140 ವರ್ಷಗಳ ಧ್ಯೇಯವು ಜೀವಂತವಾಗಿದೆ: ಪವಿತ್ರ ರಕ್ತದ ಸಭೆಯ ಧಾರ್ಮಿಕ ಭಗಿನಿಯರ ಪರಂಪರೆ
ಸಿಸ್ಟರ್ ಕ್ರಿಸ್ಟೀನ್ ಮಾಸಿವೊ, ಸಿಪಿಎಸ್
ದಕ್ಷಿಣ ಆಫ್ರಿಕಾದ ಮಾತೆಮೇರಿಯ ಪರ್ವತದಲ್ಲಿ, ಮಾತೆಮೇರಿಯ ಪರ್ವತದ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ನೀಲ್ ಆಗಸ್ತೀನ್ ಫ್ರಾಂಕ್ ರವರ ನೇತೃತ್ವದಲ್ಲಿ ಮತ್ತು ಈ ಸಂಸ್ಥೆಯ ಸಭೆಯ ಸಂಸ್ಥಾಪಕರಾದ ಅಬಾಟ್ ಫ್ರಾನ್ಸಿಸ್ ಪ್ಫ್ಯಾನರ್ ರವರನ್ನು ಗೌರವಿಸಲು, ಸಭೆಯ ಸ್ಮಶಾನದಲ್ಲಿ ಸಮಾಧಿ ಮಾಡಿದ ಅವರ ಸ್ಮರಾಣರ್ಥವಾಗಿ ಪರಮಪ್ರಸಾದದ ದಿವ್ಯಬಲಿಪೂಜೆಯನ್ನು ಆರ್ಪಿಸಲು ಪವಿತ್ರ ರಕ್ತದ ಸಭೆಯ ಧರ್ಮಪ್ರಚಾರಕ ಧಾರ್ಮಿಕ ಭಗಿನಿಯರು ಒಟ್ಟುಗೂಡಿದರು.
ಅವರ ಚಿರವಿಶ್ರಾಂತಿಯ ಸ್ಥಳವು ವಿಶ್ವಾಸ, ಧೈರ್ಯದ ಸಂಕೇತವಾಗಿ ಉಳಿದಿದೆ ಮತ್ತು ಒಬ್ಬ ಮನುಷ್ಯನ ದೃಷ್ಟಿಕೋನವು ಖಂಡಗಳಾದ್ಯಂತ ಜೀವನವನ್ನು ಪರಿವರ್ತಿಸುತ್ತಿದೆ ಎಂಬುದನ್ನು ನೆನಪಿಸುತ್ತದೆ. ಧಾರ್ಮಿಕ ಭಗಿನಿಯರು ಭವಿಷ್ಯವನ್ನು ಕಾಣುತ್ತಿರುವಾಗ, ಪ್ರಪಂಚದ ಮೂಲೆ ಮೂಲೆಗಳಲ್ಲಿ ಕ್ರಿಸ್ತರ ಸಮನ್ವಯಗೊಳಿಸುವ ಪ್ರೀತಿಯನ್ನು ಘೋಷಿಸುವಾಗ ಅವರ ಧ್ಯೇಯವು ಪ್ರಕಾಶಮಾನವಾಗಿ ಉರಿಯುತ್ತಲೇ ಇರುತ್ತದೆ.
ಈ ಸಂದರ್ಭವನ್ನು ಅಲಂಕರಿಸಲು ದರ್ಬನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಸೀಗ್‌ಫ್ರೈಡ್ ಮಾಂಡ್ಲಾ ಜ್ವಾರಾರವರು, ಕೊಕ್‌ಸ್ಟಾಡ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ತುಲಾನಿ ವಿಕ್ಟರ್ ಎಂಬುಯಿಸಾರವರು, ಮಾತೆಮೇರಿಯ ಪರ್ವತದ ಧರ್ಮಪ್ರಚಾರಕರ ಧಾರ್ಮಿಕ ಭಗಿನಿಯರ ಸಭೆ (ಸಿಎಂಎಂ) ಮತ್ತು ಆರ್ಡರ್ ಆಫ್ ಸೇಂಟ್ ಪಾಲ್ ದಿ ಫಸ್ಟ್ ಹರ್ಮಿಟ್ (ಒಎಸ್‌ಪಿಪಿಇ) ಸದಸ್ಯ ಜಾನ್ ಸ್ಟಾನಿಸ್‌ಬಾವ್ಲು ಡಿಮ್ಸ್‌ಕುಬಾವ್‌ಲು ಉಪಸ್ಥಿತರಾಗಿದ್ದರು.
ಸಿಪಿಎಸ್ ಅಸ್ತಿತ್ವದಲ್ಲಿರುವುದು ದೇವರ ಯೋಜನೆ ಎಂದು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾಂಕ್ ರವರು ಪುನರುಚ್ಚರಿಸಿದರು. ದಕ್ಷಿಣ ಆಫ್ರಿಕಾಕ್ಕೆ ಹೋಗಲು ಅಬಾಟ್ ಫ್ರಾನ್ಸಿಸ್ ರವರ ಆಹ್ವಾನದ ಮೇರೆಗೆ, ತಮ್ಮ ಸೌಕರ್ಯವನ್ನು ತೊರೆದು ಆಫ್ರಿಕಾದ ಜನರಿಗೆ ಕ್ರಿಸ್ತರನ್ನು ಘೋಷಿಸಲು ಆಯ್ಕೆ ಮಾಡಿದ ಐದು ಧೈರ್ಯಶಾಲಿ ಮಹಿಳೆಯರನ್ನು ಅವರು ನೆನಪಿಸಿಕೊಂಡರು.
