ಆಫ್ರಿಕಾದ ಧರ್ಮಸಭೆಯೊಂದಿಗೆ ದೃಢವಾದ ಒಗ್ಗಟ್ಟನ್ನು ಪುನರುಚ್ಚರಿಸಿದ ಅಮೆರಿಕದ ಧರ್ಮಾಧ್ಯಕ್ಷರುಗಳು
ಡೆವಿನ್ ವ್ಯಾಟ್ಕಿನ್ಸ್
ಮುಂದುವರೆಯುತ್ತಿರುವ ಸಂಘರ್ಷಗಳ ನಡುವೆಯೂ ಮಾನವ ಜೀವನ ಮತ್ತು ಘನತೆಗೆ ಗೌರವದ ಆಳವಾದ ಸಾಕ್ಷಿಯನ್ನು ಜಗತ್ತಿಗೆ ನೀಡುತ್ತಿರುವ ಆಫ್ರಿಕಾದ ಧರ್ಮಾಧ್ಯಕ್ಷರುಗಳು ಮತ್ತು ಭಕ್ತವಿಶ್ವಾಸಿಗಳೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ಪುನರುಚ್ಚರಿಸುತ್ತೇವೆ.
ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದಲ್ಲಿ (ಯುಎಸ್‌ಸಿಸಿಬಿ) ಅಂತರರಾಷ್ಟ್ರೀಯ ನ್ಯಾಯ ಮತ್ತು ಶಾಂತಿ ಸಮಿತಿಯ ಅಧ್ಯಕ್ಷ ಧರ್ಮಾಧ್ಯಕ್ಷರಾದ ಎ. ಎಲಿಯಾಸ್ ಜೈದಾನ್ ರವರು ಅಮೆರಿಕದ ಧರ್ಮಾಧ್ಯಕ್ಷರುಗಳ ಪರವಾಗಿ ಆ ಭಾವನೆಯನ್ನು ವ್ಯಕ್ತಪಡಿಸಿದರು.
ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಧರ್ಮಾಧ್ಯಕ್ಷರಾದ ಎ. ಎಲಿಯಾಸ್ ಜೈದಾನ್ ರವರು ಆಫ್ರಿಕನ್ ಖಂಡದಲ್ಲಿ ತಮ್ಮ ಮನೆಗಳು ಮತ್ತು ಸಮುದಾಯಗಳಿಂದ ಸ್ಥಳಾಂತರಗೊಂಡ ಲಕ್ಷಾಂತರ ಜನರು. ಸಂಘರ್ಷ, ಧಾರ್ಮಿಕ ಮತ್ತು ಜನಾಂಗೀಯ ಕಿರುಕುಳ, ಆರ್ಥಿಕ ಸಂಕಷ್ಟ ಮತ್ತು ಪರಿಸರ ಬಿಕ್ಕಟ್ಟುಗಳಿಂದಾಗಿ ಅವರು ಪಲಾಯನ ಮಾಡಿದ್ದಾರೆ ಎಂದು ಅವರು ಹೇಳಿದರು.
ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳು ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಎಲ್ಲಾ ಧರ್ಮದ ಜನರಿಗಾಗಿ ಪ್ರಾರ್ಥನೆಯಲ್ಲಿ ಎಲ್ಲರೂ ಸೇರಲು ಆಹ್ವಾನಿಸಿದರು, ಇದರಿಂದ ಅವರು ಈ ಖಂಡಕ್ಕೆ ಶಾಶ್ವತ ಶಾಂತಿ, ನ್ಯಾಯ ಮತ್ತು ಭದ್ರತೆಯನ್ನು ತರಲು ಒಟ್ಟಾಗಿ ಕೆಲಸ ಮಾಡಬಹುದು ಎಂದು ಧರ್ಮಾಧ್ಯಕ್ಷರಾದ ಎ. ಎಲಿಯಾಸ್ ಜೈದಾನ್ ರವರು ಹೇಳಿದರು.
