ಹುಡುಕಿ

Peter To Rot in his village at Rakunai Papua New Guinea Peter To Rot in his village at Rakunai Papua New Guinea  (© Fr. Tomas Ravaioli IVE)

ಪಪುವಾ ನ್ಯೂಗಿನಿಯಾವು ತನ್ನ ಮೊದಲ ಸಂತನಿಗಾಗಿ ಕಾಯುತ್ತಿದೆ: ಪೀಟರ್ ಟು ರಾಟ್ ಜೀವನ ಕಥೆ

ಪಪುವಾ ನ್ಯೂಗಿನಿಯಾದ ಕಥೊಲಿಕರು ತಾವು ಒಂದು ಐತಿಹಾಸಿಕ ಕ್ಷಣವನ್ನು ಜೀವಿಸುತ್ತಿದ್ದೇವೆಂದು ಭಾವಿಸುತ್ತಾರೆ. ಈ ಅಕ್ಟೋಬರ್‌ನಲ್ಲಿ, ಕಥೊಲಿಕ ಧರ್ಮಸಭೆಯ ಪೂಜ್ಯರಾದ ಪೀಟರ್ ಟು ರಾಟ್ ರವರನ್ನು ರಾಷ್ಟ್ರದ ಮೊದಲ ಸಂತರನ್ನಾಗಿ ಮಾಡುತ್ತಿದೆ. ಅವರ ಉದ್ದೇಶಕ್ಕಾಗಿ ನವಶಿಷ್ಯರುಗಳು ಸಂತ ಮತ್ತು ಅವರ ಕಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಸಿಸ್ಟರ್ ಕ್ರಿಸ್ಟೀನ್ ಮಾಸಿವೊ ಸಿಪಿಎಸ್

ವ್ಯಾಟಿಕನ್ ಸುದ್ದಿಗೆ ನೀಡಿದ ಸಂದರ್ಶನದಲ್ಲಿ, ಅರ್ಜೆಂಟೀನಾದ ಧರ್ಮಪ್ರಚಾರಕ ಮತ್ತು ಪೀಟರ್ ಟು ರೋಟ್ ರವರ ಸಂತ ಪದಗೇರಿಸುವ ಉಪ ನವಶಿಷ್ಯರಾಗಿರುವ ಧರ್ಮಗುರುವಾಗಿರುವ ತೋಮಸ್ ರವಾಯೋಲಿ, ಐವಿಇ, ಪಪುವಾ ನ್ಯೂಗಿನಿಯಾದಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರದ ಮೊದಲ ಸಂತರ ಪದಗೇರಿಸುವ ಮತ್ತು ಪೀಟರ್ ಟು ರೋಟ್ ರವರ ವಿಶ್ವಾಸದ ಪ್ರಯಾಣದ ಮಹತ್ವದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

"ಇಲ್ಲಿನ ಜನರು ತುಂಬಾ ತುಂಬಾ ಉತ್ಸುಕರಾಗಿದ್ದಾರೆ," ಎಂದು ಧರ್ಮಗುರು ರವಾಯೋಲಿರವರು ಹೇಳಿದರು, ಇದೆಲ್ಲವೂ ತುಂಬಾ ವೇಗವಾಗಿ ಸಂಭವಿಸಿತು, ಇದು ಒಂದು ಉಡುಗೊರೆಯಂತೆ ಭಾಸವಾಗುತ್ತಿದೆ. ನಮ್ಮ ಪ್ರೀತಿಯ ದೇಶಕ್ಕೆ ವಿಶ್ವಗುರು ಫ್ರಾನ್ಸಿಸ್ ರವರ ಕೊನೆಯ ಉಡುಗೊರೆಯಾಗಿದೆ.

ವಿಶ್ವಗುರು ಫ್ರಾನ್ಸಿಸ್ ರವರು ಸೆಪ್ಟೆಂಬರ್ 2024ರಲ್ಲಿ ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದರು ಮತ್ತು ಪೀಟರ್ ಟು ರಾಟ್ ರವರನ್ನು ಸಂತ ಪದವಿಗೆ ಸೇರಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಮಾರ್ಚ್ 2025ರಲ್ಲಿ, ಅವರು ಸುಗ್ರೀವಾಜ್ಞೆಗೆ ಸಹಿ ಹಾಕಿ, ರೋಮ್‌ನಲ್ಲಿ ಅಕ್ಟೋಬರ್ ತಿಂಗಳಲ್ಲಿ ಈ ಸಮಾರಂಭಕ್ಕೆ ದಾರಿ ಮಾಡಿಕೊಟ್ಟರು.

