ವಿಭಜಿತ ವಿಶ್ವದಲ್ಲಿ ಏಕತೆಗೆ ಸಾಕ್ಷಿಯಾದ ಪೂಜ್ಯರಾದ ಪಿಯೆಟ್ರೊ ಪಾವೊಲೊಸ್ ರವರು
ವ್ಯಾಟಿಕನ್ ಸುದ್ದಿ
ಇಂದಿನ ಜಗತ್ತಿನಲ್ಲಿ, ಭೀಕರ ಯುದ್ಧಗಳಿಂದ ವಿಶ್ವವು ಛಿದ್ರವಾಗಿದ್ದು, ಹಿಂದೆಂದಿಗಿಂತಲೂ ಇನ್ನೂ ಹೆಚ್ಚು ವಿಭಜಿತವಾಗಿದ್ದು, ಜನರು ನಿಜವಾಗಿಯೂ ಒಬ್ಬರನ್ನೊಬ್ಬರು ಭೇಟಿಯಾಗುವ ಸಾಮರ್ಥ್ಯವನ್ನು ಕಳೆದುಕೊಂಡು ಆಳವಾದ ಒಂಟಿತನದಿಂದ ಬಳಲುತ್ತಿದ್ದಾರೆ, ಧರ್ಮುಗುರು ಪಿಯೆಟ್ರೊ ಪಾವೊಲೊ ಪಾವೊಲೊಸ್ ರವರಂತಹ ನೈಜ ಮುಖಾಮುಖಿ ಮತ್ತು ಸಹಭಾಗಿತ್ವದ ಜನರು ನಮಗೆ ಬೇಕಾಗಿದ್ದಾರೆ. ಈ ಮಾತುಗಳೊಂದಿಗೆ, ಲೋಡ್ಜ್‌ನ ಮಹಾಧರ್ಮಾಧ್ಯಕ್ಷರಾದ ಮತ್ತು ವಿಶ್ವಗುರುಗಳ ಪ್ರತಿನಿಧಿಯಾದ ಪೋಲಿಷ್ ಕಾರ್ಡಿನಲ್ ಗ್ರ್ಜೆಗೋರ್ಜ್ ರೈಸ್, 1953ರಲ್ಲಿ ರಕ್ತಸಾಕ್ಷಿಯಾದ ಮತ್ತು ಸೆಪ್ಟೆಂಬರ್ 27ರ ಶನಿವಾರ ಬೆಳಿಗ್ಗೆ ಉಕ್ರೇನ್‌ನ ಬಿಲ್ಕಿಯಲ್ಲಿ ಪೂಜ್ಯರ ಪಟ್ಟಿಗೆ ಏರಿಸಲ್ಪಟ್ಟ ಮುಕಾಚೆವೊದ ಬೈಜಾಂಟೈನ್ ವಿಧಿಯ ಧರ್ಮಪ್ರಾಂತ್ಯದ ಧರ್ಮಗುರುವಿನ ಬಗ್ಗೆ ವಿವರಿಸಿದರು. ಉಕ್ರೇನ್‌ನಲ್ಲಿನ ಯುದ್ಧ ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ನಿಧನದ ಕಾರಣದಿಂದಾಗಿ ಪದೇ ಪದೇ ಮುಂದೂಡಲ್ಪಟ್ಟ ಈ ಬಹುನಿರೀಕ್ಷಿತ ಕಾರ್ಯಕ್ರಮವನ್ನು – ಸಂತ ಪೇತ್ರರ ಚೌಕದಲ್ಲಿ ಶನಿವಾರ ನಡೆದ ಜ್ಯೂಬಿಲಿಯ ಸಾಮಾನ್ಯ ಪ್ರೇಕ್ಷಕರ ಭೇಟಿಯ ಸಂದರ್ಭದಲ್ಲಿ ವಿಶ್ವಗುರು XIV ಲಿಯೋರವರು ನೆನಪಿಸಿಕೊಂಡರು.
