ಸಂತ ಎಜಿದಿಯೊ ಸಮುದಾಯವು ಗಾಜಾದಲ್ಲಿ ಶಾಂತಿಗಾಗಿ ಪ್ರಾರ್ಥನಾ ಜಾಗರಣೆ ಆಯೋಜಿಸಿದೆ
ಆಂಟೋನೆಲ್ಲಾ ಪಲೆರ್ಮೊ
ಸೋಮವಾರ ಸಂಜೆ ನೂರಾರು ಜನರು ಗಾಜಾದಲ್ಲಿ ಶಾಂತಿಗಾಗಿ ಒಟ್ಟುಗೂಡಿದರು. ಇದನ್ನು ಸಂತ ಎಜಿದಿಯೊ ಸಮುದಾಯವು ಆಯೋಜಿಸಿತ್ತು ಮತ್ತು ಡಜನ್‌ಗಟ್ಟಲೆ ಕಥೋಲಿಕ ಸಂಸ್ಥೆಗಳ ಬೆಂಬಲದೊಂದಿಗೆ ಈ ಪ್ರಾರ್ಥನಾ ಕೂಟವು ನಡೆಯಿತು.
ಪೆರುಜಿಯಾ-ಸಿಟ್ಟಾ ಡೆಲ್ಲಾ ಪಿಯಾವೆಯದ ಶ್ರೇಷ್ಠಗುರು ಮಹಾಧರ್ಮಾಧ್ಯಕ್ಷರು ಮತ್ತು ಇಟಾಲಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಮಾಜಿ ಅಧ್ಯಕ್ಷ ಕಾರ್ಡಿನಲ್ ಗುವಾಲ್ಟಿಯೆರೊ ಬ್ಯಾಸೆಟ್ಟಿರವರು ಜಾಗರಣೆ ಅಧ್ಯಕ್ಷತೆಯನ್ನು ವಹಿಸಿದ್ದರು, ಇದರಲ್ಲಿ ಗಾಜಾದಲ್ಲಿ ಒತ್ತೆಯಾಳುಗಳು, ಯುದ್ಧದ ಸಂತ್ರಸ್ತರುಗಳು ಮತ್ತು ಮಕ್ಕಳಿಗಾಗಿ ಪ್ರಾರ್ಥನೆಗಳು, ಗಾಜಾದ ತಾಯಿಯೊಬ್ಬರ ಭಾವನಾತ್ಮಕ ಕವಿತೆ ಸೇರಿದಂತೆ ಈ ನಾಡಿನ ಮೇಲಿನ ಜನರ ಸಾಕ್ಷ್ಯಗಳು ಈ ಪ್ರಾರ್ಥನಾ ಕೂಟದಲ್ಲಿ ಸೇರಿದ್ದವು.
ಕಾರ್ಡಿನಲ್ ಬ್ಯಾಸೆಟ್ಟಿರವರು: ಯುದ್ಧವನ್ನು ನಿಲ್ಲಿಸಬಹುದು ಮತ್ತು ನಿಲ್ಲಿಸಬೇಕು
ಯುದ್ಧವು ಎಂದಿಗೂ ಹಠಾತ್ ಗೆ ನಡೆಯುವ ದುರಂತವಲ್ಲ ಎಂದು ಅವರು ಹೇಳಿದರು. ಇದು ಆಯ್ಕೆಯಿಂದ, ಇಚ್ಛಾಶಕ್ತಿಯಿಂದ ನಡೆಯುತ್ತದೆ, ಇದನ್ನು ನಿಲ್ಲಿಸಬಹುದು ಹಾಗೂ ನಿಲ್ಲಿಸಬೇಕು."
ಅವರು ಹೇಳಿದರು, ಮಾನವ ಹಕ್ಕುಗಳ ಪ್ರತಿಯೊಂದು ಉಲ್ಲಂಘನೆಯು ನಿರ್ದಿಷ್ಟ ನಿರ್ಧಾರಗಳ ಪರಿಣಾಮವಾಗಿದೆ. ಯುದ್ಧವು ವಿಧಿಯಲ್ಲ, ಇದೊಂದು ಆಯ್ಕೆಯಾಗಿದೆ. ಇದನ್ನು ನಾವು ವಿಭಿನ್ನವಾಗಿ ಆಯ್ಕೆ ಮಾಡಬೇಕು.
ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ತತ್ವಜ್ಞಾನಿ ಮಾರ್ಟಿನ್ ಬುಬರ್ ರವರನ್ನು ಉಲ್ಲೇಖಿಸಿ, ಕಾರ್ಡಿನಲ್ ಬ್ಯಾಸೆಟ್ಟಿರವರ ಸಂವಾದ ಮತ್ತು ಮಾನವ ಘನತೆಯನ್ನು ಒತ್ತಿ ಹೇಳಿದರು, ಭಕ್ತರು ತಮ್ಮ ಅನುಭವದ ಹಂಚಿಕೆಯ ಮಾನವೀಯತೆಯನ್ನು ಎಂದಿಗೂ ದ್ರೋಹ ಮಾಡಬಾರದು ಎಂದು ಒತ್ತಾಯಿಸಿದರು.
ಕಾರ್ಡಿನಲ್ ಪಿಜ್ಜಬಲ್ಲ: ಹಿಂಸಾಚಾರವು ವಿಷವರ್ತುಲಕ್ಕೆ ಇಂಧನ ನೀಡುತ್ತದೆ
ಸಂಜೆ ಜೆರುಸಲೇಮ್‌ನ ಲತೀನ್ ಪಿತಾಮಹ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಬಲ್ಲಾರವರ ಧ್ವನಿಯೂ ಇತ್ತು, ಅವರು ಪವಿತ್ರ ನಾಡಿನಿಂದ ವೀಡಿಯೊ ಸಂದೇಶದ ಮೂಲಕ ಸೇರಿಕೊಂಡರು, ಅದರಲ್ಲಿ ಅವರು ನಾವು ಎದೆಗುಂದಿದ್ದೇವೆ ಮತ್ತು 35 ವರ್ಷಗಳಲ್ಲಿ, ನಾನು ಎಂದಿಗೂ ಇಷ್ಟು ಅಂಧಕಾರದ ಕ್ಷಣವನ್ನು ನೋಡಿಲ್ಲ ಎಂದು ಗಮನಿಸಿದರು.
ನಾವು ಎರಡೂ ಕಡೆಯ ಉಗ್ರಗಾಮಿಗಳಿಗೆ ಜಾಗ ಬಿಟ್ಟಿದ್ದೇವೆ ಎಂದು ಕಾರ್ಡಿನಲ್ ಪಿಜ್ಜಬಲ್ಲಾರವರು ಗಮನಿಸಿದರು, ನ್ಯಾಯ ಮತ್ತು ಶಾಂತಿಗಾಗಿ ಸದ್ದಿಲ್ಲದೆ ಕೆಲಸ ಮಾಡುವ ಅನೇಕ ಸೌಮ್ಯ ಹೃದಯದ ಜನರಲ್ಲಿ ನಾನು ಇನ್ನೂ ವಿಶ್ವಾಸವಿಡುತ್ತೇನೆ. ಈ ಭಾವನೆಯೊಂದಿಗೆ, ಅವರು ಎಲ್ಲರ ಕಡೆಗೆ ಪ್ರೀತಿಯಿಂದ ಸತ್ಯ ಮತ್ತು ನ್ಯಾಯಕ್ಕಾಗಿ ಕರೆ ನೀಡಿದರು, ಹಿಂಸೆಯು ವಿಷವರ್ತುಲದಲ್ಲಿ ಹೆಚ್ಚು ದ್ವೇಷವನ್ನು ಮಾತ್ರ ಹೆಚ್ಚಿಸುತ್ತದೆ ಎಂದು ಎಚ್ಚರಿಸಿದರು.
ಈ ಸಂಪೂರ್ಣ ಹಿಂಸಾಚಾರದ ರಚನೆ ಕುಸಿದಾಗ, ದೇವರು ನಮಗೆ ಕೊಟ್ಟಿರುವ ನಾಡನ್ನು ಎಲ್ಲರೂ ಸೌಂದರ್ಯ ಮತ್ತು ಪ್ರೀತಿಯಿಂದ ಆನುವಂಶಿಕವಾಗಿ ಪಡೆಯುವಂತೆ ಸೌಮ್ಯತೆಯ ಶಕ್ತಿಯನ್ನು ತರಲು ನಾವು ಸಿದ್ಧರಾಗಿರಬೇಕು ಎಂದು ಜೆರುಸಲೇಮ್‌ನ ಲತೀನ್ ಪಿತೃಪ್ರಧಾನರು ಒತ್ತಿ ಹೇಳಿದರು.