ಈ ಸಂತ ಪದವಿಯು ಹೊಸದು ಮಾತ್ರವಲ್ಲದೆ ಐತಿಹಾಸಿಕವೂ ಆಗಿದೆ ಎಂದು ಧರ್ಮಗುರು ರವಾಯೋಲಿರವರು ವಿವರಿಸಿದರು. ಪಪುವಾ ನ್ಯೂಗಿನಿಯಾದಲ್ಲಿ ಎಂದಿಗೂ ಅಥವಾ ಇಲ್ಲಿಯವರೆಗೂ ಸಂತ ಪದವಿ ಪಡೆದ ಯಾವುದೇ ಸಂತರು ಇರಲಿಲ್ಲ. ಮುಂದಿನ ತಿಂಗಳು, ನಮ್ಮ ಪೀಟರ್ ಟು ರೋಟ್ ರವರು, ನಮ್ಮಲ್ಲಿ ಮೊದಲನೆಯವರು ನಮ್ಮದಾಗಲಿದ್ದಾರೆ.

ಪೀಟರ್ ಟು ರಾಟ್ ಎಂಬ ಪೂಜ್ಯ ವ್ಯಕ್ತಿ ಯಾರು?
ಪೀಟರ್ ಟು ರಾಟ್ 1912 ರಲ್ಲಿ ಗ್ರಾಮದ ಮುಖ್ಯಸ್ಥನ ಮಗನಾಗಿ ಜನಿಸಿದರು. ಅವರು ಕುಟುಂಬದ ಪತಿ ಮತ್ತು ಮೂರು ಮಕ್ಕಳ ತಂದೆಯಾಗಿ, ಒಬ್ಬ ವಿನಯತೆ ತುಂಬಿದ ಧರ್ಮೋಪದೇಶಕರಾಗಿ, ವಿಶ್ವಾಸದಲ್ಲಿ ಆಳವಾಗಿ ಬೇರೂರಿರುವ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರು. ಒಬ್ಬ ವಿನಯತೆ ತುಂಬಿದ ಧರ್ಮೋಪದೇಶಕರಾಗಿ ತರಬೇತಿ ಪಡೆದ ಅವರು, ಎರಡನೇ ಮಹಾಯುದ್ಧದ ಸಮಯದಲ್ಲಿ ಧರ್ಮಪ್ರಚಾರಕರು ಜೈಲಿನಲ್ಲಿದ್ದಾಗ ಪಾಲನಾ ಸೇವೆಯ ಜವಾಬ್ದಾರಿಗಳನ್ನು ವಹಿಸಿಕೊಂಡರು.

ಕ್ರೈಸ್ತೀಯ ಆಚರಣೆಗಳ ಮೇಲೆ ಜಪಾನಿನ ನಿರ್ಬಂಧಗಳ ಹೊರತಾಗಿಯೂ, ಪೀಟರ್ ರವರು ರಹಸ್ಯವಾಗಿ ಧರ್ಮೋಪದೇಶಕರಾಗಿ ತರಗತಿಗಳನ್ನು ಆಯೋಜಿಸಿದನು, ದಂಪತಿಗಳನ್ನು ಮದುವೆಗೆ ಸಿದ್ಧಪಡಿಸಿದನು, ಮಕ್ಕಳಿಗೆ ಪಾಠವನ್ನು ಕಲಿಸಿದರು, ರೋಗಿಗಳನ್ನು ಭೇಟಿ ಮಾಡಿದರು ಮತ್ತು ಹಳ್ಳಿಗಳಲ್ಲಿ ಪವಿತ್ರ ಪರಮಪ್ರಸಾದವನ್ನು ವಿತರಿಸಿದರು, ಆಗಾಗ್ಗೆ ಅವರನ್ನು ತಲುಪಲು 5-6 ಗಂಟೆಗಳ ಕಾಲ ನಡೆಯುತ್ತಿದ್ದರು.