ಧರ್ಮಪ್ರಚಾರಕರಾಗಲು ಧೈರ್ಯ ಮತ್ತು ಪರಿಶ್ರಮ ಬೇಕು, ಅವರ ವಿಶ್ವಾಸ ಮತ್ತು ಪಾಲನೆಯೇ ಇಡೀ ಲೋಕಕ್ಕೆ ಹೋಗಿ ಎಲ್ಲಾ ರಾಷ್ಟ್ರಗಳ ಜನರನ್ನು ಶಿಷ್ಯರನ್ನಾಗಿ ಮಾಡಿ ಎಂಬ ಸುವಾರ್ತಾ ಆಜ್ಞೆಯನ್ನು ಆದ್ಯತೆಯಾಗಿ ಇರಿಸಲು ಕಾರಣವಾಯಿತು ಎಂದು ಅವರು ಹೇಳಿದರು. ಇವು ಮಾನವ ಗುಣಗಳಲ್ಲ, ಆದರೆ ಪವಿತ್ರಾತ್ಮರ ವಿಶೇಷ ಉಡುಗೊರೆಗಳು, ಇದು ದೇವರ ಶಕ್ತಿ.
ದಾರ್ಶನಿಕ ಸ್ಥಾಪಕರು
ಧಾರ್ಮಿಕ ಭಗಿನಿಯರ ಕಥೆಯು ಅವರ ಸ್ಥಾಪಕ ಅಬಾಟ್ ಫ್ರಾನ್ಸಿಸ್ ಪ್ಫ್ಯಾನರ್ ರವರ ಜೀವನದಿಂದ ಬೇರ್ಪಡಿಸಲಾಗದು, ಅವರು ತಮ್ಮ ಆಳವಾದ ಆಧ್ಯಾತ್ಮಿಕತೆ, ಮೌನ ಮತ್ತು ಚಿಂತನಶೀಲ ಜೀವನಕ್ಕೆ ಹೆಸರುವಾಸಿಯಾದ ಟ್ರಾಪಿಸ್ಟ್ ಸನ್ಯಾಸಿರವರು.
ಟ್ರ್ಯಾಪಿಸ್ಟ್‌ಗಳು ಏಕಾಂತತೆ, ಪ್ರಾರ್ಥನೆ ಮತ್ತು ಕಟ್ಟುನಿಟ್ಟಿನಿಂದ ಗುರುತಿಸಲ್ಪಟ್ಟ ಕಟ್ಟುನಿಟ್ಟಾದ ಸನ್ಯಾಸಿನಿಗಳ ಸಂಪ್ರದಾಯವನ್ನು ಅನುಸರಿಸುತ್ತಾರೆ. ಅಬಾಟ್ ಪ್ಫ್ಯಾನರ್ ರವರು ವಿಭಿನ್ನವಾಗಿ ಕನಸು ಕಾಣಲು ಧೈರ್ಯ ಮಾಡಿದರು. ಅವರ ಕಾಲದ ರೂಢಿಗಳನ್ನು ಧಿಕ್ಕರಿಸುವ ಪ್ರವಾದಿಯ ನಡೆಯಲ್ಲಿ, ಅವರು ಹೊಸದನ್ನು ಕಲ್ಪಿಸಿಕೊಂಡರು.
ಜನ್ಮಸ್ಥಳ – ಮಾತೆಮೇರಿಯ ಪರ್ವತ, ದಕ್ಷಿಣ ಆಫ್ರಿಕಾ
1885ರಲ್ಲಿ, ದಕ್ಷಿಣ ಆಫ್ರಿಕಾದ ದರ್ಬನ್ ಬಳಿಯ ಮಾತೆಮೇರಿಯ ಪರ್ವತದಲ್ಲಿ, ಪವಿತ್ರ ರಕ್ತದ ಸಭೆಯ ಧಾರ್ಮಿಕ ಭಗಿನಿಯರ ಸಭೆ ಜನಿಸಿತು.
"ಜರ್ಮನಿಯ ಯುವತಿಯರು" ಎಂಬ ಮೊದಲ ಸಹೋದರಿಯರು ಧರ್ಮಪ್ರಚಾರಕ ಉತ್ಸಾಹದೊಂದಿಗೆ ಮಾತೆಮೇರಿಯ ಪರ್ವತಕ್ಕೆ ಆಗಮಿಸಿದಾಗ ಅಬಾಟ್ ಪ್ಫ್ಯಾನರ್ ರವರ ಕನಸು ರೂಪುಗೊಂಡಿತು, ಅದು ಸಭೆಯ ಅಡಿಪಾಯವನ್ನು ಹಾಕಿತು.
ಸ್ಥಳೀಯ ಸಮುದಾಯಗಳ ಆಧ್ಯಾತ್ಮಿಕ, ಭೌತಿಕ ಅಗತ್ಯಗಳನ್ನು ಪೂರೈಸುವುದು, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪೂರೈಸುವುದರ ಜೊತೆಗೆ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದು, ಅವರನ್ನು ಉನ್ನತೀಕರಿಸುವುದು ಮತ್ತು ಸಬಲೀಕರಣಗೊಳಿಸುವುದು ಅವರ ಧ್ಯೇಯವಾಗಿತ್ತು. ಇದು ಅವರ ಮೊದಲ ದೃಷ್ಟಿಕೋನವನ್ನು ಮೀರಿ ಬೆಳೆಯುವ ಒಂದು ಸಭೆಯ ಜನನವನ್ನು ಗುರುತಿಸಿತು.