ಜೀವನ
ಕೇವಲ 36 ವರ್ಷ ವಯಸ್ಸಿನಲ್ಲಿ ಕಮ್ಯುನಿಸ್ಟ್ ಆಡಳಿತದಿಂದ ಕೊಲ್ಲಲ್ಪಟ್ಟ ನೂತನ ಪೂಜ್ಯರ ಬಗ್ಗೆ ಮಾತನಾಡುತ್ತಾ, ಕಾರ್ಡಿನಲ್ ರೈಸ್ ರವರು ತಮ್ಮ ಸಣ್ಣ ಆದರೆ ಆಳವಾದ ಅರ್ಥಪೂರ್ಣ ಜೀವನವನ್ನು ಸಂಪೂರ್ಣವಾಗಿ ಒಳ್ಳೆಯತನ, ಕರುಣೆ ಮತ್ತು ದಾನಕ್ಕೆ ಮೀಸಲಿಟ್ಟರು ಎಂದು ವಿವರಿಸಿದರು. ಇಂದು ನಾವು ರಕ್ತಸಾಕ್ಷಿಗಳನ್ನು ಧನ್ಯರೆಂದು ಘೋಷಿಸುತ್ತೇವೆ, ಅವರಿಗೆ ಶಿಲುಬೆಯು ಅವರ ನಿಧನ ಮಾತ್ರವಾಗಿರಲಿಲ್ಲ, ಅವರ ಇಡೀ ಜೀವನವೂ ಶಿಲುಬೆಯನ್ನು ಹೋಲಿಸುವ ಕಾರ್ಗಳಾಗಿದ್ದವು" ಎಂದು ಕಾರ್ಡಿನಲ್ ರವರು ಒತ್ತಿ ಹೇಳಿದರು, ಓರೋಸ್ ರವರ ಆಳವಾದ ವಿಶ್ವಾಸ ಮತ್ತು ಆಧ್ಯಾತ್ಮಿಕತೆ"ಯನ್ನು ಎತ್ತಿ ತೋರಿಸಿದರು. ಅವರು ವ್ಯಾಧಿಷ್ಠ ವ್ಯಕ್ತಿಯ ಬಳಿಗೆ ಪವಿತ್ರ ಸಂಸ್ಕಾರವನ್ನುಅಥವಾ ಪರಮಪ್ರಸಾದವನ್ನು ಹೊತ್ತುಕೊಂಡು ಹೋಗಬೇಕಾದರೆ ನಿಧನರಾದರು.
ಮಾದರಿಯ ಜೀವನದ ಮೂಲಕ ಬೋಧನೆ
ಅವರು ಲಿಖಿತ ಪದಗಳ ಮೂಲಕ ಜನರಿಗೆ ಕಲಿಸಲಿಲ್ಲ, ಆದರೆ ಅವರ ಜೀವನದ ಮೂಲಕ, ಅವರ ಮಾದರಿಯ ಮೂಲಕ ಕಲಿಸಿದರು ಎಂದು ಕಾರ್ಡಿನಲ್ ರವರು ಹೇಳಿದರು. ಅವರ ಅನೇಕ ಧರ್ಮೋಪದೇಶಗಳು ಲಿಖಿತ ರೂಪದಲ್ಲಿ ಉಳಿದುಕೊಂಡಿಲ್ಲ. ಆದರೂ, ಅನೇಕರು ಇನ್ನೂ ಅವರು “ಒಳಿತನ್ನು ಮಾಡುತ್ತಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ. ಧರ್ಮಗುರು ಓರೋಸ್‌ನಲ್ಲಿ ವಿಶ್ವಗುರು ಪ್ರತಿನಿಧಿಯು ಮುಂದುವರಿಸುತ್ತಾ, ಬಡತನ ಮತ್ತು ದಾನವು ಒಂದೇ ಮುಖದ ಎರಡು ಬದಿಗಳಂತೆ ಒಂದೇ ಮನೋಭಾವವಾಗಿ ಒಟ್ಟಿಗೆ ಬಂದವು. ಅವರು ಸ್ವೀಕರಿಸಿದ ಎಲ್ಲವನ್ನೂ, ಅವರು ದಾನ ಮಾಡಿದರು. ಅತ್ಯಂತ ಆಳವಾದ ಮತ್ತು ಆಧ್ಯಾತ್ಮಿಕದಿಂದ ಅತ್ಯಂತ ಮೂಲಭೂತ ಮತ್ತು ಭೌತಿಕವಾದವರೆಗೆ, ಮಾನವೀಯತೆಯನ್ನು ಅಳವಡಿಸಿಕೊಂಡರು. ಅಗತ್ಯವಿರುವವರು ಯಾವಾಗಲೂ ಉತ್ತಮವಾದದ್ದನ್ನು, ಹೊಸದನ್ನು ಪಡೆಯಬೇಕು ಎಂದು ಅವರು ನಂಬಿದ್ದರು. ಯುದ್ಧದ ಸಮಯದಲ್ಲಿ ಕರುಣೆಯನ್ನು ಅಭ್ಯಾಸ ಮಾಡುವುದು.
