ಹುಡುಕಿ

ಚೈನಾದ ಶಾಂಘೈನ ಸಹಾಯಕ ಧರ್ಮಾಧ್ಯಕ್ಷರವರ ಅಭ್ಯಂಗಿತ ಜೀವನದ ದೀಕ್ಷಾಚಾರಣೆ

ಬುಧವಾರ, ಅಕ್ಟೋಬರ್ 15 ರಂದು, ಧರ್ಮಾಧ್ಯಕ್ಷರಾದ ಇಗ್ನೇಷಿಯಸ್ ವು ಜಿಯಾನ್ಲಿನ್ ರವರ ಅಭ್ಯಂಗಿತ ಜೀವನದ ಧರ್ಮಾಧ್ಯಕ್ಷ ದೀಕ್ಷೆ ನಡೆಯಿತು.

ವ್ಯಾಟಿಕನ್ ಸುದ್ದಿ

ಆಗಸ್ಟ್ 11, 2025 ರಂದು, ವಿಶ್ವಗುರು ಹದಿನಾಲ್ಕನೇ ಲಿಯೋರವರು ಪೂಜ್ಯರಾದ ಇಗ್ನೇಷಿಯಸ್ ವು ಜಿಯಾನ್ಲಿನ್ ರವರನ್ನು ಶಾಂಘೈನ (ಚೈನಾದ ಶಾಂಘೈ ಪುರಸಭೆ) ಸಹಾಯಕ ಧರ್ಮಾಧ್ಯಕ್ಷರನ್ನಾಗಿ ನೇಮಿಸಿದರು, ಪವಿತ್ರ ಪೀಠಾಧಿಕಾರಿ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ನಡುವಿನ ತಾತ್ಕಾಲಿಕ ಒಪ್ಪಂದದ ಚೌಕಟ್ಟಿನೊಳಗೆ ಅವರ ಉಮೇದುವಾರಿಕೆಯನ್ನು ಅನುಮೋದಿಸಿದರು.

ಜೀವನ ಚರಿತ್ರೆ

ಪೂಜ್ಯರಾದ ಧರ್ಮಾಧ್ಯಕ್ಷ ಇಗ್ನೇಷಿಯಸ್ ವು ಜಿಯಾನ್ಲಿನ್ ರವರು ಜನವರಿ 27, 1970 ರಂದು ಜನಿಸಿದರು. 1991 ರಿಂದ 1996 ರವರೆಗೆ, ಅವರು ಶಾಂಘೈ ಧರ್ಮಕ್ಷೇತ್ರದಲ್ಲಿರುವ ಶೇಷನ್ ಗುರುವಿದ್ಯಾಮಂದಿರದಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರವನ್ನು ಅಧ್ಯಯನ ಮಾಡಿದರು.

ಅವರನ್ನು ನವೆಂಬರ್ 22, 1997 ರಂದು ಒಬ್ಬ ಯಾಜಕರನ್ನಾಗಿ ದೀಕ್ಷೆ ನೀಡಲಾಯಿತು ಮತ್ತು ಅದೇ ಗುರುವಿದ್ಯಾಮಂದಿರದಲ್ಲಿ ಆಧ್ಯಾತ್ಮಿಕ ನಿರ್ದೇಶಕರಾಗಿ ಮತ್ತು ಝೋಂಗ್‌ಶಾನ್ ಧರ್ಮಕೇಂದ್ರದ ಸಹಾಯಕ ಯಾಜಕರನ್ನಾಗಿ ದೀಕ್ಷೆ ನೀಡಲಾಯಿತು.

1999 ರಿಂದ  2012, ರವರೆಗೆ, ಅವರು ಧರ್ಮಕ್ಷೇತ್ರಕ್ಕೆ ಉಪಕುಲಪತಿಯಾಗಿ ಮತ್ತು ಕ್ಯುಜಿಯಾವಾನ್‌ನ ಸಭಾಪಾಲಕರಾಗಿ ಸೇವೆ ಸಲ್ಲಿಸಿದರು.

2013 ರಿಂದ 2023 ರವರೆಗೆ, ಅವರು ಖಾಲಿ ಹುದ್ದೆಯ ಅವಧಿಯಲ್ಲಿ ಧರ್ಮಕ್ಷೇತ್ರದ ಆಡಳಿತಕ್ಕೆ ಕೊಡುಗೆ ನೀಡಿದರು ಮತ್ತು ನಂತರ ಧರ್ಮಪ್ರಾಂತ್ಯದ ಪ್ರಧಾನ ಹುದ್ದೆಯನ್ನು ಅಲಂಕರಿಸಿದರು

17 ಅಕ್ಟೋಬರ್ 2025, 16:47