ಮಾನವೀಯ ನೆರವಿನ ಮೂಲಕ ದೃಢವಾದ ಒಗ್ಗಟ್ಟನ್ನು ಪ್ರದರ್ಶಿಸುವ ಜವಾಬ್ದಾರಿಯನ್ನು ಅಮೆರಿಕ ಸರ್ಕಾರ ಮತ್ತು ಕಥೋಲಿಕ ಧರ್ಮಸಭೆಯು ಸ್ವೀಕರಿಸಬೇಕು ಎಂಬ ತಮ್ಮ ವಿಶ್ವಾಸವನ್ನು ಅಮೆರಿಕ ಧರ್ಮಾಧ್ಯಕ್ಷರುಗಳು ಪುನರುಚ್ಚರಿಸಿದರು.
ಯುಎಸ್‌ಸಿಸಿಬಿ "ಆಫ್ರಿಕಾದಲ್ಲಿ ಧರ್ಮಸಭೆಗಾಗಿ ಒಗ್ಗಟ್ಟಿನ ನಿಧಿ" ಎಂಬ ವಾರ್ಷಿಕ ಅಭಿಯಾನವನ್ನು ನಡೆಸುತ್ತದೆ, ಇದು 2024ರಲ್ಲಿ 32 ದೇಶಗಳಲ್ಲಿ 96 ಯಾಜಕರ ಯೋಜನೆಗಳನ್ನು ಬೆಂಬಲಿಸಲು ಖಂಡದ ಕಥೋಲಿಕ ಸಂಸ್ಥೆಗಳಿಗೆ $2.6 ಮಿಲಿಯನ್ ನೀಡಿತು.
ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಪ್ರಕಾರ, ಒಗ್ಗಟ್ಟಿನ ನಿಧಿಯು ಅಮೇರಿಕದ ಕಥೊಲಿಕರಿಗೆ "ಆಫ್ರಿಕಾದಲ್ಲಿರುವ ತಮ್ಮ ಸಹೋದರ ಸಹೋದರಿಯರೊಂದಿಗೆ ಐಕ್ಯತೆಯ ಮನೋಭಾವವನ್ನು" ವ್ಯಕ್ತಪಡಿಸಲು ಅವಕಾಶವನ್ನು ನೀಡುತ್ತದೆ.
ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸುತ್ತಾ, ಧರ್ಮಾಧ್ಯಕ್ಷರಾದ ಎ. ಎಲಿಯಾಸ್ ಜೈದಾನ್ ರವರು ಶಾಂತಿಯ ರಾಣಿ ಮಾತೆಮರಿಯಮ್ಮನವರು, ಹಿಂಸಾಚಾರದಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಸಾಂತ್ವನ ಹೇಳಲಿ ಮತ್ತು ಅವರ ಸಮುದಾಯಗಳು ಹಾಗೂ ರಾಷ್ಟ್ರಗಳಲ್ಲಿ ಶಾಂತಿಯನ್ನು ಸ್ಥಾಪಿಸಲು ಅವರಿಗೆ ಧೈರ್ಯವನ್ನು ನೀಡಲಿ ಎಂದು ಪ್ರಾರ್ಥಿಸಿದರು.
ವಿಶ್ವಗುರು XIV ಲಿಯೋರವರು ಹೇಳಿರುವಂತೆ, ಪ್ರತಿಯೊಂದು ಸಮುದಾಯವು 'ಶಾಂತಿಯ ನೆಲೆಯಾಗಲಿ, ಅಲ್ಲಿ ಸಂಭಾಷಣೆಯ ಮೂಲಕ ದ್ವೇಷವನ್ನು ಹೇಗೆ ತಗ್ಗಿಸುವುದು ಎಂಬುದನ್ನು ಕಲಿಯಬಹುದು, ಅಲ್ಲಿ ನ್ಯಾಯವನ್ನು ಆಚರಿಸಲಾಗುತ್ತದೆ ಮತ್ತು ಕ್ಷಮೆಯನ್ನು ಗೌರವಿಸಲಾಗುತ್ತದೆ ಎಂದು ಹೇಳಿದರು.