ತಮ್ಮ ಮಾದರಿಯನ್ನು ಪ್ರತಿಬಿಂಬಿಸುತ್ತಾ, ಕಾರ್ಡಿನಲ್ ರೈಸ್ ರವರು ಉಕ್ರೇನಿಯದ ಭಕತವಿಶ್ವಾಸಿಗಳ್ನು ಉದ್ದೇಶಿಸಿ ಪ್ರಬಲ ಮತ್ತು ಸಮಯೋಚಿತ ಸಂದೇಶವನ್ನು ನೀಡಿದರು: ನೀವು, ಹಲವು ವರ್ಷಗಳಿಂದ ಆಕ್ರಮಣಶೀಲತೆ ಮತ್ತು ಯುದ್ಧವನ್ನು ಸಹಿಸಿಕೊಂಡಿದ್ದೀರಿ; ನಿಮ್ಮ ಮನೆಗಳು ಮತ್ತು ಆಸ್ತಿಗಳನ್ನು ಮಾತ್ರವಲ್ಲದೆ, ನಿಮ್ಮ ಪ್ರೀತಿಪಾತ್ರರ ಮತ್ತು ನಿಮ್ಮ ಜೀವನ ಹಾಗೂ ಆರೋಗ್ಯವನ್ನು ಸಹ ಕಳೆದುಕೊಂಡಿರುವ ನೀವು - ಎಲ್ಲರಿಂದಲೂ ಸಹಾಯ ಮತ್ತು ಬೆಂಬಲವನ್ನು ನಿರೀಕ್ಷಿಸುವುದು ಸಹಜ.
ನೂತನ ಪೂಜ್ಯರ ದಿನವನ್ನು ಆಚರಿಸಲು ಯುವಕರ ತೀರ್ಥಯಾತ್ರೆ
"ಬಂಧನ, ಕಿರುಕುಳ, ಚಿತ್ರಹಿಂಸೆ, ಕೊಲ್ಲಲ್ಪಟ್ಟ ಅಥವಾ ಜೈಲಿನಲ್ಲಿ ಮರಣ ಹೊಂದಿದ" ಅವರ ಸಹ ಧರ್ಮಗುರುವಿನ ಜೊತೆಗೆ ಹೊಸ ಪೂಜ್ಯರ ಜೀವನವು, ಜೀವನದಲ್ಲಿ ಮತ್ತು ನಿಧನದಲ್ಲಿ ಶಕ್ತಿಯುತ ಮತ್ತು ಆಮೂಲಾಗ್ರವಾದ ಪ್ರೀತಿಯನ್ನು ನಮಗೆ ಕಲಿಸುತ್ತದೆ ಎಂದು ಕಾರ್ಡಿನಲ್ ರೈಸ್ ರವರು ತೀರ್ಮಾನಿಸಿದರು. ಸೆಪ್ಟೆಂಬರ್ 26 ರಂದು ಸುಮಾರು ಒಂದು ಸಾವಿರ ಯುವಕರ ತೀರ್ಥಯಾತ್ರೆಯು ಪೂಜನೀಯ ಪವಿತ್ರೀಕರಣಕ್ಕಾಗಿ ದೈವಿಕ ಪ್ರಾರ್ಥನಾ ವಿಧಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಂಚಿತವಾಗಿ ಬಿಲ್ಕಿಗೆ ಕಾಲ್ನಡಿಗೆಯಲ್ಲಿ ಸಾಗಿತು. ಇದು ಮುಕಾಚೆವೊದ ಬೈಜಾಂಟೈನ್ ವಿಧಿಯ, ಧರ್ಮಪ್ರಾಂತ್ಯದ ಫ್ರಾನ್ಸಿಸ್ಕನ್ ಸಹಾಯಕ ಧರ್ಮಾಧ್ಯಕ್ಷರಾದದ ನಿಲ್ ಯೂರಿ ಲುಶ್ಚಕ್ ರವರ ನೇತೃತ್ವದ ದೈವಿಕ ಪ್ರಾರ್ಥನೆಯಲ್ಲಿ ಮುಕ್ತಾಯಗೊಂಡಿತು.