೂಸಿಯನ್ ಮುರೆಸನ್ ರವರು ಕಳೆದ ವಾರ ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಸೆಪ್ಟೆಂಬರ್ 29, ಸೋಮವಾರ ಬ್ಲಾಜ್‌ನಲ್ಲಿರುವ ಪರಮ-ತ್ರಿತ್ವದ ಪ್ರಧಾನಾಲಯದಲ್ಲಿ ನಡೆಸಲಾಯಿತು. ಪ್ರಧಾನಾಲಯದಲ್ಲಿ ಸಾಮರ್ಥ್ಯವನ್ನು ಮೀರಿ ಜನಸಮೂಹ ಸೇರಿತ್ತು. ಪ್ರೇಷಿತ ರಾಯಭಾರಿ ಮತ್ತು ರೊಮೇನಿಯಾದ ಅಧ್ಯಕ್ಷರು ಸೇರಿದಂತೆ ಶೋಕತಪ್ತರು ಭಾಗವಹಿಸಿದ್ದರು. ರಾಷ್ಟ್ರದ ಇತಿಹಾಸದಲ್ಲಿ ಗ್ರೀಕ್-ಕಥೊಲಿಕರು ವಹಿಸಿರುವ ಪ್ರಮುಖ ಪಾತ್ರಕ್ಕೆ ಅಧ್ಯಕ್ಷರು ಗೌರವ ಸಲ್ಲಿಸಿದರು. ಕಾರ್ಡಿನಲ್ ಮುರೇಸನ್ ರವರ ಧರ್ಮಸಭೆಯ ಮೊದಲ ಪ್ರಧಾನ ಮಹಾಧರ್ಮಾಧ್ಯಕ್ಷರಾಗಿದ್ದರು ಮತ್ತು 2012ರಲ್ಲಿ ಪೋಪ್ XVI ನೇ ಬೆನೆಡಿಕ್ಟ್ ರವರಿಂದ ಕಾರ್ಡಿನಲ್ ಆಗಿ ನೇಮಕಗೊಂಡರು. ಕಮ್ಯುನಿಸ್ಟ್ ಆಡಳಿತದಲ್ಲಿ ಅವರ ಧರ್ಮಸಭೆಯು ಅನುಭವಿಸಿದ ಕಿರುಕುಳಕ್ಕೆ ಅವರು ಕೊನೆಯ ಜೀವಂತ ಸಾಕ್ಷಿಗಳಲ್ಲಿ ಒಬ್ಬರಾಗಿದ್ದರು.

ಇಥಿಯೋಪಿಯಾದಲ್ಲಿ ಮೆಸ್ಕೆಲ್ ಆಚರಿಸಿದರು
ಸೆಪ್ಟೆಂಬರ್ 27, ಶನಿವಾರ, ಇಥಿಯೋಪಿಯಾ ಮತ್ತು ಎರಿಟ್ರಿಯಾದಲ್ಲಿನ ಕ್ರೈಸ್ತರು ಶಿಲುಬೆಯ ಹಬ್ಬವಾದ ಮೆಸ್ಕೆಲ್ ಅನ್ನು ಆಚರಿಸಿದರು. 1,600 ವರ್ಷಗಳಿಗೂ ಹಳೆಯದಾದ ಈ ಸಂಪ್ರದಾಯವು ಸಾಮ್ರಾಜ್ಞಿ ಹೆಲೆನಾರವರಿಂದ ನಿಜವಾದ ಶಿಲುಬೆಯ ಆವಿಷ್ಕಾರವನ್ನು ಸ್ಮರಿಸುತ್ತದೆ. ಈ ಸಂದರ್ಭಕ್ಕಾಗಿ ಕುಟುಂಬಗಳು ತಮ್ಮ ಸ್ಥಳೀಯ ಹಳ್ಳಿಗಳಿಗೆ ಹಿಂತಿರುಗುತ್ತಾರೆ ಮತ್ತು ಹೂವುಗಳು ಮತ್ತು ಹಳದಿ ಗಿಡಮೂಲಿಕೆಗಳಿಂದ ಆವೃತವಾದ ದೊಡ್ಡ ದೀಪೋತ್ಸವವಾದ ಡೆಮೆರಾವನ್ನು ಬೆಳಗಿಸುವಲ್ಲಿ ಭಾಗವಹಿಸುತ್ತಾರೆ. ಈ ಆಚರಣೆಯು ನೃತ್ಯಗಳು, ಧಾರ್ಮಿಕ ಹಾಡುಗಳು ಮತ್ತು ಮೆರವಣಿಗೆಗಳನ್ನು ಒಳಗೊಂಡಿದೆ, ಇದು ಇಥಿಯೋಪಿಯದ ಕ್ರೈಸ್ತರು ಪಂಚಾಂಗದಲ್ಲಿ ಅತ್ಯಂತ ಮಹತ್ವದ ಘಟನೆಗಳಲ್ಲಿ ಒಂದಾಗಿದೆ.