ಅವರು ಧರ್ಮಸಭೆಯ ಸೇವೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು ಮತ್ತು 1945ರಲ್ಲಿ, ಬಹುಪತ್ನಿತ್ವವನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಬಂಧಿಸಿ ಹುತಾತ್ಮರನ್ನಾಗಿ ಮಾಡಲಾಯಿತು, ಜಪಾನಿನ ಅಧಿಕಾರಿಗಳು ಈ ಪದ್ಧತಿಯನ್ನು ಮತ್ತೆ ಪರಿಚಯಿಸಲು ಬಯಸಿದ ಆದೇಶವನ್ನು ಅನುಸರಿಸಿ. ಕ್ರೈಸ್ತೀಯ ವಿವಾಹ ಮತ್ತು ನೈತಿಕತೆಯ ರಕ್ಷಣೆಗಾಗಿ ಅವರು ಕೇವಲ 33 ವರ್ಷ ವಯಸ್ಸಿನಲ್ಲೇ ತಮ್ಮ ಜೀವವನ್ನೇ ಕಳೆದುಕೊಂಡರು.

"ಟು ರೋಟ್ ರವರು, ಸ್ನಾನಿಕಯೋವಾನ್ನರಂತಿದ್ದರು" ಎಂದು ಧರ್ಮಗುರು ರವಿಯೊಲಿರವರು ಹೇಳಿದರು. ಅದೇನೆಂದರೆ, ಅವರು "ಅನೇಕ ಹೆಂಡತಿಯರನ್ನು ತೆಗೆದುಕೊಳ್ಳುವುದು ಕಾನೂನುಬಾಹಿರ ಎಂದು ಜನರಿಗೆ ಬಹಿರಂಗವಾಗಿ ಹೇಳಿದರು. ಇದಕ್ಕಾಗಿ, ಅವರನ್ನು ಬಂಧಿಸಲಾಯಿತು ಮತ್ತು ಅಂತಿಮವಾಗಿ ಕೊಲ್ಲಲಾಯಿತು. ಈ ಪ್ರಚಾರದ ಮೂಲಕ ಅವರು ವಿವಾಹ ಸಂಸ್ಕಾರದ ಪಾವಿತ್ರ್ಯವನ್ನು ಸಮರ್ಥಿಸಿಕೊಂಡರು ಮತ್ತು ಸತ್ಯಕ್ಕಾಗಿ ಸತ್ತರು.

ಇಂದಿನ ಧರ್ಮಸಭೆಗೆ ಒಬ್ಬ ಸಂತ
ವಿಶ್ವಗುರು ಫ್ರಾನ್ಸಿಸ್ ರವರು ಒಮ್ಮೆ ಪೀಟರ್ ಟು ರಾಟ್ ರವರನ್ನು "ಇಂದು ಧರ್ಮಸಭೆಗೆ ಅಗತ್ಯವಿರುವ ಒಬ್ಬ ಸಂತ" ಎಂದು ಬಣ್ಣಿಸಿದರು. ಅನೇಕ ಸಂತರ ಪಟ್ಟಿಯಲ್ಲಿರುವ ಸಂತರಂತೆ, ಪೀಟರ್ ರವರು ಒಬ್ಬ ಯಾಜಕ, ಧರ್ಮಾಧ್ಯಕ್ಷ ಅಥವಾ ಧಾರ್ಮಿಕ ವ್ಯಕ್ತಿಯಾಗಿರಲಿಲ್ಲ. ಅವರು ಕುಟುಂಬದ ಒಬ್ಬ ಸಾಮಾನ್ಯ ವ್ಯಕ್ತಿ, ಪತಿ ಮತ್ತು ತಂದೆಯಾಗಿದ್ದರು.

ಜೀವನದ ಪ್ರತಿಯೊಂದು ಸ್ಥಿತಿಯಲ್ಲೂ ಪವಿತ್ರತೆ ಸಾಧ್ಯ ಎಂದು ಅವರ ಸಾಕ್ಷಿ ನಮಗೆ ನೆನಪಿಸುತ್ತದೆ ಎಂದು ಧರ್ಮಗುರು ರವಾಯೋಲಿರವರು ವಿವರಿಸಿದರು. ನೀವೂ ಸಹ ಒಬ್ಬ ವಿವಾಹಿತ ವ್ಯಕ್ತಿಯಾಗಿ ನಿಮ್ಮ ದೈನಂದಿನ ಕೆಲಸದಲ್ಲಿ ನೀವು ಸಂತರಾಗಬಹುದು. ಪವಿತ್ರತೆಯು ಸಾರ್ವತ್ರಿಕ ಕರೆಯಾಗಿದೆ.
 

19 ಸೆಪ್ಟೆಂಬರ್ 2025, 18:44