ಗಾಜಾಗಾಗಿ ಶಾಂತಿಯ ಪ್ರಾರ್ಥನಾ ಜಾಗರಣೆಯಲ್ಲಿ ಭಾಗಿಯಾಗಿ
ವ್ಯಾಟಿಕನ್ ಸುದ್ಧಿ
ಸಮಾಜದ ಒಳಿತಿನ ಸದ್ಭಾವನೆಯ ಎಲ್ಲಾ ಪುರುಷರು ಮತ್ತು ಮಹಿಳೆಯರು, ಸೆಪ್ಟೆಂಬರ್ 22, ಸೋಮವಾರ, ಸಂಜೆ 7:30ಕ್ಕೆ (CET) ರೋಮ್‌ನ ಟ್ರಾಸ್ಟೆವೆರೆಯಲ್ಲಿರುವ ಪಿಯಾಝಾ ಸಾಂತಾ ಮಾರಿಯಾದಲ್ಲಿ ನಡೆಯುವ “ಗಾಜಾಗೆ ಶಾಂತಿ” ಎಂಬ ಪ್ರಾರ್ಥನಾ ಜಾಗರಣೆಯಲ್ಲಿ ಭಕ್ತಾಧಿಗಳು ದೂರದಿಂದಲೇ ಅಥವಾ ನೀವು ರೋಮ್‌ನಲ್ಲಿ ವಾಸವಾಗಿದ್ದರೆ ವೈಯಕ್ತಿಕವಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಜೆರುಸಲೇಮ್‌ನ ಲತೀನ್ ಪಿತಾಮಹ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಾಬಲ್ಲಾರವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾರ್ಥನಾ ಜಾಗರಣೆ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಡಿನಲ್ ಗುವಾಲ್ಟಿಯೆರೊ ಬ್ಯಾಸೆಟ್ಟಿರವರು ವಹಿಸಲಿದ್ದಾರೆ, ಅವರು ವೀಡಿಯೊ ಲಿಂಕ್ ಮೂಲಕ ಪ್ರಾರ್ಥನಾ ಜಾಗರಣೆಯಲ್ಲಿ ಸೇರಲಿದ್ದಾರೆ.
ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಸಂಪೂರ್ಣವಾಗಿ ಗೌರವಿಸುವ ಮಾತುಕತೆಯ ರಾಜತಾಂತ್ರಿಕ ಪರಿಹಾರಕ್ಕಾಗಿ ವಿಶ್ವಗುರು XIV ಲಿಯೋರವರ ಇತ್ತೀಚಿನ ಮನವಿಗೆ ಪ್ರತಿಕ್ರಿಯೆಯಾಗಿ ಈ ಪ್ರಾರ್ಥನಾ ಕೂಟದ ಸಭೆಯನ್ನು ಆಯೋಜಿಸಲಾಗಿದೆ.
ಈ ಉಪಕ್ರಮವು ACLI, AGESCI, ಅಜಿಯೋನ್ ಕಥೋಲಿಕ ಇಟಾಲಿಯಾನಾ, ಕಮ್ಯುನಿಯನ್ ಮತ್ತು ಲಿಬರೇಶನ್, ವಿಶ್ವಗುರು XXIII ಜಾನ್ ರವರ ಸಮುದಾಯ, ಸಹಕಾರಿ ಆಕ್ಸಿಲಿಯಮ್, ಕ್ರೈಸ್ತ ಕಾರ್ಮಿಕ ಚಳುವಳಿ, ಫೋಕೊಲೇರ್ ಚಳುವಳಿ, ಏಕತೆಗಾಗಿ ರಾಜಕೀಯ ಚಳುವಳಿ, OFS ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆ, ಪವಿತ್ರಾತ್ಮದಲ್ಲಿ ನವೀಕರಣ ಮತ್ತು ಯೂನಿಯನ್ ಆಫ್ ಸುಪೀರಿಯರ್ಸ್ ಜನರಲ್/ ಪ್ರಧಾನ ಶ್ರೇಷ್ಠಾಧಿಕಾರಿಗಳ ಒಕ್ಕೂಟ(USG) ಸೇರಿದಂತೆ ವ್ಯಾಪಕ ಶ್ರೇಣಿಯ ಕಥೋಲಿಕ ಸಂಘಗಳು ಮತ್ತು ಸಮುದಾಯಗಳನ್ನು ಈ ಪ್ರಾರ್ಥನಾ ಕೂಟದಲ್ಲಿ ಒಟ್ಟುಗೂಡಿಸುತ್ತದೆ.
ಈ ಜಾಗರಣೆಯು ಶಾಂತಿ, ಮಾನವ ಜೀವನದ ರಕ್ಷಣೆ ಮತ್ತು ದ್ವೇಷವನ್ನು ಕೊನೆಗೊಳಿಸಲು ಪ್ರಾರ್ಥನೆಯಲ್ಲಿ ಒಗ್ಗಟ್ಟಿನ ಧ್ವನಿಯನ್ನು ಎತ್ತುವ ಒಂದು ಸಂದರ್ಭವಾಗಿದೆ. ಭಕ್ತವಿಶ್ವಾಸಿಗಳು, ಸಮಾಜದ ಒಳಿತನ್ನು ಬಯಸುವ ಸದ್ಭಾವನೆಯ ಜನರು ಈ ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಈ ಪ್ರಾರ್ಥನಾ ಕೂಟದಲ್ಲಿ ನೇರವಾಗಿ ಹಾಜರಾಗಲು ಸಾಧ್ಯವಾಗದವರಿಗೆ, ಜಾಗರಣೆಯು YouTube ನಲ್ಲಿ ನೇರಪ್ರಸಾರವಾಗುತ್ತದೆ.