ಅಂಕವಾದಲ್ಲಿ ನೈಸಿಯಾ 1700ನೇ ವಾರ್ಷಿಕೋತ್ಸವ
ಸೆಪ್ಟೆಂಬರ್ 27 ರಿಂದ 29 ರವರೆಗೆ, ಪೂರ್ವದ ಅಸ್ಸಿರಿಯದ ಧರ್ಮಸಭೆಯ ಮೂರನೇ ಕಥೊಲಿಕೋಸ್ ಮಾರ್ ಅವಾರವರು, ಇರಾಕ್‌ನ ಅಂಕವಾದಲ್ಲಿ ನೈಸಿಯಾ ಕೌನ್ಸಿಲ್‌ನ 1700ನೇ ವಾರ್ಷಿಕೋತ್ಸವವನ್ನು ಗುರುತಿಸುವ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದರು. ಪ್ರಪಂಚದಾದ್ಯಂತದ ಹಲವಾರು ಯಾಜಕರು ಮತ್ತು ವಿದ್ವಾಂಸರೊಂದಿಗೆ ಎಲ್ಲಾ ಅಸಿರಿಯದ ಧರ್ಮಾಧ್ಯಕ್ಷರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಅಧಿವೇಶನದಲ್ಲಿ ಚಾಲ್ಡಿಯನ್ ಪಿತೃಪ್ರಧಾನ ಕಾರ್ಡಿನಲ್ ಸಾಕೊರವರು ಭಾಗವಹಿಸಿದ್ದರು. ಭಾನುವಾರ ಬೆಳಿಗ್ಗೆ, ಮಾರ್ ಆವಾರವರು ಮಾರ್ ಯೂಖಾನಾದ ಅಸ್ಸಿರಿಯದ ಧರ್ಮಸಭೆಯಲ್ಲಿ ತಮ್ಮ ಧರ್ಮಸಭೆಯ ಯಾಜಕರುಗಳು ಮತ್ತು ಸಮ್ಮೇಳನದಲ್ಲಿ ಭಾಗವಹಿಸುವವರೊಂದಿಗೆ ದಿವ್ಯಬಲಿಪೂಜೆಯನ್ನು ಸಲ್ಲಿಸಿದರು. ಡೊಮಿನಿಕನ್ ಮತ್ತು ಕ್ರೈಸ್ತರ ಏಕತೆಯನ್ನು ಉತ್ತೇಜಿಸುವ ಡಿಕಾಸ್ಟರಿ ಸದಸ್ಯರಾದ ಸಹೋದರ ಹಯಾಸಿಂಥೆ ಕೂಡ ಉಪಸ್ಥಿತರಿದ್ದರು, ಇದು ಧರ್ಮಾಧ್ಯಕ್ಷರುಗಳ ಸಂವಾದದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
 

02 ಅಕ್ಟೋಬರ್ 2025